MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಪ್ರತಿಯೊಬ್ಬರೂ ಕ್ಲೀನ್ ಮಾಡಲು ಮರೆಯುವ, ಕಣ್ಣಿಗೆ ಕಾಣದ ಬಾತ್‌ರೂಂನ 8 ಜಾಗಗಳಿವು

ಪ್ರತಿಯೊಬ್ಬರೂ ಕ್ಲೀನ್ ಮಾಡಲು ಮರೆಯುವ, ಕಣ್ಣಿಗೆ ಕಾಣದ ಬಾತ್‌ರೂಂನ 8 ಜಾಗಗಳಿವು

Bathroom cleaning tips: ಸ್ನಾನಗೃಹವನ್ನು ಮೇಲ್ನೋಟಕ್ಕೆ ಸ್ವಚ್ಛಗೊಳಿಸುವುದು ಸುಲಭ, ಆದರೆ ಕಣ್ಣಿಗೆ ಕಾಣದ ಮೂಲೆಯಲ್ಲಿ ಅಡಗಿರುವ ಕೊಳೆ ಮತ್ತು ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುವುದು ಅಷ್ಟೇ ಮುಖ್ಯ. ಪ್ರತಿ ಬಾರಿ ಕ್ಲೀನ್ ಮಾಡುವಾಗಲೂ ಅರಿಯದೇ ಕೆಲವು ಜಾಗಗಳನ್ನು ನಿರ್ಲಕ್ಷಿಸುತ್ತೇವೆ. ಅವು ಯಾವುವು? 

3 Min read
Author : Ashwini HR
Published : May 26 2026, 06:55 PM IST
Share this Photo Gallery
  • FB
  • TW
  • Linkdin
  • Whatsapp
19
ಅಂತಹ ಜಾಗಗಳು ಯಾವುವು?
Image Credit : AI Image

ಅಂತಹ ಜಾಗಗಳು ಯಾವುವು?

ಅಂತಹ ಜಾಗಗಳು ಯಾವುವು?
ತಜ್ಞರ ಪ್ರಕಾರ, ಸ್ನಾನಗೃಹವನ್ನು ಸ್ವಚ್ಛಗೊಳಿಸುವುದು ಕಠಿಣ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸ. ಅಲ್ಲಿ ಯಾವಾಗಲೂ ಯಾವುದಾದರೊಂದು ಮೂಲೆಯನ್ನು ಉಜ್ಜುವುದು ಅಥವಾ ಸೋಂಕುರಹಿತಗೊಳಿಸುವುದು ಬಾಕಿ ಇದ್ದೇ ಇರುತ್ತದೆ. ಆದರೆ, ನೀವು ಸ್ವತಃ ಸ್ವಚ್ಛಗೊಳಿಸುತ್ತಿರಲಿ ಅಥವಾ ಯಾರನ್ನಾದರೂ ಕೆಲಸಕ್ಕೆ ನೇಮಿಸಿರಲಿ, ಕೆಲವು ಜಾಗಗಳು ಯಾವಾಗಲೂ ಮರೆತುಹೋಗುತ್ತವೆ. ಅಂತಹ ಜಾಗಗಳು ಯಾವುವು ಎಂದು ತಿಳಿಯಲು ಮತ್ತು ಅವುಗಳನ್ನು ಕನ್ನಡಿಯಂತೆ ಹೊಳೆಯುವಂತೆ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

Add Asianetnews Kannada as a Preferred SourcegooglePreferred
29
1. ಶವರ್ ಕರ್ಟನ್ ಲೈನರ್ (Shower curtain liner)
Image Credit : instagram

1. ಶವರ್ ಕರ್ಟನ್ ಲೈನರ್ (Shower curtain liner)

1. ಶವರ್ ಕರ್ಟನ್ ಲೈನರ್ (Shower curtain liner)
ಮನೆಯ ಉಳಿದೆಲ್ಲ ಭಾಗಗಳು ಎಷ್ಟೇ ಸ್ವಚ್ಛವಾಗಿದ್ದರೂ, ಒಂದು ಕೊಳಕು ಶವರ್ ಕರ್ಟನ್ ಇಡೀ ಸ್ನಾನಗೃಹವೇ ಗಲೀಜಾಗಿ ಕಾಣುವಂತೆ ಮಾಡುತ್ತದೆ. ಕರ್ಟನ್ ಯಾವ ಮೆಟೀರಿಯಲ್‌ನಿಂದ ಮಾಡಲ್ಪಟ್ಟಿದೆ ಎಂಬುದನ್ನು ನೋಡಿಕೊಂಡು, ನೀವು ಅದನ್ನು ಮಷಿನ್‌ನಲ್ಲಿ ತೊಳೆಯಬಹುದು ಅಥವಾ ಬಟ್ಟೆಯಿಂದ ಒರೆಸಬಹುದು. "ಪ್ರತಿ ಬಾರಿ ಸ್ನಾನದ ನಂತರ ಕರ್ಟನ್ ಅನ್ನು ಪೂರ್ತಿಯಾಗಿ ಹರಡಿ ಬಿಡುವುದರಿಂದ ಅದು ಬೇಗನೆ ಒಣಗುತ್ತದೆ ಮತ್ತು ಪದೇ ಪದೇ ಕ್ಲೀನ್ ಮಾಡುವ ಕೆಲಸ ತಪ್ಪುತ್ತದೆ". ಅಂದಹಾಗೆ ಅದರಲ್ಲಿ ಅತಿಯಾದ ವಾಸನೆ, ಕಲೆ ಅಥವಾ ಹರಿದಿರುವುದು ಕಂಡುಬಂದರೆ ಅದನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥ. 

Related Articles

Related image1
ಉಜ್ಜಿದ್ರೆ ಪ್ರಯೋಜನವಿಲ್ಲ, ಶರ್ಟ್ ಕಾಲರ್ ಮೇಲಿನ ಕಪ್ಪು ಕಲೆ ತೆಗೆಯಲು ಈ ಟ್ರಿಕ್ಸ್ ಬಳಸಿ
Related image2
ಅಗ್ಗ ಮತ್ತು ಸುರಕ್ಷಿತ ವಿಧಾನವಿದು.. ಜಿರಲೆಗಳು ಓಡಾಡುವ ಜಾಗದಲ್ಲಿ ಈ ಪೌಡರ್ ಉದುರಿಸಿ
39
2. ಸಿಂಕ್ ಮತ್ತು ಶವರ್ ಫಿಟ್ಟಿಂಗ್‌ಗಳು (Fixtures)
Image Credit : instagram

2. ಸಿಂಕ್ ಮತ್ತು ಶವರ್ ಫಿಟ್ಟಿಂಗ್‌ಗಳು (Fixtures)

2. ಸಿಂಕ್ ಮತ್ತು ಶವರ್ ಫಿಟ್ಟಿಂಗ್‌ಗಳು (Fixtures)
ನಿಮ್ಮ ನಲ್ಲಿ ಅಥವಾ ಶವರ್‌ಹೆಡ್ ಮೇಲೆ ಬಿಳಿ ಬಣ್ಣದ ಮಸಕಾದ ಕಲೆಗಳು ಕಂಡುಬಂದರೆ, ಅವು ಗಟ್ಟಿನೀರಿನಲ್ಲಿರುವ ಖನಿಜಾಂಶಗಳಿಂದ (Hard water stains) ಉಂಟಾದ ಕಲೆಗಳಾಗಿರುತ್ತವೆ. ಬರಿ ಒರೆಸುವುದರಿಂದ ಇವು ಹೋಗುವುದಿಲ್ಲ.
ಶವರ್‌ಹೆಡ್: ಹಳೆಯ ಟೂತ್‌ಬ್ರಷ್ ಅನ್ನು ಬಿಳಿ ವಿನೆಗರ್‌ನಲ್ಲಿ ಅದ್ದಿ ಮೆಲ್ಲಗೆ ಉಜ್ಜಿ.
ನಲ್ಲಿಗಳು: ನೀರು ಮತ್ತು ಬಿಳಿ ವಿನೆಗರ್ ಅನ್ನು 50/50 ಪ್ರಮಾಣದಲ್ಲಿ ಬೆರೆಸಿ. ಅದರಲ್ಲಿ ಒಂದು ಬಟ್ಟೆಯನ್ನು ನೆನೆಸಿ. ಆ ಬಟ್ಟೆಯನ್ನು ನಲ್ಲಿಯ ಸುತ್ತ 10 ನಿಮಿಷಗಳ ಕಾಲ ಸುತ್ತಿಡಿ, ನಂತರ ಬ್ರಷ್‌ನಿಂದ ಉಜ್ಜಿ ನೀರಿನಿಂದ ತೊಳೆಯಿರಿ.

49
3. ಮೆಡಿಸಿನ್ ಕ್ಯಾಬಿನೆಟ್ ಮೇಲ್ಭಾಗ
Image Credit : pinterest

3. ಮೆಡಿಸಿನ್ ಕ್ಯಾಬಿನೆಟ್ ಮೇಲ್ಭಾಗ

3. ಮೆಡಿಸಿನ್ ಕ್ಯಾಬಿನೆಟ್ ಮೇಲ್ಭಾಗ
ನಾವು ಕನ್ನಡಿಯನ್ನಂತೂ ಯಾವಾಗಲೂ ಸ್ವಚ್ಛಗೊಳಿಸುತ್ತೇವೆ, ಆದರೆ ಮೆಡಿಸಿನ್ ಕ್ಯಾಬಿನೆಟ್‌(ಸಾಮಾನ್ಯವಾಗಿ ಸ್ನಾನಗೃಹದಲ್ಲಿ ಕನ್ನಡಿಯ ಹಿಂಭಾಗದಲ್ಲಿ ಅಥವಾ ಕನ್ನಡಿಯ ಪಕ್ಕದಲ್ಲಿ ಇರುವ ಸಣ್ಣ ಕಪಾಟು) ನ ಮೇಲ್ಭಾಗವನ್ನು ಕೊನೆಯ ಬಾರಿ ಯಾವಾಗ ಸ್ವಚ್ಛಗೊಳಿಸಿದ್ದೀರಿ ನೆನಪಿಸಿಕೊಳ್ಳಿ. ಇಲ್ಲವಾದಲ್ಲಿ ಈ ಜಾಗವನ್ನು ಸ್ವಚ್ಛಗೊಳಿಸಲು ಮೊದಲು ಮೈಕ್ರೋಫೈಬರ್ ಬಟ್ಟೆ ಅಥವಾ ಡಸ್ಟರ್ ಬಳಸಿ ಧೂಳು ತೆಗೆಯಿರಿ, ನಂತರ ಅವಶ್ಯಕತೆ ಇದ್ದರೆ ಒದ್ದೆ ಬಟ್ಟೆಯಿಂದ ಒರೆಸಿ.

59
4. ಸಿಂಕ್ ಮತ್ತು ಡ್ರೈನ್ ಸ್ಟಾಪರ್ (Drain stopper)
Image Credit : Pixabay

4. ಸಿಂಕ್ ಮತ್ತು ಡ್ರೈನ್ ಸ್ಟಾಪರ್ (Drain stopper)

4. ಸಿಂಕ್ ಮತ್ತು ಡ್ರೈನ್ ಸ್ಟಾಪರ್ (Drain stopper)
ಸಿಂಕ್ ಮತ್ತು ಅದರ ಹಿಡಿಗಳನ್ನು ಸ್ವಚ್ಛಗೊಳಿಸುವುದು ಸುಲಭ, ಆದರೆ ಜನರು ಹೆಚ್ಚಾಗಿ ಸಿಂಕ್‌ನ ತೂತು (ಡ್ರೈನ್) ಮತ್ತು ಅದರ ಸ್ಟಾಪರ್ ಅನ್ನು ಮರೆಯುತ್ತಾರೆ. ಅಲ್ಲಿ ಟೂತ್‌ಪೇಸ್ಟ್, ಕೂದಲು, ಸೋಪಿನ ನೊರೆ ಮತ್ತು ಕೊಳೆ ಸಂಗ್ರಹವಾಗಿ ಗುಲಾಬಿ ಬಣ್ಣದ ಪಾಚಿಯಂತಹ ಬೂಸ್ಟ್ (Pink mold) ಬೆಳೆಯಲು ಕಾರಣವಾಗುತ್ತದೆ. "ಕೊಳೆಯನ್ನು ತಡೆಗಟ್ಟಲು ಮಲ್ಟಿ-ಪರ್ಪಸ್ ಕ್ಲೀನರ್ ಬಳಸಿ ನಿಯಮಿತವಾಗಿ ಡ್ರೈನ್ ಸುತ್ತಲೂ ಸ್ವಚ್ಛಗೊಳಿಸಿ" ಎನ್ನುತ್ತಾರೆ ತಜ್ಞರು. ಒಂದು ವೇಳೆ ನೀರು ನಿಧಾನವಾಗಿ ಹೋಗುತ್ತಿದ್ದರೆ ಡ್ರೈನ್ ಕ್ಲೀನರ್ ಬಳಸಬೇಕಾಗಬಹುದು.

69
5. ಎಕ್ಸಾಸ್ಟ್ ಫ್ಯಾನ್ ಕವರ್ (Exhaust fan cover)
Image Credit : Social Media

5. ಎಕ್ಸಾಸ್ಟ್ ಫ್ಯಾನ್ ಕವರ್ (Exhaust fan cover)

5. ಎಕ್ಸಾಸ್ಟ್ ಫ್ಯಾನ್ ಕವರ್ (Exhaust fan cover)
ಎಕ್ಸಾಸ್ಟ್ ಫ್ಯಾನ್‌ಗಳು ಎತ್ತರದಲ್ಲಿ ಇರುವುದರಿಂದ ನಮ್ಮ ಕಣ್ಣಿಗೆ ಬೀಳುವುದಿಲ್ಲ. ಆದರೆ ಇವು ಸ್ನಾನಗೃಹದ ತೇವಾಂಶವನ್ನು ನಿಯಂತ್ರಿಸುತ್ತವೆ. ಫ್ಯಾನ್ ಕವರ್ ಮೇಲೆ ಧೂಳು ಕುಳಿತಿದ್ದರೆ ಅದು ಸರಿಯಾಗಿ ಕೆಲಸ ಮಾಡುವುದಿಲ್ಲ. ಪ್ರತಿ ಕೆಲವು ತಿಂಗಳಿಗೊಮ್ಮೆ ಅಥವಾ ಧೂಳು ಸಂಗ್ರಹವಾದಾಗ ವ್ಯಾಕ್ಯೂಮ್ ಕ್ಲೀನರ್ ಅಥವಾ ಒದ್ದೆ ಬಟ್ಟೆಯಿಂದ ಕವರ್ ಅನ್ನು ಒರೆಸಿ. ಸರಿಯಾದ ಗಾಳಿಯಾಡುವಿಕೆ ಇಲ್ಲದಿದ್ದರೆ ಬೂಸ್ಟ್ ಬೆಳೆಯುವ ಅಪಾಯವಿರುತ್ತದೆ.

79
6. ಟೈಲ್ಸ್ ನಡುವಿನ ಗೆರೆಗಳು (Grout lines)
Image Credit : google

6. ಟೈಲ್ಸ್ ನಡುವಿನ ಗೆರೆಗಳು (Grout lines)

6. ಟೈಲ್ಸ್ ನಡುವಿನ ಗೆರೆಗಳು (Grout lines)
ಟೈಲ್ಸ್‌ಗಳ ನಡುವಿನ ಸಂದಿಗಳಲ್ಲಿ ಸೋಪಿನ ಜಿಡ್ಡು, ಧೂಳು ಮತ್ತು ಬೂಸ್ಟ್ ಕುಳಿತುಕೊಳ್ಳುತ್ತದೆ. ಇದು ರಂಧ್ರಗಳಿಂದ ಕೂಡಿದ ಜಾಗವಾದ್ದರಿಂದ ಕಾಲಕ್ರಮೇಣ ಬಣ್ಣಗೆಡುತ್ತದೆ.
ಉಪಾಯ: 3/4 ಕಪ್ ಕ್ಲೋರಿನ್ ಬ್ಲೀಚ್ ಅನ್ನು 1 ಗ್ಯಾಲನ್ ನೀರಿಗೆ ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಬ್ರಷ್ ಸಹಾಯದಿಂದ ಆ ಗೆರೆಗಳಿಗೆ ಹಚ್ಚಿ, ಕೆಲವು ನಿಮಿಷ ಬಿಟ್ಟು ನಂತರ ಉಜ್ಜಿ ನೀರಿನಿಂದ ತೊಳೆಯಿರಿ. ಇದನ್ನು ಬಳಸುವಾಗ ಕೈಗೆ ಗ್ಲೌಸ್ ಮತ್ತು ಮೂಗಿಗೆ ಮಾಸ್ಕ್ ಧರಿಸುವುದು ಒಳ್ಳೆಯದು. ಸಣ್ಣ ಮಕ್ಕಳು ಮತ್ತು ಸಾಕುಪ್ರಾಣಿಗಳು ಈ ಕೆಮಿಕಲ್‌ನಿಂದ ದೂರವಿರಲಿ. ಒಂದು ವೇಳೆ ಇದು ಚರ್ಮಕ್ಕೆ ತಾಗಿದರೆ ಸುಟ್ಟ ಅನುಭವ ಅಥವಾ ಕೆರೆತ (Irritation) ಉಂಟಾಗುತ್ತದೆ.

89
7. ಸಿಂಕ್ ಕೆಳಗಿನ ಜಾಗ
Image Credit : Asianet News

7. ಸಿಂಕ್ ಕೆಳಗಿನ ಜಾಗ

7. ಸಿಂಕ್ ಕೆಳಗಿನ ಜಾಗ
ಸಿಂಕ್ ಕೆಳಗಿರುವ ಕ್ಯಾಬಿನೆಟ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಅದು ಹಳೆಯ ಬಾಟಲಿಗಳು, ಧೂಳು ಮತ್ತು ಅನುಪಯುಕ್ತ ವಸ್ತುಗಳ ಗುಜರಿ ಅಂಗಡಿಯಂತಾಗುತ್ತದೆ. ಅಲ್ಲಿರುವ ಎಲ್ಲ ವಸ್ತುಗಳನ್ನು ಹೊರತೆಗೆಯಿರಿ, ನೀರಿನ ಸೋರಿಕೆ ಇದೆಯೇ ಎಂದು ಪರೀಕ್ಷಿಸಿ ಮತ್ತು ಎಕ್ಸ್‌ಪೈರಿ ಆದ ವಸ್ತುಗಳನ್ನು ಎಸೆದುಬಿಡಿ. ಆ ಜಾಗವನ್ನು ಅಚ್ಚುಕಟ್ಟಾಗಿ ಇಡಲು ಆರ್ಗನೈಸರ್ ಬಳಸಿ.

99
8. ಟಾಯ್ಲೆಟ್ ಹ್ಯಾಂಡಲ್
Image Credit : Socialmedia

8. ಟಾಯ್ಲೆಟ್ ಹ್ಯಾಂಡಲ್

8. ಟಾಯ್ಲೆಟ್ ಹ್ಯಾಂಡಲ್
ಹೆಚ್ಚು ಬಾರಿ ಸ್ಪರ್ಶಿಸುವ ಈ ಜಾಗವನ್ನು ನಾವು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ವಾರಕ್ಕೊಮ್ಮೆ ಟಾಯ್ಲೆಟ್ ಕ್ಲೀನ್ ಮಾಡುವಾಗ ಈ ಹ್ಯಾಂಡಲ್ ಅನ್ನು ಸೋಂಕುರಹಿತಗೊಳಿಸಿ (Disinfect). "ಡಿಸ್‌ಇನ್‌ಫೆಕ್ಟಂಟ್ ಸ್ಪ್ರೇ ಬಳಸುವಾಗ ಅದರ ಮೇಲಿರುವ ಸೂಚನೆಗಳನ್ನು ಓದಿ" ಎನ್ನುತ್ತಾರೆ ತಜ್ಞರು. ಹೆಚ್ಚಿನ ಕ್ಲೀನರ್‌ಗಳು ಕೆಲಸ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ, ಹಾಗಾಗಿ ಸ್ಪ್ರೇ ಮಾಡಿದ ತಕ್ಷಣ ಒರೆಸಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
ಕರೆಂಟ್ ಬಿಲ್ ಏಕಾಏಕಿ ಜಾಸ್ತಿಯಾಗಿದೆಯಾ? ಫ್ರಿಡ್ಜ್ ಬಳಕೆಯಲ್ಲಿ ಈ ತಪ್ಪುಗಳಿದೆಯೇ ನೋಡಿ!
Recommended image2
ಪದ್ಮಶ್ರೀ ಪುರಸ್ಕೃತೆಯಿಂದ ಐಶ್ಚರ್ಯ ರೈ ಬಾಡಿ ಶೇಮಿಂಗ್: ಯಾರೀ ಮೃಣಾಲ್​? ಪ್ರಶಸ್ತಿ ಸಿಕ್ಕಿದ್ದು ಹೇಗೆ
Recommended image3
ಉಜ್ಜಿದ್ರೆ ಪ್ರಯೋಜನವಿಲ್ಲ, ಶರ್ಟ್ ಕಾಲರ್ ಮೇಲಿನ ಕಪ್ಪು ಕಲೆ ತೆಗೆಯಲು ಈ ಟ್ರಿಕ್ಸ್ ಬಳಸಿ
Related Stories
Recommended image1
ಉಜ್ಜಿದ್ರೆ ಪ್ರಯೋಜನವಿಲ್ಲ, ಶರ್ಟ್ ಕಾಲರ್ ಮೇಲಿನ ಕಪ್ಪು ಕಲೆ ತೆಗೆಯಲು ಈ ಟ್ರಿಕ್ಸ್ ಬಳಸಿ
Recommended image2
ಅಗ್ಗ ಮತ್ತು ಸುರಕ್ಷಿತ ವಿಧಾನವಿದು.. ಜಿರಲೆಗಳು ಓಡಾಡುವ ಜಾಗದಲ್ಲಿ ಈ ಪೌಡರ್ ಉದುರಿಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved