ಮೊಟ್ಟೆಯಿಡದೆ ನೇರವಾಗಿ ಮರಿ ಹಾಕುವ ಹಾವುಗಳಿವು, ಹೇಗಂತ ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ!
Snake interesting facts ಬಹುತೇಕ ಜನರಿಗೆ ಹಾವು ಅಂದ್ರೆ ಏನು ಗೊತ್ತು? ಮೊಟ್ಟೆ ಇಡುತ್ತೆ ಅಷ್ಟೇ. ಆದರೆ ಒಂದು interesting ವಿಷಯ ಏನೆಂದರೆ — ಎಲ್ಲಾ ಹಾವುಗಳು ಮೊಟ್ಟೆ ಇಡುವುದಿಲ್ಲ! ಕೆಲ ಹಾವುಗಳು ನೇರವಾಗಿ ಮರಿಗಳಿಗೆ ಜನ್ಮ ಕೊಡುತ್ತವೆ ಅನ್ನೋದು ಇನ್ನೂ ಹಲವರಿಗೆ ಗೊತ್ತೇ ಇಲ್ಲ.

ಹಾವುಗಳಲ್ಲಿ ವಿಧ
ಹಾವುಗಳಲ್ಲೂ ಎರಡು type ಇವೆ. ಕೆಲವು ನಾಗರಹಾವು, ಕಿಂಗ್ ಕೊಬ್ರಾ ಹಾವು, ಇಲಿ ಹಾವು, ಹೆಬ್ಬಾವು ಇತ್ಯಾದಿ ಹಾವುಗಳು ಮೊಟ್ಟೆ ಇಡುತ್ತವೆ. ಇವು safe ಜಾಗ ಹುಡುಕಿ ಮೊಟ್ಟೆ ಇಟ್ಟು ಬಿಡುತ್ತವೆ. ಆದರೆ ಇನ್ನೊಂದು side ನಲ್ಲಿ ವೈಪರ್‌ಗಳು, ಬೋವಾ ಕನ್ಸ್ಟ್ರಿಕ್ಟರ್‌ಗಳಂತ ಹಾವುಗಳು directly ಮರಿಗಳಿಗೆ ಜನ್ಮ ಕೊಡುತ್ತವೆ.
ಅಪಾಯಕಾರಿ ಹಾವು
ಇಲ್ಲಿ ಜನರು confuse ಆಗೋದು ಏನು ಅಂದ್ರೆ — “ಯಾವ ಹಾವು dangerous?” ಅನ್ನೋದು. ಕೆಲವರು ಮೊಟ್ಟೆ ಇಡುವ ಹಾವುಗಳೇ ಹೆಚ್ಚು ಅಪಾಯಕಾರಿ ಅಂತಾರೆ, ಇನ್ನೂ ಕೆಲವರು ಮರಿಹಾಕೋ ಹಾವುಗಳು ಹೆಚ್ಚು ವಿಷಕಾರಿ ಅಂತಾರೆ. ಆದರೆ ನಿಜ ಏನು ಗೊತ್ತಾ? ಇವೆರಡಕ್ಕೂ direct relation ಇಲ್ಲ.
ಹಾವಿನ ವಿಷ
ಹಾವು dangerous ಆಗೋದು ಅದರ ವಿಷದ ಮೇಲೆ. ಅದು ಎಷ್ಟು ವಿಷ ಹಾಕುತ್ತದೆ, ಎಷ್ಟು aggressive ಆಗಿರುತ್ತೆ, ಹೇಗೆ ಕಚ್ಚುತ್ತದೆ — ಇವುಗಳೇ matter. ಅದು ಮೊಟ್ಟೆ ಇಡುತ್ತಾ, ಮರಿಹಾಕುತ್ತಾ ಅನ್ನೋದು ಅಲ್ಲ.
ನಾಗರಹಾವು, ರಾಜ ನಾಗರಹಾವು, ರಸೆಲ್ ವೈಪರ್, ಕಪ್ಪು ಮಾಂಬಾ ಇಂತಹ ಹಾವುಗಳು ಜಾಸ್ತಿ ಅಪಾಯಕಾರಿ ಅಂತ ಹೇಳುತ್ತಾರೆ. ಇವುಗಳ ವಿಷ strong ಆಗಿರುತ್ತೆ, bite ಕೂಡ powerful ಆಗಿರುತ್ತೆ.
shock ಆಗೋ ವಿಷಯ
ಇನ್ನೊಂದು shock ಆಗೋ ವಿಷಯ ಏನೆಂದರೆ — ಮರಿ ಹಾವುಗಳೂ dangerous ಆಗಿರಬಹುದು. ವಿಶೇಷವಾಗಿ ಮರಿ ನಾಗರಹಾವುಗಳು ತಮ್ಮ ವಿಷವನ್ನು control ಮಾಡೋಕಾಗಲ್ಲ ಅಂತಾರೆ. ಅದರಿಂದ ಒಂದೇ bite ನಲ್ಲಿ full ವಿಷ ಬಿಡುವ chance ಇರುತ್ತೆ.
ಒಟ್ಟಿನಲ್ಲಿ ಹೇಳ್ಬೇಕಂದ್ರೆ, ಹಾವು ಮೊಟ್ಟೆ ಇಡುತ್ತಾ ಅಥವಾ ಮರಿಹಾಕುತ್ತಾ ಅನ್ನೋದಕ್ಕಿಂತ, ಅದರ ಜಾತಿ ಮತ್ತು ವಿಷದ power ಮುಖ್ಯ. ಹೀಗಾಗಿ ಈ myth ಮೇಲೆ ನಂಬಿಕೆ ಇಡುವ ಬದಲು, proper ಮಾಹಿತಿ ಗೊತ್ತಿರೋದು better
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.