"ನಗು, ಅಳು..." ಜನರು ಯಾವ ಇಮೋಜಿಯನ್ನು ಹೆಚ್ಚು ಬಳಸ್ತಾರೆ ಗೊತ್ತೇ?
Top Used Emoji on Social Media: ಜನರು ದೀರ್ಘ ವಿಷಯಗಳನ್ನು ಬರೆಯುವುದರಿಂದ ತಪ್ಪಿಸಿಕೊಳ್ಳಲು ಅಥವಾ ತಮ್ಮ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಈ ಇಮೋಜಿಗಳ ಮೊರೆ ಹೋಗುತ್ತಾರೆ.

ಇಂದಿನ ಡಿಜಿಟಲ್ ಜಗತ್ತಿನಲ್ಲಿ ದೀರ್ಘ ಸಂಭಾಷಣೆಗಿಂತ ಇಮೋಜಿ ಮೂಲಕವೇ ಜನರು ರಿಪ್ಲೈ ಮಾಡಲು ಬಯಸುತ್ತಾರೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಇಮೋಜಿಗಳು ವಿಭಿನ್ನ ರೀತಿಯ ಅಭಿವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಐಕಾನ್‌ಗಳು. ಅವುಗಳ ಆಕಾರಗಳು ಸಹ ವಿಭಿನ್ನವಾಗಿವೆ ಮತ್ತು ಅನೇಕ ಇಮೋಜಿಗಳು ಆನ್‌ಲೈನ್ ಸಂಭಾಷಣೆಯನ್ನು ಸುಲಭಗೊಳಿಸುತ್ತವೆ.
ಅಳುವ, ನಗುವ ಇಮೋಜಿಯನ್ನು ಕಳುಹಿಸಲು ಒಂದು ಸೆಕೆಂಡ್‌ಗಿಂತಲೂ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಜನರು ದೀರ್ಘ ವಿಷಯಗಳನ್ನು ಬರೆಯುವುದರಿಂದ ತಪ್ಪಿಸಿಕೊಳ್ಳಲು ಅಥವಾ ತಮ್ಮ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಈ ಇಮೋಜಿಗಳ ಮೊರೆ ಹೋಗುತ್ತಾರೆ. ಅಂದಹಾಗೆ ಇಮೋಜಿಗೂ ಒಂದು ದಿನವಿದೆ. ಪ್ರತಿ ವರ್ಷ ಜುಲೈ 17 ರಂದು ವಿಶ್ವ ಇಮೋಜಿ ದಿನವನ್ನು ಆಚರಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಂತೂ ಪ್ರತಿಯೊಂದು ಇಮೋಜಿ ಲಭ್ಯ. ನೆರಳು, ಮರ, ಹೂವು, ನದಿ, ಕೊಳ, ವೈದ್ಯರು, ಮನೆ, ಹೃದಯ, ತರಕಾರಿ, ಮೊಟ್ಟೆ, ಪ್ರಾಣಿ ಮತ್ತು ಇನ್ನೂ ಅನೇಕ ವಸ್ತುಗಳ ಇಮೋಜಿಗಳು ಕೀಬೋರ್ಡ್‌ನಲ್ಲಿ ಲಭ್ಯ. ಆದರೆ, ಹೆಚ್ಚು ಬಳಸುವ ಇಮೋಜಿ ಯಾವುದು ಎಂದು ನಿಮಗೆ ತಿಳಿದಿದೆಯೇ?. ಆದರೆ ಅದಕ್ಕೂ ಮುನ್ನ ಇಮೋಜಿ ಇತಿಹಾಸ ನೋಡೋಣ..
ಇತ್ತೀಚಿನ ದಿನಗಳಲ್ಲಂತೂ ಪ್ರತಿಯೊಂದು ಇಮೋಜಿ ಲಭ್ಯ. ನೆರಳು, ಮರ, ಹೂವು, ನದಿ, ಕೊಳ, ವೈದ್ಯರು, ಮನೆ, ಹೃದಯ, ತರಕಾರಿ, ಮೊಟ್ಟೆ, ಪ್ರಾಣಿ ಮತ್ತು ಇನ್ನೂ ಅನೇಕ ವಸ್ತುಗಳ ಇಮೋಜಿಗಳು ಕೀಬೋರ್ಡ್‌ನಲ್ಲಿ ಲಭ್ಯ. ಆದರೆ, ಹೆಚ್ಚು ಬಳಸುವ ಇಮೋಜಿ ಯಾವುದು ಎಂದು ನಿಮಗೆ ತಿಳಿದಿದೆಯೇ?. ಆದರೆ ಅದಕ್ಕೂ ಮುನ್ನ ಇಮೋಜಿ ಇತಿಹಾಸ ನೋಡೋಣ..
ಇಮೋಜಿಗಳನ್ನು ಬಳಸುವ ಮೊದಲು 1980 ರಲ್ಲಿ ಇಮೋಟಿಕಾನ್‌ಗಳನ್ನು ಪರಿಚಯಿಸಲಾಯಿತು. ಉದಾಹರಣೆಗೆ ನಗುವುದಕ್ಕಾಗಿ ಈ ಇಮೋಟಿಕಾನ್:), ದುಃಖವನ್ನು ತೋರಿಸುವುದಕ್ಕಾಗಿ:(, ಮತ್ತು ಯಾರಿಗಾದರೂ ಪ್ರೀತಿಯನ್ನು ಕಳುಹಿಸುವುದಕ್ಕಾಗಿ <3 ಈ ಇಮೋಟಿಕಾನ್ ಬಳಸಲಾಗುತ್ತಿತ್ತು.
ಈ ಇಮೋಟಿಕಾನ್‌ಗಳನ್ನು ಜಪಾನಿನ ವಿನ್ಯಾಸಕರು ರಚಿಸಿದ್ದಾರೆ. 2007 ರಲ್ಲಿ ಗೂಗಲ್‌ನ ಸಾಫ್ಟ್‌ವೇರ್ ಆಂತರಿಕೀಕರಣ ತಂಡವು ಯುನಿಕೋಡ್ ಕನ್ಸೋರ್ಟಿಯಂನಲ್ಲಿ ಇಮೋಜಿಗಳಿಗಾಗಿ ಅರ್ಜಿ ಸಲ್ಲಿಸಿತು. 2011 ರಲ್ಲಿ ಆಪಲ್ iOS ಗೆ ಇಮೋಜಿ ಕೀಬೋರ್ಡ್ ಅನ್ನು ಸೇರಿಸಿತು. ಅದರ ನಂತರ ಇಮೋಜಿಗಳನ್ನು ಅನೇಕ ದೇಶಗಳಲ್ಲಿ ಬಳಸಲು ಪ್ರಾರಂಭಿಸಲಾಯ್ತು. ಈಗ ಪ್ರತಿ ಫೋನ್ ಇಮೋಜಿ ಕೀಬೋರ್ಡ್‌ನೊಂದಿಗೆ ಬರುತ್ತದೆ. ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ಇಮೋಜಿಗಳು ವಿಭಿನ್ನ ಮಹತ್ವವನ್ನು ಹೊಂದಿವೆ. ಅವುಗಳಿಲ್ಲದೆ, ಎಲ್ಲವೂ ಅಪೂರ್ಣವೆಂದು ತೋರುತ್ತದೆ. ಮೊದಲೇ ಹೇಳಿದ ಹಾಗೆ ಇಮೋಜಿ ಸಂಭಾಷಣೆಯನ್ನು ಸುಲಭಗೊಳಿಸುತ್ತವೆ.
ಯಾವ ಇಮೋಜಿಯನ್ನು ಹೆಚ್ಚು ಬಳಸಲಾಗುತ್ತೆ?
emojipedia.org ಪ್ರಕಾರ, ಹೆಚ್ಚು ಬಳಸಲಾಗುವ ಇಮೋಜಿ ಹೃದಯದ ಇಮೋಜಿ. ಜನರು ಈ ಹೃದಯದ ಇಮೋಜಿಯನ್ನು ಬಹಳಷ್ಟು ಬಳಸುತ್ತಾರೆ.
ಇದರ ನಂತರ ಹಸಿರು ಪೆಟ್ಟಿಗೆಯಲ್ಲಿ ಬಿಳಿ ಚೆಕ್ ಗುರುತು ಹೊಂದಿರುವ ಇಮೋಜಿ ಬರುತ್ತದೆ. ನಂತರ ಸ್ಪಾರ್ಕ್ಲ್ ಇಮೋಜಿ, ಫೈಯರ್ ಇಮೋಜಿ ಬರುತ್ತದೆ.
ಎಲ್ಲರ ನೆಚ್ಚಿನ ಜೋರಾಗಿ ಅಳುವ ಮುಖದ ಇಮೋಜಿ ಮತ್ತು ಸಂತೋಷದ ಕಣ್ಣೀರು ಹಾಕುವ ನಗುವ ಮುಖದ ಇಮೋಜಿಯನ್ನೂ ಜನರು ಕಾಮೆಂಟ್‌ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.