- Home
- Life
- Radhika Merchant: ಟ್ರಂಪ್‌ಗೆ ಹೆದರಿದ್ರಾ ಅಂಬಾನಿ ಸೊಸೆ? ಅಮೆರಿಕದಲ್ಲಿ ಕೆರಿಯರ್ ಬಿಟ್ಟು ಬಂದಿದ್ದೇಕೆ ರಾಧಿಕಾ?
Radhika Merchant: ಟ್ರಂಪ್‌ಗೆ ಹೆದರಿದ್ರಾ ಅಂಬಾನಿ ಸೊಸೆ? ಅಮೆರಿಕದಲ್ಲಿ ಕೆರಿಯರ್ ಬಿಟ್ಟು ಬಂದಿದ್ದೇಕೆ ರಾಧಿಕಾ?
Why radhika merchant returned to india: ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೆದರಿದ್ರಾ? ಅಮೆರಿಕದಲ್ಲಿ ಉಜ್ವಲ ಕೆರಿಯರ್ ರೂಪಿಸಿಕೊಳ್ಳುವ ಕನಸು ಕಂಡಿದ್ದ ರಾಧಿಕಾ, ಇದ್ದಕ್ಕಿದ್ದಂತೆ ಭಾರತಕ್ಕೆ ವಾಪಸ್ ಬಂದಿದ್ದೇಕೆ? ಇಲ್ಲಿದೆ ಕಾರಣ.

ಸಂದರ್ಶನವೊಂದರಲ್ಲಿ ಹೇಳಿದ ರಾಧಿಕಾ
ಸಂದರ್ಶನವೊಂದರಲ್ಲಿ ಹೇಳಿದ ರಾಧಿಕಾ
ರಾಧಿಕಾ ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಪದವಿ ಮುಗಿಸಿದ್ದರು. ಬಳಿಕ ಅಲ್ಲೇ ಕೆರಿಯರ್ ಮುಂದುವರಿಸುವ ಆಸೆ ಹೊಂದಿದ್ದರು. ಆದರೆ, ಅವರು ಅಮೆರಿಕದಲ್ಲಿ ಓದುತ್ತಿದ್ದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿತ್ತು. ಆ ಸಂದರ್ಭದಲ್ಲಿ ರಾಜಕೀಯವಾಗಿ, ಸ್ಥಳೀಯವಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ಅಲ್ಲಿ ಕೆರಿಯರ್ ಸರಿಯಾಗಿ ಸಾಗುವುದಿಲ್ಲ ಎಂಬ ಭಯ ಹಾಗೂ ಭಾರತ ವೇಗವಾಗಿ ಬೆಳೆಯುತ್ತಿದೆ ಎಂಬ ನಂಬಿಕೆಯಿಂದ ಅಮೆರಿಕದಲ್ಲಿನ ಕೆರಿಯರ್ ಬಿಟ್ಟೆ ಎಂದು ರಾಧಿಕಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರ‍್ಯಾಲಿಯಲ್ಲಿ ನಾನೂ ಭಾಗವಹಿಸಿದ್ದೆ
ರ‍್ಯಾಲಿಯಲ್ಲಿ ನಾನೂ ಭಾಗವಹಿಸಿದ್ದೆ
‘ಆ ಸಮಯದಲ್ಲಿ ಭಾರತದಲ್ಲಿ ಬಿಜೆಪಿಗೆ ಪ್ರಬಲ ಬೆಂಬಲವಿತ್ತು. ಆಧಾರ್, ಯುಪಿಐ, ಜಿಯೋನಂತಹ ಡಿಜಿಟಲ್ ಕ್ರಾಂತಿಗಳು ದೇಶಕ್ಕೆ ಹೊಸ ದಿಕ್ಕು ನೀಡಿದ್ದವು. ಹಾಗಾಗಿ ಯುಎಸ್‌ಗಿಂತ ಭಾರತಕ್ಕೆ ಬರುವುದೇ ಉತ್ತಮ ಎಂದು ಭಾವಿಸಿದೆ. ಅಷ್ಟೇ ಅಲ್ಲ, ಆ ಸಮಯದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ. 8.5ರಷ್ಟಿತ್ತು. ಅಮೆರಿಕಕ್ಕಿಂತ ಭಾರತಕ್ಕೆ ಹೆಚ್ಚು ಸಾಮರ್ಥ್ಯವಿದೆ ಎನಿಸಿತು. ನಮ್ಮ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಬಂದಾಗ ಮ್ಯಾಡಿಸನ್ ಸ್ಕ್ವೇರ್ ಪಾರ್ಕ್‌ನಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ನಾನೂ ಭಾಗವಹಿಸಿದ್ದೆ. ಆಗಲೇ ಭಾರತಕ್ಕೆ ಮರಳಬೇಕು ಎಂಬ ಆಲೋಚನೆ ಬಂತು’ ಎಂದು ರಾಧಿಕಾ ವಿವರಿಸಿದ್ದಾರೆ.
ನಿಮಗಾಗಿಯೇ ನೀವು ಗುರುತಿಸಿಕೊಳ್ಳಬೇಕು
ನಿಮಗಾಗಿಯೇ ನೀವು ಗುರುತಿಸಿಕೊಳ್ಳಬೇಕು
‘ನಾನು ಭಾರತಕ್ಕೆ ಮರಳುವ ನಿರ್ಧಾರ ಕೇವಲ ಕೆರಿಯರ್ ಮತ್ತು ಆರ್ಥಿಕ ಅವಕಾಶಗಳಿಗಾಗಿ ಮಾತ್ರವಲ್ಲ, ದೇಶಕ್ಕೆ ಜವಾಬ್ದಾರಿಯುತವಾಗಿ ಏನಾದರೂ ಮಾಡಬೇಕೆಂಬ ಭಾವನೆಯಿಂದಲೂ ಈ ನಿರ್ಧಾರ ತೆಗೆದುಕೊಂಡೆ’ ಎಂದು ರಾಧಿಕಾ ಹೇಳಿದ್ದಾರೆ. ಇದೇ ವೇಳೆ, ಹೆಣ್ಣುಮಕ್ಕಳು ಆರ್ಥಿಕವಾಗಿ ಯಾಕೆ ಸ್ವತಂತ್ರರಾಗಬೇಕು, ಅದು ಎಷ್ಟು ಅವಶ್ಯಕ ಎಂಬುದನ್ನೂ ಅವರು ಒತ್ತಿ ಹೇಳಿದರು. ‘ಹೆಣ್ಣುಮಕ್ಕಳು ಹಣದ ವಿಚಾರದಲ್ಲಿ ಯಾರ ಮೇಲೂ ಅವಲಂಬಿತರಾಗಬಾರದು. ಯಾರದೋ ಮಗಳು, ಯಾರದೋ ಪತ್ನಿ ಎನ್ನುವುದಕ್ಕಿಂತ, ನಿಮಗಾಗಿಯೇ ನೀವು ಗುರುತಿಸಿಕೊಳ್ಳಬೇಕು’ ಎಂದು ರಾಧಿಕಾ ಸಲಹೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.