MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಸ್ಪ್ರೇ ಬೇಕಾಗಿಲ್ಲ, ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ

ಸ್ಪ್ರೇ ಬೇಕಾಗಿಲ್ಲ, ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ

kitchen home remedies for cockroaches : ಅಡುಗೆ ಮನೆಗೆ ಯಾವಾಗ ಜಿರಳೆ ನುಗ್ಗುತ್ತೆ ಗೊತ್ತೇ ಆಗೋದಿಲ್ಲ. ಬಂದ ಒಂದು ಜಿರಳೆ, ಮೂರು, ನೂರು ಆಗೋದಿದೆ. ಅದ್ರಿಂದ ಮುಕ್ತಿಬೇಕು ಅಂದ್ರೆ ಸಿಂಪಲ್ ಟಿಪ್ಸ್ ಫಾಲೋ ಮಾಡಿ. 

2 Min read
Author : Roopa Hegde
Published : Apr 10 2026, 03:56 PM IST
Share this Photo Gallery
  • FB
  • TW
  • Linkdin
  • Whatsapp
110
ಜಿರಳೆ ಕಾಟಕ್ಕೆ ಮನೆ ಮದ್ದು
Image Credit : Asianet News

ಜಿರಳೆ ಕಾಟಕ್ಕೆ ಮನೆ ಮದ್ದು

ಅಡುಗೆ ಮನೆ ಆಹಾರ ತಯಾರಿಸುವ ಜಾಗ ಮಾತ್ರವಲ್ಲ, ಇಡೀ ಮನೆಯವರ ಆರೋಗ್ಯ ಅಡುಗೆ ಮನೆಯಲ್ಲಿದೆ. ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕಸವಿದ್ರೂ ಜಿರಳೆ ಕಾಟ ಶುರುವಾಗುತ್ತದೆ. ಈ ಜಿರಳೆ ಸದ್ದಿಲ್ಲದೆ ನಾನಾ ಖಾಯಿಲೆ ಹರಡುತ್ತದೆ. ಜಿರಳೆ ಆಹಾರವನ್ನು ವಿಷಗೊಳಿಸುವುದಲ್ಲದೆ ಟೈಪಾಯಿಡ್, ಅಲರ್ಜಿಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಮಾರ್ಕೆಟ್ ನಲ್ಲಿ ಜಿರಳೆ ಸ್ಪ್ರೇ ಸಾಕಷ್ಟಿದೆ. ಆದ್ರೆ ಅವು ರಾಸಾಯನಿಕವಾಗಿರೋದ್ರಿಂದ ಬಳಕೆ ಬಹಳ ಅಪಾಯಕಾರಿ. ನೀವು ಮನೆಯಲ್ಲೇ ನೈಸರ್ಗಿಕ ಪದಾರ್ಥ ಬಳಸಿ ಜಿರಳೆ ಓಡಿಸಬಹುದು.

210
ಲವಂಗ
Image Credit : Asianet News

ಲವಂಗ

ಅಡುಗೆಮನೆಯಲ್ಲಿರುವ ಲವಂಗಗಳು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಜಿರಳೆಗಳನ್ನು ಹೊಡೆದೋಡಿಸುತ್ತದೆ. ಜಿರಳೆಗಳು ಲವಂಗಗಳ ಬಲವಾದ ವಾಸನೆಯನ್ನು ಸಹಿಸುವುದಿಲ್ಲ. ಅಡುಗೆಮನೆಯ ಡ್ರಾಯರ್ಗಳು ಮತ್ತು ಕ್ಯಾಬಿನೆಟ್ಗಳಲ್ಲಿ 8-10 ಲವಂಗಗಳನ್ನು ಇರಿಸಿ. ಅವುಗಳ ವಾಸನೆಗೆ ಜಿರಳೆ ಬರೋದಿಲ್ಲ.

Related Articles

Related image1
ಬಟ್ಟೆಗಳನ್ನು ವಾಷಿಂಗ್ ಮಷಿನ್‌ನಲ್ಲಿ ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಎಂದಿಗೂ ಮಾಡ್ಬೇಡಿ!
Related image2
90% ಜನರು ಮಿಕ್ಸಿ ಬಳಸುವಾಗ ಈ ತಪ್ಪು ಮಾಡ್ತಾರೆ! ಸರಿಯಾದ ಮಾರ್ಗ ಇದೇ
310
ಅಡುಗೆ ಸೋಡಾ ಸಕ್ಕರೆ
Image Credit : Asianet News

ಅಡುಗೆ ಸೋಡಾ ಸಕ್ಕರೆ

ಬೇಕಿಂಗ್ ಸೋಡಾವನ್ನು ಜಿರಳೆ ತಿನ್ನುತ್ತಿದ್ದಂತೆ ಅದು ಸಾಯುತ್ತದೆ. ಅಡಿಗೆ ಸೋಡಾ ಮತ್ತು ಪುಡಿಮಾಡಿದ ಸಕ್ಕರೆಯನ್ನು ಸಮಾನ ಭಾಗದಲ್ಲಿ ಮಿಕ್ಸ್ ಮಾಡಿ ಅಡುಗೆಮನೆಯ ಮೂಲೆಗಳಲ್ಲಿ, ಸಿಂಕ್ ಅಡಿಯಲ್ಲಿ ಮತ್ತು ಕ್ಯಾಬಿನೆಟ್ಗಳ ಹಿಂದೆ ಹಾಕಬೇಕು. ಸಕ್ಕರೆ ವಾಸನೆಗೆ ಅಲ್ಲಿಗೆ ಬರುವ ಜಿರಳೆ ಬೇಕಿಂಗ್ ಸೋಡಾ ತಿಂದು ಸಾಯುತ್ತದೆ.

410
ಬೇವಿನ ಎಲೆಗಳು
Image Credit : Asianet News

ಬೇವಿನ ಎಲೆಗಳು

ನಮ್ಮ ಆಹಾರದ ಪರಿಮಳನವನ್ನು ಬೇವಿನ ಎಲೆ ಹೆಚ್ಚಿಸುತ್ತೆ. ಆದ್ರೆ ಜಿರಳೆಗಳು ಅವುಗಳ ವಾಸನೆಯನ್ನು ಇಷ್ಟಪಡುವುದಿಲ್ಲ. 5-6 ಬೇವಿನ ಎಲೆಗಳನ್ನು ಪುಡಿ ಮಾಡಿ ಅವುಗಳನ್ನು ಅಡುಗೆಮನೆಯ ಮೂಲೆಗಳಲ್ಲಿ ಇರಿಸಿ. ಈ ವಾಸನೆಗೆ ತಕ್ಷಣವೇ ಜಿರಳೆಗಳನ್ನು ಓಡುತ್ತವೆ.

510
ಕಹಿ ಬೇವಿನ ಎಣ್ಣೆ
Image Credit : Asianet News

ಕಹಿ ಬೇವಿನ ಎಣ್ಣೆ

ನಿಮ್ಮ ಮನೆಯಲ್ಲಿ ಜಿರಳೆ ಸಂಖ್ಯೆ ಹೆಚ್ಚಾಗಿದ್ದರೆ ನೀವು ಬೇವಿನ ಎಣ್ಣೆಯನ್ನು ಬಳಸಬಹುದು. ಬೇವಿನ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಅದನ್ನು ಜಿರಳೆ ಇರುವ ಜಾಗಕ್ಕೆ ಸ್ಪ್ರೇ ಮಾಡಿ. ನೀವು ಬೇವಿನ ಪುಡಿಯನ್ನು ಕೂಡ ಜಿರಳೆ ಇರುವ ಜಾಗಕ್ಕೆ ಸಿಂಪಡಿಸಬಹುದು.

610
ವಿನೆಗರ್
Image Credit : Asianet News

ವಿನೆಗರ್

ಅಡುಗೆಮನೆಯಿಂದ ಜಿರಳೆಗಳನ್ನು ಓಡಿಸಲು ವಿನೆಗರ್ ಕೂಡ ಅತ್ಯುತ್ತಮ ಮತ್ತು ಸುಲಭವಾದ ಮಾರ್ಗವಾಗಿದೆ. ಬಿಳಿ ವಿನೆಗರ್ ಮತ್ತು ನೀರನ್ನು ಸ್ಪ್ರೇ ಬಾಟಲಿಯಲ್ಲಿ ಸಮಾನ ಪ್ರಮಾಣದಲ್ಲಿ ಮಿಕ್ಸ್ ಮಾಡಿ. ರಾತ್ರಿ ಅಡುಗೆಮನೆ ಸ್ವಚ್ಛಗೊಳಿಸಿದ ನಂತ್ರ, ಗ್ಯಾಸ್ ಸ್ಟೌವ್ ಮತ್ತು ಸಿಂಕ್ ಸುತ್ತಲೂ ಸಿಂಪಡಿಸಿ.

710
ದಾಲ್ಚಿನಿ
Image Credit : Asianet News

ದಾಲ್ಚಿನಿ

ದಾಲ್ಚಿನಿ ಕೇವಲ ಮಸಾಲೆ ಪದಾರ್ಥವಲ್ಲ. ಜಿರಳೆಗಳಿಗೆ ನಿರೋಧಕವಾಗಿಯೂ ಕೆಲ್ಸ ಮಾಡುತ್ತದೆ. ಅಡುಗೆಮನೆಯ ಮೂಲೆಗಳಲ್ಲಿ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ. ಇದರ ಬಲವಾದ ವಾಸನೆಯು ಜಿರಳೆ ಬರೋದನ್ನು ತಡೆಯುತ್ತದೆ.

810
ನಿಂಬೆ ರಸ
Image Credit : Asianet News

ನಿಂಬೆ ರಸ

ನಿಂಬೆ ರಸ ಕ್ಲೀನಿಂಗ್ ಎಜೆಂಟ್ ಆಗಿ ಕೆಲ್ಸ ಮಾಡುತ್ತದೆ. ನೀವು ಕೆಮಿಕಲ್ ಇಲ್ಲದ ಈ ನಿಂಬೆ ರಸವನ್ನು ಜಿರಳೆ ಓಡಿಸಲು ಬಳಸಬಹುದು. ಎರಡು ನಿಂಬೆಹಣ್ಣಿನ ರಸವನ್ನು ಬಕೆಟ್ ನೀರಿನಲ್ಲಿ ಬೆರೆಸಿ ಅಡುಗೆಮನೆಯ ನೆಲವನ್ನು ಒರೆಸಿ. ನಿಂಬೆಯ ಸಿಟ್ರಸ್ ವಾಸನೆ ಮತ್ತು ಶುಚಿತ್ವ ಜಿರಳೆಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ.

910
ಪುದೀನಾ ಎಣ್ಣೆ
Image Credit : Asianet News

ಪುದೀನಾ ಎಣ್ಣೆ

ಪುದೀನಾ ಎಣ್ಣೆ ವಾಸನೆಯನ್ನು ಜಿರಳೆಗಳು ಸಹಿಸೋದಿಲ್ಲ. ನೀರಿಗೆ ಕೆಲವು ಹನಿ ಪುದೀನಾ ಎಣ್ಣೆಯನ್ನು ಬೆರೆಸಿ ಸಿಂಪಡಿಸಿ. ಅಡುಗೆ ಮನೆಯಲ್ಲಿ ಪುದೀನಾ ಎಣ್ಣೆ ಹಾಕ್ತಿದ್ದಂತೆ ಜಿರಳೆ ಅಲ್ಲಿಂದ ಕಾಲ್ಕೀಳುತ್ತವೆ.

1010
ಸೌತೆಕಾಯಿ ಸಿಪ್ಪೆ
Image Credit : Asianet News

ಸೌತೆಕಾಯಿ ಸಿಪ್ಪೆ

ಸೌತೆಕಾಯಿ ಸಿಪ್ಪೆಯನ್ನು ನಾವು ಕಸಕ್ಕೆ ಹಾಕ್ತೇವೆ. ಆದ್ರೆ ಈ ಸೌತೆಕಾಯಿ ಸಿಪ್ಪೆ ಕೂಡ ಜಿರಳೆ ಓಡಿಸಲು ಸಹಾಯ ಮಾಡುತ್ತದೆ. ಸೌತೆಕಾಯಿ ಸಿಪ್ಪೆಗಳನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಹಾಕಿ ರಾತ್ರಿಯಿಡೀ ಬಿಡಿ. ಸೌತೆಕಾಯಿ ಮತ್ತು ಅಲ್ಯೂಮಿನಿಯಂನ ಪ್ರತಿಕ್ರಿಯೆ ಜಿರಳೆ ಸಹಿಸಲಾಗದ ವಾಸನೆಯನ್ನು ಉಂಟುಮಾಡುತ್ತದೆ. ಇದನ್ನು ನೀವು ಕಿಚನ್ ನಲ್ಲಿ ಸಿಂಪಡಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಅಡುಗೆಮನೆ ಸಲಹೆಗಳು
ಮನೆ
ಜೀವನಶೈಲಿ

Latest Videos
Recommended Stories
Recommended image1
90% ಜನರು ಮಿಕ್ಸಿ ಬಳಸುವಾಗ ಈ ತಪ್ಪು ಮಾಡ್ತಾರೆ! ಸರಿಯಾದ ಮಾರ್ಗ ಇದೇ
Recommended image2
ಅಡುಗೆ ಮಾಡುವಾಗ ಪರದಾಡಬೇಡಿ, ಮನೆ ಪಾಟ್‌ನಲ್ಲೇ ಸುಲಭವಾಗಿ ಬೆಳೆಯಿರಿ ತಾಜಾ ಶುಂಠಿ!
Recommended image3
ಕತ್ತರಿಸಿದ ತಕ್ಷಣ ಹಣ್ಣುಗಳ ಬಣ್ಣ ಬದಲಾಗುತ್ತಾ? ಈ ಟ್ರಿಕ್ಸ್ ಟ್ರೈ ಮಾಡಿ
Related Stories
Recommended image1
ಬಟ್ಟೆಗಳನ್ನು ವಾಷಿಂಗ್ ಮಷಿನ್‌ನಲ್ಲಿ ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಎಂದಿಗೂ ಮಾಡ್ಬೇಡಿ!
Recommended image2
90% ಜನರು ಮಿಕ್ಸಿ ಬಳಸುವಾಗ ಈ ತಪ್ಪು ಮಾಡ್ತಾರೆ! ಸರಿಯಾದ ಮಾರ್ಗ ಇದೇ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved