ಹಳೆ ಲೆಗ್ಗಿಂಗ್ಸ್‌ನಿಂದ ಹೀಗೂ ಮಾಡಬಹುದಾ? ನೀವೇ ಶಾಕ್ ಆಗ್ತೀರಾ ಈ ಮ್ಯಾಜಿಕ್ ಹ್ಯಾಕ್ಸ್ ನೋಡಿ!
How to reuse old leggings: ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಲೆಗ್ಗಿಂಗ್ಸ್ ಇದ್ದೇ ಇರುತ್ತದೆ. ಕಂಫರ್ಟ್ ಜೊತೆಗೆ ಯಾವುದೇ ಡ್ರೆಸ್‌ಗೂ ಮ್ಯಾಚ್ ಆಗುವ ಲೆಗ್ಗಿಂಗ್ಸ್ ಹಳೆಯದಾಯ್ತು ಅಂತ ಬಿಸಾಡಬೇಡಿ. ಅದರಿಂದ ಏನೆಲ್ಲಾ ಮಾಡಬಹುದು ನೋಡಿ.

ಹಳೆ ಲೆಗ್ಗಿಂಗ್ಸ್‌ಗೆ ಕೊಡಿ ಹೊಸ ಲುಕ್
ನಿಮ್ಮ ಬಳಿ ಯಾವುದೇ ಬಣ್ಣದ ಲೆಗ್ಗಿಂಗ್ಸ್ ಇದ್ದರೂ, ಅದು ಹಳೆಯದಾಗಿದೆ ಎಂದು ಇನ್ನು ಮುಂದೆ ಬಿಸಾಡಬೇಡಿ. ಸ್ವಲ್ಪ ಕ್ರಿಯೇಟಿವ್ ಆಗಿ ಯೋಚಿಸಿದರೆ, ಅದರಿಂದಲೇ ಅದ್ಭುತವಾದ ವಸ್ತುಗಳನ್ನು ತಯಾರಿಸಬಹುದು. ಕ್ಯೂಟ್ ಟೀ-ಶರ್ಟ್‌ನಿಂದ ಹಿಡಿದು, ನಿಮ್ಮ ಕೂದಲನ್ನು ಸುಂದರಗೊಳಿಸುವವರೆಗೆ ಬಳಸಬಹುದು. ಅದು ಹೇಗೆಂದು ಈಗ ನೋಡೋಣ.
ಜೀನ್ಸ್, ಸ್ಕರ್ಟ್ ಮೇಲೆ ಕ್ಯೂಟ್ ಶಾರ್ಟ್ ಟಾಪ್
ನಿಮ್ಮ ಬಳಿ ಇರುವ ಹಳೆಯ ಲೆಗ್ಗಿಂಗ್ಸ್‌ನ ಕಾಲುಗಳ ಭಾಗವನ್ನು ಕತ್ತರಿಸಿ. ನಂತರ, ಕತ್ತರಿಸಿದ ಜಾಗದಲ್ಲಿ ಸ್ವಲ್ಪ ಮಡಚಿ ಹೊಲಿಗೆ ಹಾಕಿದರೆ, ಸುಂದರವಾದ ಕ್ರಾಪ್ ಟಾಪ್ ರೆಡಿ. ಇದನ್ನು ನೀವು ಜೀನ್ಸ್ ಅಥವಾ ಸ್ಕರ್ಟ್ ಮೇಲೆ ಹಾಕಿಕೊಂಡರೆ, ತುಂಬಾ ಕ್ಯೂಟ್ ಆಗಿ ಕಾಣುತ್ತೀರಿ. ಇನ್ನು ಹೊಟ್ಟೆ ಕಾಣದಂತೆ ಶೇಪ್‌ವೇರ್ ಆಗಿಯೂ ಬಳಸಬಹುದು. ಸೊಂಟದ ಭಾಗವನ್ನು ಬೇಕಾದ ಅಳತೆಗೆ ಕತ್ತರಿಸಿ, ಅಂಚುಗಳನ್ನು ಹೊಲಿದರೆ ಸಾಕು.
ಸೈಕಲ್ ಶಾರ್ಟ್ಸ್ ಮತ್ತು ಹೇರ್ ಕರ್ಲರ್
ನಿಮ್ಮ ಉದ್ದವಾದ ಲೆಗ್ಗಿಂಗ್ಸ್ ಇಷ್ಟವಿಲ್ಲದಿದ್ದರೆ, ಅದನ್ನು ಮೊಣಕಾಲಿನವರೆಗೆ ಕತ್ತರಿಸಿ. ನಂತರ ಮಡಚಿ ಹೊಲಿದರೆ ಸೈಕಲ್ ಶಾರ್ಟ್ಸ್ ರೆಡಿ. ಇನ್ನು ಹೀಟ್ ಬಳಸದೆ ಕೂದಲನ್ನು ಕರ್ಲ್ ಮಾಡಲು ಕೂಡ ಲೆಗ್ಗಿಂಗ್ಸ್ ಬಳಸಬಹುದು. ರಾತ್ರಿಯಿಡೀ ಕೂದಲಿಗೆ ಇದನ್ನು ಸುತ್ತಿ ಬಿಟ್ಟರೆ, ಬೆಳಿಗ್ಗೆ ಸುಂದರವಾದ ಕರ್ಲ್ಸ್ ಸಿಗುತ್ತದೆ. ಇದಲ್ಲದೆ, ಹೇರ್ ಬ್ಯಾಂಡ್, ಗ್ಲೌಸ್, ಸೈಕಲ್ ಸೀಟ್ ಕವರ್ ಮತ್ತು ಹೂವಿನ ಕುಂಡಗಳಿಗೆ ಕವರ್‌ಗಳಾಗಿಯೂ ಬಳಸಬಹುದು. ಸ್ವಲ್ಪ ಕ್ರಿಯೇಟಿವ್ ಆಗಿ ಯೋಚಿಸಿದರೆ ಹಣ ಉಳಿತಾಯ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.