ಮಿಕ್ಸಿ ಮೋಟಾರ್ ಸುಟ್ಟು ಹೋಗಬಾರದು ಮತ್ತು ಅದರ ಬ್ಲೇಡ್‌ಗಳು ದೀರ್ಘಕಾಲ ಬಾಳಿಕೆ ಬರಬೇಕೆಂದರೆ ಬಳಸುವ ಸರಿಯಾದ ಕ್ರಮ ಯಾವುದು? ನಿತ್ಯ ನಾವು ಮಾಡುವ ಸಾಮಾನ್ಯ ತಪ್ಪುಗಳೇನು? ಎಂಬ ಪೂರ್ಣ ಮಾಹಿತಿ ಇಲ್ಲಿದೆ.
kitchen Apr 10 2026
Author: Ashwini HR Image Credits:Flipkart Website
Kannada
ಮಿಕ್ಸಿ ಬೇಗ ಹಾಳಾಗುತ್ತೆ
ಮಿಕ್ಸಿಯನ್ನು ಶೇ. 90ರಷ್ಟು ಜನರು ತಪ್ಪು ರೀತಿಯಲ್ಲೇ ಬಳಸುತ್ತಾರೆ. ಇದರಿಂದ ಮಿಕ್ಸಿ ಬೇಗ ಹಾಳಾಗುವುದು ಮಾತ್ರವಲ್ಲದೆ, ಅಪಾಯವೂ ಸಂಭವಿಸಬಹುದು. ಮಿಕ್ಸಿ ದೀರ್ಘಕಾಲ ಬಾಳಿಕೆ ಬರಲು ಈ ಕೆಳಗಿನ ಅಂಶಗಳನ್ನು ಗಮನಿಸಿ.
Image credits: flipkart website
Kannada
ಸತತವಾಗಿ ಓಡಿಸ್ಬೇಡಿ
ಸತತವಾಗಿ 5 ನಿಮಿಷಗಳಿಗಿಂತ ಹೆಚ್ಚು ಕಾಲ ಓಡಿಸಬಾರದು. ಸರಿಯಾದ ವಿಧಾನವೆಂದರೆ, ಅದನ್ನು ಸ್ವಲ್ಪ ಹೊತ್ತು (30 ಸೆಕೆಂಡ್ ಅಥವಾ 1 ನಿಮಿಷ) ಓಡಿಸಿ ನಂತರ 5-10 ಸೆಕೆಂಡ್‌ಗಳ ಕಾಲ ವಿರಾಮ ನೀಡಿ ಮತ್ತೆ ಶುರು ಮಾಡಬೇಕು.
Image credits: Social Media
Kannada
ಮೋಟಾರ್ ಹೀಟ್ ಆಗುವಿಕೆ
ಹೆಚ್ಚಿನವುಗಳಲ್ಲಿ ತಾಮ್ರದ ಅಂಶ ಕಡಿಮೆ ಇರುತ್ತದೆ. ಸತತವಾಗಿ ಮಿಕ್ಸಿ ಬಳಸಿದಾಗ ಮೋಟಾರ್ ಅತಿಯಾಗಿ ಬಿಸಿಯಾಗಿ ಸುಟ್ಟು ಹೋಗುವ ಸಾಧ್ಯತೆಯಿರುತ್ತದೆ. ಆದ್ದರಿಂದ 'ಕಾಪರ್ ಮೋಟಾರ್' ಇರುವ ಮಿಕ್ಸಿ ಆಯ್ಕೆ ಮಾಡುವುದು ಉತ್ತಮ.
Image credits: Gemini
Kannada
ಲೋಡಿಂಗ್ ಬಗ್ಗೆ ಗಮನವಿರಲಿ
ತರಕಾರಿ ಅಥವಾ ಹಣ್ಣುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಹಾಕಬೇಕು. ದೊಡ್ಡ ತುಂಡಾದರೆ ಬ್ಲೇಡ್ ಮತ್ತು ಮೋಟಾರ್ ಮೇಲೆ ಒತ್ತಡ ಬೀಳುತ್ತದೆ. ಅಲ್ಲದೆ, ಜಾರ್ ಅನ್ನು ಫುಲ್ ತುಂಬಿಸಬಾರದು.
Image credits: social media
Kannada
ಜಾರ್ ಲಾಕಿಂಗ್
ಮಿಕ್ಸಿ ಜಾರ್ ಅನ್ನು ಮೋಟಾರ್ ಮೇಲೆ ಸರಿಯಾಗಿ ಲಾಕ್ ಮಾಡಬೇಕು. ಸರಿಯಾಗಿ ಲಾಕ್ ಮಾಡದೆ ಮಿಕ್ಸಿ ಚಾಲನೆ ಮಾಡಿದರೆ, ಮೋಟಾರ್ ಮೇಲೆ ಇರುವ ಬ್ಲೇಡ್ ಅಥವಾ ಕಪ್ಲರ್ ಮುರಿದು ಹೋಗಬಹುದು.