MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Money
  • Rent vs Own house: ಹಣ ಇದ್ರೂ ಸ್ವಂತ ಮನೆ ಮಾಡದೆ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿರೋ ಜನ! ಇದಕ್ಕಿದೆ ಬಲವಾದ ಕಾರಣ!

Rent vs Own house: ಹಣ ಇದ್ರೂ ಸ್ವಂತ ಮನೆ ಮಾಡದೆ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿರೋ ಜನ! ಇದಕ್ಕಿದೆ ಬಲವಾದ ಕಾರಣ!

Renting vs Buying a House: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನೋದು ಗಾದೆ. ಆದರೆ ಈಗಿನ ಯುವಜನತೆ ಈ ಯೋಚನೆಯನ್ನೇ ಬದಲಾಯಿಸುತ್ತಿದೆ. ಅದರಲ್ಲೂ ಮಿಲೇನಿಯಲ್ಸ್ ಮತ್ತು ಜೆನ್-ಜಿ ಉದ್ಯೋಗಿಗಳು ಸ್ವಂತ ಮನೆ ಖರೀದಿಸುವುದಕ್ಕಿಂತ ಬಾಡಿಗೆ ಮನೆಯಲ್ಲಿ ಇರುವುದಕ್ಕೇ ಹೆಚ್ಚು ಒಲವು ತೋರುತ್ತಿದ್ದಾರೆ.

2 Min read
Author : Padmashree Bhat
Published : Jul 17 2026, 02:32 PM IST
Share this Photo Gallery
  • FB
  • TW
  • Linkdin
  • Whatsapp
16
ಆ ಹಣವನ್ನು ಏನು ಮಾಡುತ್ತಿದ್ದಾರೆ?
Image Credit : Asianet News

ಆ ಹಣವನ್ನು ಏನು ಮಾಡುತ್ತಿದ್ದಾರೆ?

ಭಾರೀ ಹೋಮ್ ಲೋನ್ EMI ಪಾವತಿಸುವುದಕ್ಕಿಂತ ತಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಉತ್ತಮ ಎಂದು ಯುವಕರು ಭಾವಿಸುತ್ತಿದ್ದಾರೆ. ನೋಬ್ರೋಕರ್ (NoBroker) ವರದಿ ಪ್ರಕಾರ, ಸದ್ಯ 46% ಬಾಡಿಗೆದಾರರು ದೀರ್ಘಕಾಲ ಬಾಡಿಗೆ ಮನೆಯಲ್ಲೇ ಇರುವುದು ಉತ್ತಮ ನಿರ್ಧಾರ ಎಂದು ನಂಬಿದ್ದಾರೆ. ಪ್ರಮುಖ ನಗರಗಳಲ್ಲಿ ಮನೆಗಳ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಹೋಮ್ ಲೋನ್ ಇಎಂಐ ಕೂಡ ಹೆಚ್ಚಾಗಿದೆ. ಹಲವು ನಗರಗಳಲ್ಲಿ, ಅದೇ ಮನೆಗೆ ಪಾವತಿಸುವ ಬಾಡಿಗೆಗೆ ಹೋಲಿಸಿದರೆ ಇಎಂಐ ದುಪ್ಪಟ್ಟಿಗಿಂತ ಹೆಚ್ಚಿದೆ. ಕಳೆದ ಐದು ವರ್ಷಗಳಲ್ಲಿ ಗುರುಗ್ರಾಮ್‌ನಲ್ಲಿ ಇಎಂಐ-ಬಾಡಿಗೆ ಅನುಪಾತ 1.86 ರಿಂದ 2.68ಕ್ಕೆ ಏರಿದೆ. 

ಬೆಂಗಳೂರು (2.38), ಹೈದರಾಬಾದ್ (2.47), ಮತ್ತು ಮುಂಬೈ (2.19) ನಲ್ಲೂ ಇದೇ ಪರಿಸ್ಥಿತಿ ಇದೆ. ಉದಾಹರಣೆಗೆ, ತಿಂಗಳಿಗೆ 50,000 ರೂ. ಬಾಡಿಗೆ ಇರುವ ಮನೆಯನ್ನು ಖರೀದಿಸಿದರೆ, ಅದರ ಇಎಂಐ 1 ಲಕ್ಷ ರೂ.ಗಿಂತ ಹೆಚ್ಚಿರಬಹುದು. ಇದೇ ಕಾರಣಕ್ಕೆ ಯುವಕರು ಡೌನ್ ಪೇಮೆಂಟ್ ಮತ್ತು ಇಎಂಐಗೆ ಹಣ ಖರ್ಚು ಮಾಡುವ ಬದಲು, ಅದೇ ಹಣವನ್ನು ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆಯಂತಹ ಹೂಡಿಕೆಗಳಲ್ಲಿ ತೊಡಗಿಸಲು ಮುಂದಾಗುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಎಷ್ಟು EMI ಕಟ್ಟಬೇಕು?
Image Credit : Snehil Real Estate/YouTube

ಎಷ್ಟು EMI ಕಟ್ಟಬೇಕು?

ಮನೆ ಖರೀದಿಸಿದರೆ 20 ರಿಂದ 25 ವರ್ಷಗಳ ಕಾಲ ಭಾರಿ ಇಎಂಐ ಪಾವತಿಸಬೇಕಾಗುತ್ತದೆ ಎಂದು ಅನೇಕ ಯುವ ಉದ್ಯೋಗಿಗಳು ಭಾವಿಸುತ್ತಾರೆ. ಇದರಿಂದಾಗಿ ಉದ್ಯೋಗ ಬದಲಾವಣೆ, ನಗರ ಬದಲಾವಣೆ ಮಾಡುವುದು ಕಷ್ಟವಾಗುತ್ತದೆ ಎನ್ನುತ್ತಾರೆ. ಬೆಂಗಳೂರಿನ 31 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಪ್ರಕಾರ, ಪ್ರತಿ ತಿಂಗಳು ಲಕ್ಷ ರೂಪಾಯಿ ಇಎಂಐ ಕಟ್ಟುವ ಬದಲು ಅದೇ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ಅಗತ್ಯವಿದ್ದರೆ ಉದ್ಯೋಗಕ್ಕಾಗಿ ಬೇರೆ ನಗರಕ್ಕೆ ಹೋಗುವ ಸ್ವಾತಂತ್ರ್ಯವೂ ಇರುತ್ತದೆ ಎಂದು ಅವರು ಹೇಳುತ್ತಾರೆ.

Related Articles

Related image1
ಮುಕೇಶ್ ಅಂಬಾನಿ ಮನೆ 'ಆಂಟಿಲಿಯಾ' ಈಗ ಮಾರಾಟ ಮಾಡಿದ್ರೆ ಬೆಲೆ ಎಷ್ಟು? ಮಾರುಕಟ್ಟೆ ದರ
Related image2
‘ಮನೆ ಇಲ್ಲ, ಕಾರಿಲ್ಲ, ಸಂಬಳ ಜಸ್ಟ್ 25 ಸಾವಿರ’: ಮಹಾರಾಣಿಯಂಥ ಹುಡುಗಿ ಮದುವೆ ಮಾಡಿಸಿ ಎಂದು ಬ್ಯಾನರ್ ಹಾಕಿದ ಯುವಕ!
36
ಆರ್ಥಿಕ ಸಮಸ್ಯೆಯಿಂದಲ್ಲ
Image Credit : Snehil Real Estate/YouTube

ಆರ್ಥಿಕ ಸಮಸ್ಯೆಯಿಂದಲ್ಲ

ಈಗಿನ ಕಾಲದಲ್ಲಿ ಬಾಡಿಗೆ ಮನೆಯಲ್ಲಿರುವುದು ಆರ್ಥಿಕ ಸಮಸ್ಯೆಯಿಂದಲ್ಲ. ತಮ್ಮಿಷ್ಟದ ಜೀವನಶೈಲಿಯನ್ನು ಮುಂದುವರಿಸಲು ಯುವಕರೇ ಸ್ವಇಚ್ಛೆಯಿಂದ ಬಾಡಿಗೆ ಮನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ಮನೆಗಳು, ಗೇಟೆಡ್ ಕಮ್ಯೂನಿಟಿಗಳು, ಸಂಪೂರ್ಣ ಫರ್ನಿಶ್ಡ್ ಅಪಾರ್ಟ್‌ಮೆಂಟ್‌ಗಳು ಮತ್ತು ಪ್ರೀಮಿಯಂ ರೆಸಿಡೆನ್ಶಿಯಲ್ ಪ್ರಾಜೆಕ್ಟ್‌ಗಳಲ್ಲಿ ವಾಸಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. 

ಬೆಂಗಳೂರಿನಲ್ಲಿ 3BHK ಮನೆಗಳಿಗೆ ಬೇಡಿಕೆಯು ಪೂರೈಕೆಯನ್ನು ಮೀರಿದೆ. ಹಾಗೆಯೇ, ಮುಂಬೈ ಮೆಟ್ರೋಪಾಲಿಟನ್ ರೀಜನ್‌ನಲ್ಲಿ (MMR) ತಿಂಗಳಿಗೆ 40,000 ರೂ.ಗಿಂತ ಹೆಚ್ಚು ಬಾಡಿಗೆ ಇರುವ ಮನೆಗಳಿಗೆ ಒಟ್ಟು ಬೇಡಿಕೆಯ ಮೂರನೇ ಒಂದು ಭಾಗದಷ್ಟು ಇದೆ ಎಂದು ನೋಬ್ರೋಕರ್ ಡೇಟಾ ಹೇಳುತ್ತದೆ.

46
ಉದ್ಯೋಗ ಬದಲಾವಣೆ
Image Credit : Snehil Real Estate/YouTube

ಉದ್ಯೋಗ ಬದಲಾವಣೆ

ಇಂದಿನ ಯುವಕರು ಆಗಾಗ ಉದ್ಯೋಗಗಳನ್ನು ಬದಲಾಯಿಸುತ್ತಿರುತ್ತಾರೆ. ಹೈಬ್ರಿಡ್ ವರ್ಕ್ ಕಲ್ಚರ್ ಹೆಚ್ಚಾಗುತ್ತಿರುವುದು ಮತ್ತು ಭವಿಷ್ಯದಲ್ಲಿ ಯಾವ ನಗರದಲ್ಲಿ ನೆಲೆಸುತ್ತೇವೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಕೂಡ ಮನೆ ಖರೀದಿಸುವ ನಿರ್ಧಾರವನ್ನು ಮುಂದೂಡಲು ಕಾರಣವಾಗಿದೆ. ಭವಿಷ್ಯದ ಬಗ್ಗೆ ಸ್ಪಷ್ಟತೆ ಬರುವವರೆಗೂ ಶಾಶ್ವತ ಆಸ್ತಿಯಲ್ಲಿ ಹೂಡಿಕೆ ಮಾಡಬಾರದು ಎಂದು ಹಲವರು ಭಾವಿಸುತ್ತಾರೆ. ಹೀಗಾಗಿ, ಬಾಡಿಗೆ ಮನೆಯಲ್ಲಿರುವುದು ಅವರಿಗೆ ಹೆಚ್ಚು ಅನುಕೂಲಕರ ಎನಿಸುತ್ತಿದೆ.

56
ಮಾರುಕಟ್ಟೆಯ ಮೇಲೂ ಪರಿಣಾಮ
Image Credit : ShekharSuman@instagram

ಮಾರುಕಟ್ಟೆಯ ಮೇಲೂ ಪರಿಣಾಮ

ಯುವಜನರಲ್ಲಿ ಹೆಚ್ಚುತ್ತಿರುವ ಈ ಧೋರಣೆ ದೇಶದ ಪ್ರಮುಖ ನಗರಗಳ ಬಾಡಿಗೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ. ಮುಂಬೈ ಮೆಟ್ರೋಪಾಲಿಟನ್ ರೀಜನ್‌ನಲ್ಲಿ ವಾರ್ಷಿಕ ಬಾಡಿಗೆ 11% ಹೆಚ್ಚಾಗಿದೆ. ಚೆನ್ನೈನಲ್ಲಿ 8% ಮತ್ತು ಬೆಂಗಳೂರಿನಲ್ಲಿ 7% ಏರಿಕೆ ದಾಖಲಾಗಿದೆ. 

ಹೈದರಾಬಾದ್ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲೂ ಬಾಡಿಗೆ ಸುಮಾರು 3% ಹೆಚ್ಚಾಗಿದೆ. 25-34 ವರ್ಷ ವಯಸ್ಸಿನವರಲ್ಲಿ 53% ಮತ್ತು 35-44 ವರ್ಷ ವಯಸ್ಸಿನವರಲ್ಲಿ 48% ಜನರು ಭವಿಷ್ಯದಲ್ಲೂ ಬಾಡಿಗೆ ಮನೆಯಲ್ಲೇ ಇರಲು ಬಯಸುತ್ತಾರೆ ಎಂದು ನೋಬ್ರೋಕರ್ ಸಮೀಕ್ಷೆ ತಿಳಿಸಿದೆ.  

ಸ್ವಂತ ಮನೆ ಎಂಬುದು ಇಂದಿಗೂ ಅನೇಕರ ಗುರಿಯಾಗಿದ್ದರೂ, ಆರ್ಥಿಕ ಸ್ವಾತಂತ್ರ್ಯ, ಹೂಡಿಕೆ ಮೂಲಕ ಸಂಪತ್ತು ಸೃಷ್ಟಿಸುವುದು ಮತ್ತು ಉದ್ಯೋಗಕ್ಕೆ ತಕ್ಕಂತೆ ನಗರ ಬದಲಾಯಿಸುವ ಸೌಲಭ್ಯದಂತಹ ಕಾರಣಗಳಿಂದ ಯುವಕರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ.

66
ಸ್ವಂತ ಮನೆ ಇಲ್ಲ ಎನ್ನೋದು ಕೊರಗು?
Image Credit : Snehil Real Estate/YouTube

ಸ್ವಂತ ಮನೆ ಇಲ್ಲ ಎನ್ನೋದು ಕೊರಗು?

ಯುವಕರ ಈ ಆಲೋಚನೆ ಬಗ್ಗೆ ಹಲವು ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಎಷ್ಟೇ ದಿನ ಬಾಡಿಗೆ ಮನೆಯಲ್ಲಿದ್ದರೂ ಸ್ವಂತ ಮನೆ ಇಲ್ಲದಿರುವುದು ಜೀವನದಲ್ಲಿ ಒಂದು ಕೊರಗು ಎನ್ನುವವರಿದ್ದಾರೆ. ಅದರಲ್ಲೂ ಜೀವನದ ಕೊನೆಯ ಘಟ್ಟದಲ್ಲಿ ಸ್ವಂತ ಸೂರು ಇಲ್ಲದಿದ್ದರೆ ಹಲವು ಕಷ್ಟಗಳು ಎದುರಾಗುತ್ತವೆ ಎಂದು ಹಿರಿಯರು ಭಾವಿಸುತ್ತಾರೆ. ಇದಕ್ಕಾಗಿಯೇ ಬಡವನಿಂದ ಹಿಡಿದು ಶ್ರೀಮಂತನವರೆಗೆ ಪ್ರತಿಯೊಬ್ಬರೂ ತನಗಾಗಿ ಒಂದು ಸ್ವಂತ ಮನೆಯನ್ನು ಬಯಸುತ್ತಾರೆ. ಏನೇ ಆದರೂ, ಈಗಿನ ಯುವಕರ ಈ ಆಲೋಚನೆ ಹೊಸ ಚರ್ಚೆಗೆ ಕಾರಣವಾಗಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನೆ
ಮನೆ ಸಾಲ
ಹಣ (Hana)
ಸುದ್ದಿ

Latest Videos
Recommended Stories
Recommended image1
ಆಫೀಸ್‌ ರಾಜಕೀಯ, ಒತ್ತಡಕ್ಕೆ ಬೇಸತ್ತು 6.8 ಕೋಟಿ ರೂ ಹೂಡಿಕೆ ಮಾಡಿ ಕೆಲಸ ಬಿಟ್ಟ 44 ವರ್ಷದ ಉದ್ಯೋಗಿ; ಆರೋಗ್ಯ ಮುಖ್ಯ
Recommended image2
ವಿಶ್ವದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಕಳ್ಳತನ ಆಗಿದ್ದು ಚಿನ್ನವೂ ಅಲ್ಲ, ವಜ್ರವೂ ಅಲ್ಲ; ಏನದು?
Recommended image3
Financial Planning: 20 ಸಾವಿರ ಸಂಬಳದಲ್ಲೂ ಶ್ರೀಮಂತರಾಗಬಹುದೇ? ಕಷ್ಟವೇನಲ್ಲ, ಈ ಟ್ರಿಕ್ಸ್ ಬಳಸಿದ್ರೆ ಸಾಕು!
Related Stories
Recommended image1
ಮುಕೇಶ್ ಅಂಬಾನಿ ಮನೆ 'ಆಂಟಿಲಿಯಾ' ಈಗ ಮಾರಾಟ ಮಾಡಿದ್ರೆ ಬೆಲೆ ಎಷ್ಟು? ಮಾರುಕಟ್ಟೆ ದರ
Recommended image2
‘ಮನೆ ಇಲ್ಲ, ಕಾರಿಲ್ಲ, ಸಂಬಳ ಜಸ್ಟ್ 25 ಸಾವಿರ’: ಮಹಾರಾಣಿಯಂಥ ಹುಡುಗಿ ಮದುವೆ ಮಾಡಿಸಿ ಎಂದು ಬ್ಯಾನರ್ ಹಾಕಿದ ಯುವಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved