ಎಕರೆ ಜಾಗದಲ್ಲಿ ಅಂಬಾನಿ ಮಗಳ ನಿವಾಸ: ಇಲ್ಲಿದೆ ಐಷಾರಾಮಿ ಬಂಗಲೆ ನೋಟ!

First Published 26, Jun 2019, 3:56 PM IST

2018ರಲ್ಲಿ ನಡೆದಿದ್ದ ಜಿಯೋ ಒಡೆಯ ಅಂಬಾನಿ ಮಗಳು, ಇಶಾ ಹಾಗೂ ಆನಂದ್ ಪೀರಾಮಲ್ ಅದ್ಧೂರಿ ಮದುವೆ ಭಾರೀ ಸೌಂಡ್ ಮಾಡುತ್ತಿತ್ತು. ಇದೀಗ ಆರು ತಿಂಗಳ ಬಳಿಕ ಇಶಾ ಹಾಗೂ ಆನಂದ್ ಪೀರಾಮಲ್ ಉಳಿದುಕೊಳ್ಳಲಿರುವ ಮೖಷಾರಾಮಿ ಬಂಗಲೆ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಈ ಬಹುಮಹಡಿ ಮನೆ ಹೇಗಿದೆ? ನೀವೇ ನೋಡಿ

2018ರ ಡಿಸೆಂಬರ್ 12ರಂದು ಇಶಾ ಅಂಬಾನಿ ಹಾಗೂ ಆನಂದ್ ಪೀರಾಮಲ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಅದ್ಧೂರಿ ಮದುವೆಯಲ್ಲಿ ಬಾಲಿವುಡ್ ನಟಿಯರು ಸೇರಿದಂತೆ ರಾಜಕಾರಣಿಗಳೂ ಪಾಲ್ಗೊಂಡಿದ್ದರು.

ರಿಲಯನ್ಸ್ ಒಡೆಯ ಅಂಬಾನಿ ಮುಕೇಶ್ ಅಂಬಾನಿಯ ಮಗಳ ಮದುವೆ ಹಲವಾರು ದಿನಗಳವರೆಗೆ ಚರ್ಚೆಯಲ್ಲಿತ್ತು. ಬಳಿಕ ಇಶಾ ಅಂಬಾನಿ ತನ್ನ ಗಂಡ ಆನಂದ್ ಪೀರಾಮಲ್ ಜೊತೆ 'ಗುಲಿಟಾ'ಗೆ ಶಿಫ್ಟ್ ಆಗಿದ್ದರು.

'ಗುಲಿಟಾ' ಎಂಬ ಐಷಾರಾಮಿ ಬಂಗಲೆಯನ್ನು ಆನಂದ್ ಪೀರಾಮಲ್ ತಂದೆ ತಾಯಿ, ತಮ್ಮ ಮಗ ಹಾಗೂ ಸೊಸೆಗೆ ಮದುವೆ ಗಿಫ್ಟ್ ಆಗಿ ನೀಡಿದ್ದರು.

ಬರೋಬ್ಬರಿ 50 ಸಾವಿರ ಚದರ ಮೀಟರ್[1.1 ಎಕರೆ] ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಐಷಾರಾಮಿ ಕಟ್ಟಡ, 450 ಕೋಟಿ ಬೆಲೆ ಬಾಳುತ್ತದೆ ಎನ್ನಲಾಗಿದೆ.

ದಕ್ಷಿಣ ಮುಂಬೈನ ವರ್ಲಿಯಲ್ಲಿರುವ 'ಗುಲಿಟಾ' ಗಾಜಿನಿಂದಲೇ ನಿರ್ಮಿಸಲಾಗಿದೆಯೋ ಎನ್ನುವಷ್ಟು ಸುಂದರವಾಗಿದೆ.

5 ಮಹಡಿಯ ಈ ಬಂಗಲೆಯಲ್ಲಿ ವಿಶಾಲವಾದ ಹಾಲ್, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ನಾನಾ ಬಗೆಯ ಸೌಲಭ್ಯಗಳಿವೆ.

ಬಂಗಲೆಯ ಗ್ರೌಂಡ್ ಫ್ಲೋರ್ ನಲ್ಲಿ ಎಂಟ್ರೆನ್ಸ್ ಲಾಭಿ ಇದೆ ಹಾಗೂ ಎರಡನೇ ಮಹಡಿಯಲ್ಲಿ ಡೈನಿಂಗ್ ಹಾಲ್ ಹಾಗೂ ಮಾಸ್ಟರ್ ಬೆಡ್ ರೂಂಗಳಿವೆ.

ಸಮುದ್ರಕ್ಕೆ ಮುಖ ಮಾಡಿಕೊಂಡಿರುವ ಈ ಮನೆಯಿಂದ ಅರಬ್ಬೀ ಸಮುದ್ರದ ಮನಮೋಹಕ ದೃಶ್ಯ ನೋಡಬಹುದಾಗಿದೆ.

ಡೈಮಂಡ್ ಥೀಮ್ ಆಧರಿಸಿ ನಿರ್ಮಿಸಲಾದ ಈ ಐಷಾರಾಮಿ ಬಂಗಲೆಯಲ್ಲಿ ವಿಶೇಷವಾದ ಡೈಮಂಡ್ ಆಕಾರದ ರೂಂ ಕೂಡಾ ಇದೆ.

ಪಾರ್ಕಿಂಗ್, ದೇವರ ಕೋಣೆ ಸೇರಿದಂತೆ ಹಲವಾರು ಸೌಲಭ್ಯಗಳಿರುವ ಈ ನಿವಾಸದಲ್ಲಿ, ಪ್ರತಿಯೊಂದೂ ಮಹಡಿಯಲ್ಲಿ ನೌಕರರಿಗಾಗೇ ಒಂದು ಕೋಣೆ ಮೀಸಲಿಡಲಾಗಿದೆ.

loader