- Home
- Entertainment
- TV Talk
- Kwatle Kitchen Show: ಈರುಳ್ಳಿ-ಬೆಳ್ಳುಳ್ಳಿ ವ್ಯತ್ಯಾಸ ತಿಳಿಯದ ಕ್ವಾಟ್ಲೆ, ಕುಕ್‌ಗೆ ಸಹಾಯ ಮಾಡ್ತಾರಾ?
Kwatle Kitchen Show: ಈರುಳ್ಳಿ-ಬೆಳ್ಳುಳ್ಳಿ ವ್ಯತ್ಯಾಸ ತಿಳಿಯದ ಕ್ವಾಟ್ಲೆ, ಕುಕ್‌ಗೆ ಸಹಾಯ ಮಾಡ್ತಾರಾ?
'ಕ್ವಾಟ್ಲೆ ಕಿಚನ್'' ಎಂಬ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ಶುರುವಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯು, ''ಕ್ವಾಟ್ಲೆ ಕಿಚನ್' ಎಂಬ ಹೊಸ ರಿಯಾಲಿಟಿ ಶೋ ಪರಿಚಯಿಸುತ್ತಿದೆ. ಜೂನ್ 14ರಿಂದ ಪ್ರತಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರವಾಗಲಿದೆ.
- FB
- TW
- Linkdin
Follow Us
)
ಈ ಶೋ ತಿರುಳು ಏನು?
ಒಂದು ಜೋಡಿಯಲ್ಲಿ ಒಬ್ಬರಿಗೆ ಅಡುಗೆ ಬರುತ್ತೆ, ಇನ್ನೊಬ್ಬರಿಗೆ ಅಡುಗೆಯ ಅ ಆ ಇ ಈ ಕೂಡಾ ಬರೋದಿಲ್ಲ. ʼಕುಕ್ʼ, 'ಕ್ವಾಟ್ಲೆ'ಗಳು ಸೇರಿ ಅಡುಗೆ ಮಾಡುವಾಗ ಹುಟ್ಟುವ ತಮಾಷೆಯೇ ಈ ಶೋನ ಜೀವಾಳ. ಕ್ವಾಟ್ಲೆ ಕಾಟದಲ್ಲಿ ಕುಕ್ ಹೇಗೆ ಅಡುಗೆ ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಈ ಮಧ್ಯೆ ಯಾರ ಅಡುಗೆ ಚೆನ್ನಾಗಿರುತ್ತದೆ ಎನ್ನೋದನ್ನು ಜಡ್ಜ್ ಹೇಳುತ್ತಾರೆ. ಫಟಾ ಫಟ್ ಅಂತ ಅಡುಗೆ ಮಾಡಿ ಮುಗಿಸಲು ರೆಡಿಯಾಗಿರೋ ಪಾಕಪ್ರವೀಣರಿಗೆ ಅಡ್ಡಗಾಲಾಗಿ ನಿಲ್ಲುವುದೇ ಈ ʼಕ್ವಾಟ್ಲೆʼ ಸಹಾಯಕರು.
ಯಾರು ಎಲಿಮಿನೇಟ್ ಆಗೋದಿಲ್ಲ?
ಇಲ್ಲಿ ಕುಕ್‌ಗಳು ಎಲಿಮಿನೇಟ್ ಆಗುತ್ತಾರೆ. ಕ್ವಾಟ್ಲೆಗಳು ಮಾತ್ರ ಎಲಿಮಿನೇಟ್ ಆಗೋದಿಲ್ಲ! ಪ್ರತಿ ವಾರವೂ ಕುಕ್-ಕ್ವಾಟ್ಲೆಗಳ ಜೋಡಿಯು ಬದಲಾಗುತ್ತಿರುತ್ತದೆ. ಒಳ್ಳೆ ಸಹಾಯಕ ಬರಲಿ ಎಂದು ಕಾಯುತ್ತಿರುವ ಕುಕ್‌ಗಳಿಗೆ, ಬೆಳ್ಳುಳ್ಳಿ ಹಾಗೂ ಈರುಳ್ಳಿ ನಡುವೆ ವ್ಯತ್ಯಾಸವೇ ಗೊತ್ತಿರದ ʼಕ್ವಾಟ್ಲೆʼಗಳು ಸಿಕ್ಕಿದರೆ ಮುಗಿಯಿತು ಕಥೆ.
ಕುಕ್‌ಗಳು ಯಾರು ಯಾರು?
ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್ ಕೆ ಚಂದನ್, ದಿಲೀಪ್ ಶೆಟ್ಟಿ, ರಾಘವೇಂದ್ರ, ಕೆಂಪಮ್ಮ, ಪ್ರೇರಣ ಕಂಬಮ್, ಕಾವ್ಯ ಗೌಡ, ಶಿಲ್ಪ ಕಾಮತ್, ಶರ್ಮಿತ ಗೌಡ, ಸೋನಿಯಾ ಪೊನ್ನಮ್ಮ
ಕ್ವಾಟ್ಲೆಗಳು ಯಾರು? ಯಾರು?
ಲ್ಯಾಗ್ ಮಂಜು, ಧನರಾಜ್ ಆಚಾರ್, ತುಕಾಲಿ ಸಂತೋಷ್, ನಿವೇದಿತಾ ಗೌಡ, ಪ್ರಶಾಂತ್, ಸೂರಜ್, ಗಿಲ್ಲಿ ನಟ, ಸೋನಿ ಮುಲೆವ, ವಾಣಿ ಗೌಡ, ದಿಶಾ ಉಮೇಶ್
ನಿರೂಪಕರು
ಅನುಪಮಾ ಗೌಡ ಮತ್ತು ಕುರಿ ಪ್ರತಾಪ್ ಈ ಶೋ ನಡೆಸಿಕೊಡಲಿದ್ದಾರೆ.
ತೀರ್ಪುಗಾರರು ಯಾರು? ಪ್ರಸಾರ ಯಾವಾಗ?
ನಟಿ ಶ್ರುತಿ ಮತ್ತು ಕಳೆದ 25 ವರ್ಷಗಳಿಂದ ನಾನಾ ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಪ್ರಸಿದ್ಧ ಶೆಫ್ ಕೌಶಿಕ್. ಕಲರ್ಸ್ ಕನ್ನಡದಲ್ಲಿ ಪ್ರತಿ ಶನಿವಾರ, ಭಾನುವಾರ ಸಂಜೆ 9 ಗಂಟೆಗೆ ಪ್ರಸಾರ ಆಗಲಿರುವ ಒಂದೂವರೆ ಗಂಟೆಯ ಶೋ ಇದಾಗಿದೆ.