MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಥರ್ಮೋಕಾಲ್, ಪೊರಕೆ ಬಳಸಿ ಐದೇ ನಿಮಿಷದಲ್ಲಿ ಬಾಲ್ಕನಿಗೆ ಬರೋ ಪಾರಿವಾಳ ಓಡಿಸಿ

ಥರ್ಮೋಕಾಲ್, ಪೊರಕೆ ಬಳಸಿ ಐದೇ ನಿಮಿಷದಲ್ಲಿ ಬಾಲ್ಕನಿಗೆ ಬರೋ ಪಾರಿವಾಳ ಓಡಿಸಿ

ಅಪಾರ್ಟ್ಮೆಂಟ್ ನಿವಾಸಿಗಳಿಗೆ ಪಾರಿವಾಳ ದೊಡ್ಡ ಸಮಸ್ಯೆ. ಪಾರಿವಾಳದ ಕೂಗಿನ ಜೊತೆ ಅದ್ರ ಹೊಲಸು ಇಡೀ ವಾತಾವರಣ ಹಾಳು ಮಾಡೋದಲ್ದೆ ಆರೋಗ್ಯಕ್ಕೂ ಹಾನಿಕರ. ಸೋಶಿಯಲ್ ಮೀಡಿಯಾದಲ್ಲಿ ಪಾರಿವಾಳ ಓಡಿಸುವ ಹ್ಯಾಕ್ ಒಂದು ವೈರಲ್ ಆಗಿದೆ. 

2 Min read
Author : Roopa Hegde
Published : Apr 27 2026, 06:08 PM IST
Share this Photo Gallery
  • FB
  • TW
  • Linkdin
  • Whatsapp
16
ಪಾರಿವಾಳದ ಕಾಟ
Image Credit : Asianet News

ಪಾರಿವಾಳದ ಕಾಟ

ಬಾಲ್ಕನಿಯಲ್ಲಿ ಪಾರಿವಾಳಗಳು ಮನೆ ಮಾಡಿರುತ್ವೆ. ಅವುಗಳನ್ನು ಓಡಿಸೋದು ದೊಡ್ಡ ಸಮಸ್ಯೆ. ಅಲ್ಲಿ ಇಲ್ಲಿ ಹೊಲಸು ಮಾಡುವ ಈ ಪಾರಿವಾಳಗಳಿಂದ ಮುಕ್ತಿಪಡೆಯೋದು ಕಷ್ಟದ ಕೆಲಸ. ಏನೇ ಮಾಡಿದ್ರೂ ಪಾರಿವಾಳ ಮನೆಯಿಂದ ಹೋಗಲ್ಲ ಎನ್ನುವವರು ಈ ಸುಲಭ ಟ್ರಿಕ್ಸ್ ಫಾಲೋ ಮಾಡಿ.

26
ಪೊರಕೆ ಥರ್ಮೋಕಾಲ್
Image Credit : Asianet News

ಪೊರಕೆ ಥರ್ಮೋಕಾಲ್

ನೀವು ಪಾರಿವಾಳ ಓಡಿಸೋಕೆ ಮಾರ್ಕೆಟ್ ನಲ್ಲಿ ಸಿಗುವ ಯಾವುದೇ ಔಷಧಿಯಾಗ್ಲಿ, ಸ್ಪ್ರೇಯಾಗ್ಲಿ ಇಲ್ಲ ಗ್ರಿಲ್ ನಂತ ದುಬಾರಿ ವಸ್ತುಗಳನ್ನು ಅಳವಡಿಸಬೇಕಾಗಿಲ್ಲ. ಅತೀ ಕಡಿಮೆ ಖರ್ಚಿನ ಇಲ್ಲ ಕಸ ಅಂತ ಬಿಸಾಡಿದ ವಸ್ತುಗಳಿಂದ ನೀವು ಪಾರಿವಾಳ ಓಡಿಸಬಹುದು. ಮನೆಯಲ್ಲಿ ಥರ್ಮೋಕಾಲ್ ಹಾಗೂ ಪೊರಕೆ ಇದ್ರೆ ಸಾಕು.

