MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಚಳಿಗಾಲದಲ್ಲಿಯೂ ಹೆಪ್ಪುಗಟ್ಟದೇ ತುಪ್ಪ ಮರಳು ಮರಳಾಗಿರಲು ಈ ಟಿಪ್ಸ್ ಫಾಲೋ ಮಾಡಿ

ಚಳಿಗಾಲದಲ್ಲಿಯೂ ಹೆಪ್ಪುಗಟ್ಟದೇ ತುಪ್ಪ ಮರಳು ಮರಳಾಗಿರಲು ಈ ಟಿಪ್ಸ್ ಫಾಲೋ ಮಾಡಿ

ಚಳಿಗಾಲದಲ್ಲಿ ತುಪ್ಪ ಎಷ್ಟು ಗಟ್ಟಿಯಾಗುತ್ತದೆಯೆಂದರೆ ಅದನ್ನ ಬಳಸಲು ಕಷ್ಟ. ಮತ್ತೊಮ್ಮೆ ಸ್ಟೌವ್ ಮೇಲೆ ಇಟ್ಟು ಬಿಸಿ ಮಾಡಬೇಕು. ಆದರೆ ಇದು ಪದೇ ಪದೆ ಮಾಡುವುದು ಸೂಕ್ತವಲ್ಲ. ಹೀಗಾಗಿ ತುಪ್ಪ ಗಟ್ಟಿಯಾಗುವುದನ್ನು ತಡೆಯಲು, ಯಾವಾಗಲೂ ಮೃದುವಾಗಿರುವಂತಿರಲು ಏನು ಮಾಡಬೇಕು ಎಂದು ಇಲ್ಲಿ ವಿವರಿಸಿದೆ

3 Min read
Author : Ravi Janekal
Published : Oct 01 2026, 11:16 AM IST
Share this Photo Gallery
  • FB
  • TW
  • Linkdin
  • Whatsapp
15
ಚಳಿಗಾಲದಲ್ಲಿ ತುಪ್ಪ ಗಟ್ಟಿಯಾಗುತ್ತದೆಯೇ ಮೃದುವಾಗಲು ಹೀಗೆ ಮಾಡಿ!
Image Credit : Getty

ಚಳಿಗಾಲದಲ್ಲಿ ತುಪ್ಪ ಗಟ್ಟಿಯಾಗುತ್ತದೆಯೇ ಮೃದುವಾಗಲು ಹೀಗೆ ಮಾಡಿ!

ಮಳೆಗಾಲ ಇನ್ನೇನು ಮುಗಿದು ಚಳಿಗಾಲ ಶುರುವಾಗಲಿದೆ. ಚಳಿಗಾಲದಲ್ಲಿ ಅಡುಗೆ ಮನೆಯ ದೊಡ್ಡ ಸಮಸ್ಯೆ ಎಂದರೆ ಡಬ್ಬಿಯಲ್ಲಿಟ್ಟ ತುಪ್ಪ ಗಟ್ಟಿಯಾಗುವುದು. ಇದು ಪ್ರತಿ ಚಳಿಗಾಲದಲ್ಲೂ ಭಾರತೀಯರ ಅಡುಗೆ ಮನೆಗಳಲ್ಲಿ ಈ ಸಮಸ್ಯೆ ಕಾಡುತ್ತದೆ. ದಸರಾ, ದೀಪಾವಳಿಯಂದು ಸಿಹಿ ತಿಂಡಿ ಮಾಡಲು ತುಪ್ಪದ ಡಬ್ಬಿ ತೆಗೆದರೆ ಅಲ್ಲಿ ದ್ರವ ರೂಪದ ತುಪ್ಪವೇ ಮಾಯವಾಗಿ ಮೇಣದಂತೆ ಗಟ್ಟಿಯಾಗಿ ಅಂಟಿಕೊಂಡಿರುವ ತುಪ್ಪ ಇರುತ್ತೆ.

