ಭವಿಷ್ಯದಲ್ಲಿ ದಿನಕ್ಕೆ 5 ಕೋಟಿ ಸಂಪಾದಿಸಬಲ್ಲೆ ಎಂದು ಗಂಡನಿಗೆ ಹೇಳಿದ್ಲು ಹೆಂಡ್ತಿ, ಅದೇ ನಿಜವಾಯ್ತು!
ಎಲ್ಲಾ ಯಶಸ್ವೀ ಪುರುಷನ ಹಿಂದೆ ಹೆಣ್ಣೊಬ್ಬಳು ಇದ್ದೇ ಇರುತ್ತಾಳೆ ಎಂದು ಹೇಳುತ್ತಾರೆ. ಆದರೆ ಇದನ್ನು ಟೀಕಿಸುವವರೂ ಇದ್ದಾರೆ. ಆದ್ರೆ ಈ ಯಶಸ್ವೀ ವ್ಯಕ್ತಿಯ ವಿಚಾರದಲ್ಲಿ ಇದು ನಿಜವಾಗಿದೆ. ಗಂಡನಲ್ಲಿ ನೀನು ದಿನಕ್ಕೆ 5 ಕೋಟಿ ಸಂಪಾದಿಸುವೆ ಅಂದಿದ್ಲು ಹೆಂಡ್ತಿ, ಅದೇ ನಿಜವಾಗಿದೆ.

ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್ ಇಂಕ್‌ನ ಸಿಇಒ ಸುಂದರ್ ಪಿಚೈ ಅವರು ಪ್ರಪಂಚದಾದ್ಯಂತ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವವರಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸುಂದರ್ ಪಿಚೈ ಅವರು 2022ರಲ್ಲಿ USD 22.6 ಕೋಟಿ ಸಂಭಾವನೆ ಪಡೆದಿದ್ದರಿಂದ ವಿಶ್ವದ ಉನ್ನತ ಸಂಭಾವನೆ ಪಡೆಯುವ ಟೆಕ್ ಎಕ್ಸಿಕ್ಯೂಟಿವ್‌ಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಇದು ವಾರ್ಷಿಕವಾಗಿ 1869 ಕೋಟಿ ರೂ. ಅಂದರೆ ದಿನಕ್ಕೆ ರೂ. 5 ಕೋಟಿಗೂ ಹೆಚ್ಚು ಆದಾಯವಾಗಿದೆ.
ಸಿಇಒ ಸುಂದರ್ ಪಿಚೈ , ವಿಶ್ವದ ಶ್ರೀಮಂತ ಕಾರ್ಯನಿರ್ವಾಹಕರಲ್ಲಿ ಒಬ್ಬರು. ಇವರು 1 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆಯನ್ನು ಮುನ್ನಡೆಸುತ್ತಾರೆ. ಅವರು ಯುನೈಟೆಡ್ ಸ್ಟೇಟ್‌ನಲ್ಲಿರುವ ಭಾರತ ಮೂಲದ ಐಕಾನ್ ಆಗಿದ್ದಾರೆ. ಮಧ್ಯಮ ವರ್ಗದ ಹುಡುಗ ಮಹಾ ಶ್ರೀಮಂತ ಬಿಲಿಯನೇರ್ ಆಗಿದ್ದು ಸುಲಭದ ಹಾದಿಯಲ್ಲ.
ಸುಂದರ್ ಪಿಚೈ ಅವರ ಪಾವತಿಯ ಬಹುಪಾಲು ಭಾಗವು ಅವರ ಷೇರುಗಳಿಂದ ಬರುವ ಆದಾಯದ ಭಾಗವಾಗಿದೆ ಎಂದು ಗಮನಿಸಬೇಕು. ಪಿಚೈ ಅವರ ಸ್ಟಾಕ್ ಆಯ್ಕೆಗಳು 1788 ಕೋಟಿ ರೂ. ಐಐಟಿ ಖರಗ್‌ಪುರದಿಂದ ಕೆಮಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿರುವ ಸುಂದರ್ ಪಿಚೈ ಅವರು 2019ರಲ್ಲಿ ಗೂಗಲ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಜೂನ್ 10, 1972 ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ ಚೆನ್ನೈನಲ್ಲಿ ಬೆಳೆದರು. ಐಐಟಿಯಿಂದ ಬಿಟೆಕ್ ಮುಗಿಸಿದ ನಂತರ, ಪಿಚೈ ಹೆಚ್ಚಿನ ಅಧ್ಯಯನಕ್ಕಾಗಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಹೋದರು. ಅವರು ಅಮೆರಿಕದ ವಾರ್ಟನ್ ಶಾಲೆಯಲ್ಲಿ ಎಂಬಿಎ ಮಾಡಿದರು. ನಂತರ 2004 ರಲ್ಲಿ ಗೂಗಲ್‌ಗೆ ಸೇರಿದರು. ಆದರೆ ಪಿಚೈ ಅವರ ಪತ್ನಿ ಅಂಜಲಿ ಪಿಚೈ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ.
ಅಂಜಲಿ ಪಿಚೈ ಮತ್ತು ಸುಂದರ್ ಪಿಚೈ ಮೊದಲು ಐಐಟಿ ಖರಗ್‌ಪುರದಲ್ಲಿ ಭೇಟಿಯಾದರು ಮತ್ತು ನಂತರ ವಿವಾಹವಾದರು. ವರದಿಗಳ ಪ್ರಕಾರ, ಸುಂದರ್ ಪಿಚೈ ಮೈಕ್ರೋಸಾಫ್ಟ್‌ಗೆ ಸೇರಲು ಗೂಗಲ್‌ನ್ನು ತೊರೆಯಲು ಯೋಚಿಸುತ್ತಿದ್ದ ಸಮಯವಿತ್ತು ಆದರೆ ಅಂಜಲಿ ಅವರಿಗೆ ಗೂಗಲ್‌ನಲ್ಲಿ ಉಳಿಯಲು ಸಲಹೆ ನೀಡಿದರು.
ಅಂಜಲಿ ಪಿಚೈ ತನ್ನ ಲಿಂಕ್ಡ್‌ಇನ್ ಖಾತೆಯ ಪ್ರಕಾರ ಇಂಟ್ಯೂಟ್ ಎಂಬ ಸಾಫ್ಟ್‌ವೇರ್ ಕಂಪನಿಯಲ್ಲಿ ಬಿಸಿನೆಸ್ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಜಲಿಯವರು ರಾಜಸ್ಥಾನದ ಕೋಟಾದವರು. ಅವರು ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮಾಡಿದ್ದಾರೆ. ಆಕೆಯ ತಂದೆ ಕೋಟಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಯೋಗಿ. ಅಂಜಲಿ 1993 ರಲ್ಲಿ ಇಂಜಿನಿಯರಿಂಗ್ ಮುಗಿಸಿದರು.
ಅಂಜಲಿ ಮತ್ತು ಸುಂದರ್ ಪಿಚೈ ಕಾಲೇಜಿನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡರು. ಸುಂದರ್ ಪಿಚೈ ನಂತರ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದರು. ನಂತರ ಅವರು ದೂರದ ಸಂಬಂಧದಲ್ಲಿದ್ದರು. ಅಂಜಲಿ 1999 ರಿಂದ 2002 ರವರೆಗೆ ಆಕ್ಸೆಂಚರ್‌ನಲ್ಲಿ ಕೆಲಸ ಮಾಡಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.