MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • Kitchen
  • Iron Burn Marks: ಇಸ್ತ್ರಿ ಮಾಡುವಾಗ ಬಟ್ಟೆ ಮೇಲೆ ಸುಟ್ಟ ಕಲೆಯಾಗಿದ್ಯಾ? ಹೀಗೆ ನಿಮಿಷದಲ್ಲಿ ಕ್ಲೀನ್ ಮಾಡಿ

Iron Burn Marks: ಇಸ್ತ್ರಿ ಮಾಡುವಾಗ ಬಟ್ಟೆ ಮೇಲೆ ಸುಟ್ಟ ಕಲೆಯಾಗಿದ್ಯಾ? ಹೀಗೆ ನಿಮಿಷದಲ್ಲಿ ಕ್ಲೀನ್ ಮಾಡಿ

Burn marks on clothes: ಕೆಲವು ಸರಳ ಗೃಹೋಪಯೋಗಿ ವಸ್ತುಗಳಿಂದ ನಿಮ್ಮ ಐರನ್ ಬಾಕ್ಸನ್ನು ಮತ್ತೆ ಸ್ವಚ್ಛ ಮತ್ತು ಹೊಳೆಯುವಂತೆ ಮಾಡಬಹುದು. ಅಷ್ಟೇ ಅಲ್ಲ, ಬಟ್ಟೆಯ ಮೇಲೆ ಉಂಟಾದ ಸುಟ್ಟ ಕಲೆಯನ್ನು ಸಹ ನಿವಾರಣೆ ಮಾಡಬಹುದು. ಟ್ರಿಕ್ಸ್ ತುಂಬಾನೆ ಸಿಂಪಲ್ ಆಗಿದೆ. ನೀವೂ ಕೂಡ ಟ್ರೈ ಮಾಡಿ ನೋಡಿ.

2 Min read
Author : Pavna Das
Published : Jul 23 2026, 01:08 PM IST
Share this Photo Gallery
  • FB
  • TW
  • Linkdin
  • Whatsapp
16
ಐರನ್ ಬಾಕ್ಸ್ ನಿಂದ ಬಟ್ಟೆ ಮೇಲೆ ಸುಟ್ಟ ಕಲೆ ಆಗಿದ್ಯಾ?
Image Credit : google

ಐರನ್ ಬಾಕ್ಸ್ ನಿಂದ ಬಟ್ಟೆ ಮೇಲೆ ಸುಟ್ಟ ಕಲೆ ಆಗಿದ್ಯಾ?

ಐರನ್ ಬಾಕ್ಸ್ ತುಂಬಾ ಬಿಸಿಯಾದಾಗ, ಅದರ ಲೇಪನವು ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಇದರಿಂದಾಗಿ ಬಟ್ಟೆಗಳ ಮೇಲೆ ಕಪ್ಪು ಅಥವಾ ಕಂದು ಬಣ್ಣದ ಗುರುತುಗಳನ್ನು ಬಿಡುತ್ತವೆ. ಇದರಿಂದಾಗಿ ನಿಮ್ಮ ಹಲವು ಬಟ್ಟೆಗಳು ಸಹ ಹಾಳಾಗಿರಬಹುದು ಅಲ್ವಾ? . ಇದು ಕೆಟ್ಟದಾಗಿ ಕಾಣುವುದಲ್ಲದೆ, ಕೆಲವೊಮ್ಮೆ ನಮ್ಮ ನೆಚ್ಚಿನ ಬಟ್ಟೆಗಳನ್ನು ಹಾಳುಮಾಡುತ್ತದೆ. ಹಾಗಿದ್ರೆ ಐರನ್ ಬಾಕ್ಸ್ ಮೇಲಿನ ಹಾಗೂ ಬಟ್ಟೆಯ ಮೇಲಿನ ಕಪ್ಪು ಕಲೆ ನಿವಾರಿಸೋದು ಹೇಗೆ ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ
Image Credit : AI

ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ನೀವು ಅದನ್ನು ಹೇಗೆ ಸರಿಪಡಿಸಬೇಕೆಂದು ತಿಳಿಯದೆ ಇದ್ದರೆ, ಖಂಡಿತವಾಗಿಯೂ ನೀವು ಆ ಬಟ್ಟೆಯನ್ನು ಮೂಲೆಗೆ ಎಸೆಯುತ್ತೀರಿ. ಆದರೆ, ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ ಸಿಂಪಲ್ ಆಗಿರುವ ಮನೆಮದ್ದುಗಳನ್ನು ಟ್ರೈ ಮಾಡುವ ಮೂಲಕ ನೀವು ಆ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು.

Related Articles

Related image1
Plus Size Fashion: ದಪ್ಪಗಿದ್ದೀನಿ ಅಂತ ಚಿಂತೆನಾ: ಈ 7 ಫ್ಯಾಷನೆಬಲ್ ಅನಾರ್ಕಲಿ ಸೂಟ್ ಧರಿಸಿ! ಸ್ಟೈಲಿಶ್ ಆಗಿ ಕಾಣಿ
Related image2
Maternity Fashion: ಗರ್ಭಿಣಿಯರೇ ಸೀರೆ ಉಡೋಕೆ ಕಷ್ಟವೇ? ಸಮಂತಾ ಸ್ಟೈಲ್ ಫಾಲೋ ಮಾಡಿ ಸ್ಟೈಲಿಶ್ ಆಗಿ ಕಾಣಿರಿ!
36
ಮೊದಲು ಏನು ಮಾಡಬೇಕು?
Image Credit : Pixabay

ಮೊದಲು ಏನು ಮಾಡಬೇಕು?

ಐರನ್ ಮಾಡುವಾಗ ನಿಮ್ಮ ಬಟ್ಟೆಗಳು ಕಪ್ಪಾದರೆ ಅಥವಾ ಬರ್ನ್ ಮಾರ್ಕ್ ಬಟ್ಟೆ ಮೇಲಿದ್ದರೆ , ತಕ್ಷಣ ಐರನ್ ಬಾಕ್ಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಈಗ, ಒಂದು ಬಟ್ಟಲಿನಲ್ಲಿ 2 ಚಮಚ ಉಪ್ಪನ್ನು ಬೆರೆಸಿ, 1-2 ಚಮಚ ಬಿಳಿ ವಿನೆಗರ್ ಸೇರಿಸಿ, ಪೇಸ್ಟ್ ಮಾಡಿ. ಹಳೆಯ ಟೂತ್ ಬ್ರಷ್ ಅಥವಾ ಮೃದುವಾದ ಬಟ್ಟೆಯಿಂದ ಐರನ್ ಬಾಕ್ಸ್ ನ ಕಪ್ಪಾದ ಮೇಲ್ಮೈಗೆ ಪೇಸ್ಟ್ ಅನ್ನು ಚೆನ್ನಾಗಿ ಉಜ್ಜಿ. ಅದನ್ನು 5-10 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಸ್ವಚ್ಛವಾದ, ಒದ್ದೆಯಾದ ಬಟ್ಟೆಯಿಂದ ಒರೆಸಿ. ಈಗ ಐರನ್ ಬಾಕ್ಸ್ ಮೇಲಿನ ಕಪ್ಪು ಕಲೆ ನಿವಾರಣೆಯಾಗುತ್ತೆ. ಇದೇ ವಿಧಾನವನ್ನು ಬಟ್ಟೆಯ ಮೇಲಿನ ಬರ್ನ್ ಮಾರ್ಕ್ ನಿವಾರಿಸಲು ಟ್ರೈ ಮಾಡಬಹುದು.

46
ಅಡಿಗೆ ಸೋಡಾ
Image Credit : pixabay

ಅಡಿಗೆ ಸೋಡಾ

ಕಪ್ಪಾದ ಐರನ್ ಬಾಕ್ಸ್ ಮತ್ತೆ ಹೊಸದರಂತೆ ಮಾಡಲು ಅಡಿಗೆ ಸೋಡಾ ಸಹ ಉಪಯುಕ್ತವಾಗಿದೆ. 1 ಟೀಚಮಚ ಅಡಿಗೆ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ. ಈ ಪೇಸ್ಟ್ ಅನ್ನು ಐರನ್ ಬಾಕ್ಸ್ ಮೇಲೆ ಇರುವ ಕಪ್ಪು ಕಲೆ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಬ್ರಷ್ ಅಥವಾ ಬಟ್ಟೆಯಿಂದ ಅದನ್ನು ಸ್ಕ್ರಬ್ ಮಾಡಿ. ಇದರಿಂದ ಕಲೆ ನಿವಾರಣೆಯಾಗುತ್ತದೆ. ಇದೇ ಪೇಸ್ಟನ್ನು ನೀವು ಬಟ್ಟೆ ಮೇಲಿನ ಕಪ್ಪು ಕಲೆಯ ಮೇಲೆ ಹಚ್ಚುವ ಮೂಲಕವೂ ಕಲೆಯನ್ನು ನಿವಾರಿಸಬಹುದು.

56
ಟೂತ್‌ಪೇಸ್ಟ್
Image Credit : Getty

ಟೂತ್‌ಪೇಸ್ಟ್

ಈ ಟೂತ್‌ಪೇಸ್ಟ್ ಪರಿಹಾರವು ತುಂಬಾ ಪರಿಣಾಮಕಾರಿಯಾಗಿದೆ. ಆದರೆ, ನೀವು ಜೆಲ್ ಅಲ್ಲದ ಟೂತ್‌ಪೇಸ್ಟ್ ಬಳಸಬೇಕು. ಅದನ್ನು ಬ್ರಷ್‌ಗೆ ಹಚ್ಚಿ ಮತ್ತು ಐರನ್ ಬಾಕ್ಸ್ ಮೇಲೆ ಹಚ್ಚಿ. 5 ನಿಮಿಷಗಳ ನಂತರ, ಹಳೆಯ ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಯಿಂದ ಒರೆಸಿ.

66
ನಿಂಬೆಹಣ್ಣು ಬಳಸುವುದು
Image Credit : Pixabay

ನಿಂಬೆಹಣ್ಣು ಬಳಸುವುದು

ನಿಮ್ಮ ಐರನ್ ಬಾಕ್ಸ್ ಹೊಳಪು ಹೆಚ್ಚಿಸಲು ಬಯಸಿದ್ರೆ ನಿಂಬೆಹಣ್ಣನ್ನು ಸಹ ಬಳಸಬಹುದು. ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದನ್ನು ಬಾಕ್ಸ್ ಮೇಲೆ ಉಜ್ಜಿ. ನಿಂಬೆ ರಸವನ್ನು 5-7 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಅದನ್ನು ಒದ್ದೆಯಾದ ಬಟ್ಟೆಯಿಂದ ಒರೆಸಿ. ಇದೇ ನಿಂಬೆ ರಸವನ್ನು ನೀವು ಐರನ್ ಬಾಕ್ಸ್ ನಿಂದ ಉಂಟಾದ ಬಟ್ಟೆಯ ಮೇಲಿನ ಕಲೆಯ ಮೇಲೆ ಹಚ್ಚಿ, ನಂತರ ಸೂರ್ಯನ ಬಿಸಿಲಿನಲ್ಲಿ ಒಣಗಿಸಿದರೆ, ಸಮಸ್ಯೆ ನಿವಾರಣೆಯಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕಬ್ಬಿಣ
ಜೀವನಶೈಲಿ
ಅಡುಗೆಮನೆ ಸಲಹೆಗಳು
ಫ್ಯಾಷನ್
 

Latest Videos
Recommended Stories
Recommended image1
ಕಡಿಮೆ ಬಜೆಟ್‌ನಲ್ಲಿ ಬಾಲ್ಕನಿಗೆ ಕೊಡಿ ಸ್ಟೈಲಿಶ್ ಲುಕ್: ಈ ಸಿಂಪಲ್ ಐಡಿಯಾಗಳನ್ನು ಟ್ರೈ ಮಾಡಿ!
Recommended image2
ಏಲಕ್ಕಿಯನ್ನು ಕುಂಡದಲ್ಲೇ ಸುಲಭವಾಗಿ ಬೆಳೆಯೋದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ
Recommended image3
ಲೇಟ್ ನೈಟ್ ಹೊಟ್ಟೆ ಬಿರಿಯುವಷ್ಟು ಊಟ ಮಾಡ್ತೀರಾ? ಹಾಗಿದ್ರೆ ನಿಮ್ಮನ್ನು ಆ ದೇವ್ರೇ ಕಾಪಾಡ್ಬೇಕು..!
Related Stories
Recommended image1
Plus Size Fashion: ದಪ್ಪಗಿದ್ದೀನಿ ಅಂತ ಚಿಂತೆನಾ: ಈ 7 ಫ್ಯಾಷನೆಬಲ್ ಅನಾರ್ಕಲಿ ಸೂಟ್ ಧರಿಸಿ! ಸ್ಟೈಲಿಶ್ ಆಗಿ ಕಾಣಿ
Recommended image2
Maternity Fashion: ಗರ್ಭಿಣಿಯರೇ ಸೀರೆ ಉಡೋಕೆ ಕಷ್ಟವೇ? ಸಮಂತಾ ಸ್ಟೈಲ್ ಫಾಲೋ ಮಾಡಿ ಸ್ಟೈಲಿಶ್ ಆಗಿ ಕಾಣಿರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved