ಹಳ್ಳಿ ವಿಧಾನ ಬಳಸಿ ತುಪ್ಪ ಸ್ಟೋರ್ ಮಾಡಿದ್ರೆ 4 ರಿಂದ 5 ತಿಂಗಳಾದ್ರೂ ಫ್ರೆಶ್ ಆಗಿರುತ್ತೆ!
How to store ghee traditional way long term: ಶುದ್ಧ ತುಪ್ಪ ತಯಾರಿಸುವ ವಿಧಾನ ಮತ್ತು ಮೂರು ತಿಂಗಳವರೆಗೆ ಕೆಡದಂತೆ ಸಂಗ್ರಹಿಸುವ ಬಗೆಯನ್ನು ಈ ಲೇಖನದಲ್ಲಿ ತಿಳಿಯಿರಿ. ಹಳ್ಳಿಗಳಲ್ಲಿ ಬಳಸುವ ವಿಧಾನಗಳನ್ನು ಬಳಸಿ ಮನೆಯಲ್ಲೇ ತುಪ್ಪ ತಯಾರಿಸಿ, ದೀರ್ಘಕಾಲ ಬಾಳಿಕೆ ಬರುವಂತೆ ಸಂಗ್ರಹಿಸಿ.

ಶುದ್ಧ ತುಪ್ಪ
ಶ್ರಾವಣ ಮಾಸ ಅಂದ್ರೆ ಸಾಲು ಸಾಲು ಹಬ್ಬಗಳು. ಹಬ್ಬ ಅಂದ್ರೆ ಸ್ವೀಟ್ ಮಾಡಲೇಬೇಕಾಗುತ್ತದೆ. ಮಾರುಕಟ್ಟೆಯಲ್ಲಿ 1 ಕೆಜಿ ಶುದ್ಧ ತುಪ್ಪಕ್ಕೆ 800 ರಿಂದ 1000 ರೂ.ಗಳವರೆಗೆ ಪಾವತಿಸಬೇಕು. ಆದ್ರೂ ಡಬ್ಬ ಓಪನ್ ಮಾಡಿದ್ರೆ ಮೂರು ವಾರಗಳಲ್ಲಿ ತುಪ್ಪ ರುಚಿ ಕಳೆದುಕೊಂಡು ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ.
ಹಳ್ಳಿ ವಿಧಾನ
ಇಂದು ಮನೆಯಲ್ಲಿ ಶುದ್ಧವಾದ ತುಪ್ಪವನ್ನು ಮಾಡೋದು ಹೇಗೆ ಮತ್ತು ಅದು ಎರಡರಿಂದ ಮೂರು ತಿಂಗಳುಗಳ ಕಾಲ ಕೆಡದಂತೆ ಸ್ಟೋರ್ ಮಾಡೋದು ಹೇಗೆ ಎಂದು ನೋಡೋಣ ಬನ್ನಿ. ಇಂದಿಗೂ ಹಳ್ಳಿಗಳಲ್ಲಿ ಇದೇ ರೀತಿಯಾಗಿ ತುಪ್ಪವನ್ನು ಸ್ಟೋರ್ ಮಾಡುತ್ತಾರೆ. ಸಿಟಿಗಳಲ್ಲಿರುವ ಜನರು ಮನೆಗೆ ತೆಗೆದುಕೊಂಡು ಬರುವ ಹಾಲು ಬಳಸಿಯೇ ತುಪ್ಪ ಮಾಡಬಹುದು.
ಶುದ್ಧವಾದ ತುಪ್ಪ ಮಾಡುವ ವಿಧಾನ
ಮನೆಗೆ ತೆಗೆದುಕೊಂಡು ಬರುವ ಹಾಲನ್ನು ಚೆನ್ನಾಗಿ ಕಾಯಸಿಕೊಳ್ಳಿ. ಹಾಲು ತಣ್ಣಗಾದ ನಂತರ ಕೆನೆಯನ್ನು ತೆಗೆದುಕೊಂಡು ಪಾತ್ರೆಯೊಂದಕ್ಕೆ ಹಾಕಿಕೊಂಡು ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡಿಕೊಳ್ಳಬೇಕು. ಸಂಪೂರ್ಣವಾಗಿ ಕೆನೆಯನ್ನು ಫ್ರೀಜ್ ಮಾಡಿಕೊಳ್ಳಬೇಕು. ಇಲ್ಲವಾದ್ರೆ ಕೊಳೆತ ವಾಸನೆ ಬರುತ್ತದೆ. ಇದೇ ರೀತಿ ಹಾಲಿನ ಕೆನೆಯನ್ನು ಸ್ಟೋರ್ ಮಾಡಿಕೊಳ್ಳುತ್ತಿರಬೇಕು.
ಕೆನೆ ಸಂಗ್ರಹ
ಕೆನೆ ಪ್ರಮಾಣ 300 ರಿಂದ 400 ಗ್ರಾಂ ಆಗುತ್ತಿದ್ದಂತೆ ತುಪ್ಪ ಮಾಡಿಕೊಳ್ಳಬೇಕು. ಫ್ರೀಜ್ ಮಾಡಲಾಗಿರುವ ಹಾಲಿನ ಕೆನೆಯನ್ನು ಅಗಲವಾದ ಪಾತ್ರೆಗೆ ಹಾಕಿಕೊಂಡು ಎರಡರಿಂದ ಮೂರು ಗಂಟೆ ಬಿಡಬೇಕು. ಈಗ ಸ್ವಲ್ಪ ಸ್ವಲ್ಪ ಕೆನೆಯನ್ನು ತೆಗೆದುಕೊಂಡು ಮಿಕ್ಸಿ ಜಾರ್‌ಗೆ ಹಾಕಿ 10 ರಿಂದ 15 ನಿಮಿಷ ರುಬ್ಬಿಕೊಳ್ಳಬೇಕು. ಈ ವೇಳೆ ಐಸ್ ವಾಟರ್ ಮಾತ್ರ ಸೇರಿಸಿಕೊಳ್ಳಬೇಕು.
ದಪ್ಪ ತಳವಿರೋ ಪಾತ್ರೆಯನ್ನೇ ಬಳಸಿ
ತದನಂತರ ನೀರು ಬೇರ್ಪಟ್ಟು ಹಾಲಿನ ಕೆನೆ ಬೆಣ್ಣೆಯಾಗುತ್ತದೆ. ನಂತರ ಬೆಣ್ಣೆಯನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಈಗ ಒಲೆ ಆನ್ ಮಾಡಿಕೊಂಡು ದಪ್ಪ ತಳವಿರೋ ಪಾತ್ರೆಯನ್ನು ಇರಿಸಿಕೊಂಡು ಸಿದ್ಧವಾಗಿರುವ ಬೆಣ್ಣೆಯನ್ನು ಹಾಕಿಕೊಂಡು ಸುಮಾರು 40 ರಿಂದ 45 ನಿಮಿಷ ಬೇಯಿಸಿಕೊಳ್ಳಿ. ಬೆಣ್ಣೆ ಎಲ್ಲಾ ಕರಗಿ ಎಣ್ಣೆ ರೂಪಕ್ಕೆ ಬಂದಾಗ ಚಿಟಿಕೆ ಅರಿಶಿನ, 1/2 ಟೀ ಸ್ಪೂನ್ ಏಲಕ್ಕಿ ಪುಡಿ, ಚಿಟಿಕೆಯಷ್ಟು ಉಪ್ಪು ಸೇರಿಸಿಕೊಳ್ಳಿ.
ಡಬ್ಬದ ಮುಚ್ಚಳ ಯಾವಾಗ ಮುಚ್ಚಬೇಕು?
