- Home
- Life
- Kitchen
- Ginger Masala chutney recipe: ಚಹಾ ಮಾಡಿದ ನಂತರ ಉಳಿದ ಶುಂಠಿ ಎಸಿಬೇಡಿ: ಐದು ನಿಮಿಷದಲ್ಲೇ ಮಸಾಲೆ ಚಟ್ನಿ ಮಾಡಿ, ಇಲ್ಲಿದೆ ಹೊಸ ರೆಸಿಪಿ!
Ginger Masala chutney recipe: ಚಹಾ ಮಾಡಿದ ನಂತರ ಉಳಿದ ಶುಂಠಿ ಎಸಿಬೇಡಿ: ಐದು ನಿಮಿಷದಲ್ಲೇ ಮಸಾಲೆ ಚಟ್ನಿ ಮಾಡಿ, ಇಲ್ಲಿದೆ ಹೊಸ ರೆಸಿಪಿ!
ಬಹುತೇಕರು ಚಹಾ ಮಾಡಿದ ನಂತರ ಉಳಿದ ಶುಂಠಿಯನ್ನ ಕಸವೆಂದು ಎಸೆಯುತ್ತಾರೆ. ಆದರೆ ಉಳಿದ ಶುಂಠಿಯಿಂದ ರುಚಿರುಚಿಯಾದ ಮಸಾಲೆಯುಕ್ತ ಶುಂಠಿ ತಯಾರಿಸಬಹುದು ಗೊತ್ತೆ? ಇನ್ಮುಂದೆ ಎಸೆಯಬೇಡಿ ಶುಂಠಿ ಚಟ್ನಿ ಮಾಡಿ. ಇಲ್ಲಿದೆ ಸಿಂಪಲ್ ರೆಸಿಪಿ

ಚಹಾಕ್ಕೆ ಬಳಸಿದ ಶುಂಠಿಯಿಂದ ಮಸಾಲೆ ಚಟ್ನಿ ಮಾಡುವ ವಿಧಾನ
ಕಳೆದ ವಾರದಿಂದ ಬೆಳಗಿನ ಜಾವ, ಸಂಜೆ ಚಳಿಯ ಅನುಭವವಾಗುತ್ತಿದೆ. ಮಳೆಗಾಲ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಚಳಿಗಾಲ ಶುರುವಾಗಲಿದೆ. ಚಳಿಯಿಂದ ನೆಗಡಿ ಶೀತ ಕೆಮ್ಮು ಸಾಮಾನ್ಯವಾಗಲಿದೆ. ಹೀಗಾಗಿ ಬೆಳಗಿನ ಹೊತ್ತು ಸಾಮಾನ್ಯ ಚಹಾಗಿಂತ ಶುಂಠಿ ಚಹಾ ಕುಡಿಯುವುದು ಹೆಚ್ಚು. ಬೆಳಗ್ಗೆ ಚಹಾ ಮಾಡುವಾಗ ಹಸಿ ಶುಂಠಿ ಜಜ್ಜಿ ಪೇಸ್ಟ್ ಮಾಡಿ ಅದನ್ನ ಚಹಾದೊಂದಿಗೆ ಕುದಿಸಿ ಶುಂಠಿ ಚಹಾ ಕುಡಿಯುತ್ತಾರೆ. ಆದರೆ ಹೀಗೆ ಶುಂಠಿ ರಸ ಚಹಾಕ್ಕೆ ಬೆರೆಸಿದ ಬಳಿಕ ಬಹುತೇಕರು ಉಳಿದ ಶುಂಠಿ ಕಸವೆಂದೇ ಭಾವಿಸಿ ಕಸದಬುಟ್ಟಿಗೆ ಎಸೆದುಬಿಡ್ತಾರೆ. ನೀವು ಹೀಗೆ ಎಸೆಯುತ್ತಿದ್ದರೆ ಮುಂದಿನ ಎಸೆಯುವುದು ನಿಲ್ಲಿಸಿ. ಅದರಿಂದ ಮಸಾಲೆ ಚಟ್ನಿ ಹೇಗೆ ತಯಾರಿಸುವ ವಿಧಾನ ಇಲ್ಲಿ ವಿವರಿಸಲಾಗಿದೆ.
ಚಹಾದಲ್ಲಿ ಬಳಸಿ ಉಳಿದ ಶುಂಠಿಯ ತೊಗಟೆ ಅಥವಾ ಮೇಲ್ಮೈ ಸಿಪ್ಪೆಯನ್ನೇ ಬಳಸಿ ರುಚಿರುಚಿಯಾದ ಮಸಾಲೆ ಚಟ್ನಿ ತಯಾರಿಬಹುದು. ಇದು ಊಟದ ರುಚಿಯನ್ನ ಇನ್ನಷ್ಟು ಹೆಚ್ಚಿವುದಲ್ಲದೆ ಚಳಿಗಾಲದಲ್ಲಿ ಆರೋಗ್ಯಕ್ಕೂ ಒಳ್ಳೆಯದು.
ಶುಂಠಿ ಚಟ್ನಿ ಮಾಡಲು ಹೆಚ್ಚಿನ ಪದಾರ್ಥಗಳು ಸಹ ಬೇಕಾಗಿಲ್ಲ. ಮನೆಯಲ್ಲೇ ಇರುವ ಮಸಾಲೆ ಪದಾರ್ಥಗಳನ್ನ ಬಳಸಿ ಬೇಗನೇ ಶುಂಠಿ ಚಟ್ನಿ ತಯಾರಿಸಬಹುದು. ಈ ರೆಸಿಪಿ ತಿಳಿದರೆ ಅಯ್ಯೋ ಇಷ್ಟು ವರ್ಷಗಳ ಕಾಲ ಶುಂಠಿ ಚಹಾದ ಬಳಿಕ ಅದೆಷ್ಟೋ ಎಸೆದು ವ್ಯರ್ಥಗೊಳಿಸಿದವಲ್ಲ ಅಂತಾ ಚಡಪಡಿಸುತ್ತೀರಿ.
ಶುಂಠಿ ಚಟ್ನಿ ತಯಾರಿಸುವುದು ಹೇಗೆ?
ಮೊದಲಿಗೆ ಚಹಾದಿಂದ ಉಳಿದಿರುವ ಶುಂಠಿ ಚಟ್ನಿ ತೆಗೆದಿಡಿ. ಅದರಲ್ಲಿ ಚಹಾಪುಡಿ ಅಥವಾ ಚಹಾದ ಎಲೆಗಳಿದ್ದರೆ ಬೇರ್ಪಡಿಸಿ. ಬಳಿಕ ಶುಂಠಿಯನ್ನು ಸ್ವಚ್ಛ ನೀರಿನಿಂದ ತೊಳೆಯಿರಿ. ಬಳಿಕ ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ. ಶುಂಠಿ ಸಾಕಷ್ಟು ಮೆತ್ತಗಾಗಿದ್ದರೆ ಅದನ್ನ ನೇರವಾಗಿಯೇ ಬಳಸಬಹುದು. ಚಟ್ನಿಯ ಘಮ್ಮೆನ್ನುವಂತೆ ಮಾಡಲು ಅದಕ್ಕೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಸೇರಿಸಿ ಈ ಎಲ್ಲವನ್ನು ಸೇರಿಸಿ ಪಕ್ಕಕ್ಕಿಡಿ.
ಈ ತೆಗೆದಿಟ್ಟ ಶುಂಠಿಗೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಹುರಿದ ಜೀರಿಗೆ, ನಿಂಬೆ ರಸ ಸೇರಿಸಿ. ನಿಮಗೆ ಸ್ವಲ್ಪ ಹುಳಿ ಬೇಕೆಂದರೆ ನೀವು ನಿಂಬೆಯ ರಸ ಹೆಚ್ಚಿಗೆ ಹಾಕಬಹುದು. ಅದಿಲ್ಲದಿದ್ರೆ ಹುಣಸೆ ರಸವೂ ಒಳ್ಳೆಯ ಟೇಸ್ಟಿ ಇರುತ್ತೆ.
ಎಲ್ಲ ಪದಾರ್ಥ ಒಟ್ಟಿಗೆ ಸೇರಿಸಿ ಚೆನ್ನಾಗಿ ಪೇಸ್ಟ್ ರೀತಿ ಮಾಡಿ
ಈಗ ರೆಡಿಯಾದ ಎಲ್ಲ ಪದಾರ್ಥ ಒಟ್ಟಿಗೆ ಸೇರಿಸಿ, ಮಿಕ್ಸರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ. ಚಟ್ನಿಯನ್ನು ತುಂಬಾ ತೆಳುವಾಗಿ ಮಾಡಬೇಡಿ; ಸ್ವಲ್ಪ ದಪ್ಪವಾಗಿದ್ದರೆ ರುಚಿ ಚೆನ್ನಾಗಿರುತ್ತದೆ. ಸ್ವಲ್ಪ ನೀರು ಬೆರಸಿ. ಮಿಕ್ಸರ್‌ನಲ್ಲ ಚಟ್ನಿಯನ್ನು ರುಬ್ಬಿದ ನಂತರ, ಅದನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಮೇಲೆ ಸ್ವಲ್ಪ ನಿಂಬೆ ರಸ ಅಥವಾ ಹುರಿದ ಜೀರಿಗೆ ಉದುರಿಸಿ. ಇದು ಶುಂಠಿ ಚಟ್ನಿಗೆ ರುಚಿ ಇನ್ನಷ್ಟು ಹೆಚ್ಚಿಸುತ್ತದೆ.
ಈಗ ಶುಂಠಿ ಚಟ್ನಿ ರೆಡಿ, ಇದನ್ನ ಎಲ್ಲ ರೀತಿಯ ಊಟಕ್ಕೂ ಬಳಸಬಹುದು. ಅದರಲ್ಲೂ ಪರಾಠಾ, ಪಕೋಡಾ, ಸಮೋಸಾ, ಬಿಸಿ ಬಿಸಿ ಅನ್ನದೊಂದಿಗೂ ತಿನ್ನಬಹುದು. ನೀವು ಹೆಚ್ಚು ಖಾರ ತಿನ್ನುವವರಾದರೆ ಈ ಚಟ್ನಿ ನಿಮ್ಮ ಊಟದ ರುಚಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಚಹಾ ಮಾಡಿದ ನಂತರ ಉಳಿದಿರುವ ಶುಂಠಿಯು ಖಾಲಿಯಾಗುತ್ತದೆ ಕಸದ ಬುಟ್ಟಿಗೆ ಎಸೆಯಬೇಕಿಲ್ಲ. ಊಟಕ್ಕೆ ಚಟ್ನಿಯೂ ಸಿಕ್ಕಂತಾಯ್ತು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

