ಶ್ರೀಮಂತರಷ್ಟೇ ಅಲ್ಲ, ನಾವೂ ರೋಬೋ ವ್ಯಾಕ್ಯೂಮ್ ಕ್ಲೀನರ್ ಖರೀದಿಸ್ಬೋದು..ಇಲ್ಲಿದೆ ಬಜೆಟ್ ಫ್ರೆಂಡ್ಲಿ ಆಯ್ಕೆ
Best affordable robot vacuum in India: ರೋಬೋ ವ್ಯಾಕ್ಯೂಮ್ ಕ್ಲೀನರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅವುಗಳ ಬೆಲೆ ದುಬಾರಿ ಅಂತ ಅಂದುಕೊಂಡಿದ್ದೇವೆ. ಆದರೆ ಕಡಿಮೆ ಬೆಲೆಯಲ್ಲಿ ಅದ್ಭುತ ಫೀಚರ್‌ಗಳಿರುವ ILIFE A20 ಪ್ರೊ ರೋಬೋ ವ್ಯಾಕ್ಯೂಮ್ ಕ್ಲೀನರ್ ಬಗ್ಗೆ ಇಲ್ಲಿದೆ ಮಾಹಿತಿ.

ILIFE A20 ಪ್ರೊ ರೋಬೋಟ್ ವ್ಯಾಕ್ಯೂಮ್ ಕ್ಲೀನರ್
ಈ ರೋಬೋಟ್ ವ್ಯಾಕ್ಯೂಮ್‌ನಲ್ಲಿ ಅಪ್‌ಗ್ರೇಡ್ ಮಾಡಿದ LiDAR ನ್ಯಾವಿಗೇಷನ್ ತಂತ್ರಜ್ಞಾನವಿದೆ. ಇದು ಮನೆಯ ಮ್ಯಾಪ್ ಅನ್ನು ಸ್ಕ್ಯಾನ್ ಮಾಡಿ, ಯಾವ ಕೋಣೆ ಎಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುತ್ತದೆ. ಫರ್ನಿಚರ್‌ಗೆ ಡಿಕ್ಕಿ ಹೊಡೆಯದೆ, ಮೆಟ್ಟಿಲುಗಳಿಂದ ಕೆಳಗೆ ಬೀಳದಂತೆ ಸುರಕ್ಷಿತವಾಗಿ ಚಲಿಸುತ್ತದೆ. ಮನೆಯಲ್ಲಿ ಹೆಚ್ಚು ಕೋಣೆಗಳಿದ್ದರೂ ಸಮಸ್ಯೆಯಿಲ್ಲ. ಒಂದೇ ಬಾರಿಗೆ 5 ಮಹಡಿಗಳವರೆಗಿನ ಮ್ಯಾಪ್‌ಗಳನ್ನು ಸೇವ್ ಮಾಡಿಕೊಳ್ಳುವ ಅವಕಾಶವಿದೆ. ಪ್ರತಿ ಕೋಣೆಗೆ ಬೇರೆ ಬೇರೆ ಕ್ಲೀನಿಂಗ್ ಸೆಟ್ಟಿಂಗ್‌ಗಳನ್ನು ಇಟ್ಟುಕೊಳ್ಳಬಹುದು. ಮೊಬೈಲ್ ಆ್ಯಪ್ ಮೂಲಕ ವರ್ಚುವಲ್ ವಾಲ್ ಕೂಡ ಸೆಟ್ ಮಾಡಬಹುದು. ಇದರಿಂದ ಅನಗತ್ಯ ಪ್ರದೇಶಗಳಿಗೆ ರೋಬೋಟ್ ಹೋಗುವುದಿಲ್ಲ.

ಪವರ್‌ಫುಲ್ ಸಕ್ಷನ್ ಸಿಸ್ಟಮ್
ILIFE A20 ಪ್ರೊ ರೋಬೋಟ್ ವ್ಯಾಕ್ಯೂಮ್ ಕ್ಲೀನರ್‌ನಲ್ಲಿ ಪವರ್‌ಫುಲ್ ಸಕ್ಷನ್ ಸಿಸ್ಟಮ್ ಇದೆ. ಇದು ನೆಲದ ಮೇಲಿರುವ ಧೂಳು, ಕೂದಲು, ಸಣ್ಣ ಕಸದ ಕಣಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಸಾಂಪ್ರದಾಯಿಕವಾಗಿ ಪೊರಕೆಯಿಂದ ಗುಡಿಸಿದಾಗ ಧೂಳು ಗಾಳಿಯಲ್ಲಿ ಹಾರುತ್ತದೆ. ಆದರೆ ಈ ರೋಬೋ ವ್ಯಾಕ್ಯೂಮ್ ನೇರವಾಗಿ ನೆಲದಿಂದಲೇ ಧೂಳನ್ನು ತೆಗೆದುಹಾಕುವುದರಿಂದ ಮನೆಯ ವಾತಾವರಣ ಹೆಚ್ಚು ಸ್ವಚ್ಛವಾಗಿರುತ್ತದೆ. ವಿಶೇಷವಾಗಿ ಬೆಕ್ಕು, ನಾಯಿಗಳಿರುವ ಮನೆಗಳಿಗೆ ಇದು ತುಂಬಾ ಉಪಯುಕ್ತ. ಸಾಕುಪ್ರಾಣಿಗಳ ಕೂದಲನ್ನು ಕೂಡ ಸಮರ್ಥವಾಗಿ ತೆಗೆದುಹಾಕುತ್ತದೆ. ಕಾರ್ಪೆಟ್ ಮೇಲೆ ಹೋದಾಗ 'ಆಟೋ ಕಾರ್ಪೆಟ್ ಬೂಸ್ಟ್' ಫೀಚರ್ ಮೂಲಕ ಸಕ್ಷನ್ ಪವರ್ ತಾನಾಗಿಯೇ ಹೆಚ್ಚಾಗುತ್ತದೆ. ಬೆಲೆ ವಿಚಾರಕ್ಕೆ ಬಂದರೆ, ಅಮೆಜಾನ್‌ನಲ್ಲಿ ಈ ವ್ಯಾಕ್ಯೂಮ್ ಕ್ಲೀನರ್‌ನ ಮೂಲ ಬೆಲೆ ₹69,999 ಆಗಿದ್ದು, ಬರೋಬ್ಬರಿ 77% ರಿಯಾಯಿತಿಯೊಂದಿಗೆ ₹16,400ಕ್ಕೆ ಲಭ್ಯವಿದೆ. ಇದರೊಂದಿಗೆ, ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಖರೀದಿಸಿದರೆ ಹೆಚ್ಚುವರಿಯಾಗಿ ₹1500 ವರೆಗೆ ರಿಯಾಯಿತಿ ಪಡೆಯಬಹುದು.
ವ್ಯಾಕ್ಯೂಮ್ ಜೊತೆಗೆ ಮಾಪಿಂಗ್ ಫೀಚರ್
ಎಲ್ಲಾ ರೀತಿಯ ಫ್ಲೋರ್‌ಗಳಿಗೆ ಅನುಕೂಲ
ಸ್ಮಾರ್ಟ್ ಕಂಟ್ರೋಲ್, ದೊಡ್ಡ ಬ್ಯಾಟರಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

