- Home
- Entertainment
- Movie Reviews
- ನದಿಯಲ್ಲಿ ಒಬ್ಬಳೇ ಬೋಟಿಂಗ್ ಹೋದ ಮಹಿಳೆಗೆ ಆಗಿದ್ದೇನು? ಈ ಶಾರ್ಟ್ ಫಿಲಂ ವೀಕ್ಷಿಸುವ ಮುನ್ನ ಎಚ್ಚರ!
ನದಿಯಲ್ಲಿ ಒಬ್ಬಳೇ ಬೋಟಿಂಗ್ ಹೋದ ಮಹಿಳೆಗೆ ಆಗಿದ್ದೇನು? ಈ ಶಾರ್ಟ್ ಫಿಲಂ ವೀಕ್ಷಿಸುವ ಮುನ್ನ ಎಚ್ಚರ!
ಸಾಂಸಾರಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ನೆಮ್ಮದಿಗಾಗಿ ನದಿ ವಿಹಾರಕ್ಕೆ ಹೋಗುತ್ತಾಳೆ. ಆದರೆ ಅಲ್ಲಿ ಆಕೆಗೆ ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ. ಭಯಾನಕ ಅನುಭವಗಳನ್ನು ಎದುರಿಸುವ ಮಹಿಳೆಗೆ ಕೊನೆಗೆ ಏನಾಗುತ್ತದೆ?

ಸಾಂಸರಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ನೆಮ್ಮದಿ ಹುಡುಕಿಕೊಂಡು ಸುಂದರವಾದ ಸ್ಥಳಕ್ಕೆ ಹೋಗುತ್ತಾಳೆ. ಗಂಡ, ತಂಗಿ ಯಾರೇ ಮೆಸೇಜ್ ಮಾಡಿದರೂ ಅವರಿಗೆ ರಿಪ್ಲೈ ಸಹ ಕೊಡಲು ಮಹಿಳೆಗೆ ಇಷ್ಟವಿರಲ್ಲ.
ಎಲ್ಲಾ ಜಂಜಾಟಗಳಿಂದ ದೂರ ಬಂದ ಮಹಿಳೆ ಬೋಟ್ ತೆಗೆದುಕೊಂಡು ನದಿಯಲ್ಲಿ ವಿಹಾರಕ್ಕೆ ತೆರಳುತ್ತಾಳೆ. ಸುತ್ತಮುತ್ತ ಯಾರೂ ಇರಲ್ಲ. ಆದರೂ ಮಹಿಳೆ ಶಾಂತವಾದ ನದಿಯಲ್ಲಿ ಬೋಟಿಂಗ್ ಹೋಗುತ್ತಾಳೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಆನಂದಿಸುತ್ತಾಳೆ.
ಬೋಟಿಂಗ್ ಮಾಡುತ್ತಾ ನದಿಯ ಮಧ್ಯ ಭಾಗಕ್ಕೆ ಮಹಿಳೆ ಹೋಗುತ್ತಾಳೆ. ತನ್ನ ಸುತ್ತಲೂ ಏನು ನಡೆಯುತ್ತಿದ ಎಂಬ ಅನುಭವ ಆಕೆಗೆ ಉಂಟಾಗುತ್ತದೆ. ನೋಡ ನೋಡುತ್ತಿದ್ದಂತೆ ಬೋಟ್ ಮುಗುಚಿಕೊಳ್ಳುತ್ತದೆ. ಪರಿಣಾಮ ಮಹಿಳೆ ನೀರಿಗೆ ಬೀಳುತ್ತಾಳೆ.
ನೀರಿನಲ್ಲಿರುವಾಗ ಆಕೆಯ ಸುತ್ತ ಕೆಲವರು ಎದ್ದು ಬಂದಂತೆ ಆಕೆಗೆ ಅನುಭವವಾಗುತ್ತದೆ. ಭಯಗೊಂಡ ಮಹಿಳೆ ಈಜುತ್ತಾ ಬೋಟ್ ಏರಿ ಕುಳಿತುಕೊಳ್ಳುತ್ತಾಳೆ. ನಂತರ ಅಲ್ಲಿಂದ ಮುಂದೆ ಹೋಗುತ್ತಾಳೆ. ಅಷ್ಟರಲ್ಲಿಯೇ ಆಕೆಗೆ ಬಾಲಕಿಯೊಬ್ಬಳು ಕಾಣಿಸುತ್ತಾಳೆ.
ನಿನ್ನ ಪೋಷಕರು ಎಲ್ಲಿದ್ದಾರೆ? ನನಗೆ ಸಹಾಯ ಬೇಕಿದೆ. ದಯವಿಟ್ಟು ನಿನ್ನ ಪೋಷಕರನ್ನು ಕರೆದುಕೊಂಡು ಬರುವಂತೆ ಮಹಿಳೆ ಮನವಿ ಮಾಡಿಕೊಳ್ಳುತ್ತಾಳೆ. ಬಾಲಕಿ ತನ್ನ ತಾಯಿಯನ್ನು ಕರೆದುಕೊಂಡು ಬರುವಷ್ಟರಲ್ಲಿ ಮಹಿಳೆ ಅಲ್ಲಿಯ ಭೂತದ ಆಹಾರವಾಗಿರುತ್ತಾಳೆ. ನಂತರ ಆಕೆಯೂ ಭಯಬೀಳಿಸುವ ಭೂತವಾಗುತ್ತಾಳೆ.
ಕೇವಲ 15 ನಿಮಿಷದ The River - Short Horror Film ನಿಮ್ಮನ್ನು ಖಂಡಿತ ಭಯಬೀಳಿಸುತ್ತದೆ. ಎರಡು ವರ್ಷಗಳ ಹಿಂದೆ ಅಪ್ಲೋಡ್ ಆಗಿರುವ ದಿ ರಿವರ್ ಕಿರುಚಿತ್ರ 23 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. Superfreak Media ಯುಟ್ಯೂಬ್ ಚಾನೆಲ್‌ನಲ್ಲಿ ದಿ ರಿವರ್ ಕಿರುಚಿತ್ರ ವೀಕ್ಷಿಸಬಹುದಾಗಿದೆ.