Kannada

ಆಕರ್ಷಕ ಸ್ಲಿಮ್‌ ಲುಕ್‌ಗೆ ಚೆಂದದ ಸೊಂಟಪಟ್ಟಿಗಳು

Temple Kamarband: 32 ಇಂಚಿನ ಸೊಂಟವನ್ನ 26 ಇಂಚಿನಷ್ಟೇ ಸಣ್ಣದಾಗಿ ಕಾಣುವಂತೆ ಮಾಡುವ ಟೆಂಪಲ್ ಡಿಸೈನ್‌ನ ಸೊಂಟಪಟ್ಟಿಗಳು

ಈ ಸೊಂಟಪಟ್ಟಿಗಳು ಮಹಿಳೆಯರಿಗೆ ರಾಯಲ್ ಲುಕ್ ನೀಡುತ್ತವೆ.

Kannada

ಸೌಥ್ ಇಂಡಿಯನ್ ಟೆಂಪಲ್ ಸೊಂಟಪಟ್ಟಿಯ ವಿಶೇಷತೆಗಳು

ಟೆಂಪಲ್ ಡಿಸೈನ್ಸ್ ನೆಕ್ಲೇಸ್ ಮಾದರಿಯಲ್ಲಿಯೇ ಇಂದು ಸೊಂಟಪಟ್ಟಿಗಳು ಸಿಗುತ್ತವೆ. ಸಾಂಪ್ರದಾಯಿಕ ಕೆತ್ತನೆಯ ಮಾದರಿಯಲ್ಲಿ ಇವುಗಳು ಸೂಕ್ಷ್ಮವಾದ ಕೆಲಸವನ್ನು ಹೊಂದಿರುತ್ತವೆ.

Image credits: Instagram
Kannada

ಫ್ರಿಲ್ಟ್ ಟೆಂಪಲ್ ಸೊಂಟಪಟ್ಟಿ

ಹೆವಿ ಲುಕ್ ಬಯಸುತ್ತಿದ್ರೆ ಈ ಫ್ರಿಲ್ ಹೊಂದಿರುವ ಟೆಂಪಲ್ ಸೊಂಟಪಟ್ಟಿ ಆಯ್ಕೆ ಮಾಡಿ. ಇದು ಮುಂಭಾಗದಲ್ಲಿ ಟೆಂಪಲ್ ಶೈಲಿಯ ಬ್ರೂಚ್ ಮತ್ತು ಎರಡೂ ಭಾಗದಲ್ಲಿ ಲೇಯರ್ ಚೈನ್ ಹೊಂದಿದೆ.

Image credits: Instagram
Kannada

ಸಿಂಪಲ್ ಸೌಥ್ ಇಂಡಿಯನ್ ಕಮರ್‌ಬಂಧ್

ಕಾಂಜೀವರಂ, ಸಿಲ್ಕ್, ಬನಾರಸಿ ಸೀರೆಗಳಿಗೆ ಈ ರೀತಿಯ ಸಿಂಪಲ್ ಸೊಂಟಪಟ್ಟಿ ಚೆಂದವಾಗಿ ಕಾಣಿಸುತ್ತದೆ. ಇದು ಲಕ್ಷ್ಮೀದೇವಿ ಕೆತ್ತನೆಯನ್ನು ಹೊಂದಿದ್ದು, ಟ್ರೆಡಿಷನಲ್ ಲುಕ್‌ಗೆ ಇದು ಬೆಸ್ಟ್

Image credits: Instagram
Kannada

ಸರ್ಕಲ್ ಡಿಸೈನ್ಸ್ ಸೊಂಟಪಟ್ಟಿ

ಸಣ್ಣ ಮತ್ತು ದೊಡ್ಡದಾದ ಸರ್ಕಲ್‌ನಲ್ಲಿ ಸುಂದರವಾದ ಕೆತ್ತನೆಯ ಡಿಸೈನ್ಸ್‌ ಹೊಂದಿರುವ ಸೊಂಟಪಟ್ಟಿಗಳು ಸಹ ಟ್ರೆಂಡಿಂಗ್‌ನಲ್ಲಿವೆ. ಇದು ಕೆಳಭಾಗದಲ್ಲಿ ಲೇಯರ್ ಹೊಂದಿದ್ದು, ಜೊತೆಗೆ ಸಣ್ಣದಾದ ಜುಮ್ಕಾ ಹೊಂದಿವೆ.

Image credits: Instagram
Kannada

ಹೆವಿ ಟೆಂಪಲ್ ಕಮರ್‌ಬಂದ್

ಮದುವೆ ಸಮಾರಂಭಕ್ಕೆ ಹೆವಿಯಾದ ಸೊಂಟಪಟ್ಟಿ ಬೇಕೇ ಬೇಕು. ವಧುಗಳು ಇಂತಹುವುದೇ ಸೊಂಟಪಟ್ಟಿ ಹಾಕಿದ್ರೆ ಚೆನ್ನಾಗಿ ಕಾಣಿಸುತ್ತದೆ. ಮುಂಭಾಗದಲ್ಲಿ ದೊಡ್ಡದಾದ ಬ್ರೂಚ್, ಹಿಂಭಾಗದಲ್ಲಿ ಬೆಲ್ಟ್ ವಿನ್ಯಾಸ ಹೊಂದಿದೆ.

Image credits: Pinterest
Kannada

ಬೆಲ್ಟ್ ಡಿಸೈನ್ಸ್ ಸೊಂಟಪಟ್ಟಿ

ಸೊಂಟಪಟ್ಟಿ ಜಾರುವ ಭಯವಿದ್ರೆ ಬೆಲ್ಟ್ ಡಿಸೈನ್ಸ್ ಆಯ್ಕೆ ಮಾಡಿಕೊಳ್ಳಿ. ಈ ರೀತಿಯ ಕಮರ್‌ಬಂದ್‌ಗಳು ದಪ್ಪವಾದ ಸೊಂಟವನ್ನು ತೆಳ್ಳಗೆ ಕಾಣುವಂತೆ ಮಾಡುತ್ತದೆ. ಇದರಲ್ಲಿ ಸಿಂಪಲ್, ಹೆವಿ ಲುಕ್ ಸೊಂಟಪಟ್ಟಿ ಸಿಗುತ್ತದೆ.

Image credits: Pinterest
Kannada

ಸಿಂಗಲ್ ಬ್ರೂಚ್‌ ಕಮರ್‌ಬಂದ್

ಸರಳವಾಗಿ ಸೈಲಿಶ್ ಲುಕ್‌ ಬಯಸುತ್ತಿದ್ರೆ ಸಿಂಗಲ್ ಬ್ರೂಷ್ ಸೊಂಟಪಟ್ಟಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಮುಂಭಾಗದಲ್ಲಿ ಸುಂದರವಾದ ಟೆಂಪಲ್ ಡಿಸೈನ್ಸ್ ಮಾದರಿಯ ಬ್ರೂಚ್ ಹೊಂದಿದೆ. ಅಕ್ಕನ ಮದುವೆಯಲ್ಲಿ ಇದನ್ನು ಧರಿಸಿ.

Image credits: Instagram
Kannada

ಟ್ರಿಪಲ್ ಲೇಯರ್ ಚೈನ್ ಸೊಂಟಪಟ್ಟಿ

ಟ್ರಿಪಲ್ ಲೇಯರ್ ಚೈನ್ ಹೊಂದಿರುವ ಪಟ್ಟಿ ಸೊಂಟವನ್ನು ಆಕರ್ಷವಾಗಿ ಕಾಣುವಂತೆ ಮಾಡುತ್ತೆ. ಸಣ್ಣ ಬ್ರೂಚ್, ಚಿನ್ನದ ಮಣಿಗಳ ಜೋಡಣೆ ನಿಮಗೆ ರಾಯಲ್ ಲುಕ್ ನೀಡುತ್ತೆ. ಹಾಗೆಯೇ ಸಪೂರವಾದ ಲುಕ್ ಸಿಗುತ್ತದೆ.

Image credits: Pinterest

ಸೀರೆ, ಕುರ್ತಾಗೆ ಸ್ಟೈಲಿಶ್ ಲುಕ್ ನೀಡುತ್ತೆ ಈ ಟ್ರೆಂಡಿ ಗಾಜಿನ ಬಳೆಗಳ ಡಿಸೈನ್ಸ್!

50ರಲ್ಲೂ ಹುಡುಗಿಯರಂತೆ ಕಾಣಬೇಕಾ? ಈ 7 ಚೈನೀಸ್ ಕಾಲರ್ ಬ್ಲೌಸ್ ಡಿಸೈನ್ ಟ್ರೈ ಮಾಡಿ

ಬೇಬಿ ಶವರ್‌ಗೆ ಬ್ಯೂಟಿ ಕ್ವೀನ್ ಆಗಬೇಕಾ? ಈ ನಥುನಿ ಡಿಸೈನ್ಸ್ ಟ್ರೈ ಮಾಡಿ!

ಪಾದಗಳು ಹೇಗೆಯೇ ಇರಲಿ, ಸುಂದರವಾಗಿಸಿ ರಾಯಲ್ ಟಚ್ ಕೊಡುವ ಬ್ಯೂಟಿಫುಲ್ ಕಾಲ್ಗೆಜ್ಜೆ