ಫಿರೋಜಾಬಾದ್ ನಲ್ಲಿ ವ್ಯಕ್ತಿಯೊಬ್ಬನ ವಿಚಿತ್ರ ವರ್ತನೆ ಎಲ್ಲರ ಗಮನ ಸೆಳೆದಿದೆ. ಗಂಡ, ಹೆಂಡ್ತಿ ಬದುಕಿರುವಾಗ್ಲೇ ಪಿಂಡದಾನ ಮಾಡಿ ವಿಡಿಯೋ ಸ್ಟೇಟಸ್ ಗೆ ಹಾಕಿಕೊಂಡ್ರೆ ಪತ್ನಿ ನ್ಯಾಯ ಕೇಳ್ತಿದ್ದಾಳೆ.

ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೆಂಡ್ತಿ ಬದುಕಿರುವಾಗ್ಲೇ ಪತಿಯೊಬ್ಬ ಪಿಂಡದಾನ ಮಾಡಿ ಸುದ್ದಿಗೆ ಬಂದಿದ್ದಾನೆ. ಇದಕ್ಕೆ ಕಾರಣ ಕೂಡ ವಿಚಿತ್ರವಾಗಿದೆ.

ಪತ್ನಿ ಪಿಂಡದಾನ 

ಘಟನೆ ಫಿರೋಜಾಬಾದ್ನ ಲೈನ್ಪರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ. ಪತ್ನಿಯ ಪಿಂಡದಾನ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಗಸ್ಟ್ 2 ರಂದು ಜಿತೇಂದ್ರ ಪ್ರಕಾಶ್, ಪತ್ನಿ ಪಿಂಡ ದಾನ ಮಾಡಿದ್ದು, ಅದ್ರ ವಿಡಿಯೋವನ್ನು ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ. ಸಂತ್ರಸ್ತೆ ಅವರ ಪತ್ನಿ ದೀಪಾ ಸ್ವರ್ಣಕರ್, ತಮ್ಮ ಪತಿ ಜಿತೇಂದ್ರ ಪ್ರಕಾಶ್ ಮತ್ತು ಅತ್ತೆಯ ಮೇಲೆ ಕಿರುಕುಳ, ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ. ಸಂತ್ರಸ್ತೆ ಪೊಲೀಸ್ ಠಾಣೆಗೆ ಬಂದು ರಕ್ಷಣೆ ಮತ್ತು ಎಫ್ಐಆರ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

10 ವರ್ಷಗಳ ಹಿಂದೆ ಮದುವೆ 

ನಾಗ್ಲಾ ವಿಷ್ಣು ನಿವಾಸಿ ದೀಪಾ ಸ್ವರ್ಣಕರ್, ಆಗಸ್ಟ್ 26, 2014 ರಂದು ಜಿತೇಂದ್ರ ಪ್ರಕಾಶ್ ಅವರನ್ನು ಮದುವೆ ಆಗಿದ್ರು. ಪತಿ ಜಿತೇಂದ್ರ, ಅತ್ತೆ ಮಂಜು ವರ್ಮಾ, ಅತ್ತಿಗೆ ಶಾಲಿನಿ ಮತ್ತು ಸೋದರ ಮಾವ ನಕುಲ್ ಅವರು ಮದುವೆಯಾದಾಗಿನಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೀಪಾ ಆರೋಪಿಸಿದ್ದಾರೆ. ಜುಲೈ 30 ರಂದು ಕೂಡ ದೀಪಾ ಮೇಲೆ ಹಲ್ಲೆ ನಡೆಸಲಾಗಿದ್ದು, ರೂಮ್ ನಲ್ಲಿ ರಕ್ಷಣೆ ಪಡೆದಿದ್ದೆ ಎಂದು ದೀಪಾ ಹೇಳಿಕೊಂಡಿದ್ದಾರೆ.

ಸಂತ್ರಸ್ತೆಯ ಪ್ರಕಾರ, ಆಗಸ್ಟ್ 2 ರಂದು, ಪತಿ ದೀಪಾ ಪಿಂಡದಾನ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದಾಗ ನನಗೆ ನೀನು ಸತ್ತಂತೆ ಅಂತ ಹೇಳಿದ್ದಾನೆ. ತಾನು ಇನ್ನು ಮುಂದೆ ನಿನ್ನ ಜೊತೆ ಬದುಕೋದಿಲ್ಲ ಎಂದಿದ್ದಾನೆ. ದೀಪಾ ತನ್ನ ಬಳಿ ಕೊಲೆ ಬೆದರಿಕೆಗಳ ಆಡಿಯೋ ರೆಕಾರ್ಡಿಂಗ್ಗಳಿವೆ ಎಂದು ಹೇಳಿಕೊಂಡಿದ್ದಾರೆ.

ದೀಪಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳು ಹಾಗೂ ತನಗೆ ಮಾನಸಿಕ ಕಿರುಕುಳ ನೀಡಲಾಗ್ತಿದೆ ಅನ್ನೋದು ದೀಪಾ ಆರೋಪ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಅವರಿಗೆ ರಕ್ಷಣೆ ಒದಗಿಸುವಂತೆ ದೀಪಾ ಕೋರಿದ್ದಾರೆ.