ಕ್ಲೀನ್ ಮಾಡ್ದೆ ಟೊಮೆಟೊ ಬಳಸ್ಬೇಡಿ, ಕೆಮಿಕಲ್ ತೆಗಿಯೋಕೆ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ
Kitchen Tips : ರಸಂ, ಸಲಾಡ್, ಕೆಚಪ್ ಹೀಗಿ ನಾನಾ ಅಡುಗೆಗೆ ಟೊಮೆಟೊ ಬಳಸಲಾಗುತ್ತೆ. ಆಹಾರದ ರುಚಿ ಹೆಚ್ಚಿಸೋ ಈ ಟೊಮೆಟೊಕ್ಕೆ ಕೆಮಿಕಲ್ ಬಳಕೆ ಸಾಮಾನ್ಯ. ಟೊಮೆಟೊದಿಂದ ಸಂಪೂರ್ಣ ಕೆಮಿಕಲ್ ಹೊರಗೆ ತೆಗೆಯಲು ಸಾಧ್ಯವಿಲ್ಲದೆ ಹೋದ್ರೂ ಕೆಲ ಸಣ್ಣ ಅಭ್ಯಾಸಗಳು ಆರೋಗ್ಯಕರ ಆಹಾರದ ಕಡೆಗೆ ಒಂದು ಸರಳ ಹೆಜ್ಜೆಯಾಗಿದೆ.

ಆರೋಗ್ಯ ಹಾಳು ಮಾಡು ಟೊಮೆಟೊ
ಈಗ ಪ್ರತಿಯೊಂದು ಬೆಳೆಗೂ ಕೀಟನಾಶಕ ಬಳಕೆ ಸಾಮಾನ್ಯವಾಗಿದೆ. ಹಣ್ಣು, ತರಕಾರಿ, ಸೊಪ್ಪಿಗೆ ಕೀಟನಾಶಕ ಸ್ಪ್ರೇ ಮಾಡುವ ಜೊತೆಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡ್ತಾರೆ. ಟೊಮೆಟೊ ಶೈನಿಂಗ್ ಹೆಚ್ಚಾಗ್ಲಿ, ಬಹಳ ದಿನ ಕೊಳೆಯದೆ ಇರ್ಲಿ ಎನ್ನುವ ಕಾರಣಕ್ಕೆ ಕೆಮಿಕಲ್ ಮಿಕ್ಸ್ ಮಾಡಲಾಗುತ್ತೆ. ಟೊಮೆಟೊ ಹಣ್ಣಿನ ಒಳಗಿರುವ ಕೆಮಿಕಲ್ ತೆಗೆಯೋದು ಕಷ್ಟಸಾಧ್ಯ. ಆದ್ರೆ ಸಿಪ್ಪೆಗೆ ಅಂಟಿರುವ ಕೀಟನಾಶಕಗಳನ್ನು ನಾವು ಸ್ವಚ್ಛಗೊಳಿಸ್ಬಹುದು.
ಟೊಮೆಟೊ ಸಿಪ್ಪೆ ಕ್ಲೀನಿಂಗ್ ಏಕೆ ಮುಖ್ಯ?
ಟೊಮೆಟೊ ಸಿಪ್ಪೆ ತುಂಬಾ ತೆಳು ಮತ್ತು ಸೂಕ್ಷ್ಮವಾಗಿರುತ್ತದೆ. ಕೀಟನಾಶಕದ ಕಣಗಳು ಮೇಲ್ಮೈ ಸಿಪ್ಪೆಗೆ ಅಂಟಿಕೊಳ್ಳುತ್ತವೆ. ನೀವು ಟೊಮೆಟೊವನ್ನು ಚೆನ್ನಾಗಿ ಸ್ವಚ್ಛಗೊಳಿಸಿದಾಗ ಕೀಟನಾಶಕಗಳ ಕಣಗಳು ಕಡಿಮೆ ಆಗುತ್ತವೆ. ಅದ್ರ ಮೇಲಿರುವ ಕೊಳಕು ಮತ್ತು ಧೂಳು ಕ್ಲೀನ್ ಆಗುತ್ತದೆ. ಬ್ಯಾಕ್ಟೀರಿಯಾ ಮುಕ್ತವಾಗುವ ಕಾರಣ, ಹಸಿ ಟೊಮೆಟೊವನ್ನು ಭಯವಿಲ್ಲದೆ ಬಳಸಬಹುದು. ಹಾಗಾಗಿ ಟೊಮೆಟೊ ಬಳಕೆಗೆ ಮೊದಲು ಅದರ ಕ್ಲೀನಿಂಗ್ ಗೆ ನೀವು ಹೆಚ್ಚುವರಿ ಕೆಲವೇ ಕೆಲವು ನಿಮಿಷ ನೀಡಿದ್ರೆ ಸಾಕು. ಇದ್ರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.
ಉಪ್ಪಿನಲ್ಲಿ ಟೊಮೆಟೊ ಕ್ಲೀನಿಂಗ್
ಟೊಮೆಟೊವನ್ನು ಬರೀ ನೀರಿನಲ್ಲಿ ಕ್ಲೀನ್ ಮಾಡುವ ಬದಲು ಉಪ್ಪು ನೀರಿನಲ್ಲಿ ವಾಶ್ ಮಾಡಿದ್ರೆ ಹೆಚ್ಚು ಪರಿಣಾಮಕಾರಿ. ಇದಕ್ಕೆ ಹೆಚ್ಚು ವಸ್ತುವಿನ ಅಗತ್ಯವಿಲ್ಲ. ಹಾಗೆಯೇ ಹೆಚ್ಚು ಸಮಯ ಹಿಡಿಯೋದಿಲ್ಲ. ಉಪ್ಪು ಟೊಮೆಟೊ ಸಿಪ್ಪೆಯ ಮೇಲಿರುವ ಕೀಟನಾಶಕಗಳು ಮತ್ತು ಕೊಳೆಯನ್ನು ತೆಗೆದುಹಾಕಲು ಸಹಕಾರಿ.
ಕ್ಲೀನಿಂಗ್ ವಿಧಾನ
ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಒಂದು ಲೀಟರ್ ಶುದ್ಧ ನೀರನ್ನು ಹಾಕಿ. ಅದಕ್ಕೆ ಒಂದು ಚಮಚ ಅಡಿಗೆ ಉಪ್ಪನ್ನು ಸೇರಿಸಿ. ನೀರಿನಲ್ಲಿ ಉಪ್ಪು ಕರಗಲು ಬಿಡಿ. ನಂತ್ರ ಟೊಮೆಟೊವನ್ನು ಉಪ್ಪು ನೀರಿನಲ್ಲಿ ನೆನೆಸಿಡಿ. ಎಲ್ಲ ಟೊಮೆಟೊ ನೀರಿನಲ್ಲಿ ಸರಿಯಾಗಿ ಮುಳುಗಿರಬೇಕು. ಸುಮಾರು 15 -20 ನಿಮಿಷ ಟೊಮೆಟೊವನ್ನು ನೀರಿನಲ್ಲಿ ಮುಳುಗಿಸಿಡಿ.
ಎರಡನೇ ಹಂತ
ಉಪ್ಪು ನೀರಿನಲ್ಲಿ ನೆನೆಸಿಟ್ಟ ಟೊಮೆಟೊವನ್ನು ತೆಗೆದು ಶುದ್ಧ ನೀರಿನಲ್ಲಿ ಕ್ಲೀನ್ ಮಾಡಿ. ಕ್ಲೀನ್ ಮಾಡುವಾಗ ಟೊಮೆಟೊ ಸಿಪ್ಪೆಯನ್ನು ಮೃದುವಾಗಿ ಉಜ್ಜಬೇಕು. ಸಡಿಲವಾದ ಕೀಟನಾಶಕದ ಕಣ ಹಾಗೂ ಧೂಳು ಇದ್ರಿಂದ ಹೊರಗೆ ಹೋಗುತ್ತದೆ. ನಂತ್ರ ಟೊಮೆಟೊವನ್ನು ಒಣಗಿಸಬೇಕು. ಶುದ್ಧ ಬಟ್ಟೆಯ ಮೇಲೆ ಟೊಮೆಟೊವನ್ನು ಹಾಕಿ ನೀರು ಆರಲು ಬಿಡಿ.
ನೀವು ಹೀಗೂ ಮಾಡ್ಬಹುದು
ಟೊಮೆಟೊವನ್ನು ಮನೆಗೆ ತಂದ ತಕ್ಷಣ ಸ್ವಚ್ಛಗೊಳಿಸಿ ಇಡುವ ಬದಲು ಅಡುಗೆಗೆ ಬಳಸುವ ಮುನ್ನ ನೀರಿನಲ್ಲಿ ನೆನೆಸಿಟ್ಟು ಕ್ಲೀನ್ ಮಾಡಿದ್ರೆ ಉತ್ತಮ. ಉಪ್ಪು ನೀರಿನಲ್ಲಿ ತುಂಬಾ ಸಮಯ ಟೊಮೆಟೊ ನೆನೆಹಾಕಬೇಡಿ. ಟೊಮೆಟೊ ಸಿಪ್ಪೆ ಹಾಳಾಗಿದ್ದರೆ ಅದನ್ನು ತೆಗೆದು ಬಳಸಿ. ನಿಮಗೆ ಭಯವಿದ್ದಲ್ಲಿ ಟೊಮೆಟೊವನ್ನು ಬಿಸಿ ನೀರಿನಲ್ಲಿ ಸ್ವಲ್ಪ ಬೇಯಿಸಿ. ಮೇಲಿನ ಸಿಪ್ಪೆ ತೆಗೆದು ಅದನ್ನು ಅಡುಗೆಗೆ ಬಳಸಿ. ನಿಮಗೆ ತಿಳಿದಿರುವ, ಕೀಟನಾಶಕ ಬಳಸದಿರುವ ಟೊಮೆಟೊ ಖರೀದಿಗೆ ಹೆಚ್ಚು ಗಮನ ನೀಡಿ.
ಉಪ್ಪಿನಿಂದ ಸಂಪೂರ್ಣ ಶುದ್ಧವಾಗುತ್ತಾ ಟೊಮೆಟೊ?
ಟೊಮೆಟೊ ಸಿಪ್ಪೆಗೆ ಅಂಟಿರುವ ಕೀಟನಾಶಕ ಕಣ, ಕೊಳೆಯನ್ನು ಉಪ್ಪುನೀರು ತೆಗೆಯುತ್ತದೆ. ಆದ್ರೆ ಟೊಮೆಟೊ ಬೆಳವಣಿಕೆ ಸಮಯದಲ್ಲಿ ಅದರ ಒಳಗೆ ಕೆಮಿಕಲ್ ಬಳಸಿದ್ದರೆ ಅದನ್ನು ತೆಗೆಯಲು ಸಾಧ್ಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