Related Articles

Related image1
ಓಪನ್ ಕಿಚನ್‌ಗೆ ವಾಲ್ ಪ್ಯಾನೆಲ್ ಐಡಿಯಾ; ಇನ್ಮುಂದೆ ನಿಮ್ಮ ಅಡುಗೆಮನೆ ಇನ್ನಷ್ಟು ಸ್ಟೈಲಿಶ್
Related image2
ಮಹಿಳೆಯರೇ ಎಚ್ಚರ.. ಮನೆಯೊಳಗೆ ಹಾವುಗಳು ಬರದಂತೆ ತಡೆಯುವ ಈ ಸೀಕ್ರೆಟ್ ತಿಳಿದಿರಲಿ!
36
ಪಾರಿವಾಳ ಓಡಿಸೋದು ಹೇಗೆ?
Image Credit : Asianet News

ಪಾರಿವಾಳ ಓಡಿಸೋದು ಹೇಗೆ?

ಈ ಉಪಾಯ ಮಾಡಲು ನಿಮಗೆ ಥರ್ಮೋಕಾಲ್, ಪೊರಕೆ ಹಾಗೂ ಟೇಪ್ ಅಗತ್ಯವಿದೆ. ಮೊದಲು ಪೊರಕೆ ಕಡ್ಡಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಪ್ರತಿಯೊಂದೂ ಸುಮಾರು 1 ಇಂಚು ಗಾತ್ರದಲ್ಲಿರಲಿ. ನಂತ್ರ ಪೊರಕೆ ತುಂಡುಗಳನ್ನು ಥರ್ಮೋಕಾಲ್ ಗೆ ಚುಚ್ಚಬೇಕು. ನಂತ್ರ ಈ ಥರ್ಮೋಕಾಲ್ ಗೆ ಡಬಲ್ ಟೇಪ್ ಅಂಟಿಸಿ ಅದನ್ನು ಪಾರಿವಾಳ ಹೆಚ್ಚಾಗಿ ಬರುವ ಜಾಗದಲ್ಲಿ ಇಡಿ.

46
 ಪಾರಿವಾಳಕ್ಕೆ ಹಾನಿ ಇಲ್ಲ
Image Credit : Asianet News

ಪಾರಿವಾಳಕ್ಕೆ ಹಾನಿ ಇಲ್ಲ

ನೀವು ಥರ್ಮೋಕಾಲ್ ನಿಂದ ಮಾಡುವ ಈ ಹ್ಯಾಕ್ ನಿಂದ ಪಾರಿವಾಳಕ್ಕೆ ಯಾವುದೇ ತೊಂದರೆ ಆಗೋದಿಲ್ಲ. ಅವು ಇದ್ರ ಮೇಲೆ ಬಂದು ಕುಳಿತುಕೊಳ್ಳುವ ಪ್ರಯತ್ನ ಮಾಡುತ್ತವೆ. ಆದ್ರೆ ಪೊರಕೆ ಕಡ್ಡಿ ಚುಚ್ಚೋದ್ರಿಂದ ಅವು ಓಡಿ ಹೋಗುತ್ವೆ. ಕಡಿಮೆ ಖರ್ಚಿನಲ್ಲಿ ನೀವು ಪಾರಿವಾಳ ಓಡಿಸಬಹುದು. ಬಾಲ್ಕನಿಯ ನಾಲ್ಕೈದು ಕಡೆ ಇದನ್ನು ಇಡಬೇಕು.

56
ಸೋಶಿಯಲ್ ಮೀಡಿಯಾದಲ್ಲಿ ವೈರಲ್
Image Credit : Asianet News

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಈ ವಿಡಿಯೋವನ್ನು @candysprouts ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಐದು ನಿಮಿಷದಲ್ಲಿ ನಿಮ್ಮ ಬಾಲ್ಕನಿಯಿಂದ ಪಾರಿವಾಳ ಓಡಿಸಿ ಅಂತ ಶೀರ್ಷಿಕೆ ಹಾಕಿದ್ದಾರೆ. ಕೇವಲ ಒಂದು ದಿನದಲ್ಲಿ, ಈ ಹ್ಯಾಕ್ 4.8 ಮಿಲಿಯನ್ ವೀವ್ಸ್ ಪಡೆದಿದೆ. 17,000 ಕ್ಕೂ ಹೆಚ್ಚು ಲೈಕ್ ಸಿಕ್ಕಿದೆ. ಸುಮಾರು 400 ಕಾಮೆಂಟ್ ಬಂದಿದೆ.

66
ಬಳಕೆದಾರರು ಹೇಳೋದೇನು?
Image Credit : Asianet News

ಬಳಕೆದಾರರು ಹೇಳೋದೇನು?

ಇನ್ಸ್ಟಾಗ್ರಾಮ್ ನಲ್ಲಿರುವ ಈ ವಿಡಿಯೋಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ಪಕ್ಷಿಗಳಿಗೆ ನೀಡುವ ಹಿಂಸೆ ಎಂದಿದ್ದಾರೆ. ಮೂಖ ಪಕ್ಷಿಗಳಿಗೆ ತೊಂದರೆ ನೀಡಬೇಡಿ, ಮನುಷ್ಯ ಜಗತ್ತಿನಲ್ಲಿ ಇರಬಾರದಿತ್ತು ಅಂತ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಹ್ಯಾಕ್ ಮೆಚ್ಚಿಕೊಂಡಿದ್ದಾರೆ. ಬಾಲ್ಕನಿಯಲ್ಲಿ ಪಾರಿವಾಳದ ಕಾಟಕ್ಕೆ ಬೇಸತ್ತ ಜನರಿಗೆ ಇದು ಒಳ್ಳೆ ಐಡಿಯಾ ಎಂದಿದ್ದಾರೆ. ಇದರಿಂದ ಯಾವುದೇ ಪಕ್ಷಿಗೆ ಹಾನಿಯಾಗ್ತಿಲ್ಲ. ಅಗತ್ಯ ಇರುವವರು ಈ ಉಪಾಯ ಮಾಡಿ, ಇಲ್ಲ ಬಿಟ್ಟುಬಿಡಿ. ವಿಡಿಯೋ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಅಗತ್ಯವಿಲ್ಲ ಅಂತ ಮತ್ತೊಂದಿಷ್ಟು ಮಂದಿ ಹೇಳಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜೀವನಶೈಲಿ
ಅಡುಗೆಮನೆ ಸಲಹೆಗಳು

Latest Videos
Recommended Stories
Recommended image1
ಬಿಸಿಲಿನ ತಾಪ ರಕ್ಷಣೆಗೆ ಜೇಬಲ್ಲಿರಲಿ ಈರುಳ್ಳಿ: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟಿಪ್ಸ್​ ಕೇಳಿ
Recommended image2
Karna Serial: ನಿತ್ಯಾಗೆ ಕರ್ಣನ ಮೇಲೆ ಲವ್​ ಆಗೋಯ್ತು; ನಿಧಿ-ಕರ್ಣ ಮದುವೆಯಾಗಿದ್ದು ಕನಸಾ?
Recommended image3
ಅಂಬಾನಿ ಮನೇಲಿ ಮಂಗಳಾರತಿ ಎತ್ತಿದ ಬ್ಯಾಡ್‌ಗರ್ಲ್;‌ ಗೋವಿಗೆ ಆಹಾರ ಕೊಟ್ಟ Singer Rihanna
Related Stories
Recommended image1
ಓಪನ್ ಕಿಚನ್‌ಗೆ ವಾಲ್ ಪ್ಯಾನೆಲ್ ಐಡಿಯಾ; ಇನ್ಮುಂದೆ ನಿಮ್ಮ ಅಡುಗೆಮನೆ ಇನ್ನಷ್ಟು ಸ್ಟೈಲಿಶ್
Recommended image2
ಮಹಿಳೆಯರೇ ಎಚ್ಚರ.. ಮನೆಯೊಳಗೆ ಹಾವುಗಳು ಬರದಂತೆ ತಡೆಯುವ ಈ ಸೀಕ್ರೆಟ್ ತಿಳಿದಿರಲಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved