10 ವರ್ಷದ ಹಳೆ ಫ್ರಿಡ್ಜ್‌ಗೆ ಹೊಸ ಲುಕ್ ಕೊಡಲು ಅನುಸರಿಸಿ 7 ಸೂಪರ್ ಟಿಪ್ಸ್
How to Make Old Refrigerator Look New: ಹಳೆಯದಾದ ರೆಫ್ರಿಜರೇಟರ್ ಅನ್ನು ಹೊಸದಾಗಿ ಕಾಣುವಂತೆ ಮಾಡಲು ಮತ್ತು ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು 7 ಸರಳ ವಿಧಾನಗಳನ್ನು ಈ ಲೇಖನ ಒಳಗೊಂಡಿದೆ. ವೃತ್ತಿಪರ ತಂತ್ರಜ್ಞರು ನೀಡಿರುವ ಈ ಸಲಹೆಗಳು ಇಲ್ಲಿವೆ

ಬೇಸಿಗೆ, ಚಳಿ, ಮಳೆಗಾಲವಿರಲಿ ಮನೆಯಲ್ಲಿ ರೆಫ್ರಿಜರೇಟರ್ ಬಳಕೆಯಾಗುತ್ತದೆ. ನಿಮ್ಮ ಮನೆಯ ಫ್ರಿಡ್ಜ್ 10 ವರ್ಷಗಳಷ್ಟು ಹಳೆಯದಾಗಿದ್ದರೆ ಕೆಲವು ವಿಧಾನಗಳ ಮೂಲಕ ಹೊಸದಾಗಿ ಮಾಡಬಹುದಾಗಿದೆ. ವೃತ್ತಿಪರ ತಂತ್ರಜ್ಞರು ನೀಡಿದ ಕೆಲವು ಸೂಪರ್ ಸಲಹೆಗಳು ಇಲ್ಲಿವೆ.
ಈ ಸುಲಭ ಮತ್ತು ಸರಳ ವಿಧಾನಗಳಿಂದ ನಿಮ್ಮ ಹಳೆಯ ರೆಫ್ರಿಜರೇಟರ್ ಅನ್ನು ಹೊಸದಾಗಿ ಕಾಣುವಂತೆ ಮಾಡಬಹುದು ಮತ್ತು ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು. ವೃತ್ತಿಪರ ತಂತ್ರಜ್ಞರು ನೀಡಿರುವ ಸಲಹೆಗಳು ಏನು ಅಂತ ನೋಡೋಣ ಬನ್ನಿ.
ಸಲಹೆ 1: ವಾರ್ಷಿಕ ನಿರ್ವಹಣೆ
ರೆಫ್ರಿಜರೇಟರ್‌ನ್ನು ನಿಯಮಿತವಾಗಿ ಸರ್ವಿಸಿಂಗ್ ಮಾಡಿಸುತ್ತಿರಬೇಕು. ರಿಪೇರಿ ಇಲ್ಲದಿದ್ದರೂ ನಿರ್ದಿಷ್ಟ ಸಮಯಕ್ಕೆ ತಂತ್ರಜ್ಞರಿಂದ ತಪಾಸಣೆಗೆ ಒಳಪಡಿಸಬೇಕು. ಹೀಗೆ ಮಾಡೋದರಿಂದ ಫ್ರಿಡ್ಕ್ ಹಲವು ವರ್ಷ ಬಾಳಿಕೆ ಬರುತ್ತದೆ.
ಸಲಹೆ 2: ರಬ್ಬರ್ ಗ್ಯಾಸ್ಕೆಟ್
ರೆಫ್ರಿಜರೇಟರ್ ಬಾಗಿಲನ್ನು ಸರಿಯಾಗಿ ಮುಚ್ಚಬೇಕು. ಇಲ್ಲದಿದ್ರೆ ತಂಪಾಗಿಸುವಿಕೆ ಮೇಲೆ ಪರಿಣಾಮ ಬೀರುತ್ತದೆ. ಬಾಗಿಲು ಸರಿಯಾಗಿ ಮುಚ್ಚಿಕೊಳ್ಳದಿದ್ದರೆ ರಬ್ಬರ್ ಗ್ಯಾಸ್ಕೆಟ್ ತೆಗೆದು ಬಿಸಿನೀರಿನಿಂದ ತೊಳೆದು ಪುನಃ ಅಳವಡಿಸಿ.
ಸಲಹೆ 3: ಧೂಳಿನಿಂದ ಮುಕ್ತಿ
ರೆಫ್ರಿಜರೇಟರ್‌ನ ಹಿಂದಿರುವ ಸುರುಳಿಗಳಲ್ಲಿ ಧೂಳು ಸಂಗ್ರಹವವಾದ್ರೆ ತಂಪಾಗಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಬ್ರಷ್ ಅಥವಾ ವ್ಯಾಕ್ಯೂಮ್ ಕ್ಲೀನರ್‌ನಿಂದ ಸುರುಳಿಗಳನ್ನು ಸ್ವಚ್ಛಗೊಳಿಸಬೇಕು.
ಸಲಹೆ 4: ಒಳಭಾಗದ ಸ್ವಚ್ಛತೆ
ಹೊರ ಭಾಗದಂತೆ ಫ್ರಿಡ್ಜ್ ಒಳಭಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರಿಂದ ಒಳಭಾಗದ ಕೆಟ್ಟ ವಾಸನೆ ಹೋಗುತ್ತದೆ ಮತ್ತು ಗ್ಲಾಸ್‌ಗಳು ಹೊಳೆಯುತ್ತದೆ. ಅಡುಗೆ ಸೋಡಾದ ದ್ರಾವಣ ಬಳಸಿ ಒಳಭಾಗವನ್ನು ಕ್ಲೀನ್ ಮಾಡಿ.
ಸಲಹೆ 5: ಪಾಲಿಶಿಂಗ್ ಕ್ರೀಮ್
ಫ್ರಿಡ್ಜ್ ಮೇಲ್ಭಾಗದಲ್ಲಿ ಗೀರುಗಳು ಬಂದಿದ್ರೆ, ಅಲ್ಲಲ್ಲಿ ಬಣ್ಣ ಮಾಸಿದ್ದರೆ ಕಾರ್ ವ್ಯಾಕ್ಸ್ ಅಥವಾ ಪಾಲಿಶಿಂಗ್ ಕ್ರೀಮ್ ಬಳಸಬಹುದು. ಈ ಮೂಲಕ ನಿಮ್ಮ ಫ್ರಿಡ್ಜ್ ಸಂಪೂರ್ಣವಾಗಿ ಹೊಸದಂತೆ ಕಾಣಿಸುತ್ತದೆ. ಇಲ್ಲವಾದ್ರೆ ಬಣ್ಣ ಹೋಗಿರುವ ಜಾಗದ ಮೇಲೆ ಸ್ಟಿಕ್ಕರ್ ಅಂಟಿಸಿ.
ಸಲಹೆ 6: ಎಲ್ಇಡಿ ದೀಪ
ಹಳೆಯ ಫ್ರಿಡ್ಜ್ ಆಗಿದ್ರೆ ಒಳಭಾಗದ ದೀಪಗಳ ಪ್ರಖರತೆ ಕಡಿಮೆಯಾಗಿರುತ್ತದೆ. ಹಾಗಾಗಿ ಹೊಸ ಎಲ್‌ಇಡಿ ದೀಪ ಅಳವಡಿಸುವ ಮೂಲಕ ಫ್ರಿಡ್ಜ್ ಹೊಸದಾಗಿ ಕಾಣುವಂತೆ ಮಾಡಬಹುದಾಗಿದೆ.
ಸಲಹೆ 7: ಡಿಫ್ರಾಸ್ಟ್
ನಿಮ್ಮ ರೆಫ್ರಿಜರೇಟರ್‌ನಲ್ಲಿ ಹಸ್ತಚಾಲಿತ ಡಿಫ್ರಾಸ್ಟ್ ವ್ಯವಸ್ಥೆ ಇದ್ದರೆ, ವಾರಕ್ಕೊಮ್ಮೆಯಾದರೂ ಅದನ್ನು ಡಿಫ್ರಾಸ್ಟ್ ಮಾಡಿ.
ರೆಫ್ರಿಜರೇಟರ್ ಮೇಲೆ ಯಾವುದೇ ವಸ್ತುಗಳನ್ನು ಇರಿಸಬೇಡಿ. ಇದು ಫ್ರಿಡ್ಜ್ ಮೇಲೆ ಒತ್ತಡವವನ್ನು ಹೆಚ್ಚಳ ಮಾಡೋದರಿಂದ ಬೇಗ ಹಾಳಾಗುತ್ತದೆ. ಈ ಎಲ್ಲಾ ವಿಧಾನಗಳನ್ನು ಬಳಸುವ ಮೂಲಕ ಫ್ರಿಡ್ಜ್ ನ್ನು ಹೊಸದರಂತೆಯೇ ಇಟ್ಟುಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

