MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ತಲೆ ಇಲ್ಲದಿದ್ರೂ ಬದುಕುತ್ತೆ! 20 ಕೋಟಿ ವರ್ಷಗಳ ಹಿಂದೆ ಭೂಮಿಗೆ ಬಂದಿವೆ.. ಜಿರಲೆ ಬಗ್ಗೆ ಈ ವಿಷ್ಯ ನಿಮಗೆ ಗೊತ್ತಾ?

ತಲೆ ಇಲ್ಲದಿದ್ರೂ ಬದುಕುತ್ತೆ! 20 ಕೋಟಿ ವರ್ಷಗಳ ಹಿಂದೆ ಭೂಮಿಗೆ ಬಂದಿವೆ.. ಜಿರಲೆ ಬಗ್ಗೆ ಈ ವಿಷ್ಯ ನಿಮಗೆ ಗೊತ್ತಾ?

Cockroach facts: ಜಿರಲೆ ಕಂಡರೆ ಸಾಕು, ಕೆಲವರು ಭಯದಿಂದ ಕಿರುಚುತ್ತಾರೆ. ಇನ್ನು ಕೆಲವರು ಕೊಲ್ಲುತ್ತಾರೆ. ಆದರೆ ಈ ಜೀವಿ ತಲೆ ಇಲ್ಲದಿದ್ದರೂ ಬದುಕಬಲ್ಲದು! ಆಹಾರವಿಲ್ಲದೆ ಒಂದು ತಿಂಗಳು, ನೀರಿಲ್ಲದೆ ಒಂದು ವಾರ ಇರಬಲ್ಲ ಈ ಕೀಟದ ಬಗ್ಗೆ ನಿಜವಾದ ಸಂಗತಿಗಳು ತಿಳಿದರೆ ಆಶ್ಚರ್ಯಚಕಿತರಾಗುತ್ತೀರಿ. 

2 Min read
Author : Ashwini HR
Published : May 21 2026, 07:01 PM IST
Share this Photo Gallery
  • FB
  • TW
  • Linkdin
  • Whatsapp
15
ಡೈನೋಸಾರ್‌ ಕಾಲದಿಂದಲೂ ಅಸ್ತಿತ್ವದಲ್ಲಿವೆ
Image Credit : Getty

ಡೈನೋಸಾರ್‌ ಕಾಲದಿಂದಲೂ ಅಸ್ತಿತ್ವದಲ್ಲಿವೆ

ಪ್ರತಿ ಮನೆಯಲ್ಲೂ, ಅದರಲ್ಲೂ ವಿಶೇಷವಾಗಿ ಅಡುಗೆ ಮನೆ ಮತ್ತು ಬಾತ್‌ರೂಮ್‌ಗಳಲ್ಲಿ ಓಡಾಡುತ್ತಾ ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುವ ಜಿರಲೆಗಳ ಬಗ್ಗೆ ಜನರಿಗೆ ತಿಳಿದಿರುವುದು ತುಂಬಾ ಕಡಿಮೆ. ಈ ಜೀವಿಯ ಹಿಂದೆ ಕೋಟ್ಯಂತರ ವರ್ಷಗಳ ಇತಿಹಾಸವಿದೆ. ವಿಜ್ಞಾನಿಗಳ ವರದಿಗಳ ಪ್ರಕಾರ, ಇವು ಸುಮಾರು 20 ಕೋಟಿ ವರ್ಷಗಳಿಗಿಂತಲೂ ಹಿಂದಿನಿಂದ ಭೂಮಿಯ ಮೇಲಿವೆ. ಅಂದರೆ ಇವು ಡೈನೋಸಾರ್‌ಗಳ ಕಾಲದಿಂದಲೂ ಅಸ್ತಿತ್ವದಲ್ಲಿವೆ! ಒಂದು ಸಾಮಾನ್ಯ ಜಿರಲೆಯ ಜೀವಿತಾವಧಿ ಸುಮಾರು ಒಂದು ವರ್ಷ ಇರುತ್ತದೆ.

Add Asianetnews Kannada as a Preferred SourcegooglePreferred
25
ತಲೆ ಇಲ್ಲದಿದ್ದರೂ ಬದುಕುತ್ತವೆ!
Image Credit : Getty

ತಲೆ ಇಲ್ಲದಿದ್ದರೂ ಬದುಕುತ್ತವೆ!

ಜಿರಲೆಗಳಿಗೆ ಸಂಬಂಧಿಸಿದ ಅತ್ಯಂತ ವಿಚಿತ್ರವಾದ ವಿಷಯವೆಂದರೆ, ಅವುಗಳ ತಲೆಯನ್ನು ಕತ್ತರಿಸಿದರೂ ಸಹ ಅವು ಒಂದು ವಾರದವರೆಗೆ ಸುಲಭವಾಗಿ ಬದುಕಬಲ್ಲವು. ಇದಕ್ಕೆ ಕಾರಣ ಅವು ನಮ್ಮಂತೆ ಮೂಗು ಅಥವಾ ಬಾಯಿಯ ಮೂಲಕ ಉಸಿರಾಡುವುದಿಲ್ಲ. ಬದಲಿಗೆ ಅವುಗಳ ದೇಹದಲ್ಲಿರುವ ಸಣ್ಣ ಸಣ್ಣ ರಂಧ್ರಗಳ ಮೂಲಕ ಉಸಿರಾಡುತ್ತವೆ. ತಲೆ ಕತ್ತರಿಸಿದ ನಂತರ ಅವು ಸಾಯುವುದು ಉಸಿರಾಟ ನಿಂತಿದ್ದಕ್ಕಲ್ಲ, ಬದಲಿಗೆ ನೀರು ಮತ್ತು ಆಹಾರವನ್ನು ಸೇವಿಸಲು ಸಾಧ್ಯವಾಗದ ಕಾರಣಕ್ಕಾಗಿ ಮಾತ್ರ! 

Related Articles

Related image1
Cockroach Repellent: ಜಿರಲೆ ಕಾಟವೇ?, ಯಾವುದೇ ಖರ್ಚಿಲ್ಲದೆ ಮನೆಯಲ್ಲೇ ಸ್ಪ್ರೇ ತಯಾರಿಸಿ..ನೋಡುತ್ತಿದ್ದಂತೆ ಓಡಿಹೋಗ್ತವೆ!
Related image2
Now Playing
Cockroach At Meals Near Tumakur hotel
35
ಜಿರಲೆಗಳ ಬಗ್ಗೆ ಕೆಲವು ರೋಚಕ ಸಂಗತಿಗಳು
Image Credit : Getty

ಜಿರಲೆಗಳ ಬಗ್ಗೆ ಕೆಲವು ರೋಚಕ ಸಂಗತಿಗಳು

ಉಸಿರು ಬಿಗಿಹಿಡಿಯುವಲ್ಲಿ ಕಿಂಗ್: ಜಿರಲೆಗಳು ನೀರಿನಲ್ಲಿ ಬಿದ್ದರೂ ಸಾಯುವುದಿಲ್ಲ. ಇವು ಸುಮಾರು 40 ನಿಮಿಷಗಳ ಕಾಲ ತಮ್ಮ ಉಸಿರನ್ನು ಬಿಗಿಹಿಡಿದು ನೀರಿನಲ್ಲಿ ಬದುಕಬಲ್ಲವು.
ಹುಸೇನ್ ಬೋಲ್ಟ್ ವೇಗ: ಇವು ಓಡಲು ಪ್ರಾರಂಭಿಸಿದರೆ ಗಂಟೆಗೆ ಸುಮಾರು 4.8 ಕಿಲೋಮೀಟರ್ ವೇಗದಲ್ಲಿ ಓಡಬಲ್ಲವು.
ನೈಟ್ ರೈಡರ್ಸ್: ಇವುಗಳಿಗೆ ಕತ್ತಲೆ ಎಂದರೆ ತುಂಬಾ ಇಷ್ಟ. ಹಗಲಿಡೀ ಪೈಪ್‌ಗಳು, ಗೋಡೆಯ ಬಿರುಕುಗಳು ಅಥವಾ ತೇವಾಂಶ ಇರುವ ಮೂಲೆಗಳಲ್ಲಿ ಅಡಗಿಕೊಂಡು, ರಾತ್ರಿಯಾಗುತ್ತಿದ್ದಂತೆ ಹೊರಬರುತ್ತವೆ.

45
ಅಪಾಯ ಗುರುತಿಸುವ ಶಕ್ತಿಯಿದೆ
Image Credit : Getty

ಅಪಾಯ ಗುರುತಿಸುವ ಶಕ್ತಿಯಿದೆ

ಸಿಕ್ಸ್ತ್ ಸೆನ್ಸ್: ಇವುಗಳ ಕಾಲುಗಳ ಮೇಲೆ ಇರುವ ವಿಶೇಷವಾದ ಕೂದಲಿನಂತಹ ಅಂಗಗಳ ಮೂಲಕ ಗಾಳಿಯ ಒತ್ತಡದಲ್ಲಿ ಆಗುವ ಬದಲಾವಣೆಯನ್ನು ಪತ್ತೆಹಚ್ಚುತ್ತವೆ. ಕೇವಲ 0.05 ಸೆಕೆಂಡುಗಳಲ್ಲಿ ಅಪಾಯವನ್ನು ಗುರುತಿಸಿ ಅಲ್ಲಿಂದ ಮಾಯವಾಗುತ್ತವೆ.
ಹಸಿವು ತಡೆದುಕೊಳ್ಳುತ್ತವೆ: ಇವು ಆಹಾರವಿಲ್ಲದೆ ಒಂದು ತಿಂಗಳವರೆಗೆ ಬದುಕಬಲ್ಲವು. ಆದರೆ, ನೀರಿಲ್ಲದೆ ಒಂದು ವಾರಕ್ಕಿಂತ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ.
ಎಲ್ಲವನ್ನೂ ತಿನ್ನುತ್ತವೆ: ಜಿರಲೆಗಳು ಕೇವಲ ಅನ್ನದ ಅಗಳು ಮಾತ್ರವಲ್ಲದೆ ಅಂಟು, ಗ್ರೀಸ್, ಸೋಪು, ಗೋಡೆಯ ಪೇಂಟ್, ಚರ್ಮ, ಪುಸ್ತಕದ ಅಟ್ಟೆಗಳು ಮತ್ತು ಮನುಷ್ಯರ ಕೂದಲನ್ನು ಸಹ ತಿನ್ನಬಲ್ಲವು!

55
ನಿಮಗೆ ಗೊತ್ತೇ?
Image Credit : istock

ನಿಮಗೆ ಗೊತ್ತೇ?

ಪ್ರಪಂಚದಾದ್ಯಂತ ಸುಮಾರು 4,000 ಕ್ಕೂ ಹೆಚ್ಚು ಜಾತಿಯ ಜಿರಲೆಗಳಿವೆ. ಆದರೆ ಸಮಾಧಾನಕರ ವಿಷಯವೆಂದರೆ, ಅವುಗಳಲ್ಲಿ ಕೇವಲ 30 ಜಾತಿಗಳು ಮಾತ್ರ ಮನುಷ್ಯರು ವಾಸಿಸುವ ಮನೆಗಳಿಗೆ ಬರುತ್ತವೆ. ಏನೇ ಆಗಲಿ, ಕೋಟ್ಯಂತರ ವರ್ಷಗಳಿಂದ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಡೆದುಕೊಂಡು ಇಂದಿಗೂ ಬದುಕುತ್ತಿರುವ ಈ ಜೀವಿಗಳ ಬದುಕುವ ಕಲೆ (Survival Skills) ನಿಜಕ್ಕೂ ಅದ್ಭುತ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ವಿಜ್ಞಾನ
ಜಿರಳೆ

Latest Videos
Recommended Stories
Recommended image1
ಸ್ನೇಹಿತನ ಜೊತೆ ಹನಿಮೂನ್​, ಸ್ನಾನದ ವಿಡಿಯೋ ಹಂಚಿಕೊಂಡ Bigg Boss ತೇಜಸ್ವಿ; ಕಣ್ಣು ಕಿತ್ಕೊಳಪ್ಪಾ ಎಂದ ಫ್ಯಾನ್ಸ್​
Recommended image2
Darshan Tragedy: ಜೈಲಿನಲ್ಲಿ ದಿನಗಳನ್ನು ಎಣಿಸೋದು ಬಿಟ್ಟು ಇನ್ನೇನು ಮಾಡಬಹುದು ದರ್ಶನ್? ಆ ಚಾನ್ಸ್ ಇದೆಯಾ?
Recommended image3
ಜಿಲೇಬಿ ಯಾವ ದೇಶದ ರಾಷ್ಟ್ರೀಯ ಸಿಹಿತಿನಿಸು ಎಂದು ನಿಮಗೆ ಗೊತ್ತೇ? ಉತ್ತರ ಕೇಳಿದ್ರೆ ನಿಜಕ್ಕೂ ಹುಬ್ಬೇರಿಸ್ತೀರಾ!
Related Stories
Recommended image1
Cockroach Repellent: ಜಿರಲೆ ಕಾಟವೇ?, ಯಾವುದೇ ಖರ್ಚಿಲ್ಲದೆ ಮನೆಯಲ್ಲೇ ಸ್ಪ್ರೇ ತಯಾರಿಸಿ..ನೋಡುತ್ತಿದ್ದಂತೆ ಓಡಿಹೋಗ್ತವೆ!
Recommended image2
Now Playing
Cockroach At Meals Near Tumakur hotel
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved