MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
Teacher's Day Wishes 2026
ISRO GSLV F17 Launch
Bengaluru Suburban Rail
Bike Taxi Approval
Karnataka KPSC Scam
Bengaluru Airport Flyover
Mysuru Dasara 2026 Scehdule
Rohit Sharma Retirement Rumors
Gowri Ganesha Festival
Yeshwantpur Mangaluru Vande Bharat
India Iran Relationship
  • Home
  • Life
  • Kitchen
  • Jaggery: ಡಬ್ಬಿಯಲ್ಲಿಟ್ಟ ಬೆಲ್ಲ ನೀರಾಗದಂತೆ ತಡೆಯಲು ಇಷ್ಟು ಮಾಡಿ ಸಾಕು! ಫ್ರಿಡ್ಜ್‌ನಲ್ಲಿ ಇಟ್ರೆ ಏನಾಗುತ್ತೆ?

Jaggery: ಡಬ್ಬಿಯಲ್ಲಿಟ್ಟ ಬೆಲ್ಲ ನೀರಾಗದಂತೆ ತಡೆಯಲು ಇಷ್ಟು ಮಾಡಿ ಸಾಕು! ಫ್ರಿಡ್ಜ್‌ನಲ್ಲಿ ಇಟ್ರೆ ಏನಾಗುತ್ತೆ?

ಸಾಲು ಸಾಲು ಹಬ್ಬಗಳು ಬರುತ್ತಿವೆ. ಹಬ್ಬಳಲ್ಲಿ ಸಿಹಿ ತಿನಿಸಿಗೆ ಬೇಕಾಗುವ ಬೆಲ್ಲವನ್ನು ಈಗಿನಿಂದಲೇ ಖರೀದಿಸುತ್ತಿದ್ದಾರೆ.. ಆದರೆ ದೀರ್ಘಕಾಲ ಬೆಲ್ಲ ಜಿಗುಟಾಗದಂತೆ ತಡೆಯಲು ಏನು ಮಾಡಬೇಕು? ಬೆಲ್ಲ ಹೇಗೆ ಸಂಗ್ರಹಿಸಬೇಕು. ಯಾವ ಬೆಲ್ಲ ಅಸಲಿ? ವಿವರವಾಗಿ ತಿಳಿಯಿರಿ.

2 Min read
Author : Ravi Janekal
Published : Aug 22 2026, 11:50 AM IST
Share this Photo Gallery
  • FB
  • TW
  • Linkdin
  • Whatsapp
16
ಬೆಲ್ಲ ಜಿಗುಟಾಗದಂತೆ ತಡೆಯಲು ಈ ಟ್ರಿಕ್ಸ್ ಬಳಸಿ
Image Credit : Getty

ಬೆಲ್ಲ ಜಿಗುಟಾಗದಂತೆ ತಡೆಯಲು ಈ ಟ್ರಿಕ್ಸ್ ಬಳಸಿ

ಭಾರತೀಯರ ಪ್ರತಿ ಮನೆಗಳಲ್ಲಿ ಬೆಲ್ಲ ಇದ್ದೇ ಇರುತ್ತೆ. ಬೆಲ್ಲ ಇಲ್ಲದ ಸಿಹಿ ಪದಾರ್ಥಗಳೇ ಇಲ್ಲ. ಬೆಲ್ಲವನ್ನು ಚಹಾದಿಂದ ಹಿಡಿದು ಲಡ್ಡು ಹೋಳಿಗೆ ಕರಿಗಡಬು ಸಿಹಿ ತಿನಿಸುಗಳಿಗೆ ಬೆಲ್ಲ ಬೇಕೇಬೇಕು ಎಂಬಷ್ಟು ಹೆಚ್ಚು ಬಳಸಲಾಗುತ್ತೆ. ಅದರಲ್ಲೂ ಈಗ ಹಬ್ಬಗಳ ಸೀಸನ್. ಮುಂಬರುವ ಗಣೇಶ ಚತುರ್ಥಿ, ನವರಾತ್ರಿ, ದಸರಾ ಹೀಗೆ ಸಾಲು ಸಾಲು ಹಬ್ಬಗಳಿಗೆ ಈಗಿನಿಂದಲೇ ಬೆಲ್ಲ ಖರೀದಿಸಿ ಮನೆಯಲ್ಲಿ ತಂದಿಟ್ಕೊಳ್ತಾರೆ. ಆದರೆ ಅನೇಕ ಜನರಿಗೆ ಬೆಲ್ಲ ದೀರ್ಘಕಾಲ ಜಿಗುಟಾಗಿ ಅಥಾವ ನೀರುನೀರಾಗದಂತೆ ಹೇಗೆ ಸಂಗ್ರಹಿಸಿಡಬೇಕು ಎಂಬುದೇ ತಿಳಿದಿಲ್ಲ. ಬೆಲ್ಲ ಖರೀದಿಸಿದ ಬಳಿಕ ದಬ್ಬಿಯಲ್ಲಿಡುತ್ತಾರೆ ಸ್ವಲ್ಪ ದಿನಗಳ ನಂತರ ಜಿಗುಟಾಗಿರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬೆಲ್ಲ ಏಕೆ ಜಿಗುಟಾಗುತ್ತೆ?
Image Credit : Getty

ಬೆಲ್ಲ ಏಕೆ ಜಿಗುಟಾಗುತ್ತೆ?

ಬೆಲ್ಲ ಭಾರತೀಯರ ಪಾಕ ಪದ್ಧತಿಯ ಅವಿಭಾಜ್ಯ ಅಂಗ. ದಿನನಿತ್ಯ ಬೆಲ್ಲ ಬಳಸಲಾಗುತ್ತೆ. ರಾತ್ರಿ ಊಟದ ಬಳಿಕವೂ ಒಂದು ತುಂಡು ಬೆಲ್ಲ ಬಾಯಲ್ಲಿ ಹಾಕಿಕೊಳ್ಳುವುದು ಹಲವರಿಗೆ ಅಭ್ಯಾಸ. ಹೀಗಾಗಿ ಬೆಲ್ಲವನ್ನು ದಿನೇದಿನೆ ಖರೀದಿಸದೆ ತಿಂಗಳಿಗ ಆಗುವಷ್ಟು ಖರೀದಿಸಿ ಸ್ಟೋರೇಜ್ ಮಾಡುವುದು ಸಾಮಾನ್ಯ. ಆದರೆ ಬಹುತೇಕ ಬೆಲ್ಲ ಸ್ವಲ್ಪ ದಿನಗಳಲ್ಲೇ ಜಿಗುಟಾಗುತ್ತದೆ ಹೀಗೇಕೆ? ಗಟ್ಟಿಯಾಗಿದ್ದ ಬೆಲ್ಲ ಏಕೆ ಜಿಗುಟಾಯ್ತು? ಜಿಗುಟು ಆಗದ ಹಾಗೆ ಹೇಗೆ ಇಡಬೇಕು? ಈ ಪ್ರಶ್ನೆಗಳಿಗೆ ಸುಲಭ ವಿಧಾನ ಇಲ್ಲಿ ಕೊಡಲಾಗಿದೆ.

ವಾಸ್ತವವಾಗಿ ಬೆಲ್ಲ ತೇವಾಂಶ ಅಕರ್ಷಿಸುತ್ತೆ. ಅದು ಗಾಳಿಗೆ ತೆರೆದುಕೊಂಡಾಗ ಗಾಳಿಯಲ್ಲಿನ ತೇವಾಂಶ ಹೀರಿಕೊಳ್ಳುತ್ತೆ. ಅದಕ್ಕಾಗಿಯೇ ಗಟ್ಟಿಯಾದ ತುಂಡು ಕ್ರಮೇಣ ಮೃದುವಾಗಿ, ಜಿಗುಟಾಗಬಹುದು. ಅತಿಯಾದ ತೇವಾಂಶವು ಬೆಲ್ಲದ ಮೇಲಿನ ಭಾಗ ಹಸಿಯಾಗಿ ಸಿರಪ್ ನಂತೆ ಜಿಗುಟಾಗುತ್ತೆ.

Related Articles

Related image1
ಸಕ್ಕರೆ ನಾಡಲ್ಲಿ ಬೆಲ್ಲ 'ಬಂಗಾರ': ಮಂಡ್ಯ ಮಾರುಕಟ್ಟೆ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಬೆಲ್ಲದ ದರ!
Related image2
Jaggery Tea Recipe: ಟೀ ಅಮೃತದಷ್ಟು ರುಚಿಯಾಗಿರುತ್ತೆ... ಬೆಲ್ಲ ಯಾವಾಗ ಸೇರಿಸ್ಬೇಕು ಅಂತ ತಿಳ್ಕೊಳ್ಳಿ
36
ಜಿಗುಟಾಗದಂತೆ ಇರಲು ಏನು ಮಾಡಬೇಕು?
Image Credit : Getty

ಜಿಗುಟಾಗದಂತೆ ಇರಲು ಏನು ಮಾಡಬೇಕು?

ಬೆಲ್ಲ ಜಿಗುಟಾಗುವುದನ್ನು ತಡೆಯಲು ಮೊದಲಿಗೆ ಅದನ್ನು ಗಾಳಿ, ತೇವಾಂಶದಿಂದ ದೂರವಿರಿಸುವುದು ಬಹಳ ಮುಖ್ಯ. ಪಾಕೆಟ್ ತೆಗೆದ ನಂತರ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ, ಗಾಜಿನ ಡಬ್ಬಿಯಲ್ಲಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಬೇಕು. ಇದರಿಂದ ಹೊರಗಿನ ಗಾಳಿ ಹೋಗುವುದಿಲ್ಲ.

46
ಬೆಲ್ಲ ಫ್ರಿಡ್ಜ್‌ನಲ್ಲಿಡಬಹುದೇ?
Image Credit : Getty

ಬೆಲ್ಲ ಫ್ರಿಡ್ಜ್‌ನಲ್ಲಿಡಬಹುದೇ?

ಅತಿಯಾದ ತಂಪು ಬೆಲ್ಲವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ ಇದರಿಂದಾಗಿ ಬೇಕಾದಾಗ ತುಂಡು ಮಾಡಲು ಕಷ್ಟವಾಗುತ್ತದೆ. ಇದಲ್ಲದೆ, ರೆಫ್ರಿಜರೆಟರ್‌ನಿಂದ ಹೊರ ತೆಗೆದಾಗ ಹೊರಗಿನ ವಾತಾವರಣದ ಗಾಳಿಗೆ ಒಡ್ಡಿಕೊಂಡು ಬೇಗನೇ ಜಿಗುಟಾಗಬಹುದು. ಹೀಗಾಗಿ ಬೆಲ್ಲವನ್ನು ಫ್ರಿಡ್ಜ್‌ನಲ್ಲಿಡುವುದು ಸೂಕ್ತವಲ್ಲ, ಅದರ ಬದಲು ಗಾಳಿಯಾಡದ ಪಾತ್ರೆಯಲ್ಲಿ ತೇವಾಂಶವಿಲ್ಲದ ಒಣಗಿದ ಸ್ಥಳದಲ್ಲಿಡುವುದು ಉತ್ತಮ.

56
ಒಣಗಿದ ಸ್ಥಳದಲ್ಲಿಡುವುದು ಉತ್ತಮ.
Image Credit : Getty

ಒಣಗಿದ ಸ್ಥಳದಲ್ಲಿಡುವುದು ಉತ್ತಮ.

ಒಂದು ವೇಳೆ ನೀವು ಮಾರ್ಕೆಟ್‌ನಿಂದ ದೊಡ್ಡ ಗಾತ್ರದ ಬೆಲ್ಲದ ತುಂಡನ್ನು ಖರೀದಿಸಿದ್ದರೆ, ಮನೆಗೆ ಬಂದ ನಂತರ ಅಗತ್ಯವಿರುವಷ್ಟು ಸಣ್ಣ ತುಂಡುಗಳಾಗಿ ಮಾಡಿಕೊಳ್ಳುವುದು ಉತ್ತಮ ಇದರಿಂದ ದೀರ್ಘಕಾಲ ಗಾಳಿಯಾಡದ ಡಬ್ಬಿಯಲ್ಲಿ ಇಟ್ಟುಕೊಳ್ಳಬಹುದು, ಬೇಕಾದಾಗ ಅಗತ್ಯವಿರುವಷ್ಟೇ ಬಳಸಿಕೊಳ್ಳಬಹುದು.

66
ಬೆಲ್ಲವನ್ನು ತುಂಡು ಮಾಡಲು ಹೀಗೆ ಮಾಡಿ
Image Credit : social media

ಬೆಲ್ಲವನ್ನು ತುಂಡು ಮಾಡಲು ಹೀಗೆ ಮಾಡಿ

ಬೆಲ್ಲವನ್ನು ಕೆಲವೊಮ್ಮೆ ಸಂಪೂರ್ಣವಾಗಿ ಬಳಸೋಕೆ ಆಗಲ್ಲ, ಅಂಥ ಸಮಯದಲ್ಲಿ ಅದು ಗಟ್ಟಿಯಾಗಿದ್ದರೆ, ನಿಮಗೆ ಸ್ವಲ್ಪ ಮಾತ್ರ ಬೆಲ್ಲ ಬೇಕಿದ್ದರೆ ಅದರನ್ನ ಎರಡು ಓಳು ಮಾಡುವ ಅಗತ್ಯವಿಲ್ಲ. ಅದರ ಬದಲಿಗೆ ಕೆಲವು ಸೆಕೆಂಡುಗಳ ಕಾಲ ನಿಧಾನವಾಗಿ ಬಿಸಿ ಮಾಡಿ ಬಳಿಕ ಅದನ್ನ ಮೃದುಗೊಳಿಸಿ ತುಂಡು ಮಾಡಿಕೊಳ್ಳಬಹುದು. ಸುಮಾರು 10 ರಿಂದ 15 ಸೆಕೆಂಡುಗಳ ಕಾಲ ನಿಧಾನವಾಗಿ ಬಿಸಿ ಮಾಡಿ. ಇದು ಬೆಲ್ಲವನ್ನು ಸ್ವಲ್ಪ ಮೃದುಗೊಳಿಸುತ್ತದೆ, ಅಗತ್ಯವಿರುವಂತೆ ಕತ್ತರಿಸಲು ಅಥವಾ ತೆಗೆದುಹಾಕಲು ಸುಲಭವಾಗುತ್ತದೆ.

ಬೆಲ್ಲ ಖರೀದಿಸುವಾಗ ಈ ವಿಷಯ ನೆನಪಿಡಿ

ಬೆಲ್ಲ ಖರೀದಿಸುವಾಗ ಅದರ ಗುಣಮಟ್ಟಕ್ಕೆ ಗಮನ ಕೊಡುವುದು ಮುಖ್ಯ. ನೈಸರ್ಗಿಕ ಬಣ್ಣ ಮತ್ತು ಸಾಮಾನ್ಯ ಪರಿಮಳವಿರುವ ಬೆಲ್ಲವನ್ನು ಖರೀದಿಸಿ. ಗ್ರಾಹಕರನ್ನ ಆಕರ್ಷಿಸಲು ವ್ಯಾಪಾರಿಗಳು ಕೃತಕ ಬಣ್ಣ ಬಳಸುತ್ತಾರೆ ಅಂಥದ್ದನ್ನು ಖರೀದಿಸಬೇಡಿ. ಗಾಢ ಹಳದಿ ಬಣ್ಣದಲ್ಲಿ ಕಾಣುವ ಬೆಲ್ಲ ಕಳಪೆ ಗುಣಮಟ್ಟದ್ದಾಗಿರುತ್ತೆ. ಸರಿಯಾದ ಗುಣಮಟ್ಟದ ಬೆಲ್ಲವನ್ನು ಖರೀದಿಸುವುದರ ಜೊತೆಗೆ ಅದನ್ನು ಸರಿಯಾಗಿ ಸಂಗ್ರಹಿಸುವುದು ಅಷ್ಟೇ ಮುಖ್ಯ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಅಡುಗೆಮನೆ ಸಲಹೆಗಳು
ಆಹಾರ

Latest Videos
Recommended Stories
Recommended image1
ಎಣ್ಣೆ, ತುಪ್ಪ ಅಲ್ವೇ ಅಲ್ಲ.. ಚಪಾತಿ ಮಾಡುವಾಗ 2 ಚಮಚ ಈ ಹಿಟ್ಟನ್ನು ಬೆರೆಸಿ.. ಹತ್ತಿಯಂತೆ ಮೃದುವಾಗಿರುತ್ತವೆ
Recommended image2
ಗ್ಯಾಸ್ ಸ್ಟವ್ ಪಕ್ಕ ಈ 7 ವಸ್ತುಗಳನ್ನು ಇಡಲೇಬೇಡಿ! ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು!
Recommended image3
Krishna Janmashtami Recipe: 10 ನಿಮಿಷದಲ್ಲಿ 1 ಕಪ್ ಅವಲಕ್ಕಿಯಿಂದ ಸಕ್ಕರೆ ಬಳಸದೆ ಮಾಡಿ ರುಚಿಯಾದ ಲಡ್ಡು
Related Stories
Recommended image1
ಸಕ್ಕರೆ ನಾಡಲ್ಲಿ ಬೆಲ್ಲ 'ಬಂಗಾರ': ಮಂಡ್ಯ ಮಾರುಕಟ್ಟೆ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಬೆಲ್ಲದ ದರ!
Recommended image2
Jaggery Tea Recipe: ಟೀ ಅಮೃತದಷ್ಟು ರುಚಿಯಾಗಿರುತ್ತೆ... ಬೆಲ್ಲ ಯಾವಾಗ ಸೇರಿಸ್ಬೇಕು ಅಂತ ತಿಳ್ಕೊಳ್ಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved