ಸಿಲಿಂಡರ್ ಸಿಗ್ತಿಲ್ಲ ಎಂಬ ಟೆನ್ಷನ್ ಬೇಡ, ಗ್ಯಾಸ್ ಇಲ್ದೆ ಹೀಗೆ ಅಡುಗೆ ಮಾಡಿ
LPG Cylinder : ಎಲ್ಲೂ ಸಿಲಿಂಡರ್ ಸಿಗ್ತಿಲ್ಲ. ಮನೆಯಲ್ಲಿರುವ ಸಿಲಿಂಡರ್ ಖಾಲಿ ಆಗ್ತಿದೆ ಏನು ಮಾಡೋದು? ಟೆನ್ಷನ್ ನಲ್ಲಿರುವ ಜನರಿಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ. ಗ್ಯಾಸ್ ಇಲ್ದೆ ಅಡುಗೆ ಮಾಡೋದು ಹೇಗೆ ಗೊತ್ತಾ?

ದುಬಾರಿ ಗ್ಯಾಸ್ ಸಿಲಿಂಡರ್
ಗ್ಯಾಸ್ ಒಲೆ ಮೇಲೆ ಹಾಲಿಟ್ಟು ಪ್ರಪಂಚ ಮರೆತ್ರೆ ಇನ್ಮುಂದೆ ಕಷ್ಟ. ನೀವು ಎಷ್ಟು ಕಡಿಮೆ ಅಡುಗೆ ಸಿಲಿಂಡರ್ ಬಳಕೆ ಮಾಡ್ತೀರೋ ಅಷ್ಟು ಒಳ್ಳೇದು. ಯುದ್ಧದಿಂದಾಗಿ ದೇಶದಲ್ಲಿ ಅಡುಗೆ ಸಿಲಿಂಡರ್ ಸಿಗ್ತಿಲ್ಲ. ದುಬಾರಿ ಬೆಲೆಗೆ ಅಕ್ರಮವಾಗಿ ಸಿಲಿಂಡರ್ ಮಾರಾಟ ಮಾಡಲಾಗ್ತಿದೆ. ಈಗಾಗಲೇ ಅನೇಕ ಹೊಟೇಲ್ ಬಾಗಿಲು ಮುಚ್ತಿದೆ. ನಿಮ್ಮ ಅಡುಗೆ ಮನೆ ಬಾಗಿಲು ಕ್ಲೋಸ್ ಆಗ್ಬಾರದು ಅಂದ್ರೆ ನೀವು ಗ್ಯಾಸ್ ಇಲ್ದೆ ಅಡುಗೆ ಮಾಡೋದನ್ನು ಕಲೀಬೇಕು. ಸ್ಮಾರ್ಟ್ ಆಗಿ ಅಡುಗೆ ಮಾಡಿದ್ರೆ ಟೆನ್ಷನ್ ಕಡಿಮೆ.
ಎಲೆಕ್ಟ್ರಾನಿಕ್ ಗ್ಯಾಜೆಟ್ಸ್
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇಲ್ಲ ಅಂದ್ರೆ ಟೆನ್ಷನ್ ಮಾಡ್ಕೊಳ್ಬೇಕಾಗಿಲ್ಲ. ಮಾರ್ಕೆಟ್ ನಲ್ಲಿ ಸಾಕಷ್ಟು ಎಲೆಕ್ಟ್ರಾನಿಕ್ ಗ್ಯಾಜೆಟ್ ಲಭ್ಯವಿದೆ. ನೀವು ಗ್ಯಾಸ್ ಸಿಲಿಂಡರ್ ಗೆ ಪರ್ಯಾಯವಾಗಿ ಇದನ್ನು ಬಳಸ್ಬಹುದು. ಅನೇಕರ ಮನೆಯಲ್ಲಿ ಈಗಾಗ್ಲೇ ಸಿಲಿಂಡರ್ ಜಾಗವನ್ನು ಎಲೆಕ್ಟ್ರಾನಿಕ್ ಗ್ಯಾಜೆಟ್ ಆವರಿಸಿದೆ.
ಇಂಡಕ್ಷನ್ ಕುಕ್ಟಾಪ್
ಇಂಡಕ್ಷನ್ ಕುಕ್ಟಾಪ್ಗಳು LPG ಗೆ ಅತ್ಯಂತ ಜನಪ್ರಿಯ ಪರ್ಯಾಯವಾಗ್ತಿದೆ. ಅವು ಕರೆಂಟ್ ನಿಂದ ವರ್ಕ್ ಆಗುತ್ವೆ. ನೇರವಾಗಿ ಪಾತ್ರೆಯಲ್ಲಿ ಶಾಖ ಉತ್ಪಾದಿಸುತ್ತವೆ. ಇದು ವೇಗವಾಗಿ ಅಡುಗೆ ಮಾಡಲು ಸಹಾಯ ಮಾಡುತ್ತೆ. ಇಂಡಕ್ಷನ್ ಕುಕ್ಟಾಪ್ಗಳು ಮಾರ್ಕೆಟ್ ನಲ್ಲಿ 2,000 ದಿಂದ 5,000 ರೂಪಾಯಿ ವರೆಗಿನ ಬೆಲೆಗೆ ಲಭ್ಯವಿದೆ. ಸಣ್ಣ ಫ್ಲಾಟ್, ಹಾಸ್ಟೆಲ್ ಅಥವಾ ಬಾಡಿಗೆ ಮನೆಗಳಲ್ಲಿ ವಾಸಿಸೋರು ಇದನ್ನು ಹೆಚ್ಚು ಬಳಕೆ ಮಾಡ್ತಿದ್ದಾರೆ.
ಇನ್ಫ್ರಾರೆಡ್ ಕುಕ್ಟಾಪ್
ಇಂಡಕ್ಷನ್ ಅನ್ನು ಹೋಲುವ ಮತ್ತೊಂದು ಗ್ಯಾಜೆಟ್ ಇನ್ಫ್ರಾರೆಡ್ ಕುಕ್ಟಾಪ್. ಇದರಲ್ಲಿ, ಗಾಜಿನ ತಟ್ಟೆ ಬಿಸಿಯಾಗಿ ಆಹಾರ ಬೇಯುತ್ತೆ. ಇದರ ವೈಶಿಷ್ಟ್ಯವೆಂದರೆ ಬಹುತೇಕ ಎಲ್ಲ ರೀತಿಯ ಕುಕ್ವೇರ್ ಜೊತೆ ಬಳಸಬಹುದು. ಇಂಡಕ್ಷನ್ ಗೆ ಇರುವಷ್ಟು ಮಿತಿ ಇದಕ್ಕಿಲ್ಲ. ಅಂದ್ರೆ ಇನ್ಪ್ರಾರೆಡ್ ಕುಕ್ ಟಾಪ್ ಗೆ ಅಗತ್ಯವಿರುವ ಪಾತ್ರೆ ಇಲ್ಲ ಅಂದ್ರೂ ಮನೆಯಲ್ಲಿರುವ ಪಾತ್ರವನ್ನು ಬಳಸಬಹುದು.
ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್
ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್ಗಳು ಅಥವಾ ಮಲ್ಟಿ-ಕುಕ್ಕರ್ಗಳು ಹೆಚ್ಚು ಫೇಮಸ್ ಆಗ್ತಿವೆ. ಅಕ್ಕಿ, ಬೇಳೆ, ತರಕಾರಿ, ಸೂಪ್ ನಂತಹ ಆಹಾರವನ್ನು ನೀವು ಇದ್ರಲ್ಲಿ ತಯಾರಿಸ್ಬಹುದು. ಮಾರ್ಕೆಟ್ ನಲ್ಲಿ ಸಾಕಷ್ಟು ವೆರೈಟಿ ಪ್ರೆಶರ್ ಕುಕ್ಕರ್ ಲಭ್ಯ ಇದೆ. ಟೈಮರ್ ಸೆಟ್ ಮಾಡ್ಬಹುದು. ಇ-ಕಾಮರ್ಸ್ ಅಥವಾ ಆಫ್ಲೈನ್ ಅಂಗಡಿಗಳ ಮೂಲಕ ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್ಗಳನ್ನು ಖರೀದಿಸಬಹುದು.
ಮೈಕ್ರೋವೇವ್ ಓವನ್
ಮೈಕ್ರೋವೇವ್ಗಳನ್ನು ಸಾಮಾನ್ಯವಾಗಿ ಆಹಾರವನ್ನು ಬಿಸಿ ಮಾಡುವುದು ಎಂದು ಭಾವಿಸಲಾಗುತ್ತದೆ. ಆದ್ರೆ ಕೆಲ ಮೈಕ್ರೋವೇವ್ಗಳಲ್ಲಿ ನಾವು ಅಡುಗೆ ಮಾಡ್ಬಹುದು. ಗ್ರಿಲ್ ಬಳಸಿ ವಿವಿಧ ಖಾದ್ಯ ತಯಾರಿಸ್ಬಹುದು. ಮೈಕ್ರೋವೇವ್ ಸರಿಯಾಗಿ ಬಳಸಿದ್ರೆ ನೀವು ಗ್ಯಾಸ್ ಉಳಿಸಬಹುದು.
ಏರ್ ಫ್ರೈಯರ್
ಕಳೆದ ಕೆಲವು ವರ್ಷಗಳಿಂದ ಏರ್ ಫ್ರೈಯರ್ ಹೆಚ್ಚು ಜನಪ್ರಿಯವಾಗಿದೆ. ಆರಂಭದಲ್ಲಿ ಇದನ್ನು ಫ್ರೈ ಮಾಡಲು ಬಳಕೆ ಮಾಡ್ತಿದ್ರು. ಆದ್ರೀಗ ಹೊಸ ಏರ್ ಫ್ರೈಯರ್ ಗಳು ರೋಸ್ಟ್, ಬೇಕ್ ಮತ್ತು ಗ್ರಿಲ್ ಸೇರಿದಂತೆ ಮಲ್ಟಿ ಆಪ್ಶನ್ ಹೊಂದಿವೆ. ತರಕಾರಿ ಬೇಯಿಸಲು, ಕೇಕ್ ತಯಾರಿ ಸೇರಿದಂತೆ ಅನೇಕ ಅಡುಗೆಗೆ ಇದನ್ನು ಜನ ಬಳಸ್ತಿದ್ದಾರೆ.
ಗ್ಯಾಸ್ ಇಲ್ಲದ ಅಡುಗೆಮನೆ ಸಾಧ್ಯವೇ?
ಸದ್ಯ ಎಲ್ಲ ಮನೆಯಲ್ಲೂ ಸಂಪೂರ್ಣವಾಗಿ ಗ್ಯಾಸ್ ಮುಕ್ತ ಅಡುಗೆ ಸಾಧ್ಯವಿಲ್ಲ. ಆದ್ರೆ ಇಂಡಕ್ಷನ್ ಕುಕ್ಕರ್ , ಮೈಕ್ರೋವೇವ್ , ಏರ್ ಫ್ರೈಯರ್ ಮತ್ತು ಎಲೆಕ್ಟ್ರಿಕ್ ಕುಕ್ಕರ್ ನಂತಹ ಗ್ಯಾಜೆಟ್ ಬಳಸಿ ನೀವು ಎಲ್ಪಿಜಿ ಬಳಕೆ ಕಡಿಮೆ ಮಾಡಬಹುದು. ಗ್ಯಾಸ್ ಕೊರತೆಯಾಗಿರೋ ಈ ಟೈಂನಲ್ಲಿ ಪರ್ಯಾಯ ಆಯ್ಕೆ ಅನಿವಾರ್ಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

