MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಸಿಮೆಂಟ್ ಇಲ್ಲದ ಮನೆ, ನೀರೇ ಬೇಕಿಲ್ಲದ ಶೌಚಾಲಯ, ಚಳಿಗಾಲದಲ್ಲೂ ಬೆಚ್ಚಗಿರುತ್ತೆ ಸೋನಂ ವಾಂಗ್‌ಚುಕ್‌ ಲಡಾಖ್ ಮನೆ

ಸಿಮೆಂಟ್ ಇಲ್ಲದ ಮನೆ, ನೀರೇ ಬೇಕಿಲ್ಲದ ಶೌಚಾಲಯ, ಚಳಿಗಾಲದಲ್ಲೂ ಬೆಚ್ಚಗಿರುತ್ತೆ ಸೋನಂ ವಾಂಗ್‌ಚುಕ್‌ ಲಡಾಖ್ ಮನೆ

ಲಡಾಖ್ ಎಂದಾಕ್ಷಣ ಕಣ್ಣಿಗೆ ಕಾಣಿಸುವುದು ಹಿಮದಿಂದ ಆವೃತವಾದ ಪರ್ವತಗಳು, ಕೊರೆಯುವ ಚಳಿ ಮತ್ತು ಕಠಿಣ ಹವಾಮಾನ. ಇಂತಹ ಪ್ರದೇಶದಲ್ಲಿ ಮನೆ ಕಟ್ಟುವುದು ಸವಾಲಿನ ಕೆಲಸವೇ ಸರಿ. ಇಲ್ಲಿದೆ ಹೋರಾಟಗಾರ Sonam Wangchuk ಮನೆ

2 Min read
Author : Sushma Hegde
Published : Aug 03 2026, 03:18 PM IST
Share this Photo Gallery
  • FB
  • TW
  • Linkdin
  • Whatsapp
14
ಸೋನಂ ವಾಂಗ್‌ಚುಕ್‌ರ ಲಡಾಖ್ ಮನೆ
Image Credit : Asianet News

ಸೋನಂ ವಾಂಗ್‌ಚುಕ್‌ರ ಲಡಾಖ್ ಮನೆ

ಲಡಾಖ್ ಎಂದಾಕ್ಷಣ ಕಣ್ಣಿಗೆ ಕಾಣಿಸುವುದು ಹಿಮದಿಂದ ಆವೃತವಾದ ಪರ್ವತಗಳು, ಕೊರೆಯುವ ಚಳಿ ಮತ್ತು ಕಠಿಣ ಹವಾಮಾನ. ಇಂತಹ ಪ್ರದೇಶದಲ್ಲಿ ಮನೆ ಕಟ್ಟುವುದು ಸವಾಲಿನ ಕೆಲಸವೇ ಸರಿ. ಆದರೆ ಎಂಜಿನಿಯರ್ ಹಾಗೂ ಪರಿಸರ ಹೋರಾಟಗಾರ Sonam Wangchuk ಅವರ ಲಡಾಖ್‌ನ ಮನೆ ಮಾತ್ರ ಈ ಎಲ್ಲ ಸವಾಲುಗಳಿಗೆ ವಿಭಿನ್ನ ಪರಿಹಾರ ತೋರಿಸುತ್ತದೆ. ಕಾಂಕ್ರೀಟ್ ಬಳಸದೆ ನಿರ್ಮಿಸಿರುವ ಈ ಮನೆ, ಚಳಿಗಾಲದಲ್ಲೂ ಸ್ವಾಭಾವಿಕವಾಗಿ ಬೆಚ್ಚಗಿರುತ್ತದೆ. ಅಷ್ಟೇ ಅಲ್ಲ, ನೀರಿಲ್ಲದ ಶೌಚ ವ್ಯವಸ್ಥೆಯೂ ಇಲ್ಲಿದೆ.

