MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಮಾರುಕಟ್ಟೆಯಿಂದ ತರೋದೇ ಬೇಡ.. ಕೇವಲ 15-20 ದಿನದಲ್ಲಿ ಸೊಂಪಾದ ಹಸಿರು ಕೊತ್ತಂಬರಿ ಸೊಪ್ಪು ಮನೆಯಲ್ಲೇ ರೆಡಿ!

ಮಾರುಕಟ್ಟೆಯಿಂದ ತರೋದೇ ಬೇಡ.. ಕೇವಲ 15-20 ದಿನದಲ್ಲಿ ಸೊಂಪಾದ ಹಸಿರು ಕೊತ್ತಂಬರಿ ಸೊಪ್ಪು ಮನೆಯಲ್ಲೇ ರೆಡಿ!

How to grow coriander at home: ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಸೊಪ್ಪು ಫ್ರಿಡ್ಜ್‌ನಲ್ಲಿಟ್ಟರೂ ಬೇಗನೆ ಕೊಳೆತು ನಾರುತ್ತಿದ್ಯಾ? ಹಾಗಿದ್ದರೆ ಅಡುಗೆಮನೆಯಲ್ಲಿರುವ ಧನಿಯಾ ಬೀಜಗಳಿಂದಲೇ ಕುಂಡದಲ್ಲಿ ಕೇವಲ 15 ರಿಂದ 20 ದಿನದಲ್ಲಿ ಕೊತ್ತಂಬರಿ ಸೊಪ್ಪನ್ನು ಬೆಳೆಯುವ ಟ್ರಿಕ್ ಇಲ್ಲಿದೆ..

2 Min read
Author : Ashwini HR
Published : Oct 22 2026, 11:05 AM IST
Share this Photo Gallery
  • FB
  • TW
  • Linkdin
  • Whatsapp
17
ವರ್ಷಪೂರ್ತಿ ಫ್ರೆಶ್ ಕೊತ್ತಂಬರಿ ಸೊಪ್ಪನ್ನು ಪಡೆಯಲು
Image Credit : YT

ವರ್ಷಪೂರ್ತಿ ಫ್ರೆಶ್ ಕೊತ್ತಂಬರಿ ಸೊಪ್ಪನ್ನು ಪಡೆಯಲು

ವರ್ಷಪೂರ್ತಿ ಫ್ರೆಶ್ ಕೊತ್ತಂಬರಿ ಸೊಪ್ಪನ್ನು ಪಡೆಯಲು
ಮಾರುಕಟ್ಟೆಯಲ್ಲಿ ಸಿಗುವ ಕೊತ್ತಂಬರಿ ಸೊಪ್ಪಿನಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಿರುತ್ತದೆ ಮತ್ತು ಮನೆಗೆ ತಂದ ಎರಡೇ ದಿನಕ್ಕೆ ಕೊಳೆತುಹೋಗುತ್ತದೆ. ಆದರೆ ಅಡುಗೆಮನೆಯಲ್ಲಿರುವ ಧನಿಯಾ ಬೀಜಗಳಿಂದಲೇ ನಿಮ್ಮ ಮನೆಯ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ವರ್ಷಪೂರ್ತಿ ಫ್ರೆಶ್ ಕೊತ್ತಂಬರಿ ಸೊಪ್ಪನ್ನು ಪಡೆಯಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಕೊತ್ತಂಬರಿ ಬೆಳೆಯುವ ಸರಳ ಹಂತಗಳು
Image Credit : Instagram

ಕೊತ್ತಂಬರಿ ಬೆಳೆಯುವ ಸರಳ ಹಂತಗಳು

1. ಬೀಜಗಳನ್ನು 2 ಹೋಳು ಮಾಡುವ ಸೀಕ್ರೆಟ್ ಟ್ರಿಕ್ (Seed Splitting)
ಕೊತ್ತಂಬರಿ ಬೇಗನೆ ಮೊಳಕೆಯೊಡೆಯದಿರಲು ಮುಖ್ಯ ಕಾರಣ ಬೀಜಗಳನ್ನು ಹಾಗೇ ಬಿತ್ತುವುದು.
ಧನಿಯಾ ಬೀಜಗಳನ್ನು (Coriander seeds) ಚಪಾತಿ ಲಟ್ಟಣಿಗೆಯಿಂದ ಅಥವಾ ಕೈಯಿಂದ ಲಘುವಾಗಿ ಉಜ್ಜಿ ಎರಡು ಹೋಳುಗಳನ್ನಾಗಿ (2 Halves) ಮಾಡಿಕೊಳ್ಳಿ.
ಬೀಜ ಪುಡಿಯಾಗಬಾರದು, ಕೇವಲ 2 ಭಾಗಗಳಾಗಬೇಕು. ಇದರಿಂದ ಪ್ರತಿಯೊಂದು ಬೀಜವೂ ನೂರಕ್ಕೆ ನೂರು ಮೊಳಕೆಯೊಡೆಯುತ್ತದೆ.

Related Articles

Related image1
ಮಲ್ಲಿಗೆ ಹೂ 5-7 ದಿನದವರೆಗೆ ಈಗಷ್ಟೇ ಗಿಡದಿಂದ ಕಿತ್ತಂತೆ ಫ್ರೆಶ್ ಆಗಿರ್ಬೇಕಾ? ಇಷ್ಟು ಮಾಡಿ ಸಾಕು
Related image2
ಸಣ್ಣ ತುಳಸಿ ಗಿಡವೂ ಹೆಮ್ಮರದಂತೆ ದಟ್ಟವಾಗಿ ಬೆಳೆಯಬೇಕಾ? ಗಾರ್ಡನರ್ ಹೇಳುವ ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡ್ರಿ
37
2. ಸರಿಯಾದ ಕುಂಡ (Pot) ಆಯ್ಕೆಮಾಡಿ
Image Credit : Others

2. ಸರಿಯಾದ ಕುಂಡ (Pot) ಆಯ್ಕೆಮಾಡಿ

2. ಸರಿಯಾದ ಕುಂಡ (Pot) ಆಯ್ಕೆಮಾಡಿ
ಕೊತ್ತಂಬರಿ ಗಿಡದ ಬೇರುಗಳು ಆಳಕ್ಕೆ ಇಳಿಯುವುದಿಲ್ಲ. ಹಾಗಾಗಿ ಆಳವಾದ ಕುಂಡಕ್ಕಿಂತ ಅಗಲವಾದ ಮತ್ತು ಕೇವಲ 4 ರಿಂದ 5 ಇಂಚು ಆಳವಿರುವ ಟ್ರೇ ಅಥವಾ ಕುಂಡ ಇದಕ್ಕೆ ಹೇಳಿಮಾಡಿಸಿದ್ದು. ಕುಂಡದ ಕೆಳಭಾಗದಲ್ಲಿ ನೀರು ಸರಾಗವಾಗಿ ಹರಿದುಹೋಗಲು ತೂತುಗಳಿರಲಿ.

47
3. ಮಣ್ಣಿನ ಮಿಶ್ರಣ (Potting Mix)
Image Credit : Instagram

3. ಮಣ್ಣಿನ ಮಿಶ್ರಣ (Potting Mix)

3. ಮಣ್ಣಿನ ಮಿಶ್ರಣ (Potting Mix)
40% ಸಾಮಾನ್ಯ ಮಣ್ಣು, 30% ಕೋಕೋಪೀಟ್ ಮತ್ತು 30% ಎರೆಹುಳು ಗೊಬ್ಬರ (ವರ್ಮಿ ಕಂಪೋಸ್ಟ್) ಬೆರೆಸಿ ಕುಂಡಕ್ಕೆ ತುಂಬಿಸಿ. ಮಣ್ಣು ಸಡಿಲವಾಗಿದ್ದರೆ ಬೇರುಗಳು ಬೇಗನೆ ಹರಡುತ್ತವೆ.

57
4. ಬಿತ್ತುವ ವಿಧಾನ
Image Credit : Instagram

4. ಬಿತ್ತುವ ವಿಧಾನ

4. ಬಿತ್ತುವ ವಿಧಾನ
ಎರಡು ಹೋಳು ಮಾಡಿದ ಬೀಜಗಳನ್ನು ಮಣ್ಣಿನ ಮೇಲೆ ಸಮನಾಗಿ ಉದುರಿಸಿ.
ಬೀಜಗಳ ಮೇಲೆ ಕೇವಲ ಅರ್ಧ ಇಂಚಿನಷ್ಟು ತೆಳುವಾದ ಮಣ್ಣು ಅಥವಾ ಕೋಕೋಪೀಟ್ ಹಾಕಿ ಮುಚ್ಚಿ (ಬೀಜಗಳು ತುಂಬಾ ಆಳಕ್ಕೆ ಹೋಗಬಾರದು).

67
5. ನೀರು ಹಾಕುವಾಗ ಈ ತಪ್ಪು ಮಾಡ್ಬೇಡಿ (Use Spray Only)
Image Credit : Gemini AI

5. ನೀರು ಹಾಕುವಾಗ ಈ ತಪ್ಪು ಮಾಡ್ಬೇಡಿ (Use Spray Only)

5. ನೀರು ಹಾಕುವಾಗ ಈ ತಪ್ಪು ಮಾಡ್ಬೇಡಿ (Use Spray Only)
ಮಗ್ ಅಥವಾ ಪೈಪ್‌ನಿಂದ ರಭಸವಾಗಿ ನೀರು ಸುರಿಯಬೇಡಿ. ಇದರಿಂದ ಬೀಜಗಳು ಕೊಚ್ಚಿಹೋಗುತ್ತವೆ ಅಥವಾ ಮಣ್ಣಿನ ಕೆಳಗೆ ಹುದುಗಿ ಕೊಳೆತುಹೋಗುತ್ತವೆ. ಯಾವಾಗಲೂ ಸ್ಪ್ರೇ ಬಾಟಲ್ ಮೂಲಕ ಮಣ್ಣು ತೇವವಾಗುವಂತೆ ಮಾತ್ರ ನೀರು ಸಿಂಪಡಿಸಿ.

77
6. ಬಿಸಿಲು ಮತ್ತು ಸ್ಥಳ
Image Credit : Kannada Prabha

6. ಬಿಸಿಲು ಮತ್ತು ಸ್ಥಳ

6. ಬಿಸಿಲು ಮತ್ತು ಸ್ಥಳ
ಕುಂಡವನ್ನು ದಿನಕ್ಕೆ ಕೇವಲ 2 ರಿಂದ 3 ಗಂಟೆ ಮುಂಜಾನೆಯ ಎಳೆಬಿಸಿಲು ಬೀಳುವ ಜಾಗದಲ್ಲಿಡಿ. ಸುಡುವ ಮಧ್ಯಾಹ್ನದ ಬಿಸಿಲಿನಲ್ಲಿಟ್ಟರೆ ಎಲೆಗಳು ಒಣಗಿಹೋಗುತ್ತವೆ.

ಕೇವಲ 7 ರಿಂದ 8 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. 15 ರಿಂದ 20 ದಿನಗಳ ಹೊತ್ತಿಗೆ ಅಡುಗೆಗೆ ಬಳಸುವಷ್ಟು ಸೊಂಪಾದ, ಹಸಿರಾದ ಕೊತ್ತಂಬರಿ ಸೊಪ್ಪು ಸಿದ್ಧವಾಗುತ್ತದೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
 

Latest Videos
Recommended Stories
Recommended image1
ಬೆಳಗ್ಗೆ ತಿಂಡಿ ತಿಂದರೂ ರಾತ್ರಿ ಊಟದ ಚಿಂತೆ! ದುಬೈನಲ್ಲಿ ಭಾರತೀಯ ಪುರೋಹಿತರ ಕಷ್ಟದ ದಿನಗಳು
Recommended image2
ಇಡ್ಲಿ, ದೋಸೆಗೆ ಕೊಬ್ಬರಿ ಚಟ್ನಿ ಬದಲು ದಾಳಿಂಬೆ ಚಟ್ನಿ ಟ್ರೈ ಮಾಡಿ, ಸಖತ್ ರುಚಿ! ಇಲ್ಲಿದೆ ಹೊಸ ರೆಸಿಪಿ!
Recommended image3
ಇಡ್ಲಿಗೆ ಬಟರ್ ಚಿಕನ್ ಸ್ಟಫಿಂಗ್! ವೈರಲ್ ಡಿಶ್ ಕಂಡು ನೆಟ್ಟಿಗರ ಆಕ್ರೋಶ, 20 ವರ್ಷ ಜೈಲು ಶಿಕ್ಷೆ ಎಂದಿದ್ದೇಕೆ?
Related Stories
Recommended image1
ಮಲ್ಲಿಗೆ ಹೂ 5-7 ದಿನದವರೆಗೆ ಈಗಷ್ಟೇ ಗಿಡದಿಂದ ಕಿತ್ತಂತೆ ಫ್ರೆಶ್ ಆಗಿರ್ಬೇಕಾ? ಇಷ್ಟು ಮಾಡಿ ಸಾಕು
Recommended image2
ಸಣ್ಣ ತುಳಸಿ ಗಿಡವೂ ಹೆಮ್ಮರದಂತೆ ದಟ್ಟವಾಗಿ ಬೆಳೆಯಬೇಕಾ? ಗಾರ್ಡನರ್ ಹೇಳುವ ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡ್ರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved