ಹಳೆಯ ಸಿಂಟೆಕ್ಸ್ ಟ್ಯಾಂಕ್‌ನಲ್ಲೊಂದು ಹಸಿರು ಕ್ರಾಂತಿ! ಗಾರ್ಡನಿಂಗ್ ಮಾಡೋಕೆ ಇದು ಬೆಸ್ಟ್
Terraces Gardening: ಅನುಪಯುಕ್ತ ವಾಟರ್ ಟ್ಯಾಂಕ್‌ಗಳನ್ನು ಬಿಸಾಡದೆ, ಅವುಗಳನ್ನು ಸೃಜನಾತ್ಮಕವಾಗಿ ಮರುಬಳಕೆ ಮಾಡಬಹುದು. ಈ ಲೇಖನದಲ್ಲಿ ಹಳೆಯ ವಾಟರ್ ಟ್ಯಾಂಕ್‌ನ್ನು ಪ್ಲಾಂಟರ್‌ಗಳಾಗಿ ಪರಿವರ್ತಿಸಿ ಸುಂದರ ಗಾರ್ಡನ್ ನಿರ್ಮಿಸುವ ನಾಲ್ಕು ವಿಭಿನ್ನ ವಿಧಾನಗಳನ್ನು ವಿವರಿಸಲಾಗಿದೆ.

1. ಅರ್ಧ ಕಟ್ ರೌಂಡ್ ಪ್ಲಾಂಟರ್
ವಾಟರ್ ಟ್ಯಾಂಕರ್‌ನಿಂದ ಸುಂದರವಾದ ಪ್ಲಾಂಟರ್ ಮಾಡಬಹುದು. ದೊಡ್ಡ ಟ್ಯಾಂಕ್‌ನನ್ನು ಮಧ್ಯದಲ್ಲಿ ಕಟ್ ಮಾಡಿ. ಕೆಳಭಾಗದಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ. ಇದರಿಂದ ಮಣ್ಣಿನಲ್ಲಿ ಹೆಚ್ಚಾದ ನೀರು ಸುಲಭವಾಗಿ ಹೊರಗೆ ಹೋಗುತ್ತದೆ. ಹೊರಭಾಗದಲ್ಲಿ ಟ್ಯಾಂಕ್‌ಗೆ ನಿಮ್ಮಿಷ್ಟದ ಬಣ್ಣ ಹಚ್ಚಿ. ಇಂತಹ ದೊಡ್ಡ ಪ್ಲಾಂಟರ್‌ನಲ್ಲಿ ಎರಿಕಾ ಪಾಮ್, ಪಪ್ಪಾಯ ಸೇರಿದಂತೆ ಹೂವಿನ ಸಸ್ಯಗಳನ್ನು ಹಚ್ಚಬಹುದು.
2.ಸ್ಟೆಪ್ ಬೈ ಸ್ಟೆಪ್
ನಿಮ್ಮ ಬಳಿಯಲ್ಲಿ ದೊಡ್ಡ ವಾಟರ್ ಟ್ಯಾಂಕ್ ಇದ್ರೆ ಬೇರೆ ಬೇರೆ ಎತ್ತರಗಳಲ್ಲಿ ಮೂರರಿಂದ ನಾಲ್ಕು ಭಾಗಗಳಾಗಿ ಕತ್ತರಿಸಿಕೊಳ್ಳಿ. ಈ ಭಾಗಗಳನ್ನು ಹಂತ ಹಂತವಾಗಿ ಜೋಡಿಸಿಕೊಳ್ಳಬೇಕು. ಈ ಸ್ಟೆಪ್‌ಗಳಲ್ಲಿ ನಿಮಗೆ ಇಷ್ಟವಾದ ಸಸ್ಯಗಳನ್ನು ನೆಡಿ. ಟೆರೇಸ್ಟ್ ಗಾರ್ಡನಿಂಗ್‌ಗೆ ಈ ರೀತಿಯ ಪಾಟ್‌ಗಳು ತುಂಬಾ ಆಕರ್ಷಕವಾಗಿ ಕಾಣಿಸುತ್ತವೆ. ಮನೆ ಮುಂಭಾಗ ಸ್ಥಳವಿದ್ರೆ, ಪ್ರವೇಶದ್ವಾರದಲ್ಲಿ ಇವುಗಳನ್ನಿಟ್ರೆ ಸುಂದರವಾಗಿ ಕಾಣಿಸುತ್ತದೆ. ಇವುಗಳನ್ನು ಮತ್ತಷ್ಟು ಸುಂದರವಾಗಿ ಕಾಣಲು ಆಕರ್ಷಕವಾದ ಬಣ್ಣ ಬಳಿಯಿರಿ.
3. ಹಂಸ ಆಕಾರದ ಪ್ಲಾಂಟರ್
ತೊಟ್ಟಿಯ ಕತ್ತರಿಸಿದ ಭಾಗವನ್ನು ಹಂಸದ ದೇಹಕ್ಕೆ ಆಕಾರ ಮಾಡಿ. ಪಿವಿಸಿ ಪೈಪ್‌ಗಳನ್ನು ಬಳಸಿಕೊಂಡು ತೊಟ್ಟಿಗೆ ಹಂಸದ ಆಕಾರ ನೀಡಿ. ಹಂಸದ ಆಕಾರದ ತೊಟ್ಟಿಗೆ ಕಲರ್‌ಫುಲ್ ಹೂವಿನ ಗಿಡಗಳನ್ನು ನೆಡಿ. ಈ ರೀತಿಯ ದೊಡ್ಡ ತೊಟ್ಟಿಗಳನ್ನ ಉದ್ಯಾನವನ ಮಧ್ಯದಲ್ಲಿರಿಸಿ. ಇದರಿಂದ ನಿಮ್ಮ ಗಾರ್ಡನ್ ಏರಿಯಾದಲ್ಲಿಯೇ ಬ್ಯುಟಿಫುಲ್ ಆಗುತ್ತದೆ.
4.ಲಾಂಗ್ ಪ್ಲಾಂಟರ್
ಚಿತ್ರದಲ್ಲಿ ತೋರಿಸುವಂತೆ ಸಿಂಥೆಕ್ಸ್ ಟ್ಯಾಂಕ್‌ನ ಉದ್ದವಾಗಿ ಕತ್ತರಿಸಿಕೊಳ್ಳಿ. ವಿಶೇಷವಾಗಿ ಸಣ್ಣ ಮನೆ, ಬಾಲ್ಕನಿ ಮತ್ತು ಸೀಮಿತ ಜಾಗ ಹೊಂದಿರುವವರಿಗೆ ಈ ರೀತಿಯ ಪ್ಲಾಂಟರ್‌ಗಳು ಸುಂದರವಾಗಿ ಕಾಣಿಸುತ್ತವೆ. ಟ್ಯಾಂಕ್ ಉದ್ದವಾಗಿ ಕತ್ತರಿಸಿ, ಗೋಡೆಗೆ ಸರಿಪಡಿಸಿ ಮತ್ತು ಮುಂಭಾಗದಲ್ಲಿ ಸಸ್ಯಗಳಿಗೆ ಪಾಕೆಟ್ ಮಾಡಿಕೊಳ್ಳಬೇಕು. ಮನಿ ಪ್ಲಾಂಟ್‌ಗಳು, ಪೊಥೋಸ್, ಗಿಡಮೂಲಿಕೆಗಳು ಮತ್ತು ಇತರ ಅಲಂಕಾರಿಕ ಸಸ್ಯಗಳನ್ನು ಅದರಲ್ಲಿ ನೆಡಬಹುದು. ಇದು ಜಾಗವನ್ನು ಉಳಿಸುವುದಲ್ಲದೆ ಗೋಡೆಗಳಿಗೆ ಆಕರ್ಷಕ ನೋಟವನ್ನು ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

