Allu Arjun Arrest: ಹೆಂಡ್ತಿಗೆ ಮುತ್ತು ಕೊಟ್ಟು ಕಾಫಿ ಹೀರುತ್ತಾ ಸ್ಟೈಲ್‌ಅಲ್ಲಿ ಪೊಲೀಸ್ ಕಾರು ಏರಿದ ಅಲ್ಲು ಅರ್ಜುನ್!
ಪುಷ್ಪಾ 2 ಪ್ರೀಮಿಯರ್ ಶೋನಲ್ಲಿ ಕಾಲ್ತುಳಿತದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸಲಾಗಿದೆ.
ಪುಷ್ಪಾ 2 ಪ್ರೀಮಿಯರ್ ಶೋ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ಸಾವು ಕಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಂಧನವಾಗಿದೆ.
ಶುಕ್ರವಾರ ಬೆಳಗ್ಗೆ ಹೈದರಾಬಾದ್‌ನಲ್ಲಿರುವ ಅಲ್ಲು ಅರ್ಜುನ್ ನಿವಾಸಕ್ಕೆ ಆಗಮಿಸಿದ ಚೊಕ್ಕಡಪಲ್ಲಿ ಪೊಲೀಸ್ ಸ್ಟೇಷನ್‌ನ ಅಧಿಕಾರಿಗಳು ವಿಚಾರಣೆಗೆ ಆಗಮಿಸುವಂತೆ ಅಲ್ಲು ಅರ್ಜುನ್ ಅವರನ್ನು ಕೇಳಿದ್ದಾರೆ. ಈ ವೇಳೆ ತಿಳೀ ಹಸಿರು ಬಣ್ಣದ ಶಾರ್ಟ್ಸ್ ಹಾಗೂ ಟಿ ಶರ್ಟ್ ಧರಿಸಿದ್ದ ಅಲ್ಲು ಅರ್ಜುನ್ ಅವರನ್ನು ಬೇಸ್‌ಮೆಂಟ್‌ಗೆ ಕರೆದುಕೊಂಡು ಬಂದಿರುವ ವಿಡಿಯೋ ವೈರಲ್ ಆಗಿದೆ.
ಬೇಸ್‌ಮೆಂಟ್‌ಗೆ ಬಂದ ಬಳಿಕ ಬಿಳಿ ಬಣ್ಣದ ಜಾಗರ್ಸ್ ಧರಿಸಿದ ಅಲ್ಲು ಅರ್ಜುನ್ ಪೊಲೀಸ್ ಕಾರು ಏರುವ ಮುನ್ನ ಒಂದು ಕಪ್ ಟೀ ಕುಡಿದಿದ್ದಾರೆ. ಬಳಿಕ ಪತ್ನಿ ಸ್ನೇಹಾ ರೆಡ್ಡಿ ಕೆನ್ನೆಗೆ ಮುತ್ತಿಟ್ಟು ಸ್ಟೈಲ್ ಅಲ್ಲಿ ಪೊಲೀಸ್ ಕಾರ್ ಏರಿದ್ದಾರೆ.
ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅಲ್ಲು ಅರ್ಜುನ್ ವಿರುದ್ಧ ಕೆಲುವು ಗಂಭೀರ ಸೆಕ್ಷನ್‌ಗಳನ್ನು ಕೂಡ ಹಾಕಲಾಗಿದೆ. ಇದೇ ಕಾರಣಕ್ಕಾಗಿ ಅವರ ಬಂಧನ ಕೂಡ ಆಗಿದೆ ಎನ್ನಲಾಗಿದೆ.
ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಡಿಸೆಂಬರ್ 4 ರಂದು ನಡೆದ ಘಟನೆಯಲ್ಲಿ ರೇವತಿ ಎನ್ನುವ ಮಹಿಳೆ ಕಾಲ್ತುಳಿತದಿಂದ ಸಾವು ಕಂಡಿದ್ದಳು. ಮಧ್ಯರಾತ್ರಿ ಸಿನಿಮಾದ ಪ್ರೀಮಿಯರ್ ಶೋ ನೋಡಲು ಅಲ್ಲು ಅರ್ಜುನ್ ಥಿಯೇಟರ್‌ಗೆ ಬಂದಿದ್ದರು.
ಈ ವೇಳೆ ಸೂಪರ್‌ಸ್ಟಾರ್ ನಟನನ್ನು ನೋಡಲು ಜನರು ಥಿಯೇಟರ್‌ನ ಗೇಟ್‌ನತ್ತ ನುಗ್ಗಿ ಬಂದಿದ್ದರು. ಈ ಹಂತದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ ಸಾವು ಕಂಡಿದ್ದ ರೇವತಿ ಕುಟುಂಬಕ್ಕೆ ಬಳಿಕ 25 ಲಕ್ಷ ರೂಪಾಯಿ ಪರಿಹಾರವನ್ನೂ ಅಲ್ಲು ಅರ್ಜುನ್ ಘೋಷಿಸಿದ್ದರು.
Breaking: ಪುಷ್ಪ-2 ಸಿನಿಮಾ ವಿವಾದ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅರೆಸ್ಟ್
ಘಟನೆ ಬೆನ್ನಲ್ಲಿಯೇ ಸ್ಥಳೀಯ ಡಿಸಿಪಿ ಸುಮುಟೋ ಕೇಸ್ ದಾಖಲು ಮಾಡಿದ್ದರು. ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದು ಮಾಡುವಂತೆ ಅಲ್ಲು ಅರ್ಜುನ್ ಹೈಕೋರ್ಟ್ ಮೊರೆ ಹೋಗಿದ್ದರು. ಘಟನೆ ನಡೆದಾಗ ನಾನು ಥಿಯೇಟರ್‌ನ ಒಳಗಿದ್ದೆ. ಹೊರಗೆ ಏನಾಗುತ್ತಿದೆ ಅನ್ನೋದರ ಅರಿವಿರಲಿಲ್ಲ ಎಂದು ಅಲ್ಲು ಅರ್ಜುನ್ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದರು.
Mangaluru: ಪ್ರೇಮ ಪ್ರಕರಣದಲ್ಲಿ ಜೈಲಲ್ಲಿದ್ದ ಯುವಕನಿಗೆ ಯುವತಿಯ ಪೋಷಕರ ಸುಪಾರಿ, ಜೈಲಿನಲ್ಲೇ ಭಾರೀ ಹಲ್ಲೆ!