ಡಿಶ್ ವಾಶ್ ನಿಂದ ಕೈಗೆ ಅಲರ್ಜಿ ಆಗ್ತಿದ್ಯಾ? ಸೋಪ್ ಇಲ್ದೆ ಹೀಗೆ ಪಾತ್ರೆ ಕ್ಲೀನ್ ಮಾಡಿ
ಮಾರ್ಕೆಟ್ ನಲ್ಲಿ ಪಾತ್ರೆ ಕ್ಲೀನ್ ಮಾಡೋಕೆ ಸಾಕಷ್ಟು ಸೋಪ್, ಜೆಲ್ ಸಿಗುತ್ತೆ. ಆದ್ರೆ ಇದ್ರಲ್ಲಿ ಬಳಸುವ ಕೆಮಿಕಲ್ ಮಹಿಳೆಯರ ಕೈಗೆ ಹಾನಿ ಮಾಡ್ತಿದೆ. ಅನೇಕರು ಈ ಸೋಪ್ ಅಲರ್ಜಿಯಿಂದ ಬಳಲ್ತಿದ್ದಾರೆ. ಸೋಪ್, ಜೆಲ್ ಬಳಸ್ದೆ ಮನೆಯಲ್ಲಿರೋ ವಸ್ತು ಬಳಸಿ ಪಾತ್ರೆ ಕ್ಲೀನ್ ಮಾಡೋ ಟ್ರಿಕ್ಸ್ ಇಲ್ಲಿದೆ.

ಅಡುಗೆ ಸೋಡಾ (Baking Soda)
ಪಾತ್ರೆಗಳನ್ನು ಮೊದಲು ಬಿಸಿ ನೀರಿನಲ್ಲಿ ಒದ್ದೆ ಮಾಡಿ. ನಂತ್ರ ಅದರ ಮೇಲೆ ಬೇಕಿಂಗ್ ಸೋಡಾ ಸಿಂಪಡಿಸಿ. ಜಿಡ್ಡು ಹೆಚ್ಚಿದ್ದರೆ 5 ನಿಮಿಷ ಹಾಗೆ ಬಿಡಿ. ನಂತ್ರ ಸ್ಪಾಂಜ್ನಿಂದ ಉಜ್ಜಿ ಬಿಸಿ ನೀರಿನಲ್ಲಿ ತೊಳೆಯಿರಿ. ಇದು ಎಣ್ಣೆಯ ಜಿಡ್ಡನ್ನು ಸುಲಭವಾಗಿ ತೆಗೆದುಹಾಕುತ್ತದೆ.
ನಿಂಬೆ ಉಪ್ಪು
ಒಂದು ಕಪ್ ಬಿಸಿ ನೀರಿಗೆ ಎರಡು ಚಮಚ ಉಪ್ಪು ಮತ್ತು ಒಂದು ನಿಂಬೆಯ ರಸ ಸೇರಿಸಿ. ಚೆನ್ನಾಗಿ ಕಲಸಿ ಪಾತ್ರೆಗಳ ಮೇಲೆ ಹಾಕಿ ಉಜ್ಜಿ ತೊಳೆಯಿರಿ. ಉಪ್ಪು ಆಹಾರದ ಕಲೆಗಳನ್ನು ತೆಗೆದುಹಾಕಿದರೆ, ನಿಂಬೆ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
ಮರದ ಬೂದಿ
ಹಿಂದಿನ ಕಾಲದಲ್ಲಿ ಪಾತ್ರೆ ತೊಳೆಯಲು ಹೆಚ್ಚಾಗಿ ಮರದ ಬೂದಿಯನ್ನು ಬಳಸುತ್ತಿದ್ದರು. ಇದು ಜಿಡ್ಡನ್ನು ತೆಗೆದುಹಾಕುವುದರ ಜೊತೆಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಬೂದಿಯನ್ನು ಪಾತ್ರೆಯ ಮೇಲೆ ಹಾಕಿ ಬಿಸಿ ನೀರಿನಿಂದ ಉಜ್ಜಿ ತೊಳೆಯಬೇಕು.
ಅಕ್ಕಿ ತೊಳೆದ ನೀರು
ಅಕ್ಕಿ ತೊಳೆದ ನೀರಿನಲ್ಲಿ ಇರುವ ಪಿಷ್ಟ ಜಿಡ್ಡನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಪಾತ್ರೆಗಳನ್ನು ಸುಮಾರು 30 ನಿಮಿಷ ಅದರಲ್ಲಿ ನೆನೆಸಿಟ್ಟು ನಂತರ ಬಿಸಿ ನೀರಿನಿಂದ ತೊಳೆಯಬೇಕು.
ವಿನೆಗರ್
ಒಂದು ಕಪ್ ನೀರಿಗೆ 4–5 ಚಮಚ ವಿನೆಗರ್ ಸೇರಿಸಿ ಸ್ಪ್ರೇ ಮಾಡಿ ಅಥವಾ ಪಾತ್ರೆಗಳ ಮೇಲೆ ಸುರಿಯಿರಿ. ಕೆಲವು ನಿಮಿಷಗಳ ನಂತರ ಉಜ್ಜಿ ತೊಳೆಯಿರಿ. ಇದು ಜಿಡ್ಡು ಮತ್ತು ದುರ್ವಾಸನೆ ಎರಡನ್ನೂ ಕಡಿಮೆ ಮಾಡುತ್ತದೆ.
ಬೇಕಿಂಗ್ ಸೋಡಾ ಮತ್ತು ನಿಂಬೆ
ಮೂರು ಚಮಚ ಬೇಕಿಂಗ್ ಸೋಡಾಗೆ ನಿಂಬೆರಸ ಸೇರಿಸಿ ಪೇಸ್ಟ್ ತಯಾರಿಸಿ. ಇದರಲ್ಲಿ ಸ್ಪಾಂಜ್ ಮುಳುಗಿಸಿ ಪಾತ್ರೆಗಳನ್ನು ತೊಳೆಯಿರಿ. ಈ ಮಿಶ್ರಣ ಜಿಡ್ಡು ಮತ್ತು ವಾಸನೆ ತೆಗೆದುಹಾಕಲು ಪರಿಣಾಮಕಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