ತುಪ್ಪ ಕುದಿಯುತ್ತಿರುವಾಗಲೇ ಒಂದು ವಿಳ್ಯದೆಲೆ ಸೇರಿಸಿ 5 ನಿಮಿಷ ಕುದಿಸಿಕೊಳ್ಳಿ. ಈಗ ಸ್ಟೀಲ್ ಡಬ್ಬಕ್ಕೆ ತುಪ್ಪವನ್ನು ಜರಡಿ ಹಿಡಿದುಕೊಳ್ಳಬೇಕು. ತುಪ್ಪ ಸಂಪೂರ್ಣವಾಗಿ ತಣ್ಣಗಾದ ನಂತರವೇ ಡಬ್ಬದ ಮುಚ್ಚಳ ಮುಚ್ಚಬೇಕು.
ತುಪ್ಪವನ್ನು ಅಲ್ಯುಮಿನಿಯಂ, ಸ್ಟೀಲ್ ಅಥವಾ ಗಾಜಿನ ಡಬ್ಬದಲ್ಲಿ ಸಂಗ್ರಹಿಸಿಕೊಳ್ಳಬೇಕು. ಹೀಗೆ ಮಾಡಿದ್ರೆ ದೀರ್ಘಕಾಲ ಬಾಳಿಕೆ ಬರುತ್ತದೆ. ತುಪ್ಪ ಕಾಯಿಸುವಾಗ ಕೆಲವರು ತುಳಸಿ ಅಥವಾ ನುಗ್ಗೆಸೊಪ್ಪು ಹಾಕಿಕೊಳ್ಳುತ್ತಾರೆ. ಬೇಕಿದ್ರೆ ಇದನ್ನು ಸ್ಕಿಪ್ ಮಾಡಿಕೊಳ್ಳಬಹುದು.
ಸ್ಟೋರ್ ಮಾಡುವ ವಿಧಾನ?
ತುಪ್ಪವನ್ನು ಅಲ್ಯುಮಿನಿಯಂ, ಸ್ಟೀಲ್ ಅಥವಾ ಗಾಜಿನ ಡಬ್ಬದಲ್ಲಿ ಸಂಗ್ರಹಿಸಿಕೊಳ್ಳಬೇಕು.
ತುಪ್ಪದ ಡಬ್ಬದೊಳಗೆ ಬೆಲ್ಲದ ತುಂಡನ್ನು ಹಾಕುತ್ತಾರೆ. ಈ ರೀತಿ ಮಾಡೋದರಿಂದ ತುಪ್ಪ ಕಮಟು ಬರಲ್ಲ ಎಂದು ಹೇಳುತ್ತಾರೆ.
ತುಪ್ಪು ಕಾಯಿಸುವಾಗ ಎರಡು ಲವಂಗ, ಎರಡು ಕಾಳುಮೆಣಸು ಪುಡಿ ಮಾಡ್ಕೊಂಡು ಸೇರಿಸಿಕೊಳ್ಳಬಹುದು.
ಸ್ಟೋರ್ ಮಾಡುವ ವಿಧಾನ?
ಬೇಕಾಗುವಷ್ಟು ತುಪ್ಪವನ್ನು ತೆಗೆದುಕೊಂಡು ಪ್ರತ್ಯೇಕವಾಗಿ ಕಾಯಿಸಿಕೊಳ್ಳಿ. ಪದೇ ಪದೇ ಎಲ್ಲಾ ತುಪ್ಪವನ್ನು ಕಾಯಿಸಬಾರದು.
ತುಪ್ಪ ಸಂಗ್ರಹಿಸಿರುವ ಡಬ್ಬವನ್ನು ಶುಷ್ಕ ಪ್ರದೇಶದಲ್ಲಿ ಇರಿಸಬೇಕು.
ತುಪ್ಪ ತೆಗೆದುಕೊಳ್ಳಲು ಪ್ರತಿಬಾರಿಯೂ ನೀರಿನಂಶವಿಲ್ಲದಿರುವ ಚಮಚವನ್ನೇ ಬಳಸಬೇಕು.
ಒಮ್ಮೆ ಕಾಯಿಸಿದ ತುಪ್ಪದಲ್ಲಿ ನೀರು ಸೇರದಂತೆ ನೋಡಿಕೊಳ್ಳಬೇಕು.