Salty Water: ನದಿ ನೀರು ಸಿಹಿ, ಸಮುದ್ರದ ನೀರು ಉಪ್ಪು ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ
ಸಮುದ್ರದಲ್ಲಿ ಅಷ್ಟೊಂದು ನೀರಿದ್ದರೂ ಅದನ್ನು ಕುಡಿಯಲು ಸಾಧ್ಯವಿಲ್ಲ. ಯಾಕಂದ್ರೆ ಅದು ಉಪ್ಪಾಗಿರುತ್ತೆ. ಆದರೆ ನದಿ ನೀರು ಮಾತ್ರ ಸಿಹಿಯಾಗಿರುತ್ತೆ. ಹೀಗ್ಯಾಕೆ? ಸಮುದ್ರದ ನೀರು ಉಪ್ಪಾಗಲು ಮತ್ತು ನದಿ ನೀರು ಸಿಹಿಯಾಗಿರಲು ಕಾರಣವೇನು? ಇದರ ಹಿಂದಿನ ವೈಜ್ಞಾನಿಕ ಸತ್ಯವನ್ನು ತಿಳಿಯೋಣ.

ಉಪ್ಪು ಸೇರುವುದು ಹೇಗೆ?
ಮಳೆ ನೀರು ಸಂಪೂರ್ಣವಾಗಿ ಶುದ್ಧವಾಗಿರುವುದಿಲ್ಲ. ಅದು ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಇದರಿಂದ ಅದು ಸ್ವಲ್ಪ ಆಮ್ಲೀಯವಾಗಿರುತ್ತದೆ. ಈ ನೀರು ಭೂಮಿಯ ಮೇಲೆ ಬಿದ್ದಾಗ, ಬಂಡೆ ಮತ್ತು ಮಣ್ಣನ್ನು ನಿಧಾನವಾಗಿ ಕರಗಿಸುತ್ತದೆ.
ವಿಜ್ಞಾನಿಗಳು ಈ ಪ್ರಕ್ರಿಯೆಯನ್ನು 'ರಾಕ್ ವೆದರಿಂಗ್' ಎಂದು ಕರೆಯುತ್ತಾರೆ. ಈ ಸಮಯದಲ್ಲಿ, ಬಂಡೆಗಳಲ್ಲಿರುವ ಸೋಡಿಯಂ ಮತ್ತು ಕ್ಲೋರೈಡ್‌ನಂತಹ ಖನಿಜಗಳು ಬೇರ್ಪಟ್ಟು ನೀರಿನಲ್ಲಿ ಬೆರೆಯುತ್ತವೆ. ಈ ಖನಿಜಯುಕ್ತ ನೀರು ನದಿಗಳ ಮೂಲಕ ಸಮುದ್ರವನ್ನು ಸೇರುತ್ತದೆ.
ನದಿಗಳು ತರುವ ಲವಣಗಳು
ನದಿ ನೀರು ಸಿಹಿ, ಸಮುದ್ರ ನೀರು ಉಪ್ಪು ಯಾಕೆ?
ನದಿಗಳ ನೀರಲ್ಲೂ ಸ್ವಲ್ಪ ಲವಣಾಂಶ ಇರುತ್ತದೆ. ಆದರೆ ನದಿಗಳು ನಿರಂತರವಾಗಿ ಹರಿಯುತ್ತಿರುತ್ತವೆ. ಅವು ನೀರನ್ನು ಹೆಚ್ಚು ಕಾಲ ಸಂಗ್ರಹಿಸಿ ಇಟ್ಟುಕೊಳ್ಳುವುದಿಲ್ಲ. ಹಾಗಾಗಿ, ಲವಣಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವುದಿಲ್ಲ. ಆದರೆ ಸಮುದ್ರವೇ ಅಂತಿಮ ತಾಣ. ಎಲ್ಲಾ ನದಿಗಳು ತಂದ ಖನಿಜಗಳು ಅಲ್ಲಿಯೇ ಸೇರುತ್ತವೆ.
ಸಮುದ್ರದ ನೀರು ಆವಿಯಾಗಿ ಮೋಡಗಳಾದಾಗ, ನೀರು ಮಾತ್ರ ಮೇಲೆ ಹೋಗುತ್ತದೆ. ಉಪ್ಪು ಅಲ್ಲೇ ಉಳಿಯುತ್ತದೆ. ಇದರಿಂದಾಗಿ ಕಾಲಕ್ರಮೇಣ ಸಮುದ್ರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಯಿತು. ನದಿಯಲ್ಲಿ ನಿರಂತರ ಹರಿವು ಇರುವುದರಿಂದ ಅದು ಸಿಹಿಯಾಗಿರುತ್ತದೆ.
ಆವಿ ಪ್ರಕ್ರಿಯೆ ಉಪ್ಪಿನಾಂಶ ಹೆಚ್ಚಿಸುವುದು ಹೇಗೆ?
ಸಮುದ್ರದ ನೀರಿನಲ್ಲಿ ಉಪ್ಪಿನ ಪ್ರಮಾಣವೆಷ್ಟು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

