₹2009 ಡಿಸ್ಕೌಂಟ್‌ನಲ್ಲಿ ಸಿಗುತ್ತಿದೆ Samsung ಕಂಪನಿಯ 6000mAhಯ ಸ್ಮಾರ್ಟ್‌ಫೋನ್; ಇದು 10 ಸಾವಿರಕ್ಕಿಂತಲೂ ಕಡಿಮೆ ಬೆಲೆ

Samsung Galaxy F13 ಸ್ಮಾರ್ಟ್‌ಫೋನ್ ₹2009 ಡಿಸ್ಕೌಂಟ್‌ನಲ್ಲಿ ₹9,990ಕ್ಕೆ ಲಭ್ಯ. 6000mAh ಬ್ಯಾಟರಿ, 50MP ಕ್ಯಾಮೆರಾ ಮತ್ತು ಇತರ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

6000mah battery Samsung Galaxy F13 Smartphone available in 9990 Rupees gets 2009 Discount mrq

Samsung Smartphone at Discount: 10,000 ರೂ.ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ 6000mAh ಪವರ್‌ಫುಲ್ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳು ಮಾರಾಟಕ್ಕಿವೆ. ಮಧ್ಯಮ ವರ್ಗದ ಬಜೆಟ್‌ನಲ್ಲಿಯೇ ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಹೊಸ ಫೋನ್ ಖರೀದಿಸಲು  ಪ್ಲಾನ್ ಮಾಡಿಕೊಂಡಿದ್ರೆ ಇದು ಒಳ್ಳೆಯ ಅವಕಾಶವಾಗಿದೆ. ಅತ್ಯಧಿಕ ಮತ್ತು ವಿಶೇಷ ಫೀಚರ್ಸ್ ಹೊಂದಿರುವ  Galaxy F13 ಸ್ಮಾರ್ಟ್‌ಫೋನ್ ಮೇಲೆ ಇದೀಗ 2000  ರೂಪಾಯಿಗೂ ಅಧಿಕ ರಿಯಾಯ್ತಿ ಸಿಗುತ್ತಿದೆ.  ಈ ಲೇಖನದಲ್ಲಿ  Galaxy F13ಯ ಕ್ಯಾಮೆರಾ, ಡಿಸ್‌ಪ್ಲೇ, ಸ್ಟೋರೇಜ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ನೋಡೋಣ. 

Samsung Galaxy F13 ವೈಶಿಷ್ಟ್ಯಗಳು
ಈ ಸ್ಮಾರ್ಟ್‌ಫೋನ್ 6.6 ಇಂಚು ಫುಲ್ HD+ ಸ್ಕ್ರೀನ್ ಹೊಂದಿದೆ. Exynos 850 SoC ಪ್ರೊಸೆಸರ್‌ ನಲ್ಲಿ ಕಾರ್ಯು ನಿರ್ವಹಿಸಲಿದೆ. ಇದು 4GB RAM ಮತ್ತು 128 GB ಸ್ಟೋರೇಜ್ ಹೊಂದಿದೆ. ಬ್ಯಾಟರಿ ಬ್ಯಾಕಪ್ ನೋಡೋದಾದ್ರೆ  6000mAhಯ ಬ್ಯಾಟರಿ ಹೊಂದಿದ್ದು, 15W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಪ್ರೈಮರಿ ಕ್ಯಾಮೆರಾ 50MP, ಸೆಕೆಂಡರಿ 5MP, ಮೂರನೇ ಕ್ಯಾಮೆರಾ 2MP ಹೊಂದಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ ಫ್ರಂಟ್ 8MPಯ ಕ್ಯಾಮೆರಾ ನೀಡಲಾಗಿದೆ. 

ಇದನ್ನೂ ಓದಿ: ಸ್ಯಾಮ್‌ಸಂಗ್‌ ಶಾಕ್ ಕೊಟ್ಟ ನೋಕಿಯಾ; ₹4999ಯಲ್ಲಿ 75Hz ಡಿಸ್‌ಪ್ಲೇ, 5000mah ಬ್ಯಾಟರಿ 5G ಸ್ಮಾರ್ಟ್‌ಫೋನ್

Samsung Galaxy F13 ಬೆಲೆ ಮತ್ತು ಡಿಸ್ಕೌಂಟ್
ಇ-ಕಾಮರ್ಸ್ ಸೈಟ್ ಪ್ಲಾಟ್‌ಫಾರಂನಲ್ಲಿ Galaxy F13 ಸ್ಮಾರ್ಟ್‌ಫೋನ್ 4GB RAM + 64GB ವೇರಿಯಂಟ್ ಮೇಲೆ 2009 ರೂಪಾಯಿ ಡಿಸ್ಕೌಂಟ್ ಸಿಗುತ್ತಿದೆ. ಈ ಸ್ಮಾರ್ಟ್‌ಫೋನ್   11,999 ರೂಪಾಯಿ ಬೆಲೆಯಲ್ಲಿ ಲಾಂಚ್ ಆಗಿತ್ತು. ಇದೀಗ 9,990 ರೂಪಾಯಿಗೆ ಗ್ರಾಹಕರಿಗೆ ಸಿಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಆಕ್ಸಿಸ್ ಕಾರ್ಡ್ ಬಳಕೆ ಮಾಡುವ ಗ್ರಾಹಕರಿಗೆ ಹೆಚ್ಚುವರಿಯಾಗಿ  ಶೇ.5ರಷ್ಟು ರಿಯಾಯ್ತಿ ಲಭ್ಯವಾಗಲಿದೆ. 

Samsung ಹೊಸ ಸಿರೀಸ್ 

ಸ್ಯಾಮ್‌ಸಂಗ್ ಕಂಪನಿಯ ಅಪ್‌ಕಮ್ಮಿಂಗ್ ಸಿರೀಸ್  22ನೇ ಜನವರಿ 2025ರಂದು ಬಿಡುಗಡೆಯಾಗಲಿದೆ ಎಂದು Fnnews ವರದಿ ಮಾಡಿದೆ. Samsung Galaxy S25 Series ಫೆಬ್ರವರಿ 7ರ ನಂತರ ಜನರ ಕೈಗೆ ಸಿಗಲಿದೆ. ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ಸ್ಯಾಮ್‌ಸಂಗ್ ಅತಿದೊಡ್ಡ ಇವೆಂಟ್ ಆಯೋಜನೆ ಮಾಡಿದೆ. ಸ್ಯಾಮ್‌ಸಂಗ್ ಹೊಸ ಸಿರೀಸ್‌ಗಳಾದ ಗ್ಯಾಲಕ್ಸಿ ಎಸ್‌25, ಗ್ಯಾಲಕ್ಸಿ ಎಸ್‌25 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್ 25 ಪ್ಲಸ್ ಅಲ್ಟ್ರಾ ಪರಿಚಯಿಸುವ ನಿರೀಕ್ಷೆಗಳಿವೆ. 

ಇದನ್ನೂ ಓದಿ: ಪವರ್‌ಫುಲ್ ಫೀಚರ್ಸ್ ಜೊತೆ ಬರ್ತಿದೆ Samsung ಹೊಸ ಸಿರೀಸ್; ಹೆಚ್ಚಾಯ್ತು OnePlusಗೆ ಟೆನ್ಷನ್

Latest Videos
Follow Us:
Download App:
  • android
  • ios