- Home
- Technology
- Mobiles
- ಭರ್ಜರಿ ಕ್ಯಾಶ್‌ಬ್ಯಾಕ್, 0 ಡೌನ್‌ಪೇಮೆಂಟ್ EMI, ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ A27 5G ಫೋನ್ ಲಾಂಚ್
ಭರ್ಜರಿ ಕ್ಯಾಶ್‌ಬ್ಯಾಕ್, 0 ಡೌನ್‌ಪೇಮೆಂಟ್ EMI, ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ A27 5G ಫೋನ್ ಲಾಂಚ್
ಸ್ಯಾಮ್‌ಸಂಗ್ ಬಜೆಟ್ ಫ್ಲೆಂಡ್ಲಿಯಲ್ಲಿ 50ಎಂಪಿ ಕ್ಯಾಮೆರಾ,5000mAh ಬ್ಯಾಟರಿ ಸೇರಿದಂತೆ ದುಬಾರಿ ಮೊಬೈಲ್‌ನಲ್ಲಿರುವ ಎಲ್ಲಾ ಫೀಚರ್ಸ್ ಈ ಸ್ಯಾಮ್‌ಸಂಗ್ ಗೆಲಾಕ್ಸಿ A27 5G ಫೋನ್‌ನಲ್ಲಿದೆ. ವಿಶೇಷ ಅಂದರೆ ಖರೀದಿಗೆ ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A27 5G ಫೋನ್
ಸ್ಯಾಮ್‌ಸಂಗ್ ಅತ್ಯುತ್ತಮ ಕ್ವಾಲಿಟಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A27 5G ಬಿಡುಗಡೆಯಾಗಿದೆ. ಫೋಟೋ ಹಾಗೂ ವಿಡಿಯೋ ರೆಕಾರ್ಡ್ ಮಾಡಲು ಉತ್ತಮ ಕ್ವಾಲಿಟಿ ಕ್ಯಾಮೆರಾ ಹಾಗೂ ಎಐ ತಂತ್ರಜ್ಞಾನ, ಸುದೀರ್ಘ ಬಾಳಿಕೆಯ ಬ್ಯಾಟರಿ, ಕೈಗೆಟುವು ಬೆಲೆ ಹಾಗೂ ಕ್ಯಾಶ್‌ಬ್ಯಾಕ್, ಝೀರೋ ಡೌನ್‌ಪೇಮೆಂಟ್ ಸೇರಿದಂತೆ ಹಲವು ಆಫರ್ ಕೂಡ ನೀಡಲಾಗಿದೆ.
ಅಲುಗಾಡದ ಟ್ರಿಪಲ್ ಕ್ಯಾಮರಾ
ಗೆಲಾಕ್ಸಿ A27 5G, OIS ಮತ್ತು 4K ವೀಡಿಯೋ ರೆಕಾರ್ಡಿಂಗ್, 115° ಫೀಲ್ಡ್ ವ್ಯೂ ಇರುವ 50MP ಮುಖ್ಯ ಕ್ಯಾಮರಾ ನೀಡಲಾಗಿದೆ. 2MP ಮ್ಯಾಕ್ರೊ ಕ್ಯಾಮರಾ ಹೊಂದಿದೆ. 6x4 ಸೈಜ್ ಪ್ರಿಂಟ್ ಮಾಡಲು ಯೋಗ್ಯವಾದ 300dpi ಫೋಟೋಗಳಿಗೆ ಅವಕಾಶ ಕಲ್ಪಿಸುತ್ತದೆ. ಇದರ 12MP HDR ಫ್ರಂಟ್ ಕ್ಯಾಮರಾ, ಸಮನಾಗಿ ಎಕ್ಸ್‌ಫೋಸ್ ಆದ ಪೋರ್ಟ್ರೇಟ್‌ಗಳು ಮತ್ತು ಅತ್ಯುತ್ಕೃಷ್ಟ ಗುಣಮಟ್ಟದ ವೀಡಿಯೋ ನೀಡಲಿದೆ. ಜೊತೆಗೆ ಅಬ್‌ಜೆಕ್ಟ್ ಇರೇಸರ್, ಎಐ ಫೋಟೋ ಎಡಿಟಿಂಗ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.
ಸ್ಯಾಮ್‌ಸಂಗ್ ಗೆಲಾಕ್ಸಿ A27 5G ಬೆಲೆ
ಸ್ಯಾಮ್‌ಸಂಗ್ ಗೆಲಾಕ್ಸಿ A27 5G ಫೋನ್ 6GB RAM/128GB ಸ್ಟೋರೇಜ್, 8GB RAM/128GB ಸ್ಟೊರೇಜ್ ಮತ್ತು 8GB RAM/256GB ಸ್ಟೋರೇಜ್‌ಗಳಲ್ಲಿ ಲಭ್ಯವಿದೆ. ಇದರ ಬೆಲೆ ಕ್ರಮವಾಗಿ 28999 ರೂಪಾಯಿ, 31999 ರೂಪಾಯಿ ಹಾಗೂ 37499 ರೂಪಾಯಿ. ವಿಶೇಷ ಅಂದರೆ ಎಲ್ಲಾ ಮಾಡಲ್‍ಗೆ 3000 ರೂಪಾಯಿ ಬ್ಯಾಂಕ್/ಯುಪಿಐ ಕ್ಯಾಶ್‌ಬ್ಯಾಕ್ ಅಥವಾ 15 ತಿಂಗಳುಗಳ ಅವಧಿಯವರೆಗೆ ಆಯ್ದ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನಿಗಳಿಂದ ಶೂನ್ಯ ಡೌನ್ ಪೇಮೆಂಟ್‌ನಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಗೆಲಾಕ್ಸಿ A27 5Gಆಯ್ದ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನಿಗಳಿಂದ 8-ತಿಂಗಳ ಡೌನ್ ಪೇಮೆಂಟ್ ಇರುವ 24-ತಿಂಗಳ ಇಎಮ್‌ಐ ಆಯ್ಕೆ ಲಭ್ಯವಿದೆ
ಇಡೀ ದಿನ ಬಳಸಲು ಸಾಧ್ಯವಾಗುವ ಬ್ಯಾಟರಿ
ಸ್ಯಾಮ್‌ಸಂಗ್ ಗೆಲಾಕ್ಸಿ A27 5G ಫೋನ್ ಇಡೀ ದಿನ ಬಳಸಲು ಯೋಗ್ಯವಾದ 5000mAh ಬ್ಯಾಟರಿ ನೀಡಲಾಗಿದೆ. Samsung Knox ಮತ್ತು Knox Vault ಹಾರ್ಡ್‌ವೇರ್ ಬೆಂಬಲ ರಕ್ಷಣೆ ಇರುವ ಗೆಲಾಕ್ಸಿ A27 5G ವೈಯಕ್ತಿಕ ಫೋಟೋಗಳು, ಫೈಲ್ಸ್ ಸಂರಕ್ಷಿಸುವ ಡೇಟಾ ಭದ್ರತೆ ನೀಡಲಿದೆ.Samsung Wallet, ಬಳಕೆದಾರರು ಟ್ಯಾಪ್ ಮಾಡಿ ಪೇ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ.
ಸ್ಮೂತ್ ಸ್ಕ್ರೀನ್, ಅದ್ಭುತ ಡಿಸ್‌ಪ್ಲೇ
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A27 5G ಅದ್ಭುತ ಡಿಸ್‌ಪ್ಲೇ ಹೊಂದಿದೆ. 120Hz 6.7 ಇಂಚಿನ ಸೂಪರ್ AMOLED ಸ್ಕ್ರೀನ್ ಹೊಂದಿದೆ. ಸ್ಮಾರ್ಟ್‌ಫೋನ್‌ನ ವರ್ಧಿತ Infinity-O ಡಿಸ್‌ಪ್ಲೇಯಿಂದ ಯಾವುದೇ ಅಡೆ ತಡೆ ಇಲ್ಲದೆ ತಲ್ಲೀನವಾಗಿ ವೀಕ್ಷಣೆ ಮಾಡಲು ಸಾಧ್ಯವಿದೆ.
ಗೇಮಿಂಗ್ ಹಾಗೂ ಎಐ ತಂತ್ರಜ್ಞಾನ
Snapdragon® 6 Gen 3 ಮೊಬೈಲ್ UFS 3.1 ಸ್ಟೋರೇಜ್ ಮತ್ತು LPDDRX5 RAM ಹೊಂದಿದೆ. ಹೀಗಾಗಿ ಮಲ್ಟಿ ಟಾಸ್ಕಿಂಗ್, ಗೇಮಿಂಗ್‌ಗೂ ಉತ್ತಮವಾಗಿದೆ. ಸರಾಗವಾಗಿ ಗೇಮಿಂಗ್ ಆಡಲು ಈ ಫೋನ್ ನೆರವಾಗಲಿದೆ. ವೆಬ್ ಕಂಟೆಂಟ್ ಬ್ರೌಸ್ ಮಾಡುತ್ತಿರುವಾಗ ವೀಡಿಯೋ ಸ್ಟ್ರೀಮ್, ಆಪ್ ಬಳಕೆ, ಎಐ ಅಪ್ಲಿಕೇಶನ್‌ಗಳೊಡನೆ ಕಾರ್ಯನಿರ್ವಹಿಸುವಾಗ ಮತ್ತು ಗೇಮ್ಸ್ ಆಡುವಾಗ ಫೋನ್ ಯಾವುದೇ ಸಮಸ್ಯೆಗೆ ಸಿಲುಕುವುದಿಲ್ಲ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

