- Home
- Entertainment
- News
- ನಟ ಜಗ್ಗೇಶ್ ಫೋನ್ ಕಳೆದೋಯ್ತು, ಪೊಲೀಸರು ಹುಡುಕಿ ಸಂಜೆ ತಂದುಕೊಟ್ಟರು; ಜನಸಾಮಾನ್ಯರಿಗೆ ಈ ಸೇವೆ ಸಿಗುತ್ತಾ?
ನಟ ಜಗ್ಗೇಶ್ ಫೋನ್ ಕಳೆದೋಯ್ತು, ಪೊಲೀಸರು ಹುಡುಕಿ ಸಂಜೆ ತಂದುಕೊಟ್ಟರು; ಜನಸಾಮಾನ್ಯರಿಗೆ ಈ ಸೇವೆ ಸಿಗುತ್ತಾ?
ನಟ ಜಗ್ಗೇಶ್ ಸಹೋದರ ಕೋಮಲ್ ಅವರ ಐಫೋನ್ ಕಳೆದುಹೋಗಿ, ಪೊಲೀಸರು 150 ಸಿಸಿಟಿವಿ ಪರಿಶೀಲಿಸಿ ಕಳ್ಳನನ್ನು ಬಂಧಿಸಿ ಮೊಬೈಲ್ ವಾಪಸ್ ಕೊಟ್ಟಿದ್ದಾರೆ. ಈ ಘಟನೆ ಸಾಮಾನ್ಯ ಜನರಿಗೆ ಪೊಲೀಸರಿಂದ ಸಿಗುವ ಸೇವೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು (ಜೂನ್ 14): ಸಾಮಾನ್ಯರಿಗೆ ಒಂದು ರೀತಿಯ ಕಾನೂನು, ವಿಐಪಿಗಳಿಗೆ ಮತ್ತೊಂದು ಎಂಬ ಮಾತು ಈ ಘಟನೆಯಲ್ಲಿ ಅಕ್ಷರಶಃ ನಿಜವಾಗಿದೆ. ನಟ ಜಗ್ಗೇಶ್ ಅವರ ಸಹೋದರ ಕೋಮಲ್ ಅವರ ಐಫೋನ್ ಬೆಳಗ್ಗೆ ಕಳೆದು ಹೋಗಿದ್ದು, ತಕ್ಷಣ ದೂರು ಕೊಡಲಾಗಿದೆ. ತಕ್ಷಣ 150 ಸಿಸಿಟಿವಿ ಪತ್ತೆ ಮಾಡಿ ಮೊಬೈಲ್ ತೆಗೆದುಕೊಂಡು ಹೋದ ಕಳ್ಳನನ್ನು ಬಂಧಿಸಿ ಜಗ್ಗೇಶ್ ಮನೆಯವರ ಮೊಬೈಲ್ ಅನ್ನು ಸಂಜೆ ವೇಳೆಗೆ ವಾಪಸ್ ಕೊಟ್ಟು ಹೋಗಿದ್ದಾರೆ. ನಮ್ಮ ಪೊಲೀಸರು ಎಷ್ಟೊಂದು ದಕ್ಷರು ಆದರೆ, ಜನಸಾಮಾನ್ಯರ ಸೇವೆ ಮಾಡುವಲ್ಲಿ ತೀರಾ ನಿರ್ಲಕ್ಷ್ಯ ವಹಿಸುವರು ಎಂಬ ಆರೋಪ ಕೇಳಿಬಂದಿದೆ.
ಬೆಳಿಗ್ಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಸಹೋದರರ ನಟ ಕೋಮಲ್ ಅವರ ಜೇಬಿನಿಂದ ಐಫೋನ್ ಕೆಳಬಿದ್ದು ಹೋಗಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಅದನ್ನು ರಸ್ತೆಯಲ್ಲಿ ಎತ್ತಿಕೊಂಡು, ತಕ್ಷಣವಾಗಿ ಪೊಲೀಸ್ ಠಾಣೆಗೆ ಒಪ್ಪಿಸದೆ ತನ್ನ ಸ್ವಂತಕ್ಕೆ ಬಳಸಲು ತೆಗೆದುಕೊಂಡು ಹೋಗಿದ್ದನು. ಈ ಬಗ್ಗೆ ತಕ್ಷಣ ನಟ ಜಗ್ಗೇಶ್ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಆಗ ಪೊಲೀಸ್ ಅಧಿಕಾರಿಗಳು ಸುಮಾರು 150 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಎಲ್ಲಿಯೋ ಅಡಗಿ ಕುಳಿತಿದ್ದ ವ್ಯಕ್ತಿಯನ್ನು ಗುರುತಿಸಿ, ಸಂಜೆ ವೇಳೆಗೆ ಫೋನ್‌ನ್ನು ಹಿಂದಿರುಗಿಸಿದರು.
ನಟ ಜಗ್ಗೇಶ್ ಅವರು ಪೊಲೀಸರ ಕಾರ್ಯತತ್ಪರತೆಗೆ ಮೆಚ್ಚುಗೆ ಸೂಚಿಸಿ ತಮ್ಮ ಟ್ವೀಟ್‌ನಲ್ಲಿ ಮಲ್ಲೇಶ್ವರಂ ಠಾಣೆಯ ಸಿಪಿಐ ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಜೊತೆಗೆ, 'ಸಿಕ್ಕ ವಸ್ತುಗಳನ್ನು ಠಾಣೆಗೆ ಒಪ್ಪಿಸಿ' ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಆದರೆ ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟುವುದಕ್ಕೆ ಕಾರಣವಾಗಿದೆ. ಪೊಲೀಸರಿಂದ ಎಲ್ಲ ಜನಸಾಮಾನ್ಯರಿಗೂ ಇದೇ ರೀತಿಯ ಸೇವೆ ಸಿಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ನಟ ಜಗ್ಗೇಶ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಾ, ತಮ್ಮ ಸ್ವಂತ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.
ಒಬ್ಬ ನೆಟ್ಟಿಗರು 'ನಮ್ಮ ಮೊಬೈಲ್ ಕಳೆದು ಹೋಗಿ ಒಂದು ವಾರ ಆಯ್ತು, ಪೋಲಿಸ್ ಸ್ಟೇಷನ್‌ಗೆ ಹೋದರೆ ಕನಿಷ್ಠ ಸ್ಪಂದನೆಯೂ ಇಲ್ಲ. 'ವಿಐಪಿಗಳಿಗೆ ಬೇಕಾದ್ರೆ 150 ಸಿಸಿಟಿವಿ, ನಾವು ಪೊಲೀಸ್ ಠಾಣೆ ಅಲೆದಾಡಿ ದೂರು ಕೊಟ್ಟರೂ ಅದನ್ನು ಕನಿಷ್ಠ ದಾಖಲು ಕೂಡ ಮಾಡಿಕೊಳ್ಳುವುದಿಲ್ಲ. ಆದರೆ, 'ಒಬ್ಬ ನಟನಿಗೆ ಈ ಮಟ್ಟದ ಸೇವೆ ಸಿಗಬಹುದಾದರೆ, ನಮಗೇಕೆ ಇಲ್ಲ? ಪೊಲೀಸರ ಕರ್ತವ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನ ಸಾಮಾನ್ಯರ ಪ್ರಶ್ನೆಗಳು:
ಐಫೋನ್ ಇದ್ದರೆ ಮಾತ್ರವೇ ತನಿಖೆ ಸಿಗುತ್ತದೆಯಾ?
ವಿಐಪಿ ಜನರ ದೂರುಗಳಿಗೆ ಮಾತ್ರ ಪ್ರತಿಕ್ರಿಯೆ ಇದೆಯಾ?
ನಾವು ದೂರು ಕೊಟ್ಟಾಗ, ನಮ್ಮದು ಚೀನಾ ಫೋನ್ ಅನ್ನೋ ಕಾರಣಕ್ಕೆ ತುಚ್ಛವಾಗಿ ನೋಡುತ್ತೀರಾ? ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

