ಬಹುತೇಕರು ಮನೆಯ ಫ್ರಿಜ್‌ ನಲ್ಲಿ ಬಿಯರ್‌ ಇಡ್ತಾರೆ. ಕೆಲವೊಮ್ಮೆ ಫ್ರಿಜ್‌ ಫುಲ್‌ ಆಗಿರೋದ್ರಿಂದ ಬಿಯರ್‌ ಇಡೋಕೆ ಜಾಗ ಇರೋದಿಲ್ಲ. ಇಂಥ ಟೈಮ್‌ ನಲ್ಲಿ ಬಿಯರ್‌ ಎಲ್ಲಿ, ಹೇಗೆ ಇಡ್ಬೇಕು ಗೊತ್ತಾ?

ಪಾರ್ಟಿ ಅಥವಾ ಸಮಾರಂಭಕ್ಕಾಗಿ ಮೊದಲೇ ಬಿಯರ್ ಖರೀದಿಸಿ ಫ್ರಿಜ್ನಲ್ಲಿ ಇಟ್ಟಿರ್ತೀರಿ. ಆದರೆ ಹೆಚ್ಚು ಬಾಟಲಿ ಅಥವಾ ಕ್ಯಾನ್ಗಳಿದ್ದಾಗ ಫ್ರಿಜ್ನಲ್ಲಿ ಜಾಗ ಸಾಲೋದಿಲ್ಲ. ಫ್ರಿಜ್‌ ನಿಂದ ತೆಗೆದು ಹೊರಗೆ ಬಿಯರ್‌ ಇಟ್ರೆ ಹಾಳಾಗುತ್ತಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡೋದಿದೆ. ಫ್ರಿಜ್‌ ನಿಂದ ಹೊರಗಿಟ್ಟ ಬಿಯರ್‌ ಏನಾಗುತ್ತೆ? ಅದನ್ನು ಹೇಗೆ ಇಡಬೇಕು, ಎಷ್ಟು ದಿನ ಬಳಸಬಹುದು ಎನ್ನುವ ಮಾಹಿತಿ ಇಲ್ಲಿದೆ.

ಪದೇಪದೇ ತಾಪಮಾನ ಬದಲಾಯಿಸುವುದು ಒಳ್ಳೆಯದಲ್ಲ

ಬಿಯರನ್ನು ನೀವು ಎಲ್ಲಿ ಇಡ್ತೀರಿ ಎಂಬುದು ಮುಖ್ಯ. ಅದರ ಜಾಗವನ್ನು ಪದೇ ಪದೇ ಬದಲಿಸುವುದು ಉತ್ತಮವಲ್ಲ. ಬಿಯರ್ ಅನ್ನು ಒಮ್ಮೆ ಫ್ರಿಜ್ನಲ್ಲಿ ಇಟ್ಟು, ನಂತರ ಹೊರಗೆ ತೆಗೆದು ಮತ್ತೆ ಫ್ರಿಜ್ಗೆ ಹಾಕುವ ಅಭ್ಯಾಸವಿದ್ದರೆ ಅದನ್ನು ಬಿಡಿ. ಇದ್ರಿಂದ ಬಿಯರ್ ರುಚಿಯಲ್ಲಿ ಬದಲಾವಣೆ ಆಗಬಹುದು. ತಾಪಮಾನ ಪದೇಪದೇ ಬದಲಾಗುವುದರಿಂದ ಬಿಯರ್ನ ತಾಜಾತನ ನಿಧಾನವಾಗಿ ಕಡಿಮೆಯಾಗುತ್ತದೆ. ಫ್ರಿಜ್ನಲ್ಲಿ ಜಾಗವಿಲ್ಲದಿದ್ದರೆ, ಬಿಯರ್ ಅನ್ನು ತಂಪಾದ ಮತ್ತು ಕತ್ತಲೆಯ ಸ್ಥಳದಲ್ಲಿ ಇಡುವುದು ಉತ್ತಮ. ಗ್ಯಾಸ್, ಓವನ್, ಕಿಟಕಿ ಅಥವಾ ನೇರ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇಡಬೇಡಿ.

ಎಲ್ಲಾ ಬಿಯರ್‌ ಗಳಿಗೂ ಒಂದೇ ನಿಯಮವಿಲ್ಲ

ಬಿಯರ್ನ ವಿಧವನ್ನು ಆಧರಿಸಿ ತಾಪಮಾನದ ಪರಿಣಾಮವೂ ಬದಲಾಗಬಹುದು. ಉದಾಹರಣೆಗೆ, ಐಪಿಎಯಂತಹ ಹಾಪ್ ಹೆಚ್ಚು ಇರುವ ಬಿಯರ್ಗಳಲ್ಲಿ ಪರಿಮಳ ಮತ್ತು ರುಚಿ ಬೇಗ ಕಡಿಮೆಯಾಗಬಹುದು. ಆದ್ದರಿಂದ ಇಂತಹ ಬಿಯರ್ಗಳನ್ನು ತಂಪಾಗಿ ಇಟ್ಟು, ಹೆಚ್ಚು ದಿನ ಸಂಗ್ರಹಿಸದೆ ಬಳಸುವುದು ಉತ್ತಮ. ಹಗುರವಾದ ಬಿಯರ್ ಮತ್ತು ಲಾಗರ್ ಕೂಡ ತಂಪಾಗಿ ಇಟ್ಟರೆ ಉತ್ತಮ ರುಚಿ ನೀಡುತ್ತವೆ.

ಬಿಯರ್ ಹೀಗೆ ಸಂಗ್ರಹಿಸಿ

ಫ್ರಿಜ್ನಲ್ಲಿ ಜಾಗವಿದ್ದರೆ ಬಿಯರ್ ಅನ್ನು ಸ್ಥಿರವಾದ ತಂಪಾದ ತಾಪಮಾನದಲ್ಲಿ ಇಡುವುದು ಉತ್ತಮ. ಫ್ರಿಜ್ ಹೊರಗೆ ಇಡಬೇಕಾದರೆ ತಂಪಾದ, ಒಣ ಮತ್ತು ಕತ್ತಲೆಯಾದ ಸ್ಥಳವನ್ನು ಆಯ್ಕೆ ಮಾಡಿ. ಮುಖ್ಯವಾಗಿ ಬಿಯರ್ ಅನ್ನು ಹೆಚ್ಚು ಬಿಸಿ, ನೇರ ಬೆಳಕು ಮತ್ತು ಪದೇಪದೇ ತಾಪಮಾನ ಬದಲಾವಣೆಯಿಂದ ದೂರವಿಡಿ. ಕುಡಿಯುವ ಮೊದಲು ಅಗತ್ಯವಿದ್ದಷ್ಟು ಮಾತ್ರ ತಂಪಾಗಿಸಿ ಸರ್ವ್ ಮಾಡಬಹುದು.