MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ನಮ್ಮ ಪೂರ್ವಜನರು ಆಕಾಶ ನೋಡಿ ಮಳೆ ಭವಿಷ್ಯ ಹೇಗೆ ಹೇಳುತ್ತಿದ್ದರು?

ನಮ್ಮ ಪೂರ್ವಜನರು ಆಕಾಶ ನೋಡಿ ಮಳೆ ಭವಿಷ್ಯ ಹೇಗೆ ಹೇಳುತ್ತಿದ್ದರು?

ಇತ್ತೀಚೆಗೆ ತೀವ್ರ ಹವಾಮಾನ ಬದಲಾವಣೆಯಿಂದಾಗ ಋತುಗಳೇ ಏರುಪೇರಾಗಿವೆ. ಬರುವ ಕಾಲಕ್ಕೆ ಮಳೆ ಬರುತ್ತಿಲ್ಲ. ಮಳೆಗಾಲದಲ್ಲಿ ಬರ, ಬರಗಾಲದಲ್ಲಿ ಮಳೆ ಎಂಬಂತಾಗಿದೆ. ಆದರೆ ನಮ್ಮ ಪೂರ್ವಜನರು ಅದ್ಹೇಗೆ ಕರಾರುವಕ್ಕು ಮಳೆ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು?

3 Min read
Author : Ravi Janekal
Published : Jul 24 2026, 12:22 PM IST
Share this Photo Gallery
  • FB
  • TW
  • Linkdin
  • Whatsapp
17
ಟೆಕ್ನಾಲಜಿ ಇಲ್ಲದ ನಮ್ಮ ಪೂರ್ವಜನರು ಹವಾಮಾನ ಹೇಗೆ ಗುರುತಿಸುತ್ತಿದ್ದರು?
Image Credit : Asianet News

ಟೆಕ್ನಾಲಜಿ ಇಲ್ಲದ ನಮ್ಮ ಪೂರ್ವಜನರು ಹವಾಮಾನ ಹೇಗೆ ಗುರುತಿಸುತ್ತಿದ್ದರು?

ಇತ್ತೀಚೆಗೆ ತೀವ್ರ ಹವಾಮಾನ ಬದಲಾವಣೆಯಿಂದಾಗ ಋತುಗಳೇ ಏರುಪೇರಾಗಿವೆ. ಬರುವ ಕಾಲಕ್ಕೆ ಮಳೆ ಬರುತ್ತಿಲ್ಲ. ಮಳೆಗಾಲದಲ್ಲಿ ಬರ, ಬರಗಾಲದಲ್ಲಿ ಮಳೆ ಎಂಬಂತೆ ಯಾವಾಗ ಮಳೆ ಬರುತ್ತದೆ ಎಂದು ಕರಾರುವಕ್ಕಾಗಿ ಊಹಿಸುವುದು ಕೂಡ ಈಗ ಕಷ್ಟಸಾಧ್ಯವಾಗಿದೆ. ಆದರೆ ಈಗ ಕುತೂಹಲಕಾರಿ ಪ್ರಶ್ನೆ ಎಂದರೆ ನಮ್ಮ ಪೂರ್ವಜನರು ಅದ್ಹೇಗೆ ಕರಾರುವಕ್ಕು ಮಳೆ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು?

ಹೀಗೊಂದು ಘಟನೆ ನಡೆದಿತ್ತು:

ಅಪ್ಪನ ತಾಯಿಗೆ ಬರೋಬ್ಬರಿ ಎಂಬತ್ತು ವರ್ಷ ವಯಸ್ಸಾಗಿತ್ತು. ನಮ್ಮದು ಗುಡ್ಡದ ಬಳಿಯ ಜಮೀನು, ಗುಡ್ಡದ ಹಿಂಬಂದಿ ಮೋಡವೂ ಕಾಣಿಸಿದಷ್ಟು ಜಮೀನಿಗೆ ಗುಡ್ಡ ಹತ್ತಿರ. ಹೀಗೆ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಇದ್ದಕ್ಕಿಂತ ವಾತಾವರಣದಲ್ಲಿ ಸೂಕ್ಷ್ಮ ಬದಲಾವಣೆ ಗಮನಿಸಿದ ಅಜ್ಜಿ, 'ಮಳೆ ಬರೋ ಹೊತ್ತು ಆಗಿದೆ. ಮನೆಗೆ ಹೋಗೋಣು ನಡೀರಿ' ಎಂದಳು. ನಾವು ಅಜ್ಜಿಯ ಮಾತು ನಂಬಲಿಲ್ಲ. ಕಾರಣ ಮಳೆ ಬರುವ ಲಕ್ಷಣ ನಮಗ್ಯಾರಿಗೂ ಕಾಣಿಸಲಿಲ್ಲ. ಅಜ್ಜಿ ಹೇಳಿದ ಮೂವತ್ತು ನಿಮಿಷದೊಳಗೆ ಗುಡ್ಡದ ಹಿಂಬದಿಯಿಂದ ದಟ್ಟ ಮೋಡಗಳು ಕಾಣಿಸಲಾರಂಭಿಸಿದವು. ಮೋಡ ನೋಡಿದ ಬಳಿಕ ಕೃಷಿ ಕೆಲಸ ಬಿಟ್ಟು ಮನೆಗೆ ತಲುಪುವ ವೇಳೆ ಒದ್ದೆಯಾಗಿದ್ದೆವು. ಈ ಘಟನೆ ಇನ್ನೂ ನೆನಪಿದೆ ಮತ್ತು ಕಾಡುತ್ತಿದೆ. ಈ ಅಜ್ಜಿಗೆ ಅದ್ಹೇಗೆ ಗೊತ್ತಾಯ್ತು ಎಂಬುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಯಾವುದೇ ವೆದರ್ ಆಪ್ ಇಲ್ಲದೆ ಪೂರ್ವಜರ ಮಳೆ ಮುನ್ಸೂಚನೆ ಊಹಿಸುತ್ತಿದ್ದರು?
Image Credit : Asianet News

ಯಾವುದೇ ವೆದರ್ ಆಪ್ ಇಲ್ಲದೆ ಪೂರ್ವಜರ ಮಳೆ ಮುನ್ಸೂಚನೆ ಊಹಿಸುತ್ತಿದ್ದರು?

ಪುರಾತನ ಕಾಲದಿಂದ ಹಿಡಿದು ಇತ್ತೀಚಿನ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನವರೆಗೂ ಸ್ಯಾಟಲೈಟ್, ವೆದರ್ ಆಪ್ ಗಳು ಈಗಿನಷ್ಟು ಅಭಿವೃದ್ಧಿ ಹೊಂದಿರಲಿಲ್ಲ. ಮೊಬೈಲ್‌ಗಳಂತೂ ಇದ್ದಿರಲಿಲ್ಲ. ಆದರೂ ನಮ್ಮ ಪೂರ್ವಜನರು ಹವಾಮಾನ ಬದಲಾವಣೆಗಳನ್ನ ವಾರಗಳ ಮುಂಚೆಯೇ ಗ್ರಹಿಸುತ್ತಿದ್ದರು. ಇದು ಕೇವಲ ಊಹೆ ಅಲ್ಲ. ಸಾವಿರಾರು ವರ್ಷಗಳ ಹಿಂದಿನಿಂದ ಹರಿದುಬಂದ ಅನುಭವವಾಗಿತ್ತು.

 ಒಂದು ವೇಳೆ ಹವಾಮಾನ ತಪ್ಪು ಊಹಿಸಿದರೆ ಸಂಪೂರ್ಣ ಬುಡಕಟ್ಟು ನಾಶವಾಗುವ ಸಾಧ್ಯತೆ ಇತ್ತು. ಏಕೆಂದರೆ ಇಂದಿನಂತೆ ಒಂದೆಡೆ ನೆಲೆ ನಿಲ್ಲುತ್ತಿರಲಿಲ್ಲ, ಕಾಲ ಹವಾಮಾನ ಬದಲಾವಣೆಗೆ ತಕ್ಕಂತೆ ಸ್ಥಳಾಂತರವಾಗುತ್ತಿದ್ದರು. ಆಹಾರ ಸಂಗ್ರಹ, ಆಶ್ರಯ ಮತ್ತು ವಲಸೆಯ ನಿರ್ಧಾರಗಳು ಹವಾಮಾನ ಸಂಕೇತಗಳ ಮೇಲೆಯೇ ಅವಲಂಬಿತವಾಗಿತ್ತು. ಆದರೆ ಇಂದು ನಾವು ಮರೆತಿರುವ ಈ ಜ್ಞಾನವು ಇಂದಿನ ಕ್ಲೈಮೇಟ್ ಸಂಶೋಧನೆಗೂ ಸಹಾಯಕವಾಗುತ್ತಿದೆ.

Related Articles

Related image1
ಭೂಮಿಯ ಚಲನೆಯನ್ನೇ ನಿಧಾನಗೊಳಿಸಿದ ಹವಾಮಾನ ಬದಲಾವಣೆ; ವಿಜ್ಞಾನಿಗಳಿಂದ ಆಘಾತಕಾರಿ ಸುದ್ದಿ ಬಹಿರಂಗ!
Related image2
2050ರ ಹೊತ್ತಿಗೆ ಲಕ್ಷಾಂತರ ಜನ ಸಾಯ್ತಾರಾ? ಹವಾಮಾನ ಬದಲಾವಣೆ ಬಗ್ಗೆ ಭಯಾನಕ ವರದಿ!
37
ಉಣ್ಣೆಯ ಕ್ಯಾಟರ್‌ಪಿಲ್ಲರ್ ಪ್ರಕೃತಿಯ ಮುನ್ಸೂಚಕ!
Image Credit : Asianet News

ಉಣ್ಣೆಯ ಕ್ಯಾಟರ್‌ಪಿಲ್ಲರ್ ಪ್ರಕೃತಿಯ ಮುನ್ಸೂಚಕ!

ವೂಲಿ ಬೇರ್ ಕ್ಯಾಟರ್‌ಪಿಲ್ಲರ್‌(woolly bear caterpillar) ನೀವು ಈ ಹುಳುವನ್ನ ಮಳೆಗಾಲದಲ್ಲಿ ಮೊದಲು ಮನೆಯಂಗಳದಲ್ಲಿ ನಿಧಾನವಾಗಿ ತೆವಳುತ್ತ ಸಾಗುವುದು ನೋಡಿಯೇ ಇರುತ್ತೀರಿ. ಅದರ ಸುತ್ತಲು ದಟ್ಟ ಕೂದಲುಗಳು ಇರುತ್ತದೆ ಮಧ್ಯೆದಲ್ಲಿ ಬ್ರೌನ್ ಬ್ಯಾಂಡ್ ದಪ್ಪವಾಗಿದ್ದರೆ ಚಳಿಗಾಲ ಸಾಧಾರಣವಾಗಿರುತ್ತದೆ ಎಂದು ನಂಬಿದ್ದರು. ಅದೇ ಕಪ್ಪು ಬ್ಯಾಂಡ್ ಹೆಚ್ಚಾದರೆ ತೀವ್ರ ಚಳಿ ಬರುತ್ತದೆ. ಇದು ಒಂದು ಸಿಗ್ನಲ್ ಮಾತ್ರವಲ್ಲ, ಸಾವಿರಾರು ವರ್ಷಗಳ ಅನುಭವದಿಂದ ಬಂದ ಕರಾರುವಕ್ಕು ಮಾಹಿತಿಯಾಗಿತ್ತು.

47
ನಕ್ಷತ್ರಗಳು ಆಕಾಶವೇ ಕ್ಯಾಲೆಂಡರ್, ಸಮಯ
Image Credit : Asianet News

ನಕ್ಷತ್ರಗಳು ಆಕಾಶವೇ ಕ್ಯಾಲೆಂಡರ್, ಸಮಯ

ಪ್ರಾಚೀನ ಕಾಲದಲ್ಲಿ ಕ್ಯಾಲೆಂಡರ್ ಆಗಲಿ, ಮುನ್ಸೂನೆ ನೀಡುವ ಆಪ್ ಆಗಲಿ ಇರಲಿಲ್ಲ. ಆಗ ಪೂರ್ವಜರು ರಾತ್ರಿ ಆಕಾಶವನ್ನೇ ಗಡಿಯಾರನ್ನಾಗಿ, ಕ್ಯಾಲೆಂಡರ್ ಆಗಿ ಬಳಸುತ್ತಿದ್ದರು. ಅದ್ಹೇಗೆ ಎಂಬ ಕುತೂಹಲವೇ? ಹೌದು, ಪೂರ್ವಜರು ಪ್ಲೀಯಾಡಿಸ್ ನಕ್ಷತ್ರ ಗುಂಪು(ಸೆವೆನ್ ಸಿಸ್ಟರ್ಸ್) ನಿರ್ದಿಷ್ಟ ಕೋನದಲ್ಲಿ ಕಾಣಿಸಿದರೆ 6 ವಾರಗಳಲ್ಲಿ ಚಳಿ ಬರುತ್ತದೆ ಎಂದು ಅರಿತಿದ್ದರು. ಭಾರತದಲ್ಲಿ ಪ್ರಾಚೀನ ಕಾಲದಿಂದ ಈ ವಿಧಾನ ಬಳಸುತ್ತಿದ್ದರು. ಇನ್ನು ಬೆಳಗಿನ ಜಾವ ಮೂರು ನಾಲ್ಕಕ್ಕೆ ಕಾಣಿಸಿಕೊಳ್ಳುವ ಬೆಳ್ಳಿ ಚುಕ್ಕಿ(ಶುಕ್ರಗ್ರಹ)ವನ್ನು ಬೆಳಗಿನ ಸಮಯವಾಗಿ ಉಪಯೋಗಿಸುತ್ತಿದ್ದರು. ಬೆಳಗಿನಲ್ಲಿ ಪೂರ್ವ ದಿಕ್ಕಿಗೆ ಪ್ರಕಾಶಮಾನವಾಗಿ ಈ ಚುಕ್ಕಿ ಕಾಣಿಸಿಕೊಂಡರೆ ಬೆಳಗಾಯಿತು ಎಂದೇ ಅರ್ಥ.

57
ಪ್ರಾಣಿಗಳಿಂದಲೂ, ಸಸ್ಯಗಳಿಂದಲೂ ಹವಾಮಾನ ಬದಲಾವಣೆ ಗುರುತಿಸುತ್ತಿದ್ದರು!
Image Credit : Asianet News

ಪ್ರಾಣಿಗಳಿಂದಲೂ, ಸಸ್ಯಗಳಿಂದಲೂ ಹವಾಮಾನ ಬದಲಾವಣೆ ಗುರುತಿಸುತ್ತಿದ್ದರು!

ವಾತಾವರಣದ ಒತ್ತಡ ಬದಲಾವಣೆಯನ್ನು ಕೆಲ ದಿನಗಳ ಮುಂಚೆಯೇ ಪ್ರಾಣಿಗಳಿಗೆ ಗೊತ್ತಾಗುತ್ತದೆ. ಹಕ್ಕಿಗಳು ಕೆಳಗೆ ಹಾರುವುದು, ಗೀಸ್‌ಗಳು ಮುಂಚಿತವಾಗಿ ವಲಸೆ ಹೋಗುವುದು, ಇರುವೆಗಳು ಎತ್ತರದ ಗೂಡು ಕಟ್ಟುವುದು, ಡ್ರ್ಯಾಗನ್ ಫ್ಲೈಗಳು ಇವು ಪ್ರಾಚೀನರಿಗೆ ವಿಶ್ವಾಸಾರ್ಹ ಸಂಕೇತ ಅಥವಾ ಹವಾಮಾನ ಬದಲಾವಣೆ ಮುನ್ಸೂಚಕವಾಗಿದ್ದು. ಕೇವಲ ಪ್ರಾಣಿಗಳಷ್ಟೇ ಅಲ್ಲದೇ, ಸಸ್ಯಗಳಿಂದಲೂ ಹವಾಮಾನ ಬದಲಾವಣೆ ಗುರುತ್ತಿದ್ದರು  ಈರುಳ್ಳಿ ತೊಗಟೆ ದಪ್ಪ, ಸ್ಪೈಡರ್ ವೆಬ್ ಪ್ಯಾಟರ್ನ್, ಎಲೆಗಳು ಬೀಳುವುದು, ಮೀನುಗಳ ವರ್ತನೆ ಮುಂತಾದ ಡಜನ್‌ಗಟ್ಟಲೇ ಸಂಕೇತಗಳನ್ನು ಒಟ್ಟುಗೂಡಿಸಿ ಹವಾಮಾನ ವಿಶ್ಲೇಷಿಸುತ್ತಿದ್ದರು.

67
ಪ್ರಾಚೀನ ಹವಾಮಾನ ಮುನ್ಸೂನೆ ಜ್ಞಾನವು ಆದ್ಭುತ!
Image Credit : Asianet News

ಪ್ರಾಚೀನ ಹವಾಮಾನ ಮುನ್ಸೂನೆ ಜ್ಞಾನವು ಆದ್ಭುತ!

ಇದು ಇಂದಿನ ಮೆಷಿನ್ ಲರ್ನಿಂಗ್‌ಗೆ ಹೋಲುವ ಮಾನವ ಮೆದುಳಿನ ಅದ್ಭುತ ವ್ಯವಸ್ಥೆಯಾಗಿತ್ತು. ಆಧುನಿಕ ವಿಜ್ಞಾನಕ್ಕೆ ಪ್ರಾಚೀನ ಜ್ಞಾನದ ಕೊಡುಗೆಇಂದು ಇಂಡಿಜೆನಸ್ ಸಮುದಾಯಗಳ ಹವಾಮಾನ ಜ್ಞಾನವು ಆಧುನಿಕ ಮುನ್ಸೂಚನೆಗಳಿಗೆ ಸರಿದೂಗುತ್ತದೆ ಅಥವಾ ಮೀರಿಸುತ್ತದೆ. ವಿಶೇಷವಾಗಿ ಸ್ಥಳೀಯ ಮೈಕ್ರೋಕ್ಲೈಮೇಟ್ ಅನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಜ್ಞಾನ ಅಮೂಲ್ಯವಾಗಿದೆ. ಕ್ಲೈಮೇಟ್ ಚೇಂಜ್ ಸಂಶೋಧನೆಯಲ್ಲಿ ಈ ಟ್ರೆಡಿಷನಲ್ ಎಕಾಲಜಿಕಲ್ ನಾಲೆಡ್ಜ್ ಅನ್ನು ಮರುಪಡೆಯುವ ಪ್ರಯತ್ನ ನಡೆಯುತ್ತಿದೆ.

77
ಪೂರ್ವಜನರಿಂದ ನಾವು ಕಲಿಯಬೇಕಾಗಿದ್ದು ಏನು?
Image Credit : Asianet News

ಪೂರ್ವಜನರಿಂದ ನಾವು ಕಲಿಯಬೇಕಾಗಿದ್ದು ಏನು?

ನಿಸರ್ಗ ಇನ್ನೂ ಮಾತನಾಡುತ್ತಿದೆ. ಪ್ರಾಚೀನರು ಕಲಿಸಿದ ಪಾಠವೆಂದರೆ – ಗಮನಿಸುವುದು, ಕೂಡಿಸುವುದು, ಸಮಯಕ್ಕೆ ಮುನ್ನ ಸಿದ್ಧರಾಗುವುದು. ಮುಂದಿನ ಬಾರಿ ಪ್ರಕೃತಿಯಲ್ಲಿ ವಿಚಿತ್ರ ಬದಲಾವಣೆ ಕಂಡರೆ ಅದನ್ನು ಕಡೆಗಣಿಸದೆ ಗಮನಿಸಿ. ನಮ್ಮ ಪೂರ್ವಜರ ಜ್ಞಾನವನ್ನು ಮತ್ತೆ ಜೀವಂತಗೊಳಿಸುವುದು ಇಂದಿನ ಅಗತ್ಯವಾಗಿದೆ. ಈ ಜ್ಞಾನವನ್ನು ಅಳವಡಿಸಿಕೊಂಡರೆ ನಾವು ಪ್ರಕೃತಿಯೊಂದಿಗೆ ಹೆಚ್ಚು ಸಾಮರಸ್ಯದಿಂದ ಬದುಕಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಜೀವನಶೈಲಿ
ಹವಾಮಾನ ಮುನ್ಸೂಚನೆ
ಸುದ್ದಿ
Latest Videos
Recommended Stories
Recommended image1
ದಿನಬಳಕೆಗೆ ಸೂಪರ್‌, ಬಜೆಟ್‌ ಫ್ರೆಂಡ್ಲಿ 1 ಗ್ರಾಂ ಗೋಲ್ಡ್‌ ಉಂಗುರಗಳು ಇಲ್ಲಿವೆ
Recommended image2
ಮ್ಯಾರಥಾನ್​ ವೇಳೆ ಮುಟ್ಟಿನ ರಕ್ತಸ್ರಾವವಾದ್ರೂ ಡೋಂಟ್​ ಕೇರ್​: ಗುರಿ ತಲುಪಿದ ಛಲಗಾತಿ- ವಿಡಿಯೋ ವೈರಲ್​
Recommended image3
Grow Garlic at Home: ಮನೆಯಲ್ಲಿಯೇ ತಿಂಗಳಿಗಾಗುವಷ್ಟು ಬೆಳ್ಳುಳ್ಳಿ ಬೆಳೆಯಿರಿ: ಇಲ್ಲಿದೆ 6 ಸಿಂಪಲ್ ಟಿಪ್ಸ್
Related Stories
Recommended image1
ಭೂಮಿಯ ಚಲನೆಯನ್ನೇ ನಿಧಾನಗೊಳಿಸಿದ ಹವಾಮಾನ ಬದಲಾವಣೆ; ವಿಜ್ಞಾನಿಗಳಿಂದ ಆಘಾತಕಾರಿ ಸುದ್ದಿ ಬಹಿರಂಗ!
Recommended image2
2050ರ ಹೊತ್ತಿಗೆ ಲಕ್ಷಾಂತರ ಜನ ಸಾಯ್ತಾರಾ? ಹವಾಮಾನ ಬದಲಾವಣೆ ಬಗ್ಗೆ ಭಯಾನಕ ವರದಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved