Mangaluru: ಪ್ರೇಮ ಪ್ರಕರಣದಲ್ಲಿ ಜೈಲಲ್ಲಿದ್ದ ಯುವಕನಿಗೆ ಯುವತಿಯ ಪೋಷಕರ ಸುಪಾರಿ, ಜೈಲಿನಲ್ಲೇ ಭಾರೀ ಹಲ್ಲೆ!
ಮಂಗಳೂರಿನ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬನ ಮೇಲೆ ಹಲ್ಲೆ ನಡೆಸಲು ಯುವತಿಯ ಪೋಷಕರು ಸುಪಾರಿ ನೀಡಿದ್ದಾರೆ ಎನ್ನಲಾದ ಘಟನೆ ಬೆಳಕಿಗೆ ಬಂದಿದೆ. ಪ್ರೇಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಯುವಕನ ಮೇಲೆ ಹಲ್ಲೆ ಮಾಡಲು ಜೈಲಿನ ಒಳಗಿನ ಕೈದಿಗಳಿಗೆ ಹಣ ನೀಡಲಾಗಿದೆ ಎಂದು ವರದಿಯಾಗಿದೆ.
ಮಂಗಳೂರು (ಡಿ.13): ವಿಚಾರಣಾಧೀನ ಕೈದಿ ಮೇಲೆ ಹಲ್ಲೆಗೆ ಸುಪಾರಿ ನೀಡಿರುವ ಘಟನೆ ಮಂಗಳೂರಿನ ಜೈಲಿನಲ್ಲಿ ನಡೆದಿದೆ. ಜೈಲಿನಲ್ಲಿಯೇ ನಟೋರಿಯಸ್ ಕೈದಿಗಳಿಗೆ ಸುಪಾರಿ ನೀಡಿರುವ ಘಟನೆ ಇದಾಗಿದ್ದು, ಮಂಗಳೂರು ಕೇಂದ್ರ ಕಾರಾಗೃಹದ ಕರ್ಮಕಾಂಡ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದೆ. ಪ್ರೇಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಯುವಕನ ಮೇಲೆ ಹಲ್ಲೆ ಮಾಡುವಂತೆ ಜೈಲಿನ ಒಳಗಡೆ ಇರುವ ಸಹ ಕೈದಿಗಳಿಗೆ ಯುವತಿಯ ಪೋಷಕರೇ ಸುಪಾರಿ ನೀಡಿದ್ದಾರೆ ಎಂದು ವರದಿಯಾಗಿದೆ. ಜೈಲಿನ ಒಳಗಡೆಯೇ ಯುವಕನ ಕೈ ಕಾಲು ಮುರಿಯಲು ಯುವತಿಯ ಪೋಷಕರು ಸುಪಾರಿ ನೀಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲಿಯೇ ಮಂಗಳೂರು ಜೈಲು ಅನೈತಿಕತೆಯ ಅಡ್ಡೆಯಾಗಿದೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಕಾಲೇಜು ವಿದ್ಯಾರ್ಥಿಯ ಮೇಲೆ ಕೈದಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಯುವತಿಯ ಪೋಷಕರಿಂದ ಇದಕ್ಕಾಗಿ ಹಣ ಪಡೆದಿದ್ದಾರೆ ಎನ್ನಲಾಗಿದೆ.
ಮಂಗಳೂರು ಜೈಲಿನಲ್ಲಿ ಡಗ್ಸ್, ಮೊಬೈಲ್ಸ್ ಬಳಕೆ ಸಾಕ್ಷ್ಯ ಸಿಕ್ಕಿದೆ. ಇನ್ನು ವಿಚಾರಣಾಧೀನ ಕೈದಿ ಕೂಡ ಜೈಲಿನ ಕರ್ಮಕಾಂಡ ಬಿಚ್ಚಿಟ್ಟಿದ್ದಾನೆ. ಪೋಕ್ಸೋ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ವಿದ್ಯಾರ್ಥಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಹಲ್ಲೆ ಮಾಡಲಾಗಿದೆ. ಕಳೆದ ಐದು ವರ್ಷಗಳಿಂದ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಇದು ಗೊತ್ತಾದ ಬಳಿಕ ಯುವತಿಯ ಪೋಷಕರಿಂದ ಯುವಕನ ಮೇಲೆ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ. ಆ ಬಳಿಕ ಪುತ್ತೂರು ಪೊಲೀಸರು ಹುಡುಗನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಜೈಲಿಗೆ ಕಳಿಸಿದರೂ, ಯುವಕನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಯುವತಿಯ ಕುಟುಂಬ, ಜೈಲಿನಲ್ಲಿರುವ ನಟೋರಿಯಸ್ ಕೈದಿಗಳಿಗೆ ಆತನ ಮೇಲೆ ಹಲ್ಲೆ ಮಾಡುವಂತೆ ಸುಪಾರಿ ನೀಡಿದೆ. ಇದರಿಂದಾಗಿ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಮೂಗು , ಬಾಯಿಗೆ ಡ್ರಗ್ಸ್ ತುರುಕಿಸಿ ದೈಹಿಕ ಹಲ್ಲೆ ಮಾಡಿದ್ದಾರೆ. ಕೈ, ಕಾಲು, ಎದೆ , ಗುಪ್ತಾಂಗ ತುಳಿದು ಕೈದಿಗಳು ರಾಕ್ಷಸೀ ಕೃತ್ಯ ಎಸಗಿದ್ದಾರೆ. 10 ದಿನಗಳ ಕಾಲ ಮಂಗಳೂರು ಜೈಲಿನಲ್ಲಿ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಈ ವೇಳೆ ಯುವತಿಯ ಪೋಷಕರು ನಿನ್ನ ಹೊಡೆಯಲು ಹೇಳಿದ್ದಾರೆಂದು ಇತರ ಕೈದಿಗಳು ಹೇಳಿದ್ದಾರೆ.
ಇನ್ನು ಯುವಕನ ಮನೆಯವರಿಗೂ ಜೈಲಿನಿಂದಲೇ ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಬ್ಲ್ಯಾಕ್‌ಮೇಲ್ ಮಾಡಿ ಹಣವನ್ನೂ ಪಡೆದುಕೊಂಡಿದ್ದಾರೆ. ಬಳಿಕ ಗಾಂಜಾ ನಶೆಯಲ್ಲಿ ವಿಚಾರಣಾಧೀನ ಕೈದಿಗೆ ಥಳಿಸಿದ್ದಾರೆ.
ಆಸ್ಪತ್ರೆ ಸೇರಿದ ವಿದ್ಯಾರ್ಥಿ: ಜೈಲಿನಲ್ಲಿರುವಾಗಲೇ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ವಿದ್ಯಾರ್ಥಿಗೆ ಚಮಚ, ತಟ್ಟೆ ಸೇರಿ ಹಲವು ವಸ್ತುಗಳಿಂದ ಥಳಿಸಿದ್ದಾರೆ. ಸದ್ಯ ಜಾಮೀನು ಪಡೆದು ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಗಂಡ ನನಗಿಂತ ಜಾಸ್ತಿ ಬೆಕ್ಕನ್ನೇ ಲವ್ ಮಾಡ್ತಾನೆ, ವರದಕ್ಷಿಣೆ ಕೇಸ್ ದಾಖಲಿಸಿದ ಬೆಂಗಳೂರು ಮಹಿಳೆ!
ಗುಪ್ತಾಂಗ, ಕಣ್ಣು, ಕಿವಿ ,ಎದೆ ನೋವು ಹೆಚ್ಚಿದೆ ಎಂದು ವಿದ್ಯಾರ್ಥಿ ತಿಳಿಸಿದ್ದು, ನಿರಂತರ ವಾಂತಿ ಸೇರಿದಂತೆ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಕೈದಿಗಳ ಅಟ್ಟಹಾಸ ಮಿತಿ ಮೀರಿದ್ರೂ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಜೈಲಿಗೆ ಗಾಂಜಾ, ಮೊಬೈಲ್, ಮಾರಕಾಸ್ತ್ರ ಪೂರೈಕೆ ಮಾಡಿದರೂ ಈ ಬಗ್ಗೆ ಯಾರೂ ಕೇಳೋರೇ ಇಲ್ಲದಂತಾಗಿದೆ. ಅಧಿಕಾರಿಗಳ ಮೌನದ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು. ಜೈಲಿನ ಅವ್ಯವಸ್ಥೆ ಬಗ್ಗೆ ಸುವರ್ಣ ನ್ಯೂಸ್ ಜೊತೆ ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ.
ಹೊಸ ವರ್ಷಕ್ಕೆ ಜಿಯೋ ಧಮಾಕಾ ಆಫರ್; 200 ದಿನ ಅನ್‌ಲಿಮಿಟೆಡ್ 5G!
'ಕೈ ಕಾಲು ಕಟ್ಟಿ ಡ್ರಗ್ ತುರುಕಿ ಗುಪ್ತಾಂಗಕ್ಕೆ ತುಳಿದರು. ಬೆಳಗ್ಗೆಯಾದರೆ ಜೈಲಿನಲ್ಲಿ ಕೈದಿಗಳು ಕೆಲಸ ಮಾಡಿಸುತ್ತಿದ್ದರು. ಪ್ಲೇಟ್, ಚಮಚದಲ್ಲಿ ದೇಹದ ಭಾಗಗಳಿಗೆ ಹೊಡೆದಿದ್ದಾರೆ. ನಮ್ಮಪ್ಪ ವಿಸಿಟ್ ಗೆ ಬಂದಾಗ ನಾನು ಹಲ್ಲೆ ವಿಚಾರ ತಿಳಿಸಿದೆ.ನನ್ನ ಸೆಲ್ ಚೇಂಜ್ ಮಾಡಿದ ಕಾರಣ ಸ್ವಲ್ಪ ಸರಿಯಾಯ್ತು. ಆ ನಂತರ ನನಗೆ ಚಾರ್ಮಾಡಿ ಕೊಲೆ ಕೇಸ್ ನ ಆರೋಪಿಗಳಿಂದ ಹಲ್ಲೆಯಾಯಿತು. ಪುತ್ತೂರು ಪೊಲೀಸರಿಗೆ ಹುಡುಗಿಯ ಅಪ್ಪ ದುಡ್ಡು ಕೊಟ್ಟಿದ್ದಾರೆ . ನನ್ನ ಮೇಲೆ ಹಣ ಪಡೆದು ಸಿಕ್ಕ ಸಿಕ್ಕ ಕೇಸ್ ಹಾಕಿದ್ದಾರೆ ಎಂದು ಸುವರ್ಣನ್ಯೂಸ್ ಎದುರು ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ.