- Home
- Life
- Kitchen
- ಸಾವಿರಾರು ಬೆಲೆಯ ಟೋಸ್ಟರ್ ನಲ್ಲಿ ಬ್ರೆಡ್ ಟೋಸ್ಟ್ ಮಾಡಿ ವೇಸ್ಟ್ ಮಾಡ್ಬೇಡಿ ,ಹಿಂಗೆ ಬಳಸಿದ್ರೆ ಹಣ ವಾಪಸ್
ಸಾವಿರಾರು ಬೆಲೆಯ ಟೋಸ್ಟರ್ ನಲ್ಲಿ ಬ್ರೆಡ್ ಟೋಸ್ಟ್ ಮಾಡಿ ವೇಸ್ಟ್ ಮಾಡ್ಬೇಡಿ ,ಹಿಂಗೆ ಬಳಸಿದ್ರೆ ಹಣ ವಾಪಸ್
ಟೋಸ್ಟರ್ ಕೇವಲ ಬ್ರೆಡ್ ಟೋಸ್ಟ್ ಮಾಡೋಕೆ ಮಾತ್ರ ಅಂತ ನಾವೆಲ್ಲ ಭಾವಿಸಿದ್ದೇವೆ. ಬ್ರೆಡ್ ಟೋಸ್ಟ್ ಆದ್ಮೇಲೆ ಅದು ಮೂಲೆ ಸೇರುತ್ತೆ. ಈ ಟೋಸ್ಟರ್ ಬಹುಪಯೋಗಿ ವಸ್ತು. ಇದ್ರಿಂದ ನಾನಾ ಕೆಲ್ಸಗಳನ್ನು ಮಾಡ್ಬಹುದು. ಇದು ಓವನ್ ರೀತಿಯಲ್ಲಿ ಕೆಲ್ಸ ಮಾಡುತ್ತೆ ಅನ್ನೋದು ನಿಮಗೆ ಗೊತ್ತಾ?

ಬ್ರೆಡ್ ಟೋಸ್ಟರ್
ಬ್ರೇಡ್ ಬೇಯಿಸಲು ಅತ್ಯಂತ ಉಪಯುಕ್ತ ಸಾಧನ ಅಂದ್ರೆ ಅದು ಟೋಸ್ಟರ್. ಬೆಳಿಗ್ಗೆ ಅರ್ಜೆಂಟ್ ನಲ್ಲಿ ಬ್ರೇಕ್ ಫಾಸ್ಟ್ ಗೆ ಬ್ರೆಡ್ ತಿನ್ನುವವರ ಮನೆಯಲ್ಲಿ ಈ ಟೋಸ್ಟರ್ ಗೆ ವಿಶೇಷ ಜಾಗ ಮೀಸಲಿರುತ್ತದೆ. ಆದ್ರೆ ಇದನ್ನು ಬರೀ ಬ್ರೆಡ್ ಟೋಸ್ಟ್ ಮಾಡಲು ಮಾತ್ರ ಬಳಕೆ ಮಾಡ್ತಾರೆ.
ಟೋಸ್ಟರ್ ನಲ್ಲಿ ಪಿಜ್ಜಾ ಬಿಸಿ ಮಾಡ್ಬಹುದು
ರಾತ್ರಿ ಉಳಿದ ಪಿಜ್ಜಾವನ್ನು ಬೆಳಿಗ್ಗೆ ತಿನ್ನೋದು ಕಷ್ಟ. ಅದನ್ನು ಬಿಸಿ ಮಾಡೋದು ಕೂಡ ಸವಾಲಿನ ಕೆಲ್ಸ. ಮೈಕ್ರೋವೇವ್ ನಲ್ಲಿ ಹಾಕಿದ್ರೆ ಅದು ರಬ್ಬರ್ ನಂತಾಗುತ್ತರೆ. ನೀವು ಅದನ್ನು ಟೋಸ್ಟರ್ ನಲ್ಲಿ ಸುಲಭವಾಗಿ ಬಿಸಿ ಮಾಡ್ಬಹುದು. ಪಿಜ್ಜಾ ಸ್ಲೈಸ್ ಗಳನ್ನು ಟೋಸ್ಟರ್ನಲ್ಲಿ ಹಾಕಿದಾಗ ಕೆಳಭಾಗದ ಕ್ರಸ್ಟ್ ಗರಿಗರಿಯಾಗುತ್ತದೆ. ಚೀಸ್ ಕರಗುತ್ತದೆ.
ಆಲೂ ಟಿಕ್ಕಿ ಬಿಸಿ ಮಾಡಿ
ನೀವು ಬ್ರೆಡ್ ಟೋಸ್ಟರ್ ನಲ್ಲಿ ಆಲೂ ಟಿಕ್ಕಿ ಕೂಡ ಬಿಸಿ ಮಾಡಬಹುದು. ಆಲೂಗಡ್ಡೆ ಟಿಕ್ಕಿ ತಣ್ಣಗಾಗಿದ್ದರೆ ಅದನ್ನು ತಿನ್ನಲು ಮನಸ್ಸಾಗೋದಿಲ್ಲ. ಇಂಥ ಸಮಯದಲ್ಲಿ ನೀವು ಆಲೂಗಡ್ಡೆ ಟಿಕ್ಕಿಯನ್ನು ಟೋಸ್ಟರ್ ಗೆ ಹಾಕಬೇಕು. ಬಿಸಿಯನ್ನು ಒಮ್ಮೆ ಹೆಚ್ಚಿಸಬೇಕು. ಆಗ ಆಲೂಗಡ್ಡೆ ಟಿಕ್ಕಿ ಒಳಗಿರುವ ತೇವಾಂಶ ಬಿಸಿಯಾಗುತ್ತದೆ. ತಿನ್ನಲು ಯೋಗ್ಯವಾಗುತ್ತದೆ.
ಗರಂ ಗರಂ ಆಗಿ ಬರುತ್ತೆ ಕಡಲೆಕಾಯಿ
ಕಡಲೆಕಾಯಿ, ಬಾದಾಮಿಯನ್ನು ಹುರಿಯಲು ಬಯಸಿದ್ರೆ ನೀವು ಟೋಸ್ಟರ್ ಬಳಸಬಹುದು. ಟೋಸ್ಟರ್ ನಲ್ಲಿ ಬೇಗ ಕಡಲೆಕಾಯಿ ಹುರಿಯುತ್ತದೆ. ಸ್ಯಾಂಡ್ವಿಚ್ ಬ್ಯಾಗ್ ಅಥವಾ ಟೋಸ್ಟರ್ ಬ್ಯಾಗ್ ಬಳಸಿ ಟೋಸ್ಟರ್ನಲ್ಲಿ ಡ್ರೈ ಫ್ರೂಟ್ಸ್ ಗಳನ್ನು ಟೋಸ್ಟ್ ಮಾಡಬೇಕು. ಆದ್ರೆ ಟೋಸ್ಟರ್ ಗೆ ಹಾಕಿದ ಡ್ರೈ ಫ್ರೂಟ್ಸ್ ಗಳನ್ನು ತಕ್ಷಣ ತೆಗೆಯಬೇಡಿ. ಇವು ತುಂಬಾ ಬಿಸಿಯಾಗಿರುವ ಕಾರಣ ಕೈ ಸುಡುವ ಅಪಾಯವಿರುತ್ತದೆ.
ಟೋಸ್ಟರ್ ನಲ್ಲಿ ರೊಟ್ಟಿ ಬಿಸಿ ಮಾಡಿ
ನೀವು ರೊಟ್ಟಿಯನ್ನು ಕೂಡ ಟೋಸ್ಟರ್ ಬಳಸಿ ಬಿಸಿ ಮಾಡಬಹುದು. ರೊಟ್ಟಿಯನ್ನು ನೇರವಾಗಿ ಸ್ಲಾಟ್ಗೆ ಹಾಕಬಾರದು. ರೊಟ್ಟಿಯನ್ನು ಅಲ್ಯೂಮಿನಿಯಂ ಫಾಯಿಲ್ನಲ್ಲಿ ಲಘುವಾಗಿ ಸುತ್ತಿ ಟೋಸ್ಟರ್ನಲ್ಲಿ ಇರಿಸಿ. ಇದು ಉರಿಯುವುದನ್ನು ತಡೆಯುತ್ತದೆ ಮತ್ತು ಎರಡೂ ಬದಿಗಳಲ್ಲಿ ಬಿಸಿಯಾಗುತ್ತದೆ. ರೊಟ್ಟಿ ತುಂಬಾ ಒಣಗಿದ್ದರೆ, ಬಿಸಿ ಮಾಡುವ ಮೊದಲು ಅದರ ಮೇಲೆ ಸ್ವಲ್ಪ ನೀರು ಸಿಂಪಡಿಸಿ.
ಹಪ್ಪಳ ತಯಾರಿಸೋಕೆ ಟೋಸ್ಟರ್ ಬಳಕೆ
ಎಣ್ಣೆಯಲ್ಲಿ ಕರಿದ ಹಪ್ಪಳ ಬೇಡ ಎನ್ನುವವರು ರೋಸ್ಟ್ ಮಾಡಲು ಬಯಸ್ತಾರೆ. ಆದ್ರೆ ಒಲೆಯಲ್ಲಿ ಸರಿಯಾಗಿ ರೋಸ್ಟ್ ಆಗೋದಿಲ್ಲ. ನೀವು ಟೋಸ್ಟರ್ ಬಳಸಬೇಕು. ಟೋಸ್ಟರ್ ಗೆ ಹಪ್ಪಳವನ್ನು ಮಡಸಿ ಇಲ್ಲವೆ ಕತ್ತರಿಸಿ ಹಾಕಬೇಕು. ಟೋಸ್ಟರ್ ನಲ್ಲಿ ಹಪ್ಪಳದ ಎಲ್ಲ ಭಾಗಕ್ಕೆ ಶಾಖ ತಾಗಿ ಹಪ್ಪಳ ಗರಿಗರಿಯಾಗಿ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

