ಹಿಟ್ಟಿಗೆ ಹುಳುಹುಪ್ಪಟೆ ಮುತ್ತಿಕೊಳ್ಳುತ್ತೆ ಅಂದ್ರೆ ಈ ರೀತಿ ಮಾಡಿ, ಖಂಡಿತ ವರ್ಕ್ಔಟ್ ಆಗುತ್ತೆ!
ಹವಾಮಾನ ಬದಲಾದ ತಕ್ಷಣ ಅಡುಗೆಮನೆಯಲ್ಲಿರುವ ಅನೇಕ ಪದಾರ್ಥಗಳು ಹಾಳಾಗಲು ಪ್ರಾರಂಭಿಸುತ್ತವೆ. ಉಪ್ಪು ಒದ್ದೆಯಾಗುವುದು, ಮಸಾಲೆಗಳು ಹಾಳಾಗುವುದು, ಅಕ್ಕಿ ಹಿಟ್ಟು ಕೀಟಗಳಿಂದ ಮುತ್ತಿಕೊಳ್ಳುವುದು ಇತ್ಯಾದಿ.

ಗೃಹಿಣಿಯರಿಗೆ ದೊಡ್ಡ ಸಮಸ್ಯೆ
ಮಳೆಗಾಲವು ನಮಗೆ ಸೆಕೆಯಿಂದ ಪರಿಹಾರ ನೀಡುತ್ತದೆ. ಆದರೆ ಅದರೊಂದಿಗೆ ಅನೇಕ ರೀತಿಯ ಸೋಂಕುಗಳು ಮತ್ತು ರೋಗಗಳನ್ನು ಸಹ ತರುತ್ತದೆ. ಆದ್ದರಿಂದ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿದೆ. ಆದರೆ ಇದೆಲ್ಲದರ ಜೊತೆಗೆ ಗೃಹಿಣಿಯರಿಗೆ ದೊಡ್ಡ ಸಮಸ್ಯೆ ಎಂದರೆ ಮಳೆಗಾಲದಲ್ಲಿ ಅಡುಗೆಮನೆಯ ಪದಾರ್ಥಗಳನ್ನು ಸುರಕ್ಷಿತವಾಗಿಡುವುದು.
ಕೀಟಗಳಿಂದ ರಕ್ಷಿಸುವುದು ಹೇಗೆ?
ಹವಾಮಾನ ಬದಲಾದ ತಕ್ಷಣ ಅಡುಗೆಮನೆಯಲ್ಲಿರುವ ಅನೇಕ ಪದಾರ್ಥಗಳು ಹಾಳಾಗಲು ಪ್ರಾರಂಭಿಸುತ್ತವೆ. ಉಪ್ಪು ಒದ್ದೆಯಾಗುವುದು, ಮಸಾಲೆಗಳು ಹಾಳಾಗುವುದು, ಅಕ್ಕಿ ಹಿಟ್ಟು ಕೀಟಗಳಿಂದ ಮುತ್ತಿಕೊಳ್ಳುವುದು ಇತ್ಯಾದಿ. ಅದಕ್ಕಾಗಿಯೇ ನಾವಿಂದು ವಿಶೇಷವಾಗಿ ಹಿಟ್ಟನ್ನು ಕೀಟಗಳಿಂದ ರಕ್ಷಿಸುವುದು ಹೇಗೆಂಬ ಮಾಹಿತಿ ನೀಡುತ್ತಿದ್ದು, ಇದು ಖಂಡಿತ ನಿಮಗೆ ವರ್ಕ್‌ಔಟ್ ಆಗುತ್ತೆ.
ಪಲಾವ್ ಎಲೆ
ಇದನ್ನು ಬೇ ಲೀಫ್, ತೇಜ್ ಪತ್ತಾ ಅಂತಾನೂ ಕರೆಯುತ್ತಾರೆ. ಮಳೆಯಲ್ಲಿ ಹಿಟ್ಟು ಹಾಳಾಗುವುದನ್ನು ತಡೆಯಲು ನೀವು ಪಲಾವ್ ಎಲೆಯನ್ನು ಹಿಟ್ಟಿನಲ್ಲಿ ಇಡಬಹುದು. ಇದು ಹಿಟ್ಟು ಹಾಳಾಗುವುದನ್ನು ತಡೆಯುತ್ತದೆ.
ದಾಲ್ಚಿನ್ನಿ
ದಾಲ್ಚಿನ್ನಿಯನ್ನು ಚಕ್ಕೆ ಎಂದು ಸಹ ಕರೆಯುತ್ತಾರೆ. ಇದು ಕೂಡ ಒಂದು ಮಸಾಲೆ ಪದಾರ್ಥವಾಗಿದ್ದು, ಇದನ್ನು ಬಹುತೇಕ ರೆಸಿಪಿ ತಯಾರಿಸಲು ಉಪಯೋಗಿಸುತ್ತಾರೆ. ಮಳೆಯಲ್ಲಿ ಹಿಟ್ಟು ಹಾಳಾಗುವುದನ್ನು ತಪ್ಪಿಸಲು ಸಹ ಅದಕ್ಕೆ ದಾಲ್ಚಿನ್ನಿ ಸೇರಿಸಬಹುದು.
ಗಾಳಿಯಾಡದ ಪಾತ್ರೆ
ಹಿಟ್ಟು ಕೆಡದಂತೆ ಮತ್ತು ಮಳೆಯಲ್ಲಿ ಕೀಟಗಳು ಬರದಂತೆ ರಕ್ಷಿಸಲು, ನೀವು ಗಾಳಿಯಾಡದ ಪಾತ್ರೆಯನ್ನು ಬಳಸಬೇಕು. ಇದು ಹಿಟ್ಟಿನೊಳಗೆ ತೇವಾಂಶ ತಲುಪುವುದನ್ನು ತಡೆಯುತ್ತದೆ ಮತ್ತು ಕೀಟಗಳಿಂದ ರಕ್ಷಿಸುತ್ತದೆ.
ಕರ್ಪೂರ
ಕರ್ಪೂರವನ್ನು ಸಾಮಾನ್ಯವಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ಆದರೆ ಕರ್ಪೂರವನ್ನು ಹಿಟ್ಟಿನಲ್ಲಿ ಇಡುವುದರಿಂದ ಮಳೆಯಲ್ಲಿ ಹಿಟ್ಟು ಹಾಳಾಗುವುದನ್ನು ತಪ್ಪಿಸಬಹುದು ಎಂದು ನಿಮಗೆ ತಿಳಿದಿದೆಯೇ. ಹೌದು. ಏಕೆಂದರೆ ಅದು ಬಲವಾದ ಪರಿಮಳವನ್ನು ಹೊಂದಿರುತ್ತದೆ.