- Home
- Life
- Plastic Bucket Cleaning Tips: ಬಕೆಟ್, ನಲ್ಲಿ ಫುಲ್ ಬಿಳಿಯಾಗಿದ್ಯಾ? ಹಾರ್ಪಿಕ್-ಸೋಪ್‌ನಿಂದಲೇ ಹೊಸ ತರ ಮಾಡ್ಬೋದು!
Plastic Bucket Cleaning Tips: ಬಕೆಟ್, ನಲ್ಲಿ ಫುಲ್ ಬಿಳಿಯಾಗಿದ್ಯಾ? ಹಾರ್ಪಿಕ್-ಸೋಪ್‌ನಿಂದಲೇ ಹೊಸ ತರ ಮಾಡ್ಬೋದು!
How to clean plastic bucket with Harpic: ಬಕೆಟ್, ನಲ್ಲಿಗಳು ಉಪ್ಪು ನೀರಿನಿಂದ ಬಿಳಿ ಬಿಳಿ ಆಗಿರುತ್ತವೆ. ಬಕೆಟ್‌ಗಳು ನೋಡಲು ಚೆನ್ನಾಗಿ ಕಂಡರೂ ಕೂಡ ಬಿಳಿ ಕಲೆಯಿಂದ ಹಳೆಯದು ಎನ್ನೋ ತರ ಕಾಣುತ್ತವೆ. ಇವನ್ನು ಹೋಗಲಾಡಿಸಲು ಏನು ಮಾಡಬೇಕು?

ಹಾರ್ಪಿಕ್, ಸೋಪು
ಬಟ್ಟೆ ತೊಳೆಯುವ ಸೋಪನ್ನು ತುರಿದು, ಅದಕ್ಕೆ ಸ್ವಲ್ಪ ಹಾರ್ಪಿಕ್, ನೀರು ಹಾಕಿ. ಈ ಲಿಕ್ವಿಡ್ ಹಾಕಿ ಸ್ಕ್ರಬ್ಬರ್ ಬಳಸಿ ಉಜ್ಜಿ
ವಿನೆಗರ್, ಅಡುಗೆ ಸೋಡಾ
ಅಡುಗೆ ಸೋಡಾ ಮತ್ತು ಬಿಳಿ ವಿನೆಗರ್ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಬಕೆಟ್‌ನಲ್ಲಿ ಕಲೆ ಇರುವ ಜಾಗಕ್ಕೆ ಹಚ್ಚಿ 15 ನಿಮಿಷ ಬಿಡಿ. ಸ್ಕ್ರಬ್ಬರ್‌ನಿಂದ ಉಜ್ಜಿ ತೊಳೆದರೆ ಸಂಪೂರ್ಣವಾಗಿ ಹೋಗುತ್ತದೆ.
ನಿಂಬೆಹಣ್ಣು , ಉಪ್ಪಿನ ಕಮಾಲ್
ನಿಂಬೆಹಣ್ಣಿನ ಸಿಪ್ಪೆಗೆ ಸ್ವಲ್ಪ ಪುಡಿ ಉಪ್ಪನ್ನು ಹಾಕಿ, ನಲ್ಲಿ ಅಥವಾ ಕಲೆ ಇರುವೆಡೆ ಚೆನ್ನಾಗಿ ಉಜ್ಜಬೇಕು.
ಕಲ್ಲು ಉಪ್ಪು, ಪಾತ್ರೆ
ಟೈಲ್ಸ್ ಮೇಲೆ ಪಾಚಿ ಕಟ್ಟಿದ್ದರೆ ಬಿಸಿ ನೀರಿಗೆ ಸ್ವಲ್ಪ ಕಲ್ಲು ಉಪ್ಪು, ಪಾತ್ರೆ ತೊಳೆಯುವ ಲಿಕ್ವಿಡ್ ಹಾಕಿ ಟೈಲ್ಸ್ ಮೇಲೆ ಹಾಕಿ, 10 ನಿಮಿಷದ ನಂತರ ಉಜ್ಜಿದರೆ ಕಲೆ ಹೋಗುತ್ತದೆ.
ಹಳೆಯ ಟೂತ್‌ಪೇಸ್ಟ್ ಬಳಕೆ
ಹಳೆಯ ಟೂತ್‌ಬ್ರಷ್‌ಗೆ ಸ್ವಲ್ಪ ಟೂತ್ ಪೇಸ್ಟ್ ಹಚ್ಚಿ ಉಜ್ಜುವುದರಿಂದ ಕಲೆ ಹೋಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

