MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Toy Dog Breeds: ಚಿಕ್ಕ ನಾಯಿ ಸಾಕುವ ಪ್ಲ್ಯಾನ್ ಇದ್ಯಾ? ಈ 7 ಮುದ್ದಾದ ತಳಿಗಳ ಬಗ್ಗೆ ತಿಳಿಯಿರಿ

Toy Dog Breeds: ಚಿಕ್ಕ ನಾಯಿ ಸಾಕುವ ಪ್ಲ್ಯಾನ್ ಇದ್ಯಾ? ಈ 7 ಮುದ್ದಾದ ತಳಿಗಳ ಬಗ್ಗೆ ತಿಳಿಯಿರಿ

ಕುಟುಂಬದ ಸಂತೋಷ ಹೆಚ್ಚಿಸುವ ಟಾಯ್ ಡಾಗ್ ತಳಿ(Toy dog ​​breed) ಯಾವುದು? ಟಾಯ್ ಪೂಡಲ್ ಅನ್ನು ಜಗತ್ತಿನ ಅತ್ಯಂತ ಬುದ್ಧಿವಂತ ಚಿಕ್ಕ ನಾಯಿಗಳಲ್ಲಿ ಒಂದು ಎಂದು ಏಕೆ ಪರಿಗಣಿಸಲಾಗುತ್ತದೆ? ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರಿಗೆ ಯಾವ ಮಿನಿಯೇಚರ್ ಡಾಗ್ ತಳಿಗಳು ಉತ್ತಮ?

2 Min read
Author : Ravi Janekal
Published : Jun 16 2026, 10:56 AM IST
Share this Photo Gallery
  • FB
  • TW
  • Linkdin
  • Whatsapp
18
Image Credit : Gemini AI

ಮನೆಯಲ್ಲಿ ಮುದ್ದಾದ, ಅಷ್ಟೇ ಚುರುಕಾದ, ಚಿಕ್ಕ ಜಾಗದಲ್ಲಿ ಸುಲಭವಾಗಿ ಹೊಂದಿಕೊಳ್ಳಬಲ್ಲ ಡಾಗ್ ಸಾಕಲು ನೀವು ಬಯಸಿದರೆ, ಟಾಯ್ ಮತ್ತು ಮಿನಿಯೇಚರ್ ಡಾಗ್ ತಳಿಗಳು ತುಂಬಾ ಉತ್ತಮ. ಏಕೆಂದರೆ ಇವು ನೋಡಲು ಚಿಕ್ಕದಾಗಿ, ಮುದ್ದಾಗಿ ಕಾಣುತ್ತವೆ. ಈ ತಳಿಯ ನಾಯಿಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಸುಲಭವಾಗಿ ವಾಸಿಸುವುದಲ್ಲದೆ, ತಮ್ಮ ಮಾಲೀಕರೊಂದಿಗೆ Deep Bonding ಬೆಳಿಸಿಕೊಳ್ಳುತ್ತವೆ. ಆದರೂ ಇವುಗಳಲ್ಲಿ ಕೆಲವು ಭಾರೀ ಚೇಷ್ಟೆ ಮಾಡ್ತವೆ. ಇನ್ನು ಕೆಲವು ಇಡೀ ದಿನ ಕುಟುಂಬದ ಜೊತೆ ಕಳೆಯಲು ಇಷ್ಟಪಡುತ್ತವೆ. ಮಾಲೀಕ ಹೊರಗಡೆ ಹೋದ್ರೂ ದುಂಬಾಲು ಬಿಳುತ್ತವೆ. ಇದೇ ಕಾರಣಕ್ಕೆ ಕಾರುಗಳಲ್ಲಿ, ಸ್ಕೂಟರ್‌ಗಳಲ್ಲಿ ಕೂರಿಸಿಕೊಂಡು ಹೊರಡು ದೃಶ್ಯ ನೀವು ನೋಡಿರಬಹುದು. ಕುಟುಂಬಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾದ ಅಂತಹ 7 ಜನಪ್ರಿಯ ಚಿಕ್ಕ ನಾಯಿ ತಳಿಗಳ ಬಗ್ಗೆ ಇಲ್ಲಿ ತಿಳಿಯೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಕೇವಲಿಯರ್ ಕಿಂಗ್ ಚಾರ್ಲ್ಸ್ (Cavalier King Charles Spaniel)
Image Credit : pinterest

ಕೇವಲಿಯರ್ ಕಿಂಗ್ ಚಾರ್ಲ್ಸ್ (Cavalier King Charles Spaniel)

ಕೇವಲಿಯರ್ ಕಿಂಗ್ ಚಾರ್ಲ್ಸ್ ಸ್ಪೈನಿಯೆಲ್(Cavalier King Charles Spaniel) ಈ ತಳಿಯ ನಾಯಿ ಮನುಷ್ಯ ಗುಣದ್ದು, ಪ್ರೀತಿ ಸ್ನೇಹಕ್ಕೆ ಹೆಸರುವಾಸಿ. ಈ ತಳಿಯ ನಾಯಿ ಮಕ್ಕಳು, ಅತಿಥಿಗಳು ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೆ ಸುಲಭವಾಗಿ ಬೆರೆಯುತ್ತದೆ. ಇತರೆ ನಾಯಿಗಳಂತೆ ಅಟ್ಯಾಕ್ ಮಾಡೋಲ್ಲ. ಅಲ್ಲದೇ ಈ ನಾಯಿಗಳು ಇಂಥದ್ದೇ ತಿಂಡಿ ಬೇಕು ಅಂತಾ ಹಟಕ್ಕೆ ಬಿಳೋಲ್ಲ. ಮನೆಯ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳುತ್ತವೆ.

Related Articles

Related image1
ವಿಶ್ವದ ಟಾಪ್ 7 ಅತ್ಯಂತ ಅಪಾಯಕಾರಿ ನಾಯಿ ತಳಿಗಳು; ಸಾಕ್ತೀರಾ? ಇದು ತಿಳಿದಿರಲಿ!
Related image2
ಇದು ಅಸಲಿ ಡಾಗ್ ಪ್ರೀತಿ, ಕೇವಲ ಸ್ಥಳಾಂತರಕ್ಕೆ 15 ಲಕ್ಷ ರೂ ಖರ್ಚು ಮಾಡಿದ ಭಾರತೀಯ ದಂಪತಿ
38
ಪೊಮೆರೇನಿಯನ್ (Pomeranian)
Image Credit : pinterest

ಪೊಮೆರೇನಿಯನ್ (Pomeranian)

ಪೊಮೆರೇನಿಯನ್‌ ನಾಯಿ ನೋಡೋಕೆ ಚಿಕ್ಕದಾಗಿ ಕಾಣಿಸಿದರೂ ಆತ್ಮವಿಶ್ವಾಸದ ವಿಚಾರಕ್ಕೆ ಬಂದ್ರೆ ಯಾವುದೇ ದೊಡ್ಡ ನಾಯಿಗಿಂತ ಕಡಿಮೆಯಿಲ್ಲ. ಇವು ಅತ್ಯಂತ ಜಾಗರೂಕ, ಚುರುಕು, ಕುತೂಹಲಕಾರಿ, ಸಣ್ಣ ಬದಲಾವಣೆ, ಅಪಾಯವನ್ನು ಗುರುತಿಸಬಲ್ಲವು. ಆದರೆ ಇವು ಸ್ವಲ್ಪ ತರಲೆ ಚೇಷ್ಟೆ ಮಾಡೋದ್ರಲ್ಲಿ ಮುಂದು. ಇವುಗಳಿಗ ಮೈತುಂಬ ಉಣ್ಣೆಯಂತ ತುಪ್ಪಳ ಇರೋದ್ರಿಂದ ಸಾಕಲು ಇಷ್ಟಪಡೋರು ದಿನನಿತ್ಯದ ಆರೈಕೆ ಬಗ್ಗೆಯೂ ಕಾಳಜಿವಹಿಸುವುದು ಮುಖ್ಯ. ನೋಡೋಕೆ ತುಂಬಾ ಮುದ್ದಾಗಿ ಕಾಣುತ್ತವೆ. ಇಂಥ ತಳಿಯ ನಾಯಿ ಮನೆಯಲ್ಲಿದ್ರೆ ಸ್ಟ್ರೆಸ್ ಬೂಸ್ಟರ್ ರೀತಿ ಕೆಲಸ ಮಾಡುತ್ತವೆ. ಆಫೀಸ್ ಕೆಲಸ, ಬ್ಯುಸಿನೆಸ್ ಅಂತ ತಲೆ ಸಿಡಿದು ಮನೆಗೆ ಹೋದಾಗ ಎದುರಿಗೆ ಬಂದಾಗ ಸ್ವಾಗತಿಸುವ ಇವುಗಳ ಮುದ್ದು ಮುಖ ನೋಡಿದಾಗಲೇ ಮನಸು ರಿಲ್ಯಾಕ್ಸ್ ಅದಂತ ಫೀಲು..!

48
ಶಿಹ್ ತ್ಸು (Shih Tzu)
Image Credit : pinterest

ಶಿಹ್ ತ್ಸು (Shih Tzu)

ಶಿಹ್ ತ್ಸು ತಳಿಗೆ ಮನುಷ್ಯರ ಒಡನಾಟ ಎಂದರೆ ತುಂಬಾ ಇಷ್ಟ. ಇವು ಶಾಂತ ಸ್ವಭಾವದವು. ತಾವಾಯ್ತು ತಮ್ಮ ಪಾಡಾಯ್ತು ಎಂಬ ರೀತಿಯವು. ಇತರೆ ತಳಿಗಳಂತೆ ಜಗಳಗಂಟ ಚೇಷ್ಟೆ ಮಾಡುವುದಿಲ್ಲ. ಯಾವಾಗಲೂ ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತವೆ. ಹೆಚ್ಚು ಓಡಾಟದ ಬದಲು ಜೊತೆಗಿರಲು ಇಷ್ಟಪಡುವ ನಾಯಿಯನ್ನು ನೀವು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ.

58
ಮಾಲ್ಟೀಸ್ (Maltese)
Image Credit : pinterest

ಮಾಲ್ಟೀಸ್ (Maltese)

ಮಾಲ್ಟೀಸ್ ತನ್ನ ಬಿಳಿ ಮತ್ತು ರೇಷ್ಮೆಯಂತಹ ಕೋಟ್‌ನಿಂದಾಗಿ ತುಂಬಾ ಮುದ್ದಾಗಿ ಕಾಣುತ್ತದೆ. ಆದರೆ ಈ ಸೌಂದರ್ಯದ ಹಿಂದೆ, ಆಟವಾಡಲು ಇಷ್ಟಪಡುವ ಮತ್ತು Affectionate nature ಅಡಗಿದೆ. ಇವು ತಮ್ಮ ಮಾಲೀಕರೊಂದಿಗೆ ಬಾಂಡಿಗ್ ಬೆಳೆಸಿಕೊಳ್ಳುತ್ತವೆ.ಯಾವಾಗಲೂ ಅವರ ಸುತ್ತಲೂ ಇರಲು ಇಷ್ಟಪಡುತ್ತವೆ.

68
ಟಾಯ್ ಪೂಡಲ್ (Toy Poodle)
Image Credit : pinterest

ಟಾಯ್ ಪೂಡಲ್ (Toy Poodle)

ಟಾಯ್ ಪೂಡಲ್ ಅನ್ನು ವಿಶ್ವದ ಅತ್ಯಂತ ಬುದ್ಧಿವಂತ ನಾಯಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇವುಗಳು ಎಷ್ಟು ಸ್ಮಾರ್ಟ್ ಎಂದರೆ ನೀವು ಒಮ್ಮೆ ಸೂಚನೆಗಳನ್ನ ಹೇಳಿಕೊಟ್ಟರೆ ಸಾಕು ಬಹಳ ಬೇಗನೆ ಕಲಿತುಕೊಳ್ಳುತ್ತವೆ. ತರಬೇತಿಯ ಸಮಯದಲ್ಲಿ ಅದ್ಭುತ ಪ್ರದರ್ಶನ ನೀಡುತ್ತವೆ. ಬುದ್ಧಿವಂತಿಕೆಯ ಜೊತೆಗೆ, ಅವುಗಳ ಪ್ರೀತಿಯ ಸ್ವಭಾವವು ಕುಟುಂಬಗಳ ಅಚ್ಚುಮೆಚ್ಚಿನ ಡಾಗ್ ಇದು.

78
ಬಿಶಾನ್ ಫ್ರೈಜ್ (Bichon Frise)
Image Credit : pinterest

ಬಿಶಾನ್ ಫ್ರೈಜ್ (Bichon Frise)

ಬಿಶಾನ್ ಫ್ರೈಜ್ ತನ್ನ Cheerful and friendly personality ಗೆ ಹೆಸರುವಾಸಿಯಾಗಿದೆ. ಇವು ಹೊಸ ಜನರನ್ನು ಭೇಟಿಯಾಗಲು ಹಿಂಜರಿಯುವುದಿಲ್ಲ. ಮನೆಯಲ್ಲಿ ಯಾವಾಗಲೂ ಪಾಸಿಟಿವ್ ವಾತಾವರಣವನ್ನು ಕಾಪಾಡುತ್ತವೆ, ಮಕ್ಕಳಿರುವ ಕುಟುಂಬಗಳಿಗೆ ಇವುಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ.

88
ಹವಾನೀಸ್ (Havanese)
Image Credit : pinterest

ಹವಾನೀಸ್ (Havanese)

ಹವಾನೀಸ್ ಜನರ ಒಡನಾಟವನ್ನು ಹೆಚ್ಚು ಇಷ್ಟಪಡುವ ನಾಯಿಯಾಗಿದೆ. ಇವು ಕುಟುಂಬದ ಚಟುವಟಿಕೆಗಳಲ್ಲಿ ಭಾಗವಹಿಸಲು ಬಯಸುತ್ತವೆ ತನ್ನ ಮಾಲೀಕ ಏನೇ ಕೆಲಸ ಮಾಡಿದ್ರೂ ಅಲ್ಲೆಲ್ಲ ಇದರ ಸುತ್ತಾಟವಿರುತ್ತೆ. ಈ ಸ್ವಭಾವದಿಂದ ಬಹಳ ಇಷ್ಟಪಡ್ತಾರೆ. ಎಲ್ಲದಕ್ಕೂ ಇವುಗಳ ಹೊಂದಿಕೊಳ್ಳುವ ಸ್ವಭಾವವು ಎಲ್ಲಾ ರೀತಿಯ ಮನೆಗಳಿಗೆ ಸೂಕ್ತವಾಗುವಂತೆ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಜೀವನಶೈಲಿ
ಸಾಕು ಪ್ರಾಣಿ
ನಾಯಿ

Latest Videos
Recommended Stories
Recommended image1
Home Gardening: ಮಾರ್ಕೆಟ್‌ನಿಂದ ಯಾಕೆ ತರ್ತೀರಾ? ಮನೆಯಲ್ಲೇ ಬೆಳೆಯಿರಿ 4 ದುಬಾರಿ ಬೆರ್ರಿ ಹಣ್ಣುಗಳು!
Recommended image2
ಗಾಳಿಯಷ್ಟು ಹಗುರ, ಬಲೂನ್‌ನಷ್ಟು ಉಬ್ಬಿದ ಪೂರಿಗಾಗಿ ಟ್ರೈ ಮಾಡಿ ಈ 7 ಹ್ಯಾಕ್ಸ್
Recommended image3
ರಾತ್ರಿ ಯಾರೋ ನಿಮ್ಮನ್ನ ಗಮನಿಸ್ತಿದ್ದಾರೆ ಎಂದು ಅನಿಸಿದ್ಯಾ? ದೆವ್ವ ಅಲ್ಲ ಇದರ ಹಿಂದಿನ ಕಾರಣ ಏನು ಗೊತ್ತಾ?
Related Stories
Recommended image1
ವಿಶ್ವದ ಟಾಪ್ 7 ಅತ್ಯಂತ ಅಪಾಯಕಾರಿ ನಾಯಿ ತಳಿಗಳು; ಸಾಕ್ತೀರಾ? ಇದು ತಿಳಿದಿರಲಿ!
Recommended image2
ಇದು ಅಸಲಿ ಡಾಗ್ ಪ್ರೀತಿ, ಕೇವಲ ಸ್ಥಳಾಂತರಕ್ಕೆ 15 ಲಕ್ಷ ರೂ ಖರ್ಚು ಮಾಡಿದ ಭಾರತೀಯ ದಂಪತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved