ಕೇವಲ 15 ದಿನಗಳಲ್ಲಿ ಮನೆಯಲ್ಲೇ ಬೆಳೆಯಿರಿ ಈ 5 ತರಕಾರಿಗಳು; ಕಡಿಮೆ ಶ್ರಮದಲ್ಲಿ ಹೆಚ್ಚು ನ್ಯೂಟ್ರೀಷನ್!
ಕಡಿಮೆ ಸಮಯದಲ್ಲಿ ತಾಜಾ ಹಸಿರು ತರಕಾರಿಗಳನ್ನು ಬೆಳೆಯಲು ನೀವು ಬಯಸಿದರೆ, ಮೈಕ್ರೋಗ್ರೀನ್ಸ್, ಮೆಂತ್ಯ ಮತ್ತು ಕೊತ್ತಂಬರಿಯಂತಹ ಈ 5 ತರಕಾರಿಗಳು ಕೇವಲ 15 ದಿನಗಳಲ್ಲಿ ಸಿದ್ಧವಾಗುತ್ತವೆ. ಇವನ್ನು ಬೆಳೆಸುವ ಸುಲಭ ವಿಧಾನಗಳನ್ನು ಇಲ್ಲಿ ತಿಳಿಯಿರಿ.

ಆರೋಗ್ಯಕರ ಮೈಕ್ರೋಗ್ರೀನ್ಸ್ ಬೆಳೆಯಿರಿ
20 ದಿನದೊಳಗೆ ಕೊತ್ತಂಬರಿ ಸೊಪ್ಪು ರೆಡಿ
ಮೆಂತ್ಯ ಸೊಪ್ಪು
ಹಸಿರು ಬೆಳ್ಳುಳ್ಳಿ ಎಲೆಗಳು
ಬೆಳ್ಳುಳ್ಳಿ ಎಸಳುಗಳನ್ನು ಮಣ್ಣಿನಲ್ಲಿ ನೆಟ್ಟರೆ, ಸುಮಾರು 15 ರಿಂದ 20 ದಿನಗಳಲ್ಲಿ ಹಸಿರು ಎಲೆಗಳು ಬರುತ್ತವೆ. ಈ ಎಲೆಗಳನ್ನು ನೀವು ಸೂಪ್, ಸಲಾಡ್‌ನಿಂದ ಹಿಡಿದು ತರಕಾರಿಗಳಲ್ಲಿಯೂ ಬಳಸಬಹುದು. ಚಿಕ್ಕ ಪಾಟ್‌ನಿಂದ ಹಿಡಿದು ಪ್ಲಾಸ್ಟಿಕ್ ಬಾಟಲಿಯ ಪ್ಲಾಂಟರ್‌ನಲ್ಲಿಯೂ ಬೆಳ್ಳುಳ್ಳಿ ಬೆಳೆಸಬಹುದು.
ಬೇಬಿ ಪಾಲಕ್
ದೇಹದಲ್ಲಿ ಕಬ್ಬಿಣದಾಂಶದ ಕೊರತೆಯನ್ನು ನೀಗಿಸಲು ಹೆಚ್ಚಿನ ಮನೆಗಳಲ್ಲಿ ಪಾಲಕ್ ಬಳಸುತ್ತಾರೆ. ಪಾಲಕ್ ಬೆಳೆ ಸಿದ್ಧವಾಗಲು ಸಮಯ ಹಿಡಿಯುತ್ತದೆ, ಆದರೆ ಅದರ ಎಳೆಯ ಎಲೆಗಳು (ಬೇಬಿ ಲೀವ್ಸ್) 15 ರಿಂದ 20 ದಿನಗಳಲ್ಲಿ ಸುಲಭವಾಗಿ ಸಿದ್ಧವಾಗುತ್ತವೆ. ನೀವು ಇವುಗಳನ್ನು ಕಡಿಮೆ ಜಾಗದಲ್ಲಿಯೂ ಸುಲಭವಾಗಿ ಬೆಳೆಸಬಹುದು. ಇದರಿಂದ ನಿಮಗೆ ಕಬ್ಬಿಣದ ಜೊತೆಗೆ ವಿಟಮಿನ್‌ಗಳು ಕೂಡಾ ಹೇರಳವಾಗಿ ಸಿಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

