ಕೊಂಚ ಫ್ರೀಯಾಗಿ, ಮತ್ತೆ ಮಕ್ಕಳಾಗಿ: 90ರ ದಶಕದ ಬೆಲೆಕಟ್ಟಲಾಗದ ಸವಿ ನೆನಪುಗಳು!

First Published 8, Jun 2019, 5:35 PM IST

ಮೊಬೈಲ್, ಸಾಮಾಜಿಕ ಜಾಲತಾಣ, ಇಂಟರ್ನೆಟ್ ಇವೆಲ್ಲದರಿಂದ ಬಲು ದೂರ... 90ರ ದಶಕದ ಮಕ್ಕಳು ತಮ್ಮ ಬಾಲ್ಯವನ್ನು ಲಗೋರಿ, ಚನ್ನೆಮಣೆ, ಕುಂಟೆ ಬಿಲ್ಲೆ ಇಂತಹ ಆಟಗಳನ್ನಾಡುತ್ತಾ ಕಳೆದಿದ್ದಾರೆ. ಸಣ್ಣ ಪುಟ್ಟ ವಿಚಾರಗಳಲ್ಲೇ ಖುಷಿ ಕಾಣುತ್ತಾ ಜೀವನ ಪರ್ಯಂತ ಬೆಲೆ ಕಟ್ಟಲಾಗದ, ಮರೆಯಲಾರದ ನೆನಪುಗಳನ್ನು ಮನಸ್ಸೆಂಬ ತಿಜೋರಿಯಲ್ಲಿ ಜೋಪಾನವಾಗಿಟ್ಟಿದ್ದಾರೆ. ಇಂದು ಜೀವನವೆಂಬ ಜಂಜಾಟದಲ್ಲಿ ಆಫೀಸ್, ಮೊಬೈಲ್, ಇ-ಮೇಲ್ ಎಂಬ ಜಗತ್ತಿನಲ್ಲಿ ಕಳೆದು ಹೋಗಿರುವ ಅಂದಿನ ಪುಟ್ಟ ಮಕ್ಕಳಿಗೆ ತಮ್ಮ ಅತ್ಯಮೂಲ್ಯ ಬಾಲ್ಯದ ದಿನಗಳನ್ನು ನೆನಪಿಸುವ ಫೋಟೋಗಳು ಇಲ್ಲಿವೆ....

ಶಾಲೆ ಬಿಟ್ಟೊಡನೆ ಓಡೋಡಿ ಬಂದು ಅಕ್ಕ- ಪಕ್ಕದ ಮನೆಯ ನೆಚ್ಚಿನ ಗೆಳೆಯರೊಂದಿಗೆ ಕ್ಯಾರಂ ಬೋರ್ಡ್ ಆಡುತ್ತಾ ರಾಣಿಗಾಗಿ ಜಗಳವಾಡುತ್ತಿದ್ದುದು...

ಶಾಲೆಗೆ ತೆರಳಲು ಅಂದು ಖಾಸಗಿ ವಾಹನವಿರಲಿಲ್ಲ, ಮನೆಯಲ್ಲಿ ಅಪ್ಪ ಅಮ್ಮನೂ ಕೆಲಸದಲ್ಲಿ ಬ್ಯೂಸಿ. ಹೀಗಿರುವಾಗ ಗಂಟೆಗಟ್ಟಲೇ ಬಸ್ ಗಾಗಿ ಕಾದು, ಗೆಳೆಯರೊಂದಿಗೆ ಹರಟೆ ಹೊಡೆದು ಹೋಗೋದೇ ಮಜಾ...

ಮೊಬೈಲ್ ಫೋನ್ ಗಳಿಲ್ಲದ ಕಾಲವದು, ಮನೆಗೊಂದೇ ಲ್ಯಾಂಡ್ ಲೈನ್ ಫೋನ್. ಅತ್ಯಂತ ತಾಳ್ಮೆಯಿಂದ ಒಂದೇ ಸ್ಥಳದಲ್ಲಿ ನಿಂತು ಗಮಟೆಗಟ್ಟಲೇ ಖುಷಿ ಖುಷಿಯಾಗಿ ಹರಟೆ ಹೊಡೆಯುತ್ತಿದ್ದ ದಿನಗಳವು...

ಆಗಷ್ಟೇ ಪರಿಚಿತವಾಗುತ್ತಿದ್ದ ಫಾಸ್ಟ್ ಫುಡ್ ಅಂಗಡಿ/ಶಾಪ್ ಗಳಲ್ಲಿ ತಿಂಡಿ ತಿನ್ನಲು ಅಪ್ಪ ಅಮ್ಮ ಕೊಡುತ್ತಿದ್ದ ಹಣವನ್ನು ಹಲವಾರು ದಿನ ಕೂಡಿಟ್ಟು, ಕೊನೆಗೂ ತಾವಿಚ್ಛಿಸಿದ್ದ ತಿಂಡಿ ತಿನ್ನುತ್ತಿದ್ದ ಕ್ಷಣಗಳು ಮರೆಯಲಸಾಧ್ಯ...

ಮನೆಯಲ್ಲಿ ಕಾಡಿ ಬೇಡಿ, ಒಂದು ರಾತ್ರಿ ಗೆಳತಿಯ ಮನೆಯಲ್ಲಿ ಉಳಿದುಕೊಳ್ಳಲು ಪರ್ಮಿಷನ್. ಗೆಳೆತಿಯರೆಲ್ಲಾ ಒಬ್ಬಳ ಮನೆಯಲ್ಲಿ ಸೇರಿ ರಾತ್ರಿ ಇಡೀ ಉಪಯೋಗಕ್ಕೆ ಬಾರದ ವಿಚಾರಗಳನ್ನು ಚರ್ಚಿಸುತ್ತಿದ್ದ ದಿನಗಳು...

ಚಾಕಲೇಟ್, ತಿಂಡಿಗೆಂದು ಕೊಟ್ಟ ಹಣ ಕೂಡಿಟ್ಟು ಬಾಲಮಂಗಳ, ತುಂತುರು, ಚಂದಮಾಮ ಪುಸ್ತಗಳನ್ನು ಓದುತ್ತಿದ್ದಾಗ ಸಿಗುತ್ತಿದ್ದ ಖುಷಿಯೇ ಬೇರೆ...

ಶಾಲೆಯಿಂದ ಬಂದು ಅಮ್ಮ ಕೊಟ್ಟ ತಿಂಡಿ ತಿಂದು, ಯೂನಿಫಾರ್ಮ್ ಬದಲಾಯಿಸಿ ಕ್ರಿಕೆಟ್ ಆಡಲು ಹೋದರೆ ಸಮಯ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ಬ್ಯಾಟಿಂಗ್ ಮಾಡಲು ಮಾತ್ರ ಎಲ್ಲರೂ ಫಸ್ಟ್...

ಮೊಬೈಲ್ ಗಳಿಲ್ಲವೆಂದಾಗ ಇಂಟರ್ನೆಟ್ ಬಳಕೆ ಎಲ್ಲಿ? ಆದರೂ ಆಗಷ್ಟೇ ಬಂದಿದ್ದ ಆರ್ಕುಟ್, ಯಾಹೂ, ಗೂಗಲ್ ಬಳಸಲು ಎಲ್ಲಲ್ಲದ ಕಾತುರ. ಹೀಗಾಗಿ ಇಂಟರ್ನೆಟ್ ಬಳಸಲು ಭಯದಿಂದಲೇ ಸೈಬರ್ ಕೆಫೆಗಳಿಗೆ ಹೀಗುತ್ತಿದ್ದ ದಿನಗಳವು

ಅಕ್ಕ ಪಕ್ಕದ ಮನೆಯವರೆಲ್ಲಾ ನೆಚ್ಚಿನ ಗೆಳೆಯರು. ವಯಸ್ಸಿನ ಅಂತರವಿಲ್ಲ. ಒಟ್ಟಾಗಿ ಶಾಲೆಗೆ ಹೋಗಿ ಮರಳುತ್ತಿದ್ದರು. ಕೆವಲವರು ನಡೆದರೆ, ಮತ್ತೆ ಕೆಲವರು ಸೈಕಲ್ ಸವಾರಿ. ಆದರೂ ದಾರಿ ಇಡೀ ಮುಗಿಯದ ಮಾತುಕತೆ...

ಬೂಮರ್ ಹಾಗೂ ಇನ್ನಿತರ ತಿಂಡಿ ಪ್ಯಾಕೇಟ್ ನಲ್ಲಿ ಬರುತ್ತಿದ್ದ ಒಂದೆರಡು ದಿನ ಉಳಿಯುವ ಟ್ಯಾಟೂ ಹಚ್ಚಿಕೊಳ್ಳಲು ಅದೆಷ್ಟು ಖುಷಿ. ಅಂದು ಆ ಟ್ಯಾಟೂಗಳೇ 'ಕೂಲ್' ಆಗಿದ್ದವು...

ಲ್ಯಾಂಡ್ ಲೈನ್ ನಿಂದ ನೆಚ್ಚಿನ ಗೆಳೆಯರಿಗೆ ಬ್ಲಾಂಕ್ ಕಾಲ್ ಕೊಟ್ಟು ಸೀಕ್ರೆಟ್ ಸಂದೇಶಗಳನ್ನು ರವಾನಿಸುತ್ತಿದ್ದಾಗ ಸಿಗುತ್ತಿದ್ದ ಮಜವೇ ಬೇರೆ...

WWFನಲ್ಲಿ ಎಲ್ಲಲ್ಲದ ಆಸಕ್ತಿ. ಟಿವಿ ಮಾತ್ರವಲ್ಲ... ಅಂಗಡಿಗಳಲ್ಲೂ WWF ಕಾರ್ಡ್ ಗಳು ಸಿಗುತ್ತಿದ್ದ ದಿನಗಳವು. ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಡಲು ಭಾರೀ ಪೈಪೋಟಿ

ಬೇಸಿಗೆಯಲ್ಲಿ ಶಾಲೆಯಿಂದ ಮರಳುತ್ತಿದ್ದಾಗ ಗೋಲಿ ಸೋಡಾಗಳೇ ಬಿಸಿಲ ಬೇಗೆಯನ್ನು ತಣಿಸುತ್ತಿದ್ದವು...

ಸಿಹಿಯಾಗಿರುತ್ತಿದ್ದ 'ಸಿಗರೇಟ್' ಎಂದರೆ ಬಲು ಪ್ರೀತಿ. ಫಾಂಟಮ್ ಸಿಗರೇಟ್ ಸೇದಿ ನಾವೀಗ ಬಹಳ ದೊಡ್ಡವರಾಗಿದ್ದೇವೆ ಎಂದು ಜಂಬ ಪಡುತ್ತಿದ್ದಾಗ ಸಿಗುತ್ತಿದ್ದ ಖುಷಿ ಬೆಲೆ ಕಟ್ಟಲಸಾಧ್ಯ.

ಗೋಲಿಗಳನ್ನು ಕೂಡಿಟ್ಟು ಅಜ್ಜಿ ಮನೆಗೆ ತೆರಳಿದಾಗ, ಅಲ್ಲಿ ಸೇರುವ ಗೆಳೆಯರೊಂದಿಗೆ ಗೋಲಿಯಾಟ ಆಡುವುದೇ ಒಂದು ಸಂಭ್ರಮ

ವಿಡಿಯೋ ಗೇಮ್ ಎಂದರೆ ಇದೊಂದೇ ತಿಳಿದಿತ್ತು...

ವಿಡಿಯೋ ಗೇಮ್ ಎಂದರೆ ಇದೊಂದೇ ತಿಳಿದಿತ್ತು...

ಕ್ಯಾಸೆಟ್ ಹಾಡುಗಳನ್ನು ಕೇಳಿದಾಗ ಸಿಗುತ್ತಿದ್ದ ಖುಷಿ, ಇಂದಿನ ಸ್ಮಾರ್ಟ್ ಫೋನ್ ಗಳಿಂದಲೂ ಸಿಗಲು ಸಾಧ್ಯವಿಲ್ಲ.

ಒಂದೇ ಪೆನ್ನಿನಲ್ಲಿ ಬಣ್ಣ ಬಣ್ಣದ ಇಂಕ್ ಇರೋ ರೀಫಿಲ್‌ಗಳು. ಕೈಗೆ ಸಿಕ್ಕಿದಾಗ ಸ್ವರ್ಗಕ್ಕೇ ಮೂರೇ ಗೇಣು.

loader