- Home
- Life
- Rusty tap cleaning hack: ಈ ಮಿಶ್ರಣದಲ್ಲಿ ಅದ್ದಿ ಜಸ್ಟ್ ಬ್ರಷ್ ಮಾಡಿ.. ತುಕ್ಕು, ಉಪ್ಪಿನ ಕಲೆ ಎಲ್ಲವೂ ಮಾಯ
Rusty tap cleaning hack: ಈ ಮಿಶ್ರಣದಲ್ಲಿ ಅದ್ದಿ ಜಸ್ಟ್ ಬ್ರಷ್ ಮಾಡಿ.. ತುಕ್ಕು, ಉಪ್ಪಿನ ಕಲೆ ಎಲ್ಲವೂ ಮಾಯ
How to remove rust from taps: ಬಾತ್‌ರೂಂ ನಲ್ಲಿಗಳಿಗೆ ತುಕ್ಕು ಹಿಡಿದು ಹಾಳಾಗಿದ್ಯಾ? ಹೊಸ ನಲ್ಲಿ ಹಾಕಿಸೋ ಮುನ್ನ ಈ ಟಿಪ್ಸ್ ನೋಡಿ! ಕಿಚನ್‌ನಲ್ಲಿರೋ ಮೂರೇ ಮೂರು ಪದಾರ್ಥದಿಂದ ಹಳೆಯ ನಲ್ಲಿಯನ್ನು ಹೊಚ್ಚ ಹೊಸದರಂತೆ ಮಾಡುವ ಸೂಪರ್ ವೈರಲ್ ಹ್ಯಾಕ್ ಇಲ್ಲಿದೆ.
ದುಬಾರಿ ಖರ್ಚು ಮಾಡಬೇಕಿಲ್ಲ
ದುಬಾರಿ ಖರ್ಚು ಮಾಡಬೇಕಿಲ್ಲ
ಮನೆಯ ಬಾತ್‌ರೂಂ ಅಥವಾ ಅಡುಗೆ ಮನೆಯಲ್ಲಿರುವ ವಾಟರ್ ಟ್ಯಾಪ್‌ಗಳು (ನಲ್ಲಿಗಳು) ಹಳೆಯದಾಗುತ್ತಿದ್ದಂತೆ ಅಥವಾ ನೀರಿನಲ್ಲಿ ಉಪ್ಪಿನಂಶ ಹೆಚ್ಚಿದ್ದಾಗ ತುಕ್ಕು (Rust) ಹಿಡಿಯುವುದು ಸಾಮಾನ್ಯ. ಒಮ್ಮೆ ನಲ್ಲಿಗಳಿಗೆ ಕಂದು ಬಣ್ಣದ ತುಕ್ಕು ಹಿಡಿದರೆ ಅವು ನೋಡಲು ಅಸಹ್ಯವಾಗಿ ಕಾಣುತ್ತವೆ. ಇಂತಹ ತುಕ್ಕು ಹಿಡಿದ ನಲ್ಲಿಗಳನ್ನು ಕ್ಲೀನ್ ಮಾಡುವುದು ಕಷ್ಟವೆಂದು ಹಲವರು ಹೊಸ ನಲ್ಲಿಯನ್ನೇ ಬದಲಾಯಿಸಲು ಮುಂದಾಗುತ್ತಾರೆ. ಆದರೆ, ಇನ್ನು ಮುಂದೆ ದುಬಾರಿ ಖರ್ಚು ಮಾಡಿ ನಲ್ಲಿಗಳನ್ನು ಬದಲಾಯಿಸುವ ಅಗತ್ಯವೇ ಇಲ್ಲ!
ಐದೇ ನಿಮಿಷದಲ್ಲಿ ಫಳಫಳನೆ ಹೊಳೆಯುತ್ತೆ
ಐದೇ ನಿಮಿಷದಲ್ಲಿ ಫಳಫಳನೆ ಹೊಳೆಯುತ್ತೆ
ತುಕ್ಕು ಹಿಡಿದ ನಲ್ಲಿಗಳನ್ನು ಕೇವಲ ಎರಡೇ ನಿಮಿಷದಲ್ಲಿ ಹೊಸದಾಗಿ ಅಂಗಡಿಯಿಂದ ತಂದ ನಲ್ಲಿಯಂತೆ ಫಳಫಳನೆ ಹೊಳೆಯುವಂತೆ ಮಾಡುವ ಅದ್ಭುತ ಮನೆಮದ್ದು ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹಠಮಾರಿ ತುಕ್ಕು ನಿವಾರಣೆಗೆ
ಹಠಮಾರಿ ತುಕ್ಕು ನಿವಾರಣೆಗೆ
ಇನ್‌ಸ್ಟಾಗ್ರಾಮ್‌ನ ‘ರೂಪಾಲಿ ಕುಕ್ರೇಟಿ ಡೈರೀಸ್’ ಎಂಬ ಪೇಜ್‌ನಲ್ಲಿ ಈ ಉಪಯುಕ್ತ ಹ್ಯಾಕ್ ಅನ್ನು ಹಂಚಿಕೊಳ್ಳಲಾಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ಅಡುಗೆ ಮನೆಯಲ್ಲಿರುವ ಮೂರು ವಸ್ತುಗಳನ್ನು ಬಳಸಿ ಹಠಮಾರಿ ತುಕ್ಕು ನಿವಾರಿಸುವುದು ಹೇಗೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ.
ಕ್ಲೀನ್ ಮಾಡುವ ಸುಲಭ ವಿಧಾನ
ಕ್ಲೀನ್ ಮಾಡುವ ಸುಲಭ ವಿಧಾನ
*ಮೊದಲಿಗೆ ಒಂದು ಸಣ್ಣ ಬೌಲ್‌ಗೆ ಸ್ವಲ್ಪ ಉಪ್ಪು (Salt), ಬೇಕಿಂಗ್ ಸೋಡಾ (Baking Soda) ಮತ್ತು ವಿನೆಗರ್ (Vinegar) ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. (ಇವುಗಳನ್ನು ಬೆರೆಸಿದಾಗ ನೊರೆಯಂತಹ ರಿಯಾಕ್ಷನ್ ಉಂಟಾಗುತ್ತದೆ).
*ಈಗ ಒಂದು ಹಳೆಯ ಟೂತ್‌ಬ್ರಷ್ (Toothbrush) ತೆಗೆದುಕೊಂಡು, ಈ ಮ್ಯಾಜಿಕ್ ಮಿಶ್ರಣದಲ್ಲಿ ಅದ್ದಿ. ನಂತರ ನಲ್ಲಿಯ ಎಲ್ಲೆಲ್ಲಿ ತುಕ್ಕು, ಕಲೆ ಅಥವಾ ಉಪ್ಪಿನ ಕಲೆಗಳಿವೆಯೋ ಅಲ್ಲಿ ಚೆನ್ನಾಗಿ ಉಜ್ಜಿ (ಸ್ಕ್ರಬ್ ಮಾಡಿ).
*ಉಜ್ಜಿದ ನಂತರ ಕೇವಲ 2 ನಿಮಿಷ ಹಾಗೆಯೇ ಬಿಟ್ಟು, ಸಾಧಾರಣ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿದರೆ ಸಾಕು.
ಮನೆಯಲ್ಲಿ ಟ್ರೈ ಮಾಡಿ ನೋಡಿ!
ಮನೆಯಲ್ಲಿ ಟ್ರೈ ಮಾಡಿ ನೋಡಿ!
ಅದೆಷ್ಟೇ ಹಳೆಯದಾದ, ತುಕ್ಕು ಹಿಡಿದ ನಲ್ಲಿಯೂ ಸಹ ಈಗಷ್ಟೇ ಶೋರೂಂನಿಂದ ತಂದು ಫಿಟ್ ಮಾಡಿದ ಹೊಚ್ಚ ಹೊಸ ನಲ್ಲಿಯಂತೆ ಮಿನುಗುತ್ತದೆ. ಕಿಂಚಿತ್ತೂ ಹಣ ಖರ್ಚು ಮಾಡದೆ, ನಲ್ಲಿ ಬದಲಿಸುವ ತಾಪತ್ರಯವಿಲ್ಲದೆ ಈ ಕೆಲಸ ಮಾಡಬಹುದು. ನೀವೂ ಒಮ್ಮೆ ಈ ಸುಲಭ ಉಪಾಯವನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.