Boiled Eggs Storage: ಬೇಯಿಸಿದ ಮೇಲೆ ಮೊಟ್ಟೆ ಹೀಗೆ ಸಂಗ್ರಹಿಸಿ.. ಒಂದು ವಾರ ಕಳೆದ್ರೂ ಕೆಡಲ್ಲ!
Boiled Eggs Storage: ಹಳೆಯ ಮೊಟ್ಟೆಗಳನ್ನು ತಿನ್ನುವುದು ಒಳ್ಳೆಯದಲ್ಲವಾದರೂ ಬೇಯಿಸಿದ ನಂತರವೂ ಮೊಟ್ಟೆಗಳು ಕೆಲವು ದಿನಗಳವರೆಗೆ ಚೆನ್ನಾಗಿ ಇರುತ್ತವೆ. ಆದರೆ ಅವುಗಳನ್ನು ಹೇಗೆ ಮತ್ತು ಎಲ್ಲಿ ಸಂಗ್ರಹಿಸುತ್ತವೆ ಎಂಬುದು ಮುಖ್ಯವಾಗುತ್ತದೆ.

ಪ್ರೋಟೀನ್ ಕೂಡಿರುವ ಮೊಟ್ಟೆ
ಮೊಟ್ಟೆಗಳಿಂದ ಪ್ರೋಟೀನ್ ಪಡೆಯೋದು ಸುಲಭ ಮತ್ತು ವೇಗವಾದ ಮಾರ್ಗದ ಹೌದು. ವಿಶೇಷವಾಗಿ ಶೀತದ ಕಾಲದಲ್ಲಿ ಮೊಟ್ಟೆಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಇದು ಸ್ನಾಯುಗಳ ಬೆಳವಣಿಗೆಯನ್ನು ಸಹ ಸುಧಾರಿಸುತ್ತದೆ.
ಬೇಯಿಸಿದ ನಂತರವೂ ಚೆನ್ನಾಗಿರುತ್ತೆ
ಆದರೆ ಬೇಸರದ ಸಂಗತಿಯೆಂದರೆ ಬೇಯಿಸಿದ ಮೊಟ್ಟೆಗಳು ಬಹಳ ಬೇಗನೆ ಹಾಳಾಗುತ್ತವೆ. ಹಳೆಯ ಮೊಟ್ಟೆಗಳನ್ನು ತಿನ್ನುವುದು ಒಳ್ಳೆಯದಲ್ಲವಾದರೂ ಬೇಯಿಸಿದ ನಂತರವೂ ಮೊಟ್ಟೆಗಳು ಕೆಲವು ದಿನಗಳವರೆಗೆ ಚೆನ್ನಾಗಿ ಇರುತ್ತವೆ. ಆದರೆ ಅವುಗಳನ್ನು ಹೇಗೆ ಮತ್ತು ಎಲ್ಲಿ ಸಂಗ್ರಹಿಸುತ್ತವೆ ಎಂಬುದು ಮುಖ್ಯವಾಗುತ್ತದೆ.
ಸಿಪ್ಪೆ ಸುಲಿದ ಮತ್ತು ಗಟ್ಟಿಯಾಗಿ ಬೇಯಿಸಿದ ಮೊಟ್ಟೆ
ಹೌದು. ಬೇಯಿಸಿದ ಮೊಟ್ಟೆಗಳನ್ನು ಸರಿಯಾಗಿ ಸಂಗ್ರಹಿಸಿದರೆ ಕೆಲವು ದಿನಗಳ ಕಾಲ ಇರುತ್ತದೆ. ಸಿಪ್ಪೆ ಸುಲಿದ ಮತ್ತು ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳನ್ನು ಫ್ರಿಜ್‌ನಲ್ಲಿ ಇಟ್ಟರೆ ಸುಮಾರು 7 ದಿನಗಳವರೆಗೆ ಚೆನ್ನಾಗಿ ಉಳಿಯುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮುಚ್ಚಿದ ಡಬ್ಬಿಯಲ್ಲಿಡಿ
ಮೊಟ್ಟೆಯ ಚಿಪ್ಪು ಮೊಟ್ಟೆಯನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಇದು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಆದರೆ ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳನ್ನು ಅವುಗಳ ಚಿಪ್ಪು ಅಥವಾ ಸಿಪ್ಪೆ ತೆಗೆದುಹಾಕಿ ಫ್ರಿಜ್‌ನಲ್ಲಿ 2 ರಿಂದ 3 ದಿನಗಳವರೆಗೆ ಸುರಕ್ಷಿತವಾಗಿ ಇಡಬಹುದು. ಫ್ರಿಜ್‌ನಲ್ಲಿ ಮುಚ್ಚಿದ ಡಬ್ಬಿಯಲ್ಲಿ ಅವುಗಳನ್ನು ಸಂಗ್ರಹಿಸುವುದು ಯಾವಾಗಲೂ ಉತ್ತಮ.
ಕೆಟ್ಟ ವಾಸನೆ ಬರುತ್ತಿದ್ರೆ, ಬಣ್ಣ ಕಳೆದುಕೊಂಡ್ರೆ
ಬೇಯಿಸಿದ ಮೊಟ್ಟೆಗಳನ್ನು ಕೋಣೆಯ ಉಷ್ಣಾಂಶದಲ್ಲಿ 6 ರಿಂದ 7 ಗಂಟೆಗಳಿಗಿಂತ ಹೆಚ್ಚು ಕಾಲ ಇಡುವುದು ಸುರಕ್ಷಿತವಲ್ಲ. ಅವು ಬೇಗನೆ ಹಾಳಾಗುವ ಸಾಧ್ಯತೆಯಿದೆ. ಒಂದು ವೇಳೆ ಮೊಟ್ಟೆಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಮತ್ತು ಬಣ್ಣ ಕಳೆದುಕೊಂಡಂತೆ ಕಂಡುಬಂದರೆ ಅದನ್ನು ತಿನ್ನಬಾರದೆಂದು ತಜ್ಞರು ಸೂಚಿಸುತ್ತಾರೆ.
ವಾಸನೆ ನೋಡಿ
ಹಾಗೂ ನಿಮಗೆ ಮೊಟ್ಟೆಯ ಮೇಲ್ಮೈ ಜಿಗುಟು ಜಿಗುಟಾಗಿರುವುದು ಕಂಡು ಬಂದರೆ ಅಂತಹ ಮೊಟ್ಟೆಗಳನ್ನು ತಿನ್ನಬಾರದು. ಬೇಯಿಸಿದ ಮೊಟ್ಟೆಗಳನ್ನು ಯಾವಾಗಲೂ ಫ್ರಿಜ್‌ನಲ್ಲಿ ಇಡಬೇಕು. ಅಲ್ಲದೆ ಅವುಗಳನ್ನು ಆಗಾಗ್ಗೆ ಹೊರಗೆ ತೆಗೆದಿಡುವುದು, ಒಳಗಿಡುವುದು ಮಾಡಬಾರದು. ಮೊಟ್ಟೆಗಳನ್ನು ದೀರ್ಘಕಾಲದವರೆಗೆ ತಿನ್ನಲು ಬೇಯಿಸಿದ್ದರೆ ತಿನ್ನುವ ಮೊದಲು ಯಾವಾಗಲೂ ವಾಸನೆ ನೋಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