ತುಪ್ಪ ಗಟ್ಟಿಯಾಗಿದ್ದರೆ ಕೆಟ್ಟಿದೆ ಎಂದರ್ಥವಲ್ಲ

ತುಪ್ಪ ಗಟ್ಟಿಯಾಗಿದೆ ಎಂದರೆ ಕೆಲವರು ಉಪಯೋಗಿಸುವದೇ ಇಲ್ಲ. ಗಟ್ಟಿಯಾಗಿದ್ದರೆ ತುಪ್ಪ ಕೆಟ್ಟು ಹೋಗಿದೆ ಎಂದೇ ಬಹುತೇಕರು ಭಾವಿಸಿದ್ದಾರೆ. ಆದರೆ ತುಪ್ಪ ಗಟ್ಟಿಯಾದ ಮಾತ್ರಕ್ಕೆ ಕೆಡುವುದಿಲ್ಲ. ಇನ್ನೊಂದು ಸಂಗತಿ ಎಂದರೆ ತುಪ್ಪಕ್ಕೆ ಎಕ್ಸಪೇರಿ ಡೇಟ್ ಎಂಬುದೇ ಇಲ್ಲ. ತುಪ್ಪ ಹಳೆಯದಾದಷ್ಟು ಅದರ ಕ್ವಾಲಿಟಿ ಹೆಚ್ಚುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಚಳಿಗಾಲದಲ್ಲಿ ತುಪ್ಪ ಮೃದುವಾಗಿರಲು ಏನು ಮಾಡಬೇಕು?
Image Credit : Getty

ಚಳಿಗಾಲದಲ್ಲಿ ತುಪ್ಪ ಮೃದುವಾಗಿರಲು ಏನು ಮಾಡಬೇಕು?

ವಾತಾವರಣದಲ್ಲಿ ತಾಪಮಾನ ಕಡಿಮೆಯಾದಾಗ ತುಪ್ಪ ಸ್ವಾಭಾವಿಕವಾಗಿ ಗಟ್ಟಿಯಾಗುತ್ತದೆ. ಇದು ಚಳಿಗಾಲದಲ್ಲಿ ಸಾಮಾನ್ಯ. ಆದರೆ ತುಪ್ಪ ಇರಿಸುವ ಪಾತ್ರೆ, ಇಡುವ ಜಾಗದಲ್ಲಿ ಕೆಲವು ಸಣ್ಣ ಬದಲಾವಣೆ ಮಾಡಿದ್ರೆ ಸಾಕು, ಚಳಿಗಾಲದಲ್ಲೂ ತುಪ್ಪ ಗಟ್ಟಿಯಾಗದೆ ಮೃದುವಾಗಿರುತ್ತದೆ. ಅದು ಹೇಗೆ ಎಂಬುದು ಇಲ್ಲಿ ವಿವರಿಸಲಾಗಿದೆ.

ಚಳಿಗಾಲದಲ್ಲಿ ತುಪ್ಪ ಗಟ್ಟಿಯಾಗುವುದು, ಬಂಗಾರದ ಬಣ್ಣದಿಂದ ಬಿಳಿಬಣ್ಣಕ್ಕೆ ತಿರುಗುವುವುದು ಅಥವಾ ಸ್ವಲ್ಪ ಹರಳಿನಂತಾಗುವುದು ಸಾಮಾನ್ಯ. ಇದರಿಂದ ತುಪ್ಪದಲ್ಲಿ ಏನೋ ಸಮಸ್ಯೆಯಾಗಿದೆ ಎಂದರ್ಥವಲ್ಲ. ತುಪ್ಪ ತಣ್ಣಗಾದಾಗ ಅದರಲ್ಲಿರುವ ವಿವಿಧ ಕೊಬ್ಬಿನಾಮ್ಲಗಳು ಬೇರೆ ಬೇರೆ ತಾಪಮಾನದಲ್ಲಿ ಗಟ್ಟಿಯಾಗುತ್ತವೆ. ಹೀಗಾಗಿ ತುಪ್ಪದಲ್ಲಿ ಹರಳಿನಂತಹ ಹರಳಿನಂತಾಗುತ್ತೆ. ವಾಸ್ತವವಾಗಿ, ಸರಿಯಾಗಿ ತಯಾರಿಸಿದ ಉತ್ತಮ ಗುಣಮಟ್ಟದ ತುಪ್ಪದ ಲಕ್ಷಣವೆಂದು ಹಲವರು ನಂಬುತ್ತಾರೆ.

Related Articles

Related image1
ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನೋದು ಹಳೆಯ ಪದ್ಧತಿ.. ಆಧುನಿಕ ವಿಜ್ಞಾನ ಈ ಬಗ್ಗೆ ಏನು ಹೇಳುತ್ತೆ? ಇಲ್ಲಿದೆ ರಹಸ್ಯ..!
Related image2
Ghee: ಪ್ರತಿದಿನ ತುಪ್ಪ ತಿನ್ನುತ್ತೀರಾ? ಈ ಆರೋಗ್ಯ ಸಮಸ್ಯೆಗಳಿದ್ದರೆ ಹುಷಾರಾಗಿರಿ!
35
ಸೂಕ್ತವಾದ ಡಬ್ಬಿಯಲ್ಲಿ ತುಪ್ಪ ಹಾಕಿ
Image Credit : Getty

ಸೂಕ್ತವಾದ ಡಬ್ಬಿಯಲ್ಲಿ ತುಪ್ಪ ಹಾಕಿ

ಗಾಳಿಯಾಡದಂತಹ ಗಾಜಿನ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಡಬ್ಬಿಯಲ್ಲಿ ತುಪ್ಪ ಹಾಕಿಡುವುದು ಉತ್ತಮ. ಪ್ಲಾಸ್ಟಿಕ್‌ ಡಬ್ಬಿಗಳಿಗಿಂತ ಇವು ತೇವಾಂಶ, ಗಾಳಿ ಒಳಗೆ ಹೋಗದಂತೆ ಉತ್ತಮವಾಗಿ ತಡೆಯುತ್ತವೆ. ಮೊದಲನೆಯದಾಗಿ ತುಪ್ಪ ಹಾಳಾಗಲು ಅಥವಾ ಗಟ್ಟಿಯಾಗಲು ಮುಖ್ಯ ಕಾರಣ ಚಳಿ ಅಲ್ಲ, ತೇವಾಂಶ.

ಏಕೆಂದರೆ ತುಪ್ಪದಲ್ಲಿ ಸ್ವಾಭಾವಿಕವಾಗಿಯೇ ನೀರಿನ ಅಂಶ ಬಹಳ ಕಡಿಮೆ ಇರುತ್ತದೆ. ಡಬ್ಬಿ ಸರಿಯಾಗಿ ಮುಚ್ಚಿಡುವುದರಿಂದ ತೇವಾಂಶ ಒಳಗೆ ಹೋಗುವುದನ್ನು ತಡೆಯಬಹುದು. ಹೀಗಾಗಿ ಚಳಿಯಲ್ಲಿ ತುಪ್ಪ ಎಷ್ಟೇ ಗಟ್ಟಿಯಾದರೂ ಅದು ಹಲವು ತಿಂಗಳು ತಾಜಾವಾಗಿರುತ್ತದೆ.

45
ತುಪ್ಪದ ಡಬ್ಬಿಗಳನ್ನು ಬೆಚ್ಚಗಿನ ಸ್ಥಳದಲ್ಲಿರಿಸಿ
Image Credit : Getty

ತುಪ್ಪದ ಡಬ್ಬಿಗಳನ್ನು ಬೆಚ್ಚಗಿನ ಸ್ಥಳದಲ್ಲಿರಿಸಿ

ಚಳಿಗಾಲದಲ್ಲಿ ತುಪ್ಪವನ್ನು ಎಲ್ಲಿ ಇಡುತ್ತೀರಿ ಎಂಬುದು ತುಂಬಾ ಮುಖ್ಯ. ಬೆಚ್ಚಗಿನ ಸ್ಥಳದಲ್ಲಿಡುವುದರಿಂದ ತುಪ್ಪ ಗಟ್ಟಿಯಾಗುವುದಿಲ್ಲ. ಕಿಟಕಿಯ ಪಕ್ಕ ಅಥವಾ ಹೊರಗಿನ ಗೋಡೆಯ ಸಮೀಪದ ಸ್ಥಳಗಳಲ್ಲಿ ತುಪ್ಪ ಇಡುವುದನ್ನು ತಪ್ಪಿಸಿ. ಇಂತಹ ಜಾಗಗಳು ರಾತ್ರಿ ವೇಳೆ ಹೆಚ್ಚು ತಂಪಾಗುವುದರಿಂದ ತುಪ್ಪ ತುಂಬಾ ಗಟ್ಟಿಯಾಗಿ ತೆಗೆದುಕೊಳ್ಳಲು ಕಷ್ಟವಾಗಬಹುದು. ಹಾಗೆ ತುಪ್ಪದ ಡಬ್ಬಿಯನ್ನು ಗ್ಯಾಸ್ ಸ್ಟೌವ್ ಅಥವಾ ಯಾವುದೇ ನೇರ ಶಾಖದ ಮೂಲದ ಬಳಿಯೂ ಇಡಬೇಡಿ. ಪದೇ ಪದೆ ಬಿಸಿಯಾಗುವುದು, ತಣ್ಣಗಾಗುವುದು ಚಳಿಗಿಂತಲೂ ತುಪ್ಪದ ರುಚಿ ಮತ್ತು ಗುಣಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರಬಹುದು.

55
ತುಪ್ಪ ತೆಗೆಯುವಾಗ ಬಳಸುವ ಚಮಚವೂ ಮುಖ್ಯ
Image Credit : Chat gpt

ತುಪ್ಪ ತೆಗೆಯುವಾಗ ಬಳಸುವ ಚಮಚವೂ ಮುಖ್ಯ

ಇದು ಚಳಿಗಾಲದ ತುಪ್ಪ ಗಟ್ಟಿಯಾಗಲು ಕಾರಣಗಳಲ್ಲಿ ಇದೂ ಒಂದು. ತುಪ್ಪ ಗಟ್ಟಿಯಾದಾಗ ಅಡುಗೆ ಮನೆಯಲ್ಲಿ ಕೈಗೆ ಸಿಕ್ಕ ಯಾವುದೇ ಚಮಚವನ್ನು ಬಳಸುವುದೇ ಹೆಚ್ಚು. ಒಂದು ವೇಳೆ ಅಂತಹ ಚಮಚ ಒದ್ದೆಯಾಗಿದ್ದರೆ ಅದನ್ನು ಬಳಸಬಾರದು. ಒದ್ದೆಯಾಗಿದ್ದರೆ ಏನಾಗಲ್ಲ ಎಂದು ಬಳಸುವುದೇ ತುಪ್ಪ ಕೆಡಲು ಕಾರಣ.

ಹೀಗಾಗಿ ತುಪ್ಪದ ಡಬ್ಬಿಗೆ ಪ್ರತ್ಯೇಕ ಚಮಚವೊಂದನ್ನು ಇಟ್ಟುಕೊಳ್ಳಿ. ಪ್ರತಿ ಬಾರಿ ಬಳಸುವ ಮೊದಲು ಚಮಚವನ್ನು ಸ್ವಚ್ಛವಾಗಿ ತೊಳೆದು ಸಂಪೂರ್ಣ ಒಣಗಿಸಿದ ಬಳಿಕ ಬಳಸಿ. ಹಸಿಯಾದ ಚಮಚ ಬಳಸುವುದರಿಂದ ಒಳಗೆ ಸೇರುವ ಒಂದು ಹನಿ ತೇವಾಂಶವೇ ಚಳಿಯಿಂದ ಉಂಟಾಗುವ ಗಟ್ಟಿತನಕ್ಕಿಂತ ತುಪ್ಪ ಹಾಳಾಗುವ ಸಾಧ್ಯತೆಯನ್ನು ಹೆಚ್ಚು ಹೆಚ್ಚಿಸಬಹುದು.

ತುಪ್ಪ ತುಂಬಾ ಗಟ್ಟಿಯಾಗಿದ್ದರೆ ಹೀಗೆ ಮಾಡಿ

ತುಪ್ಪ ಸಾಮಾನ್ಯವಾಗಿ ಬಳಸುವುದಕ್ಕಿಂತ ಹೆಚ್ಚು ಗಟ್ಟಿಯಾಗಿದ್ದರೆ ಇಡೀ ಡಬ್ಬಿಯನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬೇಡಿ. ಬಳಸುವ ಕೆಲವು ನಿಮಿಷಗಳ ಮೊದಲು ತುಪ್ಪವನ್ನು ಕೋಣೆಯ ತಾಪಮಾನದಲ್ಲಿ ಇಡಬಹುದು. ಅಥವಾ ಮುಚ್ಚಿದ ಡಬ್ಬಿಯನ್ನು ಸ್ವಲ್ಪ ಸಮಯ ಬೆಚ್ಚಗಿನ ನೀರು ಇರುವ ಪಾತ್ರೆಯಲ್ಲಿ ಇಟ್ಟು ನಿಧಾನವಾಗಿ ಮೃದುವಾಗಿಸಬಹುದು. ಈ ಎರಡೂ ವಿಧಾನಗಳಿಂದ ತುಪ್ಪ ಹೊರಗಿನಿಂದ ಒಳಗಿನವರೆಗೆ ನಿಧಾನವಾಗಿ ಮೃದುವಾಗುತ್ತದೆ. ಇದರಿಂದ ಅದು ಸುಲಭವಾಗಿ ತೆಗೆದುಕೊಳ್ಳಲು, ಬಳಸಲು ಮೃದುವಾಗುತ್ತದೆ. ಪದೇ ಪದೆ ನೇರ ಶಾಖಕ್ಕೆ ಒಡ್ಡುವುದರಿಂದ ರುಚಿಗೆ ಆಗಬಹುದಾದ ಪರಿಣಾಮವನ್ನೂ ತಪ್ಪಿಸುತ್ತೆ.

ಗಮನಿಸಿ:

ಈ ಲೇಖನವನ್ನು ಸಾಮಾನ್ಯ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ತಾಪಮಾನ ಮತ್ತು ಋತುವಿಗೆ ಅನುಗುಣವಾಗಿ ತುಪ್ಪದ ಗಟ್ಟಿತನ ಸಹಜವಾಗಿ ಬದಲಾಗುತ್ತದೆ. ಆದರೆ ತುಪ್ಪದಲ್ಲಿ ಹುಳಿ ವಾಸನೆ, ಅಚ್ಚು ಅಥವಾ ಅಸಹಜ ರುಚಿ ಕಂಡುಬಂದರೆ, ಅದನ್ನು ಹೇಗೆ ಸಂಗ್ರಹಿಸಿದ್ದರೂ ಬಳಸದೆ ಎಸೆಯಿರಿ. ಇವು ಸಾಮಾನ್ಯವಾಗಿ ಚಳಿಗಾಲದಲ್ಲಿ ಉಂಟಾಗುವ ಗಟ್ಟಿತನದ ಲಕ್ಷಣಗಳಲ್ಲ, ತುಪ್ಪ ಹಾಳಾಗಿರುವ ಸೂಚನೆಗಳಾಗಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಆಹಾರ
ಅಡುಗೆಮನೆ ಸಲಹೆಗಳು
ತುಪ್ಪ
 

Latest Videos
Recommended Stories
Recommended image1
Kitchen Cleaning Tips: ಎಚ್ಚರ, ಅಡುಗೆಮನೆಯಲ್ಲಿ ನೀವು ಮರೆಯದೆ ಸ್ವಚ್ಛಗೊಳಿಸಬೇಕಾದ 3 ವಸ್ತುಗಳಿವು!
Recommended image2
ಅಚ್ಚು ಇಲ್ಲ, ಲಟ್ಟಿಸೋದು ಬೇಡ.. ಕಡುಬು ಬಿರುಕು ಬಿಡದೆ ಮೃದುವಾಗಿ ಬರಲು ಈ ಒಂದು ಪದಾರ್ಥ ಬೆರೆಸಿದ್ರೆ ಸಾಕು
Recommended image3
ಕರಿಬೇವು ಗಿಡಕ್ಕೆ 'ಬಾಳೆಹಣ್ಣಿನ ಸಿಪ್ಪೆ' ಹಾಕಿ ಗೊಂಚಲು ಸೊಪ್ಪು ಮುರಿದುಕೊಳ್ಳಿ!
Related Stories
Recommended image1
ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನೋದು ಹಳೆಯ ಪದ್ಧತಿ.. ಆಧುನಿಕ ವಿಜ್ಞಾನ ಈ ಬಗ್ಗೆ ಏನು ಹೇಳುತ್ತೆ? ಇಲ್ಲಿದೆ ರಹಸ್ಯ..!
Recommended image2
Ghee: ಪ್ರತಿದಿನ ತುಪ್ಪ ತಿನ್ನುತ್ತೀರಾ? ಈ ಆರೋಗ್ಯ ಸಮಸ್ಯೆಗಳಿದ್ದರೆ ಹುಷಾರಾಗಿರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved