ಜಸ್ಟ್ 50 ಸೆಕೆಂಡ್ ಜಾಹೀರಾತಿಗೆ 5 ಕೋಟಿ ಪಡೆಯೋ ನಟಿಯೀಕೆ; 100 ಕೋಟಿ ಫ್ಲ್ಯಾಟ್, 50 ಕೋಟಿ ಖಾಸಗಿ ಜೆಟ್‌ನ ಒಡತಿ!
ದಕ್ಷಿಣಭಾರತದ ಈ ನಟಿ ಭಾರತೀಯ ಚಿತ್ರರಂಗದಲ್ಲಿಯೇ ಕೋಟಿಗಳಲ್ಲಿ ಸಂಭಾವನೆ ಪಡೆಯುವವರಲ್ಲಿ ಒಬ್ಬರು. ಅಷ್ಟೇ ಅಲ್ಲ, 50 ಸೆಕೆಂಡ್ ಜಾಹೀರಾತಿಗೆ ಭರ್ತಿ 5 ಕೋಟಿ ರೂ. ಪಡೆಯುತ್ತಾರೆ. 100 ಕೋಟಿಯ ಫ್ಲ್ಯಾಟ್ಸ್, ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಯಾರಾಕೆ?
ಚಿತ್ರರಂಗದಲ್ಲಿ ವರ್ಷಗಳ ಹಿಂದೆ ಕೇವಲ ಬಾಲಿವುಡ್ ನಟಿಯರಷ್ಟೇ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಸೌತ್ ನಟಿಯರು ಬಾಲಿವುಡ್ ನಟಿಯರನ್ನೂ ಮೀರಿಸುತ್ತಿದ್ದಾರೆ. ಒಂದು ಸಿನಿಮಾಕ್ಕೆ ಕೋಟಿಯಲ್ಲಿ ಸಂಭಾವನೆ ಪಡೀತಿರೋದು ಮಾತ್ರವಲ್ಲದೆ ಕೋಟಿ ಬೆಲೆಬಾಳುವ ಮನೆ, ಕಾರುಗಳನ್ನು ಹೊಂದಿದ್ದಾರೆ.
ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ನಯನತಾರಾ ಕೂಡಾ ಒಬ್ಬರು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ
ಸೌತ್‌ನಲ್ಲಿ ಕೋಟಿ ಸಂಭಾವನೆ ಪಡೆಯುವ ಅನೇಕ ನಾಯಕಿಯರಲ್ಲಿ ಲೇಡಿ ಸೂಪರ್ಸ್ಟಾರ್ ನಯನತಾರ ಕೂಡ ಒಬ್ಬರು. ಚಿತ್ರರಂದಲ್ಲಿ ಶ್ರೀಮಂತ ನಟಿಯರಲ್ಲಿ ನಯನಾತಾರ ಹೆಸರು ಮುಂಚೂಣಿಯಲ್ಲಿದೆ.
ಇದುವರೆಗೂ ಹಲವಾರು ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ನಯನತಾರಾ ಫಿಮೇಲ್ ಓರಿಯೆಂಟೆಡ್ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅವರು ಮೊತ್ತ ಮೊದಲ ಬಾರಿಗೆ ನಟಿಸಿದ ಮೂವಿ, ಶಾರೂಕ್ ಖಾನ್ ಅಭಿನಯದ ಜವಾನ್ ಬಾಕ್ಸಾಫೀಸ್ ಹಿಟ್ ಆಗಿರುವುದರ ಬೆನ್ನಲ್ಲೇ ನಯನತಾರಾ ಒಟ್ಟು ಆಸ್ತಿಯ ಮೌಲ್ಯ ಎಷ್ಟೆಂಬುದು ಮತ್ತೆ ಚರ್ಚೆಯಾಗುತ್ತಿದೆ.
50 ಸೆಕೆಂಡ್‌ಗಳ ಜಾಹೀರಾತಿಗೆ ನಯನತಾರಾ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ದೃಢೀಕರಿಸದ ವರದಿಗಳು ತಿಳಿಸಿವೆ. ಕೆಲವು ಜಾಹೀರಾತುಗಳಿಗೆ 4ರಿಂದ 7 ಕೋಟಿ ರೂಪಾಯಿ ಪಡೆಯುತ್ತಾರಂತೆ. ನಯನತಾರಾ ಅವರಿಗೆ ನಾಲ್ಕು ಐಷಾರಾಮಿ ಮನೆಗಳಿವೆ.
ನಯನತಾರಾ 100 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ.ಇದು ತಮಿಳುನಾಡಿನಿಂದ ಮುಂಬೈವರೆಗೆ ವಿಸ್ತರಿಸಿರುವ ಅವರ ನಾಲ್ಕು ಐಷಾರಾಮಿ ಆಸ್ತಿಗಳಲ್ಲಿ ಒಂದಾಗಿದೆ.
ಪ್ರಸ್ತುತ, ಅವರು ತಮ್ಮ ಪತಿ ವಿಘ್ನೇಶ್ ಅವರೊಂದಿಗೆ 4 BHK ಫ್ಲಾಟ್ ಅನ್ನು ಹಂಚಿಕೊಂಡಿದ್ದಾರೆ, ಇದರ ಮೌಲ್ಯ 100 ಕೋಟಿ ರೂ. ಫ್ಲಾಟ್ ಖಾಸಗಿ ಸಿನಿಮಾ ಹಾಲ್, ಈಜುಕೊಳ ಮತ್ತು ಬಹುಕ್ರಿಯಾತ್ಮಕ ಜಿಮ್‌ನಂತಹ ವಿಶೇಷ ಸೌಕರ್ಯಗಳನ್ನು ಒಳಗೊಂಡಿದೆ.
ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವೇ ನಯನತಾರಾ ಬಳಿಯಿದೆ. ದುಬಾರಿ ಕಾರು BMW 7, 1.76 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಲೆದರ್ ಸೀಟ್‌ಗಳಿಗೆ ಹೆಸರುವಾಸಿಯಾದ 1 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ GLS350D ಹೊಂದಿದ್ದಾರೆ. ವಿಶಿಷ್ಟವಾದ BMW 5 ಸಹ ಇವರ ಕಾರ್ ಕಲೆಕ್ಷನ್‌ನಲ್ಲಿ ಒಂದಾಗಿದೆ.
ಖಾಸಗಿ ಜೆಟ್‌ಗಳನ್ನು ಹೊಂದಿರುವ ಭಾರತೀಯ ನಟಿಯರ ಲಿಸ್ಟ್‌ನಲ್ಲಿ ನಯನತಾರಾ ಕೂಡಾ ಇದ್ದಾರೆ.. ಈ ಲಿಸ್ಟ್‌ನಲ್ಲಿ ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ ಮತ್ತು ಮಾಧುರಿ ದೀಕ್ಷಿತ್ ಸಹ ಸೇರಿದ್ದಾರೆ. ನಯನತಾರಾ ಅವರ ಖಾಸಗಿ ಜೆಟ್ ಸುಮಾರು 50 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಮತ್ತು ಇದನ್ನು ಹೆಚ್ಚಾಗಿ ಅವರ ಪತಿಯೊಂದಿಗೆ ಐಷಾರಾಮಿ ವಿಹಾರಕ್ಕೆ ಬಳಸುತ್ತಾರೆ ಎಂದು ತಿಳಿದುಬಂದಿದೆ.
ನಯನತಾರಾ, ತನ್ನ ಸಂಗಾತಿ ವಿಘ್ನೇಶ್ ಶಿವನ್ ಜೊತೆಗೆ ರೌಡಿ ಪಿಕ್ಚರ್ಸ್ ಬ್ಯಾನರ್ ಎಂಬ ನಿರ್ಮಾಣ ಕಂಪನಿಯ ಸಹ-ಮಾಲೀಕರಾಗಿದ್ದಾರೆ. ಈ ಪ್ರೊಡಕ್ಷನ್ ಹೌಸ್ ಪ್ರಾಥಮಿಕವಾಗಿ ನಯನತಾರಾ ನಟಿಸಿದ ಚಿತ್ರಗಳನ್ನು ಬೆಂಬಲಿಸುತ್ತದೆ, ಇದು ಗಮನಾರ್ಹ ಲಾಭವನ್ನು ನೀಡುತ್ತದೆ.
ನಟನಾ ವೃತ್ತಿಜೀವನದ ಆಚೆಗೆ, ನಯನತಾರಾ ಹೂಡಿಕೆಯಲ್ಲಿ ತೊಡಗಿದ್ದಾರೆ. ದಿ ಲಿಪ್ ಬಾಮ್ ಕಂಪನಿಗೆ 10 ಕೋಟಿ ರೂ. ಯುಎಇಯಲ್ಲಿನ ತೈಲ ವ್ಯವಹಾರದಲ್ಲಿ 100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.