ಮಳೆಗಾಲದಲ್ಲಿ ಕಾರಿನ ದುರ್ವಾಸನೆಗೆ ಈ ಟ್ರಿಕ್ಸ್ ಬ್ಲಾಕ್‌ಬಸ್ಟರ್!
ಮಳೆಗಾಲದಲ್ಲಿ ಕಾರಿನ ಒಳಗೆ ಒಂದು ರೀತಿಯ ವಾಸನೆ ಬರುತ್ತಾ? ಹಾಗಿದ್ರೆ ಈ ಸಲಹೆಗಳು ನಿಮಗೆ ಉಪಯುಕ್ತ.

ಮಳೆಗಾಲದಲ್ಲಿ ಕಾರಿನ ಒಳಗೆ ವಾಸನೆ ಬರುತ್ತಾ?
ಮಳೆಗಾಲದಲ್ಲಿ ಒಂದು ರೀತಿಯ ವಾಸನೆ ಮನೆಯ ಒಳಗೆ ಬರೋದು ಸಹಜ. ಅದೇ ರೀತಿ ಕಾರಿನ ಒಳಗೂ ವಾಸನೆ ಬರೋದು ಸಹಜ. ಮಳೆಗಾಲದಲ್ಲಿ ಕಾರನ್ನ ಸರಿಯಾಗಿ ನೋಡಿಕೊಳ್ಳದಿದ್ರೆ ಒಳಗೆ ದುರ್ವಾಸನೆ ಬರಲು ಶುರುವಾಗುತ್ತದೆ. ಹೆಚ್ಚಿನ ಜನ ಕಾರಿನ ಒಳಗೆ ವಾಸನೆ ಬರಬಾರದು ಅಂತ AC ಹಾಕೊಳ್ತಾರೆ. ಆದ್ರೆ ಇದು ಪರಿಹಾರ ಅಲ್ಲ. ಈ ರೀತಿಯ ಸಮಸ್ಯೆ ನಿಮಗೂ ಇದ್ರೆ, ಇಲ್ಲಿವೆ ಕೆಲವು ಸಲಹೆಗಳು.
ಈರುಳ್ಳಿ :
ಈರುಳ್ಳಿ ಹೆಚ್ಚಿದ ತುಂಡುಗಳನ್ನ ತಟ್ಟೆಯಲ್ಲಿ ಇಟ್ಟು ರಾತ್ರಿ ಕಾರಿನಲ್ಲಿಡಿ. ಈರುಳ್ಳಿ ವಾಸನೆ ಕೆಟ್ಟ ವಾಸನೆಯನ್ನ ಹೀರಿಕೊಳ್ಳುತ್ತದೆ. ಬೆಳಿಗ್ಗೆ ಕಾರಿನ ಕಿಟಕಿಗಳನ್ನ ತೆರೆದಿಡಿ. ಈರುಳ್ಳಿ ವಾಸನೆ ಹೋಗುತ್ತದೆ.
ಬಿರಿಯಾನಿ ಎಲೆ ಮತ್ತು ಲವಂಗ :
ಒಂದು ಸಣ್ಣ ಬಟ್ಟೆಯ ಚೀಲದಲ್ಲಿ ಎರಡು ಬಿರಿಯಾನಿ ಎಲೆ ಮತ್ತು ನಾಲ್ಕೈದು ಲವಂಗ ಹಾಕಿ ಕಾರಿನಲ್ಲಿಡಿ. ಇದು ಒಳ್ಳೆಯ ವಾಸನೆ ಬರೋದಕ್ಕೆ ಸಹಾಯ ಮಾಡುತ್ತದೆ.
ಬೇಕಿಂಗ್ ಸೋಡಾ ಮತ್ತು ವಿನೆಗರ್ :
ಕಾರಿನಲ್ಲಿ ತುಂಬಾ ವಾಸನೆ ಇದ್ರೆ ಬೇಕಿಂಗ್ ಸೋಡಾ ಅಥವಾ ವಿನೆಗರ್ ಇಟ್ಟು ನೋಡಿ. ಇವೆರಡೂ ಕೆಟ್ಟ ವಾಸನೆಯನ್ನ ಹೀರಿಕೊಳ್ಳುತ್ತವೆ.
ಬೇವಿನ ಎಲೆ:
ಒಂದು ಸಣ್ಣ ಬಟ್ಟೆಯ ಚೀಲದಲ್ಲಿ ಬೇವಿನ ಎಲೆ ಹಾಕಿ ಕಾರಿನಲ್ಲಿಡಿ. ಬೇವಿನ ಎಲೆಗಳು ತೇವಾಂಶ ಹೀರಿಕೊಳ್ಳುತ್ತವೆ ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆ ತಡೆಯುತ್ತವೆ.
ಮರದ ಬೂದಿ :
ಒಂದು ಬಟ್ಟೆಯಲ್ಲಿ ಮರದ ಬೂದಿ ಹಾಕಿ ಕಾರಿನಲ್ಲಿಡಿ. ಬೂದಿ ತೇವಾಂಶ ಮತ್ತು ವಾಸನೆ ಹೀರಿಕೊಳ್ಳುತ್ತದೆ. ಇದು ಮಲೆನಾಡಿನಲ್ಲಿ ಹೆಚ್ಚು ಬಳಕೆಯಲ್ಲಿದೆ.
ಕಾರನ್ನ ಸ್ವಚ್ಛವಾಗಿಡಿ!
ಕಾರನ್ನ ಪ್ರತಿದಿನ ಸ್ವಚ್ಛವಾಗಿಡಿ. ಒದ್ದೆ ಬಟ್ಟೆ, ಛತ್ರಿ ಅಥವಾ ತಿಂಡಿಗಳನ್ನ ಕಾರಿನಲ್ಲಿ ಇಡಬೇಡಿ. ಕಾರಿನ ಕಿಟಕಿಗಳನ್ನ ತೆರೆದಿಟ್ಟು ಗಾಳಿ ಬರೋ ಹಾಗೆ ಮಾಡಿ. AC ಫಿಲ್ಟರ್‌ಗಳನ್ನೂ ಸ್ವಚ್ಛವಾಗಿಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.