ಬಾತ್‌ರೂಂನಲ್ಲಿ ಕಸ ಕಟ್ಟಿ ದುರ್ವಾಸನೆ ಬರ್ತಿದ್ರೆ ಒಂದೇ ಬಾರಿಗೆ ಕ್ಲೀನ್ ಆಗಲೂ ಇಲ್ಲಿದೆ ಸೂಪರ್ ಟಿಪ್ಸ್
ಈ ಟಿಪ್ಸ್ ಬಾತ್‌ರೂಂನಿಂದ ಬರುವ ದುರ್ವಾಸನೆ ಮತ್ತು ಕೊಳಕು ಚರಂಡಿ ಸ್ವಚ್ಛಗೊಳಿಸಲು ಉಪಯುಕ್ತವಾಗಿದ್ದು, ಹೀಗೆ ಮಾಡುವುದರಿಂದ ಒಂದೇ ಬಾರಿಗೆ ಹೊಸದರಂತೆ ಕಾಣುತ್ತದೆ.

ವಾಸನೆ, ಕೊಳಕಿಗೆ ಕಾರಣ ಚರಂಡಿ
ಬಾತ್‌ರೂಂನಿಂದ ವಾಸನೆ ಬರುತ್ತಿದೆಯೆಂದರೆ ಮತ್ತು ಕೊಳಕಾಗಿದೆಯೆಂದರೆ ಅದಕ್ಕೆ ಕಾರಣ ಚರಂಡಿ. ಕೂದಲು ಸೇರಿದಂತೆ ಇತರ ತ್ಯಾಜ್ಯಗಳು ಸ್ನಾನಗೃಹದಲ್ಲಿ ನೀರು ಹರಿದು ಹೋಗಲು ಮಾಡಿರುವ ಜಾಗವನ್ನು ಕ್ಲೋಸ್ ಮಾಡುತ್ತವೆ. ಆಗ ಅದರಲ್ಲಿ ಕೊಳಕು ಸಂಗ್ರಹವಾಗಿ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ. ಯಾವ ಲೆವಲ್‌ಗೆ ಅಂದರೆ ಬಾತ್‌ರೂಂ ಕ್ಲೀನ್ ಮಾಡಿದ ನಂತರವೂ ಅಲ್ಲಿ ತುಂಬಾ ಹೊತ್ತು ನಿಲ್ಲಲ್ಲು ಅಸಾಧ್ಯ ಅಥವಾ ಕಷ್ಟ.
ದುಬಾರಿ ಕ್ಲೀನರ್‌ಗಳ ಅಗತ್ಯವಿಲ್ಲ
ನೀವು ಈ ತೊಂದರೆಯಿಂದ ಬೇಸತ್ತಿದ್ದರೆ ಈಗ ದುಬಾರಿ ಕ್ಲೀನರ್‌ಗಳನ್ನು ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲಿ ಲಭ್ಯವಿರುವ ಸಾಮಗ್ರಿಗಳಿಂದ ನೀವು ಪರಿಣಾಮಕಾರಿ ಪರಿಹಾರ ಪಡೆಯಬಹುದು. ಇದು ಒಂದೇ ಬಾರಿಗೆ ಕೊಳಕು ಚರಂಡಿಯನ್ನು ಸ್ವಚ್ಛಗೊಳಿಸುವುದಲ್ಲದೆ, ವಾಸನೆಯನ್ನು ತೆಗೆದುಹಾಕುತ್ತದೆ. ಅದ್ಹೇಗೆ ಅಂತೀರಾ?.
ಬೇಕಾಗುವ ಸಾಮಗ್ರಿಗಳು
1 ಕಪ್ ಅಡುಗೆ ಸೋಡಾ
1 ಕಪ್ ವಿನೆಗರ್
1 ರಿಂದ 2 ಲೀಟರ್ ಬೆಚ್ಚಗಿನ ನೀರು
ಸಾರಭೂತ ತೈಲ
ತಯಾರಿಸುವುದು ಮತ್ತು ಬಳಸುವುದು ಹೇಗೆ?
ಮೊದಲು ಬಾತ್‌ರೂಂ ಚರಂಡಿಗೆ 1 ಕಪ್ ಅಡುಗೆ ಸೋಡಾ ಸುರಿಯಿರಿ. ಇದು ಚರಂಡಿಯೊಳಗೆ ಸಿಲುಕಿರುವ ಗ್ರೀಸ್ ಮತ್ತು ಕೊಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.
15 ರಿಂದ 20 ನಿಮಿಷಗಳ ಕಾಲ ಬಿಡಿ
ಈಗ ನಿಧಾನವಾಗಿ ಅದಕ್ಕೆ 1 ಕಪ್ ಬಿಳಿ ವಿನೆಗರ್ ಸೇರಿಸಿ. ಅಡುಗೆ ಸೋಡಾ ಮತ್ತು ವಿನೆಗರ್ ಮಿಶ್ರಣವಾದ ತಕ್ಷಣ, ಅವು ನೊರೆ ಬರಲು ಪ್ರಾರಂಭಿಸುತ್ತವೆ. ಈ ಫೋಮ್ ಡ್ರೈನ್ ಒಳಗೆ ಸಿಲುಕಿರುವ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಈ ರಾಸಾಯನಿಕ ಕ್ರಿಯೆಯು ತನ್ನ ಕೆಲಸವನ್ನು ಮಾಡಲು ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಇದನ್ನು ಹೀಗೆ ಬಿಡಿ. ಈ ಸಮಯದಲ್ಲಿ ಚರಂಡಿಯಿಂದ ಕೆಲವು ಶಬ್ದ ಅಥವಾ ಗುಳ್ಳೆಗಳು ಬರಬಹುದು.
ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ ಚರಂಡಿ
ಈಗ ನಿಧಾನವಾಗಿ 1 ರಿಂದ 2 ಲೀಟರ್ ಬಿಸಿ ನೀರನ್ನು ಚರಂಡಿಗೆ ಸುರಿಯಿರಿ. ಇದು ಎಲ್ಲಾ ಕೊಳೆಯನ್ನು ತೊಳೆಯುತ್ತದೆ ಮತ್ತು ಚರಂಡಿ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.
ನೀವು ಬಯಸಿದರೆ, ಕೊನೆಯಲ್ಲಿ ಕೆಲವು ಹನಿ ನಿಂಬೆ ರಸ ಅಥವಾ ಸಾರಭೂತ ಎಣ್ಣೆಯನ್ನು ಸೇರಿಸಬಹುದು. ಇದು ಚರಂಡಿಯಿಂದ ಹೊಸ ವಾಸನೆ ಅಥವಾ ಸುವಾಸನೆ ಬರುವಂತೆ ನೋಡಿಕೊಳ್ಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