ಕಾಂಕ್ರೀಟ್ ಇಲ್ಲದೆ ನಿರ್ಮಾಣ

ಸಾಮಾನ್ಯವಾಗಿ ಮನೆ ನಿರ್ಮಾಣಕ್ಕೆ ಸಿಮೆಂಟ್ ಮತ್ತು ಕಾಂಕ್ರೀಟ್‌ಗಳನ್ನು ಬಳಸಲಾಗುತ್ತದೆ. ಆದರೆ ಸೋನಂ ವಾಂಗ್‌ಚುಕ್ ಅವರ ಮನೆ ಇದಕ್ಕಿಂತ ಸಂಪೂರ್ಣ ವಿಭಿನ್ನವಾಗಿದೆ. ಇಲ್ಲಿ ಸಾಂಪ್ರದಾಯಿಕವಾಗಿ ಮಣ್ಣಿನ ಗೋಡೆಗಳನ್ನು ನಿರ್ಮಿಸಲಾಗಿದೆ. ಮನೆಯ ಮೇಲ್ಛಾವಣಿಗೆ ಮರವನ್ನು ಬಳಸಲಾಗಿದ್ದು, ಇದು ಮನೆಯೊಳಗಿನ ತಾಪಮಾನವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಮಣ್ಣಿನ ಗೋಡೆಗಳು ಬೇಸಿಗೆಯಲ್ಲಿ ಮನೆಯೊಳಗೆ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳುತ್ತವೆ. ಅದೇ ರೀತಿ ಚಳಿಗಾಲದಲ್ಲಿ ಮನೆಯ ಉಷ್ಣತೆಯನ್ನು ಉಳಿಸಿಕೊಳ್ಳುವ ನೈಸರ್ಗಿಕ ಇನ್ಸುಲೇಟರ್‌ನಂತೆ ಕೆಲಸ ಮಾಡುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಚಳಿಗಾಲದಲ್ಲೂ ಬೆಚ್ಚಗಿರೋದು ಹೇಗೆ?
Image Credit : Asianet News

ಚಳಿಗಾಲದಲ್ಲೂ ಬೆಚ್ಚಗಿರೋದು ಹೇಗೆ?

ಸೋನಂ ವಾಂಗ್‌ಚುಕ್ ಅವರ ಮನೆಯ ಅತ್ಯಂತ ವಿಶೇಷ ವೈಶಿಷ್ಟ್ಯವೆಂದರೆ ಬ್ಲ್ಯಾಕ್ ವಾಲ್. ಈ ಗೋಡೆಯೊಳಗೆ ನೀರು ತುಂಬಿದ ಬಾಟಲಿಗಳನ್ನು ಅಳವಡಿಸಲಾಗಿದೆ. ಚಳಿಗಾಲದ ದಿನಗಳಲ್ಲಿ ಹಗಲಿನ ಸೂರ್ಯನ ಶಾಖವನ್ನು ಈ ನೀರು ಹೀರಿಕೊಳ್ಳುತ್ತದೆ. ನಂತರ ಸೂರ್ಯ ಮುಳುಗಿದ ಬಳಿಕ ನಿಧಾನವಾಗಿ ಆ ಶಾಖವನ್ನು ಹೊರಬಿಡುತ್ತದೆ. ಇದರಿಂದ ಮನೆಯೊಳಗೆ ನೈಸರ್ಗಿಕವಾಗಿ ಉಷ್ಣತೆ ಉಳಿಯುತ್ತದೆ. ಹೀಗಾಗಿ ಮರದ ಕಟ್ಟಿಗೆ ಅಥವಾ ಇತರ ಇಂಧನ ಬಳಸಿ ಮನೆ ಬಿಸಿ ಮಾಡುವ ಅವಶ್ಯಕತೆ ಕಡಿಮೆಯಾಗುತ್ತದೆ.

ಅಡುಗೆ ಮಾಡುವವರು ಒಂಟಿಯಾಗಬಾರದು!

ಮನೆಯ ಒಳಾಂಗಣ ವಿನ್ಯಾಸದಲ್ಲೂ ಸೋನಂ ವಾಂಗ್‌ಚುಕ್ ವಿಭಿನ್ನ ಚಿಂತನೆ ಮಾಡಿದ್ದಾರೆ. ಮನೆಯಲ್ಲಿರುವ ಅಡುಗೆಮನೆ ತೆರೆದ ವಿನ್ಯಾಸದಲ್ಲಿದ್ದು, ಅದರ ಮಧ್ಯಭಾಗದಲ್ಲಿ ಡೈನಿಂಗ್ ಟೇಬಲ್ ಇದೆ. ಅಡುಗೆ ಮಾಡುವ ವ್ಯಕ್ತಿ ಮನೆಯ ಇತರ ಸದಸ್ಯರಿಂದ ಪ್ರತ್ಯೇಕವಾಗಿ ಇರಬಾರದು ಎಂಬ ಉದ್ದೇಶದಿಂದ ಈ ರೀತಿಯ ವಿನ್ಯಾಸ ಮಾಡಲಾಗಿದೆ ಎಂದು ವರದಿಯಾಗಿದೆ.

34
ನೀರೇ ಬೇಕಿಲ್ಲದ ಶೌಚ ವ್ಯವಸ್ಥೆ
Image Credit : Asianet News

ನೀರೇ ಬೇಕಿಲ್ಲದ ಶೌಚ ವ್ಯವಸ್ಥೆ

ಈ ಮನೆಯ ಮತ್ತೊಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ವಾಟರ್‌ಲೆಸ್ ಸ್ಯಾನಿಟೇಷನ್ ಸಿಸ್ಟಮ್. ಅಂದರೆ ಶೌಚಾಲಯದಲ್ಲಿ ನೀರಿನ ಬಳಕೆಯನ್ನು ಕಡಿಮೆ ಮಾಡುವ ವ್ಯವಸ್ಥೆ. ಮಾನವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ನಂತರ ಕಾಂಪೋಸ್ಟ್ ಆಗಿ ಪರಿವರ್ತಿಸಲಾಗುತ್ತದೆ. ಅದನ್ನು ಗೊಬ್ಬರವಾಗಿ ಬಳಸಬಹುದಾಗಿದೆ. ಹೀಗಾಗಿ ತ್ಯಾಜ್ಯ ನಿರ್ವಹಣೆಯ ಜೊತೆಗೆ ಪರಿಸರ ಸ್ನೇಹಿ ಜೀವನಶೈಲಿಗೂ ಇದು ಸಹಕಾರಿಯಾಗಿದೆ.

44
ಹಳೆಯ ಜ್ಞಾನಕ್ಕೆ ಹೊಸ ತಂತ್ರಜ್ಞಾನದ ಸ್ಪರ್ಶ
Image Credit : Asianet News

ಹಳೆಯ ಜ್ಞಾನಕ್ಕೆ ಹೊಸ ತಂತ್ರಜ್ಞಾನದ ಸ್ಪರ್ಶ

ಸೋನಂ ವಾಂಗ್‌ಚುಕ್ ಅವರ ಲಡಾಖ್ ಮನೆ ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ಆಧುನಿಕ ಪರಿಸರ ಸ್ನೇಹಿ ತಂತ್ರಜ್ಞಾನದ ಸುಂದರ ಸಂಯೋಜನೆಯಂತಿದೆ. ಮಣ್ಣಿನ ಗೋಡೆಗಳು, ಮರದ ಮೇಲ್ಛಾವಣಿ, ಸೌರಶಕ್ತಿಯ ನೈಸರ್ಗಿಕ ಬಳಕೆ ಮತ್ತು ನೀರಿಲ್ಲದ ಶೌಚ ವ್ಯವಸ್ಥೆ—ಇವೆಲ್ಲವೂ ಪರಿಸರದ ಮೇಲೆ ಕಡಿಮೆ ಹೊರೆ ಬೀರುವ ಜೀವನಶೈಲಿಯನ್ನು ತೋರಿಸುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಸೋನಮ್ ವಾಂಗ್ಚುಕ್
ಮನೆ
ಜೀವನಶೈಲಿ
Latest Videos
Recommended Stories
Recommended image1
ಇದೇ ನೋಡಿ ಗೂಡು ಕಟ್ಟೋ ಜಗತ್ತಿನ ಏಕೈಕ ವಿಷಕಾರಿ ಹಾವು! ಇದರ ಸ್ಪೆಷಾಲಿಟಿ ಏನು ಗೊತ್ತಾ?
Recommended image2
Necklace: 10 ಗ್ರಾಂ ಚಿನ್ನದಲ್ಲಿ ಸಿಗುವ ಬೆಸ್ಟ್ ನೆಕ್ಲೇಸ್ ಡಿಸೈನ್ಸ್ ಇಲ್ಲಿವೆ
Recommended image3
ನನ್ನ ಪಾಲಿಗೆ ನೀನು ಸತ್ತಂತೆ, ಬದುಕಿರುವಾಗ್ಲೇ ಹೆಂಡ್ತಿ ಪಿಂಡದಾನ ಮಾಡಿದ ಪತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved