MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ನೀರು ಹೆಚ್ಚಾಗಿ ಅನ್ನ ಮೆತ್ತಗಾಗಿ ಪಿಚಿಪಿಚಿ ಆಗಿದ್ಯಾ? ಬ್ರೆಡ್​ ಪೀಸ್​ ಹೀಗೆ ಹಾಕಿ ಕಮಾಲ್ ನೋಡಿ

ನೀರು ಹೆಚ್ಚಾಗಿ ಅನ್ನ ಮೆತ್ತಗಾಗಿ ಪಿಚಿಪಿಚಿ ಆಗಿದ್ಯಾ? ಬ್ರೆಡ್​ ಪೀಸ್​ ಹೀಗೆ ಹಾಕಿ ಕಮಾಲ್ ನೋಡಿ

ಅಡುಗೆ ಮಾಡುವಾಗ ಅನ್ನ ಕೆಲವೊಮ್ಮೆ ಮೆತ್ತಗಾಗಿಬಿಡುತ್ತದೆ. ಈ ಸಮಸ್ಯೆಗೆ ತಲೆಕೆಡಿಸಿಕೊಳ್ಳುವ ಬದಲು, ಅನ್ನದ ಮೇಲೆ ಒಂದೆರಡು ಬ್ರೆಡ್ ಸ್ಲೈಸ್‌ಗಳನ್ನು ಇಡುವುದರಿಂದ ಹೆಚ್ಚುವರಿ ನೀರನ್ನು ಹೀರಿಕೊಂಡು ಅನ್ನ ಉದುರು ಉದುರಾಗುತ್ತದೆ. ಜೊತೆಗೆ, ಅನ್ನ ಮಾಡುವಾಗ ನಿಂಬೆರಸ ಬಳಸುವುದು ಕೂಡ ಒಂದು ಉತ್ತಮ ಉಪಾಯ.

1 Min read
Author : Suchethana D
Published : Jul 18 2026, 07:47 PM IST
Share this Photo Gallery
  • FB
  • TW
  • Linkdin
  • Whatsapp
16
ಟಿಪ್ಸ್ ಕಲಿಯಿರಿ
Image Credit : healthylife hero instagram

ಟಿಪ್ಸ್ ಕಲಿಯಿರಿ

ಅಡುಗೆ ಮಾಡುವಾಗ ಕೆಲವೊಂದು ಟಿಪ್ಸ್ ಕಲಿತಿದ್ದರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಡುಗೆ ಮಾಡುವಾಗ ಎಷ್ಟೇ ಟ್ಯಾಲೆಂಟ್​ ಇದ್ದರೂ, ಚಿಕ್ಕಪುಟ್ಟ ಎಡವಟ್ಟಿನಿಂದ ಅಡುಗೆಯಲ್ಲಿ ಮಿಸ್ಟೆಕ್​ ಆಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಒಂದಿಷ್ಟು ಟಿಪ್ಸ್​ ಕಲಿತುಕೊಂಡಿದ್ದರೆ ಅದು ತುಂಬಾ ಉಪಯೋಗಕ್ಕೆ ಬರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅನ್ನ ಮಾಡೋದು ಸುಲಭವಲ್ಲ
Image Credit : Asianet News

ಅನ್ನ ಮಾಡೋದು ಸುಲಭವಲ್ಲ

ಅದರಲ್ಲಿ ಒಂದು ಅನ್ನ ಮಾಡುವುದು. ಅನ್ನ ಮಾಡುವುದು ತುಂಬಾ ಸುಲಭ ಎಂದುಕೊಂಡರೂ, ನಾವು ಪ್ರತಿಸಲ ತರುವ ಅಕ್ಕಿಯ ತಳಿ ಭಿನ್ನಭಿನ್ನವಾಗಿದ್ದರೆ ಅನ್ನಕ್ಕೆ ನೀರು ಹಾಕುವಾಗ ಹೆಚ್ಚೂ ಕಡಿಮೆ ಆಗಿಯೇ ಆಗುತ್ತದೆ. ಕೆಲವೊಂದು ಅಕ್ಕಿ ಬೇಯಲು ಸ್ವಲ್ಪ ಹೆಚ್ಚು ನೀರು ಬೇಕಿದ್ದರೆ, ಕೆಲವೊಂದಕ್ಕೆ ಸ್ವಲ್ಪ ಕಡಿಮೆ ನೀರು ಸಾಕು. ಆದ್ದರಿಂದ ಅನ್ನ ಒಮ್ಮೊಮ್ಮೆ ಅದೇ ಅಳತೆಯ ನೀರು ಹಾಕಿದರೂ ಗಟ್ಟಿ ಆಗುವುದು, ಮೆತ್ತಗೆ ಆಗುವುದು ಇದ್ದೇ ಇರುತ್ತದೆ.

Related Articles

Related image1
ಗರ್ಭಿಣಿ ಕಾಫಿ ಕುಡಿದ್ರೆ ಮಗು ಕಪ್ಪಾಗತ್ತಾ, ಕೇಸರಿ ತಿಂದರೆ ಬಿಳಿಯಾಗತ್ತಾ? ಪ್ರಸೂತಿ ತಜ್ಞೆ ಉತ್ತರ ಇಲ್ಲಿದೆ
Related image2
Foil Paper Uses: ನೆಟ್​ವರ್ಕ್ ಸಂಪರ್ಕದಿಂದ​ ಹಿಡಿದು ಪಾತ್ರೆ- ಆಭರಣ ಫಳಫಳವರೆಗೆ​
36
ಅಕ್ಕಿಗೆ ತಕ್ಕಂತೆ ಅನ್ನ
Image Credit : instagram

ಅಕ್ಕಿಗೆ ತಕ್ಕಂತೆ ಅನ್ನ

ಕುಕ್ಕರ್​ನಲ್ಲಿ ಸಾಮಾನ್ಯವಾಗಿ ಅನ್ನ ಮಾಡಿದಾಗ ಅದರಲ್ಲಿಯೂ ಅನ್ನ ಗಟ್ಟಿಯಾಗುವುದು, ಮೆತ್ತಗೆ ಆಗುವುದು ಇದ್ದೇ ಇರುತ್ತದೆ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ಪಾತ್ರೆಯಲ್ಲಿ ಅನ್ನ ಮಾಡಿದಾಗ ಈ ಸಮಸ್ಯೆ ಬರುವುದು ಇದೆ. ಅನ್ನವನ್ನು ಪಾತ್ರೆಯಲ್ಲಿಯೇ ಮಾಡಿ, ಕುಕ್ಕರ್​ನಲ್ಲಿಯೇ ಮಾಡಿ, ಒಂದು ವೇಳೆ ಸಿಕ್ಕಾಪಟ್ಟೆ ಮೆತ್ತಗೆ ಆಗಿ ಪಿಚಿಪಿಚಿ ಆಗಿಬಿಟ್ಟರೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಅಗತ್ಯವೇ ಇಲ್ಲ.

46
ರೈಸ್​ಬಾತ್​ ಅನ್ನ
Image Credit : instagram

ರೈಸ್​ಬಾತ್​ ಅನ್ನ

ಅಷ್ಟಕ್ಕೂ ರೈಸ್​ಬಾತ್​ ಮಾಡುವ ಸಂದರ್ಭದಲ್ಲಿ ಅನ್ನವನ್ನು ಉದುರು ಉದುರು ಮಾಡಿಕೊಳ್ಳಲು ಕಡಿಮೆ ನೀರು ಹಾಕುವುದು ಇದೆ. ಇದರ ಹೊರತಾಗಿಯೂ ಕೆಲವು ಸಂದರ್ಭಗಳಲ್ಲಿ ಕೆಲವೊಂದು ಅಕ್ಕಿಯಿಂದಾಗಿ ಅನ್ನ ಮೆತ್ತಗೆ ಆಗಬಹುದು. ಅಂಥ ಸಂದರ್ಭದಲ್ಲಿಯೂ ಈ ಟಿಪ್ಸ್​ ಉಪಯೋಗಕ್ಕೆ ಬರುತ್ತದೆ.

56
ಇದು ಬ್ರೆಡ್​ ಕಮಾಲ್​
Image Credit : Instagram

ಇದು ಬ್ರೆಡ್​ ಕಮಾಲ್​

ನೀವು ಮಾಡಬೇಕಿರುವುದು ಇಷ್ಟೇ. ಅನ್ನ ತುಂಬಾ ಮೆತ್ತಗೆ ಆಗಿಬಿಟ್ಟಿದ್ದರೆ ಅನ್ನದ ಮೇಲೆ ಒಂದೆರಡು ಸ್ಲೈಸ್​ ಬ್ರೆಡ್​​ ಇಟ್ಟು ಸ್ವಲ್ಪ ಹೊತ್ತು ಮುಚ್ಚಿಡಿ. ಬ್ರೆಡ್​ ಅನ್ನದಲ್ಲಿನ ಹೆಚ್ಚುವರಿ ನೀರನ್ನು ಹೀರಿಕೊಂಡು ಅನ್ನ ಉದುರು ಉದುರು ಆಗುತ್ತದೆ.

66
ಲಿಂಬೆ ಹಣ್ಣಿನ ಟ್ರಿಕ್ಸ್​ ಕೂಡ ಫಾಲೋ ಮಾಡಿ
Image Credit : Socialmedia

ಲಿಂಬೆ ಹಣ್ಣಿನ ಟ್ರಿಕ್ಸ್​ ಕೂಡ ಫಾಲೋ ಮಾಡಿ

ಇನ್ನು ಅನ್ನ ಮಾಡುವಾಗಲೇ ಲಿಂಬೆಹಣ್ಣಿನ ರಸ ಹಾಕಿದ್ರೆ ಅನ್ನ ಉದುರು ಉದುರು ಆಗುತ್ತದೆ. ಈ ಟಿಪ್ಸ್ ಕೂಡ ತುಂಬಾ ಒಳ್ಳೆಯದು. ಆದರೆ ಹಾಗೆ ಮಾಡದ ಸಂದರ್ಭದಲ್ಲಿ ಅನ್ನ ಮೆತ್ತಗೆ ಆಗಿದ್ದರೆ ಬ್ರೆಡ್​ ಸ್ಲೈಸ್​​ ರೆಮಿಡಿ ವರ್ಕ್​ ಆಗತ್ತೆ ನೋಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಕ್ಕಿ
ಅಡುಗೆಮನೆ ಸಲಹೆಗಳು
ಮಹಿಳೆಯರು
ಜೀವನಶೈಲಿ

Latest Videos
Recommended Stories
Recommended image1
Foil Paper Uses: ನೆಟ್​ವರ್ಕ್ ಸಂಪರ್ಕದಿಂದ​ ಹಿಡಿದು ಪಾತ್ರೆ- ಆಭರಣ ಫಳಫಳವರೆಗೆ​
Recommended image2
ಕರಿಬೇವು ಫ್ರಿಡ್ಜ್‌ನಲ್ಲಿಟ್ಟರೂ ಕಪ್ಪಾಗುತ್ತಿದೆಯೇ? ಈ ಮ್ಯಾಜಿಕ್ ಟ್ರಿಕ್ ಫಾಲೋ ಮಾಡಿದ್ರೆ ತಿಂಗಳುಗಟ್ಟಲೆ ಫ್ರೆಶ್ ಆಗಿರುತ್ತೆ!
Recommended image3
ಇಡ್ಲಿ ದೋಸೆಗಿಂತ ಚಟ್ನಿಗೇ ಡಿಮ್ಯಾಂಡ್! ತೆಳ್ಳನೆಯ ಚಟ್ನಿ ಮಾಡಲು ಟಿಫನ್ ಸೆಂಟರ್‌ನಲ್ಲಿ ಬಳಸುವ 2 ಸೀಕ್ರೆಟ್ ಪದಾರ್ಥಗಳಿವು
Related Stories
Recommended image1
ಗರ್ಭಿಣಿ ಕಾಫಿ ಕುಡಿದ್ರೆ ಮಗು ಕಪ್ಪಾಗತ್ತಾ, ಕೇಸರಿ ತಿಂದರೆ ಬಿಳಿಯಾಗತ್ತಾ? ಪ್ರಸೂತಿ ತಜ್ಞೆ ಉತ್ತರ ಇಲ್ಲಿದೆ
Recommended image2
Foil Paper Uses: ನೆಟ್​ವರ್ಕ್ ಸಂಪರ್ಕದಿಂದ​ ಹಿಡಿದು ಪಾತ್ರೆ- ಆಭರಣ ಫಳಫಳವರೆಗೆ​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved