Geyser Warning Signs: ಗೀಸರ್ ಬದಲಾಯಿಸೋ ಸಮಯ ಬಂದಿದೆಯೇ? 5 ಚಿಹ್ನೆ ಕಾಣಿಸಿದ್ರೆ ಎಚ್ಚರ
Geyser Warning Signs: ಚಳಿಗಾಲದಲ್ಲಿ ಹೆಚ್ಚು ಬಳಸುವ ಗೀಸರ್ ಹಾಳಾಗುವ ಮುನ್ನ ಕೆಲವು ಎಚ್ಚರಿಕೆಗಳನ್ನು ನೀಡುತ್ತದೆ. ಈ 5 ಮುಖ್ಯ ಚಿಹ್ನೆಗಳನ್ನು ಗುರುತಿಸಿ ಗೀಸರ್ ಬದಲಾಯಿಸಬೇಕೇ ಎಂದು ತಿಳಿಯಿರಿ.

ಗೀಸರ್ ಬದಲಾಯಿಸುವ ಸಲಹೆ
ಚಳಿಗಾಲದಲ್ಲಿ, ಬೆಳಗ್ಗೆ ಸ್ನಾನದಿಂದ ಹಿಡಿದು ಪಾತ್ರೆಗಳನ್ನು ತೊಳೆಯುವವರೆಗೆ ಬಿಸಿ ನೀರಿಗಾಗಿ ಗೀಸರ್ ಮೇಲೆ ಅವಲಂಬನೆ ಹೆಚ್ಚಾಗುತ್ತದೆ. ದೀರ್ಘಕಾಲದ ಬಳಕೆಯ ನಂತರ ಗೀಸರ್ನಿಂದ ವಿಚಿತ್ರ ಶಬ್ದ ಕೇಳಿಸಲು ಆರಂಭಿಸುತ್ತದೆ. ಗೀಸರ್ ಸಂಪೂರ್ಣ ಹಾಳಾಗುವ ಮುನ್ನ ಅದು ಕೆಲವೊಂದು ಎಚ್ಚರಿಕೆಗಳನ್ನು ನೀಡುತ್ತದೆ. ಕೆಳಗಿನ ಈ 5 ಚಿಹ್ನೆಗಳು ಗೀಸರ್ ಬದಲಾಯಿಸುವ ಸಲಹೆಯನ್ನು ನೀಡುತ್ತವೆ.
ವಾಟರ್ ಲೀಕೇಜ್
ಗೀಸರ್ ಟ್ಯಾಂಕ್ ಕೆಳಗೆ ಅಥವಾ ಸುತ್ತಲೂ ಪದೇ ಪದೇ ನೀರು ಕಾಣಿಸಿಕೊಳ್ಳುತ್ತಿದ್ದರೆ ಇದನ್ನು ಸೋರಿಕೆಯ ಸಂಕೇತ ಎಂದು ತಿಳಿದುಕೊಳ್ಳಬೇಕು. ದೀರ್ಘಕಾಲದ ಬಳಕೆಯಿಂದಾಗಿ ಲೀಕೇಜ್ ಆಗೋ ಸಾಧ್ಯತೆ ಇರುತ್ತದೆ. ಈ ಲೀಕೇಜ್ನಿಂದ ನಿಮ್ಮ ಗೀಸರ್ ತುಕ್ಕು ಹಿಡಿಯೋ ಸಾಧ್ಯತೆ ಇರುತ್ತದೆ.
ವೈಯರಿಂಗ್ ದೋಷ
ಈ ರೀತಿಯಲ್ಲಿ ಸೋರಿಕೆ ಕಾಣಿಸಿಕೊಂಡಾಗ ಕೇವಲ ಮೇಲ್ಭಾಗದ ರಿಪೇರಿ ಮಾಡಬಾರದು. ನುರಿತ ತಜ್ಞರನ್ನು ಕರೆಸಿ ಗೀಸರ್ ಒಳಭಾಗದಲ್ಲಿ ಏನು ಸಮಸ್ಯೆಯಾಗಿದೆ ಎಂಬುದನ್ನು ಪತ್ತೆ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಮಾಡಿಕೊಳ್ಳಿ. ನೀರು ಆವಿಯ ಶೇಖರಣೆ, ವೈಯರಿಂಗ್ನಲ್ಲಿ ದೋಷ, ಲೂಸ್ ಕನೆಕ್ಷನ್ ಸೇರಿದಂತೆ ಇನ್ನಿತರ ವಿಷಯಗಳು ಗೀಸರ್ ಸೋರಿಕೆಗೆ ಕಾರಣವಾಗಬಹುದು.
ನೀರಿನ ಬಣ್ಣದ ಬದಲಾವಣೆ
ನಲ್ಲಿಯಿಂದ ಬರುತ್ತಿರುವ ನೀರು ಹಳದಿ ಅಥವಾ ತುಕ್ಕು ಹಿಡಿದ ಬಣ್ಣಕ್ಕೆ ಬದಲಾದ್ರೆ ಗೀಸರ್ ಒಳಭಾಗದಲ್ಲಿ ತುಕ್ಕು ಹಿಡಿದಿದೆ ಎಂದಿದೆ ಅರ್ಥ. ಗೀಸರ್ನಲ್ಲಿರುವ ಅನ್ಲೋಡ್ ರಾಡ್ ಸವೆತದಿಂದ ನೀರು ಹಳದಿ ಬಣ್ಣಕ್ಕೆ ಬದಲಾಗಿರುತ್ತದೆ. ದೀರ್ಘಕಾಲದ ಬಳಕೆಯಿಂದಾಗಿ ರಾಡ್ನಲ್ಲಿ ಸವಕಳಿ ಆಗಿರುತ್ತೆ. ಸರಿಯಾದ ಸಮಯಕ್ಕೆ ಈ ರಾಡ್ ಬದಲಾಯಿಸಿದ್ರೆ ಗೀಸರ್ ಬಳಕೆ ಸಮಯವನ್ನು ಹೆಚ್ಚಿಸಬಹುದು ಮತ್ತು ಅಪಾಯ ದೂರ ಮಾಡಬಹುದು.
ವಿಚಿತ್ರ ಶಬ್ದ
ಗೀಸರ್ನಲ್ಲಿ ಸಮಸ್ಯೆಯುಂಟಾದ ಸಂದರ್ಭದಲ್ಲಿ ನೀರು ಬಿಸಿಯಾಗುವ ವಿಚಿತ್ರ ಶಬ್ದ ಕೇಳಿಸಲು ಆರಂಭಿಸುತ್ತದೆ. ಗೀಸರ್ ಟ್ಯಾಂಕ್ನೊಳಗೆ ನೀರಿನ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದ್ರೆ ಇಂತಹ ಸದ್ದು ಕೇಳಿಸುತ್ತದೆ. ಈ ಕೊಳಕು ನೀರು ಬಿಸಿಯಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಟ್ಯಾಂಕ್ ಸ್ವಚ್ಚಗೊಳಿಸಿದ ನಂತ್ರವೂ ಶಬ್ದ ಕೇಳಿಸಿದ್ರೆ ಗೀಸರ್ ಬದಲಾಯಿಸುವ ಸಮಯ ಬಂದಿದೆ ಎಂದು ತಿಳಿದುಕೊಳ್ಳಬೇಕು.
ಹೆಚ್ಚು ಸಮಯ
ಗೀಸರ್ ಬಿಸಿನೀರು ಬೇಗ ಖಾಲಿಯಾಗೋದು ಮತ್ತು ಬಿಸಿಯಾಗಲು ಹೆಚ್ಚು ಸಮಯ ತೆಗೆದುಕೊಂಡ್ರೆ, ನೀರಿಗೆ ಶಾಖದ ವರ್ಗಾವಣೆ ನಿಧಾನಗೊಂಡಿರುತ್ತದೆ. ಹೆಚ್ಚಿನ ಸಂಖ್ಯೆಯ ಜನರು ಅಥವಾ ಬಹು ಬಿಸಿನೀರಿನ ಸಂಪರ್ಕಗಳು ಇದಕ್ಕೆ ಕಾರಣವಾಗಬಹುದು. ವಿದ್ಯುತ್ ಗೀಸರ್ನಲ್ಲಿ ದೋಷಪೂರಿತ ಥರ್ಮೋಸ್ಮಾಟ್ ಅಥವಾ ತಾಪನ ಅಂಶವು ಸಹ ಕಾರಣವಾಗಬಹುದು. ಈ ಸಮಸ್ಯೆಯನ್ನು ಪರೀಕ್ಷಿಸಲು ತಂತ್ರಜ್ಞರನ್ನು ಸಂಪರ್ಕಿಸಿ. ಪರೀಕ್ಷೆ ನಂತರವೂ ಈ ಸಮಸ್ಯೆ ಮುಂದುವರಿದ್ರೆ ಗೀಸರ್ ಬದಲಾಯಿಸಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.











